ಫ್ರೆಂಚ್ ಓಪನ್ (French Open) ಸಿಂಗಲ್ಸ್‌ನಲ್ಲಿ ನಾರ್ವೆಯ ಕ್ಯಾಸ್ಪರ್ ರೂಡ್ ಅವರು ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಇಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ಕಾದಾಟ ನಡೆಸಲಿದ್ದಾರೆ. ಪ್ಯಾರಿಸ್‌ನ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಕ್ಯಾಸ್ಪರ್ ರೂಡ್ (casper ruud) 2 ನೇ ಶ್ರೇಯಾಂಕದ ಜರ್ಮನ್ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು 6-3, 6-4, 6-0 ಸೆಟ್‌ಗಳಿಂದ ಸೋಲಿಸಿದರು.
ಇದಕ್ಕೂ ಮೊದಲು ಸೆಮಿಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಸರ್ಬಿಯಾದ ನೊವಾಕ್ ಜೊಕೊವಿಕ್ 6-3, 5-7, 6-1, 6-1 ಸೆಟ್‌ಗಳಿಂದ ಅಗ್ರ ಶ್ರೇಯಾಂಕದ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಅವರನ್ನು ಸೋಲಿಸಿ ಫೈನಲ್ ತಲುಪಿದ್ದರು. ಜೊಕೊವಿಕ್ ಅವರು ದಾಖಲೆಯ 23ನೇ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗೆ ಕೇವಲ ಒಂದು ಹೆಜ್ಜೆ ಹಿಂದೆಯಿದ್ದಾರಷ್ಟೆ.
WTC Final 2023: ಆತುರಗೇಡಿ ಬುದ್ಧಿಯಿಂದ ಮುಜುಗರಕ್ಕೊಳಗಾದ ಆಸೀಸ್ ಆಟಗಾರರು; ವಿಡಿಯೋ ನೋಡಿ
ರೂಡ್ ಕಳೆದ ವರ್ಷ ರೋಲ್ಯಾಂಡ್ ಗ್ಯಾರೋಸ್‌ನ ಫೈನಲ್‌ನಲ್ಲಿ ರಾಫೆಲ್ ನಡಾಲ್ ಅವರನ್ನು ಎದುರಿಸಿ ಸೋತಿದ್ದರು. ಇದೀಗ ಫ್ರೆಂಚ್ ಓಪನ್ನಲ್ಲಿ ಫೈನಲ್ ತಲುಪಿದ ಬಗ್ಗೆ ಮಾತನಾಡಿದ ಇವರು, “ಈ ಫೈನಲ್ ತುಂಬಾ ಕಠಿಣವಾಗಿದೆ. ಕಳೆದ ವರ್ಷ ರಾಫಾಲ್ ವಿರುದ್ಧ, ಈ ವರ್ಷ ಜೊಕೊವಿಕ್ ವಿರುದ್ಧ. ಇಬ್ಬರು ಬಲಿಷ್ಠ ಆಟಗಾರರು. ನೊವಾಕ್ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎಂದು,” ರುಡ್ ಹೇಳಿದರು.
ರೂಡ್ ತನ್ನ ಕೊನೆಯ 5 ಗ್ರ್ಯಾಂಡ್ ಸ್ಲಾಮ್ ಪಂದ್ಯಗಳಲ್ಲಿ ಬಾರಿ ಫೈನಲ್‌ಗೆ ತಲುಪಿದ್ದಾರೆ. ಪ್ಯಾರಿಸ್‌ನಲ್ಲಿ ನಡೆದ ಪಂದ್ಯದಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಇವರು ಕಳೆದ ವರ್ಷ ಯುಎಸ್ ಓಪನ್ ಫೈನಲ್‌ನಲ್ಲಿ ಕಾರ್ಲೋಸ್ ಅಲ್ಕರಾಜ್ ವಿರುದ್ಧ ಸೋತಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:38 pm, Sat, 10 June 23