ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಯುವ ಷಟ್ಲರ್ ಲಕ್ಷ್ಯ ಸೇನ್ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಭಾರತದ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದಾರೆ. ಲಕ್ಷ್ಯ ಸೇನ್, ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್‌ನ ಸೆಮಿಫೈನಲ್‌ಗೆ ಪ್ರವೇಶಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಇದರೊಂದಿಗೆ ಒಲಿಂಪಿಕ್ ಇತಿಹಾಸದಲ್ಲಿ ಸೆಮಿಫೈನಲ್ ತಲುಪಿದ ಭಾರತದ ಮೊದಲ ಪುರುಷ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆಯ ಚೌ ತಿಯೆನ್ ಚೆನ್ ಅವರನ್ನು 19-21, 21-15, 21-12 ರಿಂದ ಸೋಲಿಸಿ ಸೆಮಿ-ಫೈನಲ್‌ಗೆ ಟಿಕೆಟ್ ಖಚಿತಪಡಿಸಿಕೊಂಡಿದ್ದಾರೆ. ಇದೀಗ ಲಕ್ಷ್ಯ ಸೇನ್ ಪದಕಕ್ಕೆ ಕೇವಲ ಒಂದು ಗೆಲುವಿನ ಅಂತರದಲ್ಲಿದ್ದಾರೆ. ಲಕ್ಷ್ಯಕ್ಕೂ ಮುನ್ನ ಕಿಡಂಬಿ ಶ್ರೀಕಾಂತ್ (2016) ಮತ್ತು ಪರುಪಳ್ಳಿ ಕಶ್ಯಪ್ (2012) ಕ್ವಾರ್ಟರ್ ಫೈನಲ್ ತಲುಪಿದ್ದರು. ಆದರೆ ಕ್ವಾರ್ಟರ್ ಫೈನಲ್ ಮೀರಿ ಈ ಇಬ್ಬರು ಆಟಗಾರರಿಗೆ ಮುನ್ನಡೆಯಲು ಸಾಧ್ಯವಾಗಿರಲಿಲ್ಲ.
ತೀವ್ರ ಕುತೂಹಲದಿಂದ ಕೂಡಿದ್ದ ಈ ಪಂದ್ಯದಲ್ಲಿ ಉಭಯ ಆಟಗಾರರ ನಡುವೆ ತೀವ್ರ ಪೈಪೋಟಿ ಕಂಡುಬಂತು. ಇಬ್ಬರು ಶಟ್ಲರ್ಗಳು ತಲಾ ಒಂದೊಂದು ಅಂಕ ಗಳಿಸಲು ಪರದಾಡುತ್ತಿರುವುದು ಕಂಡು ಬಂತು. ಮೊದಲ ಸೆಟ್‌ನಲ್ಲಿ ಚೈನೀಸ್ ತೈಪೆಯ ಚೌ ತಿಯೆನ್ ಚೆನ್ ಪ್ರಾಬಲ್ಯ ಸಾಧಿಸಿ 21-19 ರಿಂದ ಮೊದಲ ಸೆಟ್ ಗೆದ್ದರು. ನಂತರ ಎರಡನೇ ಸೆಟ್‌ನಲ್ಲಿ ಪುನರಾಗಮನ ಮಾಡಿದ ಲಕ್ಷ್ಯ 21-15 ರಲ್ಲಿ ಗೆದ್ದು ಪಂದ್ಯವನ್ನು ಸಮಬಲಗೊಳಿಸಿದರು. ಹೀಗಾಗಿ ಮೂರನೇ ಸೆಟ್ ತೀವ್ರ ರೋಚಕತೆ ಸೃಷ್ಟಿಸಿತ್ತು. ಅಂತಿಮವಾಗಿ ಲಕ್ಷ್ಯ 21-12 ರಿಂದ ಮೂರನೇ ಸೆಟ್ ಗೆದ್ದು ಸೆಮಿ ಫೈನಲ್‌ಗೆ ಎಂಟ್ರಿಕೊಟ್ಟರು.
🇮🇳 Result Update: #Badminton🏸 Men’s Singles QF👇
In(Sen) Lakshya😍, ladies and gentlemen👀😎
A tough battle against Former World no. 2, Chinese Taipei’s Chou Tien Chen. But Lakshya prevails with a scoreline of 19-21, 21-15 & 21-12🥳
Off to the Semis now✅
All the best… pic.twitter.com/INi8QsZTmb
— SAI Media (@Media_SAI) August 2, 2024
ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಲಕ್ಷ್ಯ ಸೇನ್, ಭಾರತದವರೇ ಆದ ಎಚ್ ಎಸ್ ಪ್ರಣಯ್ ಅವರನ್ನು 21-12, 21-6 ರಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದರು. 21 ನಿಮಿಷಗಳ ಕಾಲ ನಡೆದ ಮೊದಲ ಸೆಟ್ ಅನ್ನು 21-12 ರಿಂದ ಗೆದ್ದ ಲಕ್ಷ್ಯ ಸೇನ್, ಎರಡನೇ ಸೆಟ್‌ನಲ್ಲೂ ಪ್ರಬಲ ಪ್ರದರ್ಶನ ನೀಡಿ 18 ನಿಮಿಷಗಳ ಕಾಲ ನಡೆದ ಆಟದಲ್ಲಿ ಪ್ರಣಯ್ ಅವರನ್ನು 21-6 ರಿಂದ ಸೋಲಿಸಿ ಪಂದ್ಯವನ್ನು ಗೆದ್ದರು. ಈ ಪಂದ್ಯದ ಸೋಲಿನೊಂದಿಗೆ ಪ್ರಣಯ್ ಅವರ ಪ್ಯಾರಿಸ್ ಒಲಿಂಪಿಕ್ಸ್ ಪಯಣವೂ ಅಂತ್ಯಗೊಂಡಿತ್ತು. ಇದೀಗ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತದ ಪದಕದ ಭರವಸೆಯಾಗಿ ಲಕ್ಷ್ಯ ಸೇನ್ ಮಾತ್ರ ಉಳಿದಿದ್ದಾರೆ.
ಏಕೆಂದರೆ ನಿನ್ನೆ ಅಂದರೆ ಆಗಸ್ಟ್ 1 ರಂದು ನಡೆದ ಬ್ಯಾಡ್ಮಿಂಟನ್ ಈವೆಂಟ್ನಲ್ಲಿ ದೇಶಕ್ಕೆ ಪದಕದ ಭರವಸೆ ಮೂಡಿಸಿದ್ದ ಸ್ಟಾರ್ ಷಟ್ಲರ್ ಪಿವಿ ಸಿಂಧು ಸತತ ಮೂರನೇ ಒಲಿಂಪಿಕ್ಸ್ ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರು. ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿಯೇ ಸಿಂಧು ಸೋಲನ್ನು ಎದುರಿಸಬೇಕಾಯಿತು. ಇತ್ತ ಪುರುಷರ ಡಬಲ್ಸ್‌ನಲ್ಲಿ ಸೂಪರ್‌ಸ್ಟಾರ್ ಜೋಡಿ ಸಾತ್ವಿಕ್-ಚಿರಾಗ್