ಪುರುಷರ 1000 ಮೀ ಓಟದಲ್ಲಿ ಭಾರತಕ್ಕೆ ಕಂಚು: 60ಕ್ಕೇರಿದ ಪದಕಗಳ ಸಂಖ್ಯೆ

ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್ 3:53.329 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಗಳಿಸಿ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಕಂಚಿನ ಪದಕಕ್ಕೆ ತಂದುಕೊಟ್ಟರು. ಉಜ್ಬೇಕಿಸ್ತಾನದ ಶೋಖ್ಮುರೋಡ್ ಖೋಲ್ಮುರಾಡೋವ್ ಮತ್ತು ನುರಿಸ್ಲೋಮ್ ತುಖ್ತಾಸಿನ್ ಉಗ್ಲಿ 3:43.796 ಸೆಕೆಂಡ್‌ಗಳಲ್ಲಿ ಚಿನ್ನ ಗೆದ್ದರು. ಸದ್ಯ ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತದ ಪದಕಗಳ ಸಂಖ್ಯೆ 60ಕ್ಕೆ ಏರಿದೆ.

ಪುರುಷರ 1000 ಮೀ ಓಟದಲ್ಲಿ ಭಾರತಕ್ಕೆ ಕಂಚು: 60ಕ್ಕೇರಿದ ಪದಕಗಳ ಸಂಖ್ಯೆ
Arjun Singh and Sunil Singh

Updated on: Oct 03, 2023 | 10:19 AM

2023 ರ ಏಷ್ಯನ್ ಗೇಮ್ಸ್‌ನಲ್ಲಿ (Asian Games) ಭಾರತಕ್ಕೆ ಮತ್ತೊಂದು ಪದಕ ಲಭಿಸಿದೆ. ಅಕ್ಟೋಬರ್ 3 ರಂದು ಹ್ಯಾಂಗ್‌ಝೌನಲ್ಲಿ ನಡೆದ ಪುರುಷರ ಕ್ಯಾನೋ ಡಬಲ್ 1000 ಮೀ ಫೈನಲ್‌ನಲ್ಲಿ ಭಾರತದ ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್ ಸಲಾಮ್ ಅವರು ಕಂಚಿನ ಪದಕವನ್ನು ಪಡೆದರು. ಭಾರತದ ಜೋಡಿಯು 3:53.329 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಗಳಿಸಿ ಏಷ್ಯನ್ ಗೇಮ್ಸ್ ಇತಿಹಾಸದ ಈವೆಂಟ್‌ನಲ್ಲಿ ದೇಶಕ್ಕೆ ಎರಡನೇ ಪದಕ ತಂದುಕೊಟ್ಟರು.

ಈ ಹಿಂದೆ, 1994 ರಲ್ಲಿ ಹಿರೋಷಿಮಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಜಾನಿ ರೋಮೆಲ್ ಮತ್ತು ಸಿಜಿ ಕುಮಾರ್ ಸದಾನಂದನ್ ಇದೇ ಸ್ಪರ್ಧೆಯಲ್ಲಿ ಕಂಚು ಗೆದ್ದಿದ್ದರು. ಇದೀಗ ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್ ಕಂಚಿನ ಪದಕಕ್ಕೆ ಕೊರಳೊಡ್ಡೊದ್ದಾರೆ. ಉಜ್ಬೇಕಿಸ್ತಾನದ ಶೋಖ್ಮುರೋಡ್ ಖೋಲ್ಮುರಾಡೋವ್ ಮತ್ತು ನುರಿಸ್ಲೋಮ್ ತುಖ್ತಾಸಿನ್ ಉಗ್ಲಿ 3:43.796 ಸೆಕೆಂಡ್‌ಗಳಲ್ಲಿ ಚಿನ್ನ ಗೆದ್ದರೆ, ಕಜಕಿಸ್ತಾನ್ ಜೋಡಿ ಟಿಮೊಫಿ ಯೆಮೆಲಿಯಾನೊವ್ ಮತ್ತು ಸೆರ್ಗೆ ಯೆಮೆಲಿಯಾನೊವ್ 3:49.991 ಸೆಕೆಂಡ್‌ಗಳಲ್ಲಿ ಬೆಳ್ಳಿ ಪಡೆದರು. ಸದ್ಯ ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತದ ಪದಕಗಳ ಸಂಖ್ಯೆ 60ಕ್ಕೆ ಏರಿದೆ.

