ಕ್ರಿಕೆಟ್ ದೇವರಿಗೆ ದಕ್ಕಿತು ಕ್ರೀಡಾಲೋಕದ ಆಸ್ಕರ್ ಪ್ರಶಸ್ತಿ
ಇದೇ ಸಿಕ್ಸ್.. ಇದೇ ಸಿಕ್ಸ್.. ಧೋನಿ ಸಿಡಿಸಿದ ಈ ಚಾಂಪಿಯನ್ ಸಿಕ್ಸ್ ಭಾರತೀಯರ ಕಣ್ಣಿಗೆ ಇನ್ನು ಹಾಗೇ ಕಟ್ಟಿದಂತಿದೆ. ಆವತ್ತು ಮಾಹಿ ಸಿಡಿಸಿದ ಈ ಸಿಕ್ಸ್, ಕೋಟಿ ಕೋಟಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಈ ಸಿಕ್ಸ್ ಇವತ್ತಿಗೂ ನಿಮ್ಮನ್ನ ಕಾಡ್ತಿರಬಹುದು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಈ ಕ್ಷಣ ಅಜರಾಮರ. ಯಾಕಂದ್ರೆ, ಈ ಸಿಕ್ಸ್ 28ವರ್ಷಗಳ ಬಳಿಕ ಭಾರತಕ್ಕೆ ವಿಶ್ವ ಚಾಂಪಿಯನ್ ಪಟ್ಟವನ್ನ ತಂದುಕೊಟ್ಟಿದ್ದು. 2011ರ ಏಪ್ರಿಲ್ 02.. ಕೋಟ್ಯಂತರ ಭಾರತೀಯರು ಹಾಗೂ ಟೀಂ ಇಂಡಿಯಾ […]
ಇದೇ ಸಿಕ್ಸ್.. ಇದೇ ಸಿಕ್ಸ್.. ಧೋನಿ ಸಿಡಿಸಿದ ಈ ಚಾಂಪಿಯನ್ ಸಿಕ್ಸ್ ಭಾರತೀಯರ ಕಣ್ಣಿಗೆ ಇನ್ನು ಹಾಗೇ ಕಟ್ಟಿದಂತಿದೆ. ಆವತ್ತು ಮಾಹಿ ಸಿಡಿಸಿದ ಈ ಸಿಕ್ಸ್, ಕೋಟಿ ಕೋಟಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಈ ಸಿಕ್ಸ್ ಇವತ್ತಿಗೂ ನಿಮ್ಮನ್ನ ಕಾಡ್ತಿರಬಹುದು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಈ ಕ್ಷಣ ಅಜರಾಮರ. ಯಾಕಂದ್ರೆ, ಈ ಸಿಕ್ಸ್ 28ವರ್ಷಗಳ ಬಳಿಕ ಭಾರತಕ್ಕೆ ವಿಶ್ವ ಚಾಂಪಿಯನ್ ಪಟ್ಟವನ್ನ ತಂದುಕೊಟ್ಟಿದ್ದು.
2011ರ ಏಪ್ರಿಲ್ 02.. ಕೋಟ್ಯಂತರ ಭಾರತೀಯರು ಹಾಗೂ ಟೀಂ ಇಂಡಿಯಾ ಆಟಗಾರರು ಕನಸು ನನಸಾಗುವಂತೆ ಮಾಡಿದ ಸುದಿನ ಇದು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಟ್ಟ ಅಭೂತ ಪೂರ್ವ ಕ್ಷಣಕ್ಕೆ ಮುಂಬೈನ ವಾಂಖೆಡೆ ಅಂಗಳ ಸಾಕ್ಷಿಯಾಗಿತ್ತು. ಟೀಂ ಇಂಡಿಯಾ ಆಟಗಾರರು ವಿಶ್ವಕಪ್ ಗೆದ್ದ ಸಾಧನೆಯನ್ನ ಜಗತ್ತೆ ಗೆದ್ದ ರೀತಿಯಲ್ಲಿ ಸಂಭ್ರಮಿಸಿದ್ರು.
ಈ ಸಂಭ್ರಮದ ವೇಳೆ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್, ಆನಂದ ಭಾಷ್ಪ ಹರಿಸಿದ್ರು. ಯಾಕಂದ್ರೆ, ಸಚಿನ್ ಹಲವು ವಿಶ್ವಕಪ್ ಆಡಿದ್ರೂ ಒಮ್ಮೆ ಚಾಂಪಿಯನ್ ಆಗೋದಕ್ಕೆ ಸಾಧ್ಯವಾಗಿದ್ದಿಲ್ಲ. ಆದ್ರೆ, ಮನೆಯಂಗಳದಲ್ಲೇ ಸಚಿನ್ ಟ್ರೋಫಿಗೆ ಮುತ್ತಿಕ್ಕಿ, ಕಣ್ಣೀರು ಹಾಕಿದ್ರು.
ಆವತ್ತು ಹೀಗೆ ವಾಂಖೆಡೆಯಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿ, ಆನಂದ ಬಾಷ್ಪ ಹರಿಸಿದ್ದ ಸವ್ಯಸಾಚಿ ಸಚಿನ್ಗೆ ಇವತ್ತು ಕ್ರೀಡಾಲೋಕದ ಮಹಾನ್ ಪ್ರಶಸ್ತಿಯೊಂದು ಲಭಿಸಿದೆ. ಆಸ್ಕರ್ ನೊಬೆಲ್ ಪ್ರಶಸ್ತಿಗೆ ಸರಿಸಮನಾದ ಸಚಿನ್ ಮುಡಿಗೇರಿಸಿಕೊಂಡ ಈ ಪ್ರಶಸ್ತಿಯ ಹೆಸರೇ ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಪ್ರಶಸ್ತಿ.
2011ರ ವಿಶ್ವಕಪ್ ಅದ್ಭುತ ಕ್ಷಣಕ್ಕಾಗಿ ಪ್ರಶಸ್ತಿ: 2011ರ ವಿಶ್ವಕಪ್ ಅನ್ನ ಭಾರತ ಗೆಲ್ತಿದ್ದಂತೆ, ಭಾರತೀಯ ಕ್ರೀಡಾಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಭಾರತ ತಂಡದ ಆಟಗಾರರು, ಮೈದಾನದಲ್ಲಿ ಖುಷಿಯಲ್ಲಿದ್ರು. ಹಾಗೇ, ಇದೇ ಸಂಭ್ರಮದಲ್ಲಿದ್ದ ಭಾರತ ತಂಡದ ಆಟಗಾರರು ಇಡೀ ಮೈದಾನದಲ್ಲಿ ಸುತ್ತಾಡಿದ್ರು. ಬಳಿಕ ಕ್ರಿಕೆಟ್ ದೇವರು ಸಚಿನ್ ತೆಂಡಲ್ಕರ್ರನ್ನ ತಂಡದ ಸಹ ಆಟಗಾರರು ತಮ್ಮ ಹೆಗಲ ಮೇಲೆ ಹೊತ್ತು ಇಡೀ ಮೈದಾನದಲ್ಲೆಲ್ಲಾ ಸುತ್ತು ಹಾಕಿದ್ರು.
ಈ ವೇಳೆ ಸಚಿನ್ ತೆಂಡುಲ್ಕರ್ ತಮ್ಮ ಕೈನಲ್ಲಿ ತಿರಂಗ ಧ್ವಜ ಹಾರಿಸುತ್ತಾ ಭಾವುಕ ಕ್ಷಣವನ್ನ ಆಹ್ಲಾದಿಸಿದ್ದರು. ಇದೇ ಇದೇ ಕ್ಷಣ ಈಗ ಸವ್ಯಸಾಚಿ ಸಚಿನ್ ತೆಂಡುಲ್ಕರ್ ಮುಡಿಗೆ ಈ ಮಹಾನ್ ಪ್ರತಿಷ್ಠಿತ ಪ್ರಶಸ್ತಿಯನ್ನ ತಂದುಕೊಟ್ಟಿರೋದು. ಅದು ಅತಿಂಥಾ ಪ್ರಶಸ್ತಿ ಅಲ್ಲ. ಕ್ರೀಡಾಲೋಕದಲ್ಲಿ ಆಸ್ಕರ್ ಪ್ರಶಸ್ತಿಯೆಂದೇ ಕರೆಯಲ್ಪಡುವ ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಪ್ರಶಸ್ತಿ ಸಚಿನ್ಗೆ ಲಭಿಸಿರೋದು.
ಜರ್ಮನಿಯ ಬರ್ಲಿನ್ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಟೆನಿಸ್ ಲೆಜೆಂಡ್ ಬೋರಿಸ್ ಬೆಕರ್ ಅವಾರ್ಡ್ ಅನೌನ್ಸ್ ಮಾಡಿದ್ರು. ಬಳಿಕ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವ್ಹಾ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ಗೆ ಪ್ರಶಸ್ತಿ ನೀಡಿ ಗೌರವಿಸಿದ್ರು.
