AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asian Games: 99 ಕ್ಕೇರಿದ ಭಾರತದ ಪದಕ: ಆರ್ಚರಿಯಲ್ಲಿ ಚಿನ್ನಕ್ಕೆ ಮುತ್ತಿಟ್ಟ ಜ್ಯೋತಿ-ಪ್ರವೀಣ್

Ojas Pravin Gold: ಓಜಸ್ ಪ್ರವೀಣ್ 2023 ರ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಕಾಂಪೌಂಡ್ ಫೈನಲ್ ಅನ್ನು ಗೆಲ್ಲುವ ಮೂಲಕ ತಮ್ಮ ಮೂರನೇ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಅಭಿಷೇಕ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಈ ಮೂಲಕ 2023 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 99ಕ್ಕೆ ಏರಿದೆ.

Asian Games: 99 ಕ್ಕೇರಿದ ಭಾರತದ ಪದಕ: ಆರ್ಚರಿಯಲ್ಲಿ ಚಿನ್ನಕ್ಕೆ ಮುತ್ತಿಟ್ಟ ಜ್ಯೋತಿ-ಪ್ರವೀಣ್
Pravin and Jyothi
Vinay Bhat
|

Updated on:Oct 07, 2023 | 7:49 AM

Share

ಏಷ್ಯನ್ ಗೇಮ್ಸ್‌ನ (Asian Games) 14 ನೇ ದಿನವನ್ನು ಭಾರತವು ಅತ್ಯುತ್ತಮವಾಗಿ ಆರಂಭಿಸಿದೆ. ಯಾಕೆಂದರೆ ಬಿಲ್ಲುಗಾರಿಕೆಯಲ್ಲಿ ಭಾರತ ನಾಲ್ಕು ಪದಕಗಳನ್ನು ಬಾಚಿಕೊಂಡಿದೆ. ಜ್ಯೋತಿ ವೆನ್ನಮ್ ಅವರು ಮಹಿಳೆಯರ ಕಾಂಪೌಂಡ್‌ ಬಿಲ್ಲುಗಾರಿಕೆಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಅಂತೆಯೆ ಅದಿತಿ ಸ್ವಾಮಿ ಅವರು ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಇದು 2023 ರ ಏಷ್ಯನ್ ಗೇಮ್ಸ್‌ನಲ್ಲಿ ಜ್ಯೋತಿ ಅವರ ಮೂರನೇ ಚಿನ್ನದ ಪದಕವಾಗಿದೆ. ಈ ಹಿಂದೆ ಮಹಿಳಾ ಕಾಂಪೌಂಡ್ ಮತ್ತು ಮಿಶ್ರ ಸಂಯುಕ್ತ ತಂಡಗಳ ಈವೆಂಟ್‌ಗಳಲ್ಲಿ ಪದಕ ಬಾಚಿಕೊಂಡಿದ್ದರು.

ಅಂತೆಯೆ ಓಜಸ್ ಪ್ರವೀಣ್ 2023 ರ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಕಾಂಪೌಂಡ್ ಫೈನಲ್ ಅನ್ನು ಗೆಲ್ಲುವ ಮೂಲಕ ತಮ್ಮ ಮೂರನೇ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಅಭಿಷೇಕ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಈ ಮೂಲಕ 2023 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 99ಕ್ಕೆ ಏರಿದೆ.

ಬಲಿಷ್ಠ ಪಾಕ್ ಬೌಲರ್​ಗಳ ಎದುರು ಗೆಲುವಿಗಾಗಿ ಹೋರಾಡಿ ಸೋತ ಡಚ್ಚರು..!

ಇದನ್ನೂ ಓದಿ
Image
ವಿಶ್ವಕಪ್​ನಲ್ಲಿಂದು ಡಬಲ್ ಹೆಡ್ಡರ್: ಬಾಂಗ್ಲಾ-ಅಫ್ಘಾನ್, ಆಫ್ರಿಕಾ-ಲಂಕಾ ಕದನ
Image
ಆಸೀಸ್ ವಿರುದ್ಧ ಗಿಲ್ ಕಣಕ್ಕೆ? ಕೋಚ್ ದ್ರಾವಿಡ್ ಹೇಳಿದ್ದಿದು
Image
ಚಿನ್ನಕ್ಕಾಗಿ ಭಾರತ- ಅಫ್ಘಾನ್ ನಡುವೆ ಫೈನಲ್ ಫೈಟ್
Image
ಬಲಿಷ್ಠ ಪಾಕ್ ಬೌಲರ್​ಗಳ ಎದುರು ಗೆಲುವಿಗಾಗಿ ಹೋರಾಡಿ ಸೋತ ಡಚ್ಚರು..!

ಜ್ಯೋತಿ ತನ್ನ ಮೊದಲ ಪ್ರಯತ್ನದಲ್ಲಿ ಒಂಬತ್ತು ರನ್ ಬಾರಿಸಿದ ನಂತರ ಕೊರಿಯಾದ ಚೈವಾನ್ ಸೋ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಮುನ್ನಡೆ ಸಾಧಿಸಿದರು. ಅಂತಿಮವಾಗಿ 149-145 ಅಂಕಗಳೊಂದಿಗೆ ಗೆದ್ದುಕೊಂಡರು. ಇದಕ್ಕೂ ಮುನ್ನ ಮಹಿಳೆಯರ ಕಾಂಪೌಂಡ್ ಸ್ಪರ್ಧೆಯಲ್ಲಿ ಇಂಡೋನೇಷ್ಯಾದ ಝಿಲಿಜಾಟಿ ಫಧ್ಲಿ ವಿರುದ್ಧ ಅದಿತಿ ಕಂಚಿನ ಪದಕ ಗೆದ್ದಿದ್ದರು. ಅಂತಿಮ ಎರಡು ಪಂದ್ಯಗಳು ಕ್ರಮವಾಗಿ 30 ಮತ್ತು 29 ಸ್ಕೋರ್​ಗಳೊಂದಿಗೆ ಕೊನೆಗೊಂಡು ಅದಿತಿ 146-140 ಅಂಕಗಳೊಂದಿಗೆ ಸ್ಪರ್ಧೆಯಲ್ಲಿ ಜಯಗಳಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:43 am, Sat, 7 October 23