5 ಪಂದ್ಯಗಳಲ್ಲಿ ಬರೋಬ್ಬರಿ 58 ಗೋಲುಗಳು: ಸೆಮಿಫೈನಲ್​ಗೇರಿದ ಭಾರತ

ಇದನ್ನೂ ಓದಿ
ಮಿಂಚಿದ ಜೈಸ್ವಾಲ್, ಬಿಷ್ಟೋಯಿ: ಏಷ್ಯನ್ ಗೇಮ್ಸ್​ನಲ್ಲಿ ಸೆಮಿ ಫೈನಲ್​ಗೆ ಭಾರತ
ಬಿಸಿಸಿಐಯಿಂದ ಬಿಗ್ ಶಾಕ್: ವಿಶ್ವಕಪ್ ಉದ್ಘಾಟನಾ ಸಮಾರಂಭ ದಿಢೀರ್ ರದ್ದು?
ಏಷ್ಯಾನ್ ಗೇಮ್ಸ್​ನಲ್ಲಿ ಇತಿಹಾಸ ಬರೆದ ಜೈಸ್ವಾಲ್: 203 ರನ್ಸ್ ಟಾರ್ಗೆಟ್
ಇಂದು ಭಾರತಕ್ಕೆ ಕೊನೆಯ ಅಭ್ಯಾಸ ಪಂದ್ಯ: ಆದರೆ, ಇದು ಕೂಡ ನಡೆಯುವುದು ಅನುಮಾನ

ಏಷ್ಯನ್ ಗೇಮ್ಸ್​ನಲ್ಲಿ ಭಾರತ ಸೆಮಿ ಫೈನಲ್​ಗೆ ಲಗ್ಗೆ

ಕ್ಯಾಂಪಸ್ ಕ್ರಿಕೆಟ್ ಫೀಲ್ಡ್​ನಲ್ಲಿ ನಡೆದ ಏಷ್ಯನ್ ಗೇಮ್ಸ್ ಪುರುಷರ ಟಿ20 ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ನಾಯಕತ್ವದ ಭಾರತ ತಂಡ ನೇಪಾಳ ವಿರುದ್ಧ ಭರ್ಜರಿ ಜಯ ಸಾಧಿಸಿ ಸೆಮಿ ಫೈನಲ್​ಗೆ ಪ್ರವೇಶ ಪಡೆದಿದೆ. ಯಶಸ್ವಿ ಜೈಸ್ವಾಲ್ ಅವರ ಸ್ಫೋಟಕ ಶತಕ ಹಾಗೂ ರವಿ ಬಿಷ್ಟೋಯಿ ಅವರ ಸ್ಪಿನ್ ಜಾದು ನೆರವಿನಿಂದ ಟೀಮ್ ಇಂಡಿಯಾ 23 ರನ್​ಗಳ ಜಯ ಸಾಧಿಸಿತು.

ಭಾರತ ಪರ ಜೈಸ್ವಾಲ್ ಕೇವಲ 49 ಎಸೆತಗಳಲ್ಲಿ 8 ಫೋರ್, 7 ಅಮೋಘ ಸಿಕ್ಸರ್​ನೊಂದಿಗೆ 100 ರನ್ ಚಚ್ಚಿದರು. ಭಾರತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಕಲೆ ಹಾಕಿತು. ಕಠಿಣ ಟಾರ್ಗೆಟ್ ಬೆನ್ನಟ್ಟಿದ ನೇಪಾಳ ತಂಡ ನಿಧಾನಗತಿಯ ಆರಂಭ ಪಡೆದುಕೊಂಡುವ ಇಕೆಟ್ ಕಳೆದುಕೊಂಡಿತು. ಹೀಗಾಗಿ ನೇಪಾಳ 20 ಓವರ್​ಗಳಲ್ಲಿ 179 ರನ್​ಗೆ 9 ವಿಕೆಟ್ ಕಳೆದುಕೊಂಡು ಸೋಲೊಪ್ಪೊಕೊಂಡಿತು. ಭಾರತ ಪರ ರವಿ ಬಿಷ್ಟೋಯಿ, ಆವೇಶ್ ಖಾನ್ ತಲಾ 3 ವಿಕೆಟ್ ಕಿತ್ತು ಮಿಂಚಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Loading...
Unable to load recommendations.
Follow Us