ಕ್ರೀಡಾಭಿಮಾನಿಗಳಿಂದಲೇ ಸಚಿನ್ಗೆ ಪ್ರಶಸ್ತಿ: ಅಂದ್ಹಾಗೆ, ಈ ಪ್ರಶಸ್ತಿ ಸಚಿನ್ ತೆಂಡುಲ್ಕರ್ಗೆ ಲಭಿಸಿರೋದು ಕ್ರೀಡಾಭಿಮಾನಿಗಳಿಂದ ಅಂದ್ರೆ ನೀವು ನಂಬಲೇಬೇಕು. ಲಾರೆಸ್ ಸ್ಪೋರ್ಟ್ಸ್ ಅಕಾಡೆಮಿ ಪ್ರಶಸ್ತಿ ನೀಡೋದಕ್ಕಾಗಿ 2000ದಿಂದ 2020ರವರೆಗಿನ ಕ್ರೀಡಾ ಕ್ಷೇತ್ರದ ಅದ್ಭುತ ಕ್ಷಣ ಯಾವುದು ಅನ್ನೋದನ್ನ ಆಯ್ಕೆ ಮಾಡೋದಕ್ಕೆ ಕ್ರೀಡಾಭಿಮಾನಿಗಳಿಂದ ವೋಟಿಂಗ್ ನಡೆಸಿತ್ತು. ಈ ಪೈಕಿ ಕ್ರಿಕೆಟ್ ದೇವರಾದ ಸಚಿನ್ ತೆಂಡುಲ್ಕರ್ರನ್ನ ಹೆಗಲ ಮೇಲೆ ಹೊತ್ತು ಅಪೂರ್ವ ಕ್ಷಣವೇ ವೋಟಿಂಗ್ನಲ್ಲಿ ಜಯಿಸಿದ್ರಿಂದ, ಪ್ರಶಸ್ತಿಯನ್ನ ಪಡೆದುಕೊಂಡ್ರು.
ಇನ್ನು, ಪ್ರಶಸ್ತಿ ಪಡೆದ ಬಳಿಕ ಖುಷಿಯಿಂದ ಮಾತನಾಡಿದ ಸವ್ಯಸಾಚಿ ಸಚಿನ್ ತೆಂಡುಲ್ಕರ್, ನನ್ನ ಕ್ರಿಕೆಟ್ ಬದುಕಿನ ಪಯಣದಲ್ಲಿ 22 ವರ್ಷಗಳ ಕಾಲ ಒಂದು ಕನಸನ್ನ ಬೆನ್ನತ್ತಿದ್ದೆ. ಎಂದೂ ವಿಶ್ವಾಸವನ್ನ ಕಳೆದುಕೊಂಡಿರಲಿಲ್ಲ. ಭಾರತೀಯರ ಪರವಾಗಿ ಆ ಟ್ರೋಫಿಯನ್ನ ನಾನು ಮೇಲಕ್ಕೆತ್ತಿ ಹಿಡಿದಿದ್ದೆ ಎಂದು ಹೇಳಿದ್ರು.
