ಭಾರತದ ಮಾಡೆಲ್ ಜೊತೆ ಆಸ್ಟ್ರೇಲಿಯಾದ ಆಲ್​ರೌಂಡರ್ ಮ್ಯಾಕ್ಸ್​ವೆಲ್ ನಿಶ್ಚಿತಾರ್ಥ!

ಭಾರತದ ಮಾಡೆಲ್ ಜೊತೆ ಆಸ್ಟ್ರೇಲಿಯಾದ ಆಲ್​ರೌಂಡರ್ ಮ್ಯಾಕ್ಸ್​ವೆಲ್ ನಿಶ್ಚಿತಾರ್ಥ!

ಕಳೆದ ವರ್ಷದ ಕೊನೆಯಲ್ಲಿ ಭಾರತೀಯ ಮೂಲದ ಶಮಿಯಾ ಆರ್ಜೂಳನ್ನ ಪಾಕ್ ಕ್ರಿಕೆಟಿಗ ಹಸನ್ ಅಲಿ ಮದುವೆಯಾಗಿದ್ದು ನಿಮಗೆ ಗೊತ್ತೇ ಇದೆ. ಆದ್ರೀಗ ಭಾರತೀಯ ಮೂಲದ ಯುವತಿಯನ್ನ ಮತ್ತೊಬ್ಬ ವಿದೇಶಿ ಕ್ರಿಕೆಟಿಗ ಮದುವೆಯಾಗುತ್ತಿದ್ದಾನೆ. ಅದು ಬೇರ್ಯಾರು ಅಲ್ಲ. ಆಸ್ಟ್ರೇಲಿಯಾ ತಂಡದ ಆಲ್​ರೌಂಡರ್ ಗ್ಲೇನ್ ಮ್ಯಾಕ್ಸ್​ವೆಲ್. ಭಾರತದ ಅಪ್ಸರೆ ಜೊತೆ ಗ್ಲೇನ್ ಮ್ಯಾಕ್ಸ್​ವೆಲ್ ನಿಶ್ಚಿತಾರ್ಥ! 31 ವರ್ಷದ ಆಸ್ಟ್ರೇಲಿಯಾದ ಆಲ್​ರೌಂಡರ್ ಗ್ಲೇನ್ ಮ್ಯಾಕ್ಸ್​ವೆಲ್ ಭಾರತದ ಅಪ್ಸರೆಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮ್ಯಾಕ್ಸಿ ಮನಸ್ಸು ಕದ್ದ ಚೆಲುವೆ ಹೆಸರು ವಿನಿ ರಾಮನ್. […]

sadhu srinath

|

Feb 27, 2020 | 9:53 AM

ಕಳೆದ ವರ್ಷದ ಕೊನೆಯಲ್ಲಿ ಭಾರತೀಯ ಮೂಲದ ಶಮಿಯಾ ಆರ್ಜೂಳನ್ನ ಪಾಕ್ ಕ್ರಿಕೆಟಿಗ ಹಸನ್ ಅಲಿ ಮದುವೆಯಾಗಿದ್ದು ನಿಮಗೆ ಗೊತ್ತೇ ಇದೆ. ಆದ್ರೀಗ ಭಾರತೀಯ ಮೂಲದ ಯುವತಿಯನ್ನ ಮತ್ತೊಬ್ಬ ವಿದೇಶಿ ಕ್ರಿಕೆಟಿಗ ಮದುವೆಯಾಗುತ್ತಿದ್ದಾನೆ. ಅದು ಬೇರ್ಯಾರು ಅಲ್ಲ. ಆಸ್ಟ್ರೇಲಿಯಾ ತಂಡದ ಆಲ್​ರೌಂಡರ್ ಗ್ಲೇನ್ ಮ್ಯಾಕ್ಸ್​ವೆಲ್.

ಭಾರತದ ಅಪ್ಸರೆ ಜೊತೆ ಗ್ಲೇನ್ ಮ್ಯಾಕ್ಸ್​ವೆಲ್ ನಿಶ್ಚಿತಾರ್ಥ! 31 ವರ್ಷದ ಆಸ್ಟ್ರೇಲಿಯಾದ ಆಲ್​ರೌಂಡರ್ ಗ್ಲೇನ್ ಮ್ಯಾಕ್ಸ್​ವೆಲ್ ಭಾರತದ ಅಪ್ಸರೆಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮ್ಯಾಕ್ಸಿ ಮನಸ್ಸು ಕದ್ದ ಚೆಲುವೆ ಹೆಸರು ವಿನಿ ರಾಮನ್. ವೃತ್ತಿಯಲ್ಲಿ ಮಾಡೆಲ್ ಆಗಿರುವ ವಿನಿ ರಾಮನ್, ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾಳೆ. ಇದೇ ವಿನಿ ರಾಮನ್ ಜೊತೆ ಮ್ಯಾಕ್ಸ್​ವೆಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಹಾಗಾದ್ರೆ ಇವರಿಬ್ಬರಿಗೂ ಪ್ರೀತಿ ಶುರುವಾಗಿದ್ದೇಗೆ ಅನ್ನೋ ಇಂಟ್ರಸ್ಟಿಂಗ್ ಸ್ಟೋರಿಯನ್ನ ಇಲ್ಲಿದೆ ಓದಿ.. ವಿನಿ ರಾಮನ್​ಗೆ ಮೊದಲೇ ಕ್ರಷ್ ಆಗಿದ್ದ ಮ್ಯಾಕ್ಸ್​ವೆಲ್​ಗೆ ಬಳಿಕ ಲವ್ ಆಗಿದೆ. ಸೀದಾ ಹೋಗಿ ವಿನಿ ರಾಮನ್​ಗೆ ಮ್ಯಾಕ್ಸ್​ವೆಲ್ ತಮ್ಮ ಪ್ರೇಮ ನಿವೇದನೆಯನ್ನ ಮಾಡಿಕೊಂಡಿದ್ರು.

ಅತ್ತ ಮ್ಯಾಕ್ಸ್​ವೆಲ್ ತಮ್ಮ ಪ್ರೀತಿಯನ್ನ ಹೇಳುತ್ತಲೇ ಒಪ್ಪಿಕೊಂಡ ವಿನಿ ರಾಮನ್, ಕಳೆದೊಂದು ವರ್ಷದಿಂದ ಮ್ಯಾಕ್ಸ್​ವೆಲ್​ನನ್ನ ಲವ್ ಮಾಡ್ತಿದ್ಳು. ಆಸ್ಟ್ರೇಲಿಯಾದ ಬೀದಿ ಬೀದಿಯಲ್ಲಿ ಸುತ್ತಾಡಿದ್ದ ಈ ಜೋಡಿಯ ಪ್ರೀತಿ, ಆಗಲೇ ಆಸಿಸ್ ನಾಡಿಗೆ ಪರಿಚಿತವಾಗಿತ್ತು. ಇತ್ತೀಚೆಗೆ ವಿನಿ ರಾಮನ್ ತನ್ನ ಇನ್​ಸ್ಟಾಗ್ರಾಮ್ ಮೂಲಕ ಮ್ಯಾಕ್ಸಿ ಜೊತೆಗಿರೊ ಫೋಟೋಗಳನ್ನ ಶೇರ್ ಮಾಡಿ, ತಮ್ಮ ಪ್ರೀತಿಯ ಗುಟ್ಟನ್ನ ರಟ್ಟು ಮಾಡಿದ್ಳು.

ಆದ್ರೀಗ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡೋದಕ್ಕಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಚಾರವನ್ನ ಮ್ಯಾಕ್ಸ್​ವೆಲ್ ತಮ್ಮ ಇನ್​ಸ್ಟ್ರಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಇತ್ತ ವಿನಿ ರಾಮನ್ ಕೂಡ ಕಳೆದ ವಾರ ವಿಶೇಷವಾದ ವ್ಯಕ್ತಿ ನನ್ನನ್ನ ಮದುವೆಯಾಗ್ತೀಯಾ ಎಂದು ಕೇಳಿದ, ಅಂತಾ ಬರೆದುಕೊಂಡಿದ್ದಳು.

ಇನ್ನು ಮ್ಯಾಕ್ಸಿ ಕ್ರಿಕೆಟ್ ಬದುಕಿಗೆ ವಿನಿ ಇನ್ನಿಲ್ಲದ ಬೆಂಬಲವಾಗಿ ನಿಂತಿದ್ದಾಳಂತೆ. ಕಳೆದ ವರ್ಷ ಮ್ಯಾಕ್ಸ್​ವೆಲ್ ಮಾನಸಿಕ ಅಸ್ವಸ್ಥತೆಯಿಂದ ಆಸ್ಟ್ರೇಲಿಯಾ ತಂಡದಿಂದ ದೂರವಿದ್ರು. ಈ ವೇಳೆ ಮ್ಯಾಕ್ಸಿಯನ್ನ ಮತ್ತೆ ಸಹಜ ಸ್ಥಿತಿಗೆ ಮರಳೋದಕ್ಕೆ ಪ್ರಮುಖ ಪಾತ್ರವಹಿಸಿದ್ದೇ ಗೆಳತಿ ವಿನಿ. ಈ ವಿಚಾರವನ್ನೂ ಹೇಳಿರೋ ಮ್ಯಾಕ್ಸಿ, ವಿನಿ ನನ್ನ ಜೊತೆಗಿದ್ರೆ ನನ ಭುಜದ ಮೇಲಿರೋ ಎಲ್ಲಾ ಭಾರವೂ ಕಡಿಮೆಯಾಗುತ್ತೆ ಅಂತಾ ಹಾಡಿ ಹೊಗಳಿದ್ದಾರೆ.

ಒಟ್ನಲ್ಲಿ ಈ ಹಿಂದೆ ಗ್ಲೇನ್ ಮ್ಯಾಕ್​​ವೆಲ್ ಹೆಸರು ಜೈನೆಜ್​ಬರ್ಗ್ ಹಾಗೂ ಪತ್ರಕರ್ತೆ ಕ್ಯಾಂಡೀಸ್ ವ್ಯಾಟ್ ಜೊತೆ ಕೇಳಿ ಬಂದಿತ್ತು. ಆದ್ರೀಗ ಭಾರತದ ಮೂಲದ ವಿನಿ ರಾಮನ್ ಜೊತೆ ಪ್ರೀತಿಯಲ್ಲಿ ಬಂಧನವಾಗಿರುವ ಮ್ಯಾಕ್ಸಿ, ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ ಸದ್ಯದಲ್ಲೇ ವಿನಿ ರಾಮನ್ ಜೊತೆ ಮ್ಯಾಕ್ಸಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada