ಮೊಣಕಾಲಿನ ಸಮಸ್ಯೆ ಮರುಕಳಿಸಿರುವುದರಿಂದ ರೋಜರ್ ಫೆಡರರ್ ಒಲಂಪಿಕ್ಸ್ನಲ್ಲಿ ಭಾಗವಹಿಸುವುದಿಲ್ಲ
ಈಗಿನ ದಿಗ್ಗಜ ಆಟಗಾರರಲ್ಲಿ ಕೇವಲ ಫೆಡರರ್ ಮಾತ್ರ ಒಲಂಪಿಕ್ಸ್ನಿಂದ ಹಿಂದೆ ಸರಿದಿಲ್ಲ. ರಾಫೆಲ್ ನಡಾಲ್, ಸೆರೀನಾ ವಿಲಿಯಮ್ಸ್, ಡಾಮಿನಿಕ್ ಥೀಮ್ ಮೊದಲಾದವರೆಲ್ಲ ಭಾಗಹಿಸುತ್ತಿಲ್ಲ ಎಂದು ಈಗಾಗಲೇ ಹೇಳಿದ್ದಾರೆ.
ಮೊಣಕಾಲಿನ ಗಾಯದಿಂದ ನರಳುತ್ತಿರುವ ವಿಶ್ವ ಟೆನಿಸ್ನ ಅಗ್ರಮಾನ್ಯ ಆಟಗಾರ ರೋಜರ್ ಫೆಡರರ್, ಟೊಕಿಯೊ ಒಲಂಪಿಕ್ಸ್ ಬಾಗವಹಿಸುತ್ತಿಲ್ಲ. 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳ ಒಡೆಯ ‘ಫೆಡೆಕ್ಸ್’ ಕಳೆದ ವಾರ ವಿಂಬಲ್ಡನ್ ಟೂರ್ನಿಯ ಕ್ವಾರ್ಟರ್ ಪೈನಲ್ ಪಂದ್ಯದಲ್ಲಿ ಹ್ಯುಬರ್ಟ್ ಹುಕ್ರಾಜ್ಗೆ ನೇರ ಸೆಟ್ಗಳಿಂದ ಸೋತಿದ್ದರು. 8ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿರುವ ಈ ಸ್ವಿಸ್ ಆಟಗಾರ ಒಮ್ಮೆಯೂ ಒಲಂಪಿಕ್ಸ್ನಲ್ಲಿ ಸಿಂಗಲ್ಸ್ ಚಿನ್ನದ ಪದಕ ಗೆದ್ದಿಲ್ಲ. ಬಲ ಮೊಣಕಾಲಿನ ಸಮಸ್ಯೆಯಿಂದ ಪದೇಪದೆ ಬಳಳುತ್ತಿರುವ ಫೆಡರರ್ ಕಳೆದ ವರ್ಷ ಎರಡು ಬಾರಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.
‘ಗ್ರಾಸ್ ಕೋರ್ಟ್ ಮೇಲೆ ಆಡುವಾಗ ದುರದೃಷ್ಟವಶಾತ್ ಮೊಣಕಾಲಿನ ಸಮಸ್ಯೆ ಮರುಕಳಿಸಿತು. ಒಲಂಪಿಕ್ಸ್ನನಿಂದ ಹಿಂತೆಗೆಯದೆ ಬೇರೆ ದಾರಿಯಲಿಲ್ಲ ಅಂತ ನನಗೆ ಮನವರಿಕೆಯಾಗಿದೆ,’ ಎಂದು ಸಾಮಾಜಿಕ ಜಾಲತಾಣವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ. ಒಲಂಪಿಕ್ಸ್ನಲ್ಲಿ ಟೆನಿಸ್ ಪಂದ್ಯಗಳು ಜುಲೈ 24ರಿಂದ ಆರಂಭವಾಗಲಿವೆ.
#UPDATE "During the grass court season, I unfortunately experienced a setback with my knee, and have accepted that I must withdraw from the Tokyo Olympic Games," Roger Federer said in a statement on social media https://t.co/0eEWgtWJYg#AFPSports #Tokyo2020
— AFP News Agency (@AFP) July 13, 2021
ಮುಂದಿನ ತಿಂಗಳು 40 ನೇ ವಯಸ್ಸಿಗೆ ಕಾಲಿಡುವ ಫೆಡರರ್ ವಿಂಬಲ್ಡನ್ ಟೂರ್ನಿ ಆಡಲು ಫಿಟ್ ಆಗಿರುವುದಕ್ಕಾಗಿ ಫ್ರೆಂಚ್ ಓಪನ್ನಲ್ಲಿ ನಾಲ್ಕನೇ ಸುತ್ತಿನ ನಂತರ ಟೂರ್ನಿಯಿಂದ ಹಿಂತೆಗೆದಿದ್ದರು. ವಿಂಬಲ್ಡನ್ನಲ್ಲಿ ಅವರು, ಕ್ವಾರ್ಟರ್ ಪೈನಲ್ವರೆಗೆ ಉತ್ತಮವಾಗೇ ಆಡಿದರಾದರೂ ಆ ಹಂತದಲ್ಲಿ ಪೋಲೆಂಡ್ನ ಆಟಗಾರ ಹುಕ್ರಾಜ್ಗೆ 6-3, 7-6 (7/4) ಮತ್ತು 6-0 ಸೆಟ್ಗಳಿಂದ ಸೋತರು
ಪಂದ್ಯದ ನಂತರ ಮಾಧ್ಯಮದವರು, ಇದು ನಿಮ್ಮ ಕೊನೆಯ ವಿಂಬಲ್ಡನ್ ಟೂರ್ನಿಯೇ ಎಂದು ಕೇಳಿದ ಪ್ರಶ್ನೆಗೆ, ‘ಗೊತ್ತಿಲ್ಲ’ ಎಂದು ಚುಟುಕಾಗಿ ಉತ್ತರಿಸಿದ್ದರು. ಆದರೆ, ವಿಶ್ವದ ಮಾಜಿ ನಂಬರ್ ವನ್ ಆಟಗಾರ, ಮಂಗಳವಾರ ಹೇಳಿಕೆಯೊಂದನ್ನು ನೀಡಿ, ಬೇಸಿಗೆ ನಂತರ ಎಟಿಪಿ ಟೂರ್ಗೆ ವಾಪಸ್ಸಾಗುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದರು.