ಸಚಿನ್ ಏನಂದ್ರು? 1983ರಿಂದ ನನ್ನ ಕ್ರಿಕೆಟ್ ವೃತ್ತಿ ಜೀವನ ಆರಂಭವಾಯ್ತು. ಆಗ ನನಗೆ 10 ವರ್ಷ ವಯಸ್ಸು. ಯಾಕೆ 1983ರಲ್ಲಿ ಕ್ರಿಕೆಟ್ ಫಾಲೋ ಮಾಡ್ತಿರಲಿಲ್ಲ ಅನ್ನೋದು ಗೊತ್ತಿಲ್ಲ. ಭಾರತ 1983ರಲ್ಲಿ ವಿಶ್ವಕಪ್ ಗೆಲ್ಲುತ್ತೆ. ಆಗ ನನಗೆ 10 ವರ್ಷ ವಯಸ್ಸು. ಆಗ ನನಗೆ ಅದರ ಮಹತ್ವ ಏನೆಂಬುದು ಅರ್ಥವಾಗಿರಲಿಲ್ಲ. ಎಲ್ಲರೂ ಸಂಭ್ರಮಿಸುತ್ತಿದ್ದಾರೆ ಅನ್ನೋ ಸಲುವಾಗಿ ನಾನು ಕೂಡ ಸಂಭ್ರಮಿಸುತ್ತಿದ್ದೆ. ಆದರೆ ಎಲ್ಲೋ ಒಂದು ಕಡೆ ನನ್ನ ದೇಶಕ್ಕಾಗಿ ಇಂತಹ ಕ್ಷಣವನ್ನ ಅನುಭವಿಸುತ್ತೇನೆ ಎಂದೆನ್ನಿಸಿತ್ತು. ಒಂದು ದಿನ ಅನುಭವವಾಯ್ತು. ಅಲ್ಲಿಂದ ನನ್ನ ಪಯಣ ಶುರುವಾಯ್ತು. ನನ್ನ ಕೈನಲ್ಲಿ ಟ್ರೋಫಿ ಇದ್ದಾಗ. ನೋಡಿ.. ನೀವು ನೋಡ್ತಿರೋ ಫೋಟೋದಲ್ಲಿ, ಧ್ವಜ ನನ್ನ ಕೈನಲ್ಲಿದೆ. ಆವತ್ತಿನ ದಿನ ನನ್ನ ಜೀವನದಲ್ಲೇ ಹೆಮ್ಮೆ ಪಡುವಂತಹ ದಿನ.
Thank you all for the overwhelming love and support!
I dedicate this @LaureusSport award to India ??, all my teammates, fans and well wishers in India and across the world who have always supported Indian cricket.#SportUnitesUs #Laureus20 #SportForGood pic.twitter.com/wiqx0D9e2E
— Sachin Tendulkar (@sachin_rt) February 18, 2020
ನೆಲ್ಸನ್ ಮಂಡೇಲಾರನ್ನ ನೆನೆದ ಸಚಿನ್: ಸಚಿನ್ ತೆಂಡುಲ್ಕರ್ ಹೀಗೆ, 2011ರ ಏಕದಿನ ವಿಶ್ವಕಪ್ ಗೆದ್ದ ಖುಷಿಯ ಸಂದರ್ಭವನ್ನ ಹೇಳ್ತಿರುವಾಗ, ನೋವನ್ನ ನುಂಗಿ ಹೇಳಿದಂತಿತ್ತು. ಮಾತನಾಡುತ್ತಲೇ ಭಾವುಕರಾಗ್ತಿದ್ದ ಸಚಿನ್ ತೆಂಡುಲ್ಕರ್, ಇಲ್ಲಿ ನೆಲ್ಸನ್ ಮಂಡೇಲಾ ಅವರನ್ನ ಭೇಟಿ ಮಾಡಿದ ಸುಮಧುರ ಕ್ಷಣವನ್ನ ನೆನೆದ್ರು. ನೆಲ್ಸನ್ ಮಂಡೇಲಾರಿಂದ ನಾನು ಕಲಿತಿದ್ದು, ಕ್ರೀಡೆ ಒಗ್ಗಟ್ಟನ್ನ ಪ್ರತಿನಿಧಿಸುತ್ತದೆ ಅನ್ನೋದನ್ನ ಸಚಿನ್ ಇದೇ ಸಂದರ್ಭದಲ್ಲಿ ಹೇಳಿ ಭಾವುಕರಾದ್ರು.
ಭಾರತೀಯ ಕ್ರಿಕೆಟ್ ಏಳಿಗೆಗೆ ದುಡಿದ ಕ್ರಿಕೆಟ್ ದೇವರಾದ ಸಚಿನ್ ತೆಂಡುಲ್ಕರ್ ಮುಡಿಗೆ ಮತ್ತೊಂದು ಅವಿಸ್ಮರಣೀಯ ಪ್ರಶಸ್ತಿ ಲಭಿಸಿದೆ. ಲಾರೆಸ್ ಪ್ರಶಸ್ತಿಗೆ ಭಾಜನರಾದ ಸವ್ಯಸಾಚಿ ಸಚಿನ್ಗೆ ವಿಶ್ವದಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ.
"This is a reminder of how powerful sport is and what magic it does to all of our lives."
A God for a nation. An inspiration worldwide.
And an incredible speech from the Laureus Sporting Moment 2000 – 2020 winner, the great @sachin_rt ??#Laureus20 #SportUnitesUs pic.twitter.com/dLrLA1GYQS
— Laureus (@LaureusSport) February 17, 2020