Karthik Joshi: ವೀಸಾ ಸಮಸ್ಯೆ: ಯುಎಸ್ಗೆ ತೆರಳಲು ಪರದಾಡುತ್ತಿರುವ ಇಂಧೋರ್ನ ಕ್ರೀಡಾಪಟು
ಬ್ಯಾಕ್ಯಾರ್ಡ್ ಆಲ್ಟ್ರಾ ರನ್ ರೇಸ್ಗೆ ಕ್ವಾಲಿಫೈ ಆಗಿರುವ ಏಕೈಕ ಭಾರತೀಯ ಕ್ರೀಡಾಪಟು ಕಾರ್ತಿಕ್ ಆಗಿದ್ದಾರೆ. ಇವರದ್ದು ತೀರಾ ಬಡತನದ ಕುಟುಂಬ.
ಬ್ಯಾಕ್ಯಾರ್ಡ್ ಆಲ್ಟ್ರಾ ರನ್ನಲ್ಲಿ (Backyard Ultra Run) ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಕ್ರೀಡಾಪಟು ಇಂಧೋರ್ನ ಕಾರ್ತಿಕ್ ಜೋಶಿ (Kartik Joshi) ಅಮೆರಿಕಾಕ್ಕೆ ತೆರಳಲು ವೀಸಾ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ಯುಎಸ್ನಲ್ಲಿ ಅಕ್ಟೋಬರ್ 16 ರಿಂದ ಬ್ಯಾಕ್ಯಾರ್ಡ್ ಆಲ್ಟ್ರಾ ರನ್ ರೇಸ್ ಶುರುವಾಗಲಿದೆ. ಅಥ್ಲೀಟ್ಗಳು ಅಕ್ಟೋಬರ್ 11ಕ್ಕೆ ಅಮೆರಿಕಾಕ್ಕೆ (US) ತಲುಪಬೇಕು. ಆದರೆ, ಕಾರ್ತಿಕ್ ಅವರಿಗೆ ಕೋವಿಡ್ ಕಾರಣದಿಂದ ವೀಸಾ ಸಮಸ್ಯೆ ಎದುರಾಗಿದೆ.
ಬ್ಯಾಕ್ಯಾರ್ಡ್ ಆಲ್ಟ್ರಾ ರನ್ ರೇಸ್ಗೆ ಕ್ವಾಲಿಫೈ ಆಗಿರುವ ಏಕೈಕ ಭಾರತೀಯ ಕ್ರೀಡಾಪಟು ಕಾರ್ತಿಕ್ ಆಗಿದ್ದಾರೆ. ಇವರದ್ದು ತೀರಾ ಬಡತನದ ಕುಟುಂಬ. ಇಂಧೋರ್ನಲ್ಲಿ ಇವರು ಒಂದು ರೂಮ್ ಇರುವ ಬಾಡಿಗೆ ಮನೆಯಲ್ಲಿ ಕುಟುಂಬದ ಜೊತೆ ವಾಸಿಸುತ್ತಿದ್ದಾರೆ. ಅಚ್ಚರಿ ಎಂದರೆ ಇವರಿರುವ ಒಂದು ಕೊಠಡಿಯಲ್ಲಿ ಕಾರ್ತಿಕ್ ಅವರಿಗೆ ಲಭಿಸಿರುವ ಮೆಡಲ್, ಟ್ರೋಫಿಯನ್ನು ಇಡಲೂ ಜಾಗವಿಲ್ಲ.
Father of Indore-based Kartik Joshi, who has qualified for Backyard Ultra Individual World Championship to be held this month in the US claims that his son “is not able to get a visa due to COVID; urges Union Sports Minister Anurag Thakur, PM Modi to help his son participate.” pic.twitter.com/S6yg36TTP3
— ANI (@ANI) October 8, 2021
ಕಾರ್ತಿಕ್ ಅವರು ಒಂದು ಖಾಸಗಿ ಕಂಪನಿ ಉಡುಗೊರೆ ನೀಡಿರುವ ಟ್ರೆಟ್ಮಿಲ್ನಲ್ಲಿ ಅಭ್ಯಾಸ ನಡೆಸುತ್ತಾರೆ. “ನಾನು ಭಾರತಕ್ಕೆ ಮೂರು ಚಿನ್ನದ ಪದಕ ಗೆದ್ದುಕೊಟ್ಟಿದ್ದೇನೆ. ಅಕ್ಟೋಬರ್ 16ಕ್ಕೆ ಅಮೆರಿಕಾದಲ್ಲಿ ನಡೆಯಲಿರುವ ಬ್ಯಾಕ್ಯಾರ್ಡ್ ಆಲ್ಟ್ರಾ ರನ್ ರೇಸ್ನಲ್ಲಿ ಭಾಗವಹಿಸಬೇಕು. ಆದರೆ, ಯುಎಸ್ನಲ್ಲಿ ಕೋವಿಡ್ ಕಾರಣದಿಂದಾಗಿ ಇತರೆ ದೇಶಗಳಿಂದ ಬರುವ ಪ್ರಯಾಣಿಕರಿಗೆ ನಿರ್ಬಂಧ ಹೇರಲಾಗಿದೆ. ಇದರಿಂದ ವೀಸಾ ತೊಂದರೆ ಅನುಭವಿಸುತ್ತಿದ್ದೇನೆ” ಎಂದು ಹೇಳಿದ್ದಾರೆ. ಸದ್ಯ ಇವರು ಸರ್ಕಾರ ಸಹಾಯವನ್ನು ಎದುರು ನೋಡುತ್ತಿದ್ದಾರೆ.
Mumbai Indians: ಮುಂಬೈಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ: ಇಂದಿನ ಪಂದ್ಯದಲ್ಲಿ ರೋಹಿತ್ ಪಡೆ ಹೀಗೆ ಮಾಡಬೇಕು
RCB Predicted XI: ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಆರ್ಸಿಬಿ ತಂಡದಿಂದ ಇಬ್ಬರು ಆಟಗಾರರು ಔಟ್: 2 ಬದಲಾವಣೆ ಖಚಿತ
(Indore athlete says he is struggling to get US visa to compete in Backyard Ultra Run)