Paralympics 2024: ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಟ್ಟ ನವದೀಪ್ ಸಿಂಗ್

Paralympics 2024: ಈ ಬಾರಿಯ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳು 30 ಕ್ಕಿಂತ ಹೆಚ್ಚಿನ ಪದಕ ಗೆಲ್ಲುವ ನಿರೀಕ್ಷೆಯಿದೆ. ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತೀಯರು 19 ಪದಕಗಳನ್ನು ಗೆದ್ದಿದ್ದೇ ಶ್ರೇಷ್ಠ ಸಾಧನೆಯಾಗಿತ್ತು. ಈ ಬಾರಿ ಈ ದಾಖಲೆಯನ್ನು ಮುರಿದಿದ್ದು, ಇದೀಗ 30 ಪದಕಗಳ ಗಡಿಗೆ ಬಂದು ನಿಂತಿದ್ದಾರೆ.

Paralympics 2024: ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಟ್ಟ ನವದೀಪ್ ಸಿಂಗ್
Navdeep Singh
Follow us
| Updated By: ಝಾಹಿರ್ ಯೂಸುಫ್

Updated on:Sep 08, 2024 | 7:46 AM

ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನ ಜಾವೆಲಿನ್ ಥ್ರೋ ಎಫ್​41 ಸ್ಪರ್ಧೆಯಲ್ಲಿ ಭಾರತದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. 47.32 ಮೀಟರ್‌ ದೂರಕ್ಕೆ ಜಾವೆಲಿನ್​ ಎಸೆಯುವ ಮೂಲಕ ನವದೀಪ್ ಪ್ಯಾರಾಲಿಂಪಿಕ್ಸ್​ನಲ್ಲಿ ಹೊಸ ದಾಖಲೆ ಬರೆದಿದ್ದು ವಿಶೇಷ. ಟೋಕಿಯೊ 2021 ಪ್ಯಾರಾಲಿಂಪಿಕ್ಸ್​ನಲ್ಲಿ ಚೀನಾದ ಪೆಂಗ್‌ಕ್ಸಿಯಾಂಗ್ ಸನ್ 47.13m ದೂರಕ್ಕೆ ಜಾವೆಲಿನ್ ಎಸೆದಿದ್ದು ಈವರೆಗಿನ ದಾಖಲೆಯಾಗಿತ್ತು. ಇದೀಗ ನವದೀಪ್ ಸಿಂಗ್ 47,32 ಮೀಟರ್ ದೂರಕ್ಕೆ ಎಸೆಯುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ವಿಶೇಷ ಎಂದರೆ ಈ ಸ್ಪರ್ಧೆಯಲ್ಲಿ ಆರಂಭದಲ್ಲಿ ನವದೀಪ್ ಬೆಳ್ಳಿ ಪದಕವನ್ನು ಗೆದ್ದಿದ್ದರು. ಆದರೆ ಇರಾನ್‌ನ ಬೀಟ್ ಸಡೆಗ್ ಅವರು ಕ್ರೀಡಾಹೀನ ನಡವಳಿಕೆಗಾಗಿ ಅನರ್ಹಗೊಂಡ ನಂತರ ನವದೀಪ್ ಅವರನ್ನು ಚಿನ್ನ ಪದಕಕ್ಕೆ ಅಪ್‌ಗ್ರೇಡ್ ಮಾಡಲಾಯಿತು. ಈ ಮೂಲಕ ನವದೀಪ್ ಸಿಂಗ್​ ಭಾರತಕ್ಕೆ 7ನೇ ಚಿನ್ನದ ಪದಕ ತಂದುಕೊಟ್ಟರು.

ಸಿಮ್ರಾನ್​ಗೆ ಕಂಚಿನ ಪದಕ:

ಮಹಿಳೆಯರ 200 ಮೀ ಟಿ12 ಓಟದ ಸ್ಪರ್ಧೆಯಲ್ಲಿ ಭಾರತದ ಸಿಮ್ರಾನ್ ಶರ್ಮಾ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 29 ಕ್ಕೆ ಏರಿದೆ. ಇನ್ನು ಕೆಲ ಸ್ಪರ್ಧೆಗಳು ಉಳಿದಿದ್ದು, ಹೀಗಾಗಿ ಈ ಬಾರಿ ಭಾರತೀಯರಿಂದ 30 ಪದಕಗಳನ್ನು ನಿರೀಕ್ಷಿಸಬಹುದು.