‘ಬೇಸಿಗೆ ನಂತರ ಟೂರ್ ವಾಪಸ್ಸಾಗುವ ಉದ್ದೇಶವಿಟ್ಟುಕೊಂಡು ರಿಹ್ಯಾಬ್ ಶುರಮಾಡಿದ್ದೇನೆ, ನಾನಿರುವ ಸ್ಥಳದಿಂದಲೇ ಒಲಂಪಿಕ್ಸ್ನಲ್ಲಿ ಭಾಗವಹಿಸಿರುವ ಸ್ವಿಸ್ ಆಟಗಾರರಿಗಾಗಿ ಚೀರ್ ಮಾಡುತ್ತೇನೆ,’ ಎಂದು ಫೆಡರರ್ ಹೇಳಿದ್ದಾರೆ.
ಈಗಿನ ದಿಗ್ಗಜ ಆಟಗಾರರಲ್ಲಿ ಕೇವಲ ಫೆಡರರ್ ಮಾತ್ರ ಒಲಂಪಿಕ್ಸ್ನಿಂದ ಹಿಂದೆ ಸರಿದಿಲ್ಲ. ರಾಫೆಲ್ ನಡಾಲ್, ಸೆರೀನಾ ವಿಲಿಯಮ್ಸ್, ಡಾಮಿನಿಕ್ ಥೀಮ್ ಮೊದಲಾದವರೆಲ್ಲ ಭಾಗಹಿಸುತ್ತಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ರವಿವಾರದಂದು ವಿಂಬಲ್ಡನ್ ಕಿರೀಟ ಧರಿಸಿದ ನೊವಾಕ್ ಜೊಕೊವಿಚ್ ತಾನು ಭಾಗವಹಿಸುವ ಸಾಧ್ಯತೆ 50/50 ರಷ್ಟಿದೆ ಅಂತ ಹೇಳಿದ್ದಾರೆ.
ಕಳೆದ ವರ್ಷವೇ ನಡೆಯಬೇಕಿದ್ದ ಒಲಂಪಿಕ್ಸ್ ಕೊವಿಡ್ ಪಿಡುಗಿನಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟಿತು. ಆದರೆ, ಕ್ರೀಡಾಪಟಗಳು ಖಾಲಿ ಮೈದಾನಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಅನಿವಾರ್ಯತೆ ಏರ್ಪಟ್ಟಿದೆ. ಜಪಾನಿನಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪ್ರೇಕ್ಷಕರಿಗೆ ಅವಕಾಶ ನೀಡದಿರಲು ಜಪಾನ ಸರ್ಕಾರ ನಿರ್ಧರಿಸಿದೆ.
ತಮ್ಮ ಉಜ್ವಲ ಕರೀಯರ್ನಲ್ಲಿ ಎಲ್ಲ ಟೆನಿಸ್ ಪ್ರಶಸ್ತಿಗಳನ್ನು ಗೆದ್ದಿರುವ ಫೆಡರರ್ಗೆ ಸಿಂಗಲ್ಸ್ನಲ್ಲಿ ಒಲಂಪಿಕ್ಸ್ ಚಿನ್ನದ ಪದಕ ಇನ್ನೂ ಸಿಕ್ಕಿಲ್ಲ. 2000 ರ ಸಿಡ್ನಿ ಒಲಂಪಿಕ್ಸ್ನಲ್ಲಿ ಅವರು ಸೆಮಿಫೈನಲ್ನಲ್ಲಿ ಸೋತರು. ನಂತರ 2012ರಲ್ಲಿ ಫೈನಲ್ ತಲುಪಿದರಾದರೂ ಇಂಗ್ಲೆಂಡ್ನ ಆಂಡಿ ಮುರ್ರೇ ಅವರಿಗೆ ಪರಾಭವಗೊಂಡರು. ಆದರೆ, 2008 ಬೀಜಿಂಗ್ ಒಲಂಪಿಕ್ಸ್ನಲ್ಲಿ ಅವರು ಸ್ಟ್ಯಾನ್ ವಾರ್ವಿಂಕಾ ಅವರ ಜೊತೆ ಡಬಲ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು.
ಇದನ್ನೂ ಓದಿ: ದಾಖಲೆಯ 21ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವ ಫೆಡರರ್ ಆಸೆಗೆ ಅಡ್ಡಿಯಾದ ಪೋಲೆಂಡ್ನ ಹುರ್ಕಾಜ್