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಪದಕ ವಿಜೇತರು
ಸಂ. ಕ್ರೀಡಾಪಟು ಕ್ರೀಡೆ ಸ್ಪರ್ಧೆ ಪದಕ
1 ಅವನಿ ಲೇಖನಾ ಶೂಟಿಂಗ್ ಮಹಿಳೆಯರ 10ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ SH1 ಚಿನ್ನ
2 ಮೋನಾ ಅಗರ್ವಾಲ್ ಶೂಟಿಂಗ್ ಮಹಿಳೆಯರ 10ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ SH1 ಕಂಚು
3 ಪ್ರೀತಿ ಪಾಲ್ ಅಥ್ಲೆಟಿಕ್ಸ್ ಮಹಿಳೆಯರ 100ಮೀ ಟಿ35 ಕಂಚು
4 ಮನೀಶ್ ನರ್ವಾಲ್ ಶೂಟಿಂಗ್ ಪುರುಷರ 10 ಮೀ ಏರ್ ಪಿಸ್ತೂಲ್ SH1 ಬೆಳ್ಳಿ
5 ರುಬಿನಾ ಫ್ರಾನ್ಸಿಸ್ ಶೂಟಿಂಗ್ ಮಹಿಳೆಯರ 10ಮೀ ಏರ್ ಪಿಸ್ತೂಲ್ SH1 ಕಂಚು
6 ಪ್ರೀತಿ ಪಾಲ್ ಅಥ್ಲೆಟಿಕ್ಸ್ ಮಹಿಳೆಯರ 200ಮೀ ಟಿ35 ಕಂಚು
7 ನಿಶಾದ್ ಕುಮಾರ್ ಅಥ್ಲೆಟಿಕ್ಸ್ ಪುರುಷರ ಎತ್ತರ ಜಿಗಿತ T47 ಬೆಳ್ಳಿ
8 ಯೋಗೇಶ್ ಕಥುನಿಯಾ ಅಥ್ಲೆಟಿಕ್ಸ್ ಪುರುಷರ ಡಿಸ್ಕಸ್ ಥ್ರೋ F56 ಬೆಳ್ಳಿ
9 ನಿತೇಶ್ ಕುಮಾರ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ SL3 ಚಿನ್ನ
10 ತುಳಸಿಮತಿ ಮುರುಗೇಶನ್ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ SU5 ಬೆಳ್ಳಿ
11 ಮನಿಷಾ ರಾಮದಾಸ್ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ SU5 ಕಂಚು
12 ಸುಹಾಸ್ ಯತಿರಾಜ್ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ SL4 ಬೆಳ್ಳಿ
13 ರಾಕೇಶ್ ಕುಮಾರ್ / ಶೀತಲ್ ದೇವಿ ಬಿಲ್ಲುಗಾರಿಕೆ ಮಿಶ್ರ ತಂಡ ಕಂಚು
14 ಸುಮಿತ್ ಆಂಟಿಲ್ ಅಥ್ಲೆಟಿಕ್ಸ್ ಜಾವೆಲಿನ್ ಎಸೆತ F64 ಚಿನ್ನ
15 ನಿತ್ಯ ಶ್ರೀ ಶಿವನ್ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ SH6 ಕಂಚು
16 ದೀಪ್ತಿ ಜೀವನಜಿ ಅಥ್ಲೆಟಿಕ್ಸ್ ಮಹಿಳೆಯರ 400 ಮೀ ಟಿ20 ಕಂಚು
17 ಮರಿಯಪ್ಪನ್ ತಂಗವೇಲು ಅಥ್ಲೆಟಿಕ್ಸ್ ಪುರುಷರ ಎತ್ತರ ಜಿಗಿತ T63 ಕಂಚು
18 ಶರದ್ ಕುಮಾರ್ ಅಥ್ಲೆಟಿಕ್ಸ್ ಪುರುಷರ ಎತ್ತರ ಜಿಗಿತ T63 ಬೆಳ್ಳಿ
19 ಅಜೀತ್ ಸಿಂಗ್ ಅಥ್ಲೆಟಿಕ್ಸ್ ಪುರುಷರ ಜಾವೆಲಿನ್ ಎಸೆತ F46 ಬೆಳ್ಳಿ
20 ಸುಂದರ್ ಸಿಂಗ್ ಗುರ್ಜರ್ ಅಥ್ಲೆಟಿಕ್ಸ್ ಪುರುಷರ ಜಾವೆಲಿನ್ ಎಸೆತ F46 ಕಂಚು
21 ಸಚಿನ್ ಖಿಲಾರಿ ಅಥ್ಲೆಟಿಕ್ಸ್ ಪುರುಷರ ಶಾಟ್ ಪುಟ್ F46 ಬೆಳ್ಳಿ
22 ಹರ್ವಿಂದರ್ ಸಿಂಗ್ ಬಿಲ್ಲುಗಾರಿಕೆ ಪುರುಷರ ವೈಯಕ್ತಿಕ ರಿಕರ್ವ್  ಚಿನ್ನ
23 ಧರಂಬೀರ್ ಅಥ್ಲೆಟಿಕ್ಸ್ ಪುರುಷರ ಕ್ಲಬ್ ಥ್ರೋ F51 ಚಿನ್ನ
24 ಪರ್ಣವ್ ಸೂರ್ಮಾ ಅಥ್ಲೆಟಿಕ್ಸ್ ಪುರುಷರ ಕ್ಲಬ್ ಥ್ರೋ F51 ಬೆಳ್ಳಿ
25 ಕಪಿಲ್ ಪರ್ಮಾರ್ ಜೂಡೋ ಪುರುಷರ -60 ಕೆಜಿ J1 ಕಂಚು
26 ಪ್ರವೀಣ್ ಕುಮಾರ್ ಅಥ್ಲೆಟಿಕ್ಸ್ ಪುರುಷರ ಎತ್ತರ ಜಿಗಿತ T64 ಚಿನ್ನ
27 ಹೊಕಾಟೊ ಹೊಟೊಝೆ ಸೆಮಾ ಅಥ್ಲೆಟಿಕ್ಸ್ ಪುರುಷರ ಶಾಟ್ ಪುಟ್ F57 ಕಂಚು
28 ಸಿಮ್ರಾನ್ ಶರ್ಮಾ ಅಥ್ಲೆಟಿಕ್ಸ್ ಮಹಿಳೆಯರ 200 ಮೀ ಟಿ12 ಕಂಚು
29 ನವದೀಪ್ ಸಿಂಗ್ ಅಥ್ಲೆಟಿಕ್ಸ್ ಪುರುಷರ ಜಾವೆಲಿನ್ ಎಸೆತ F41 ಚಿನ್ನ

Published On - 7:44 am, Sun, 8 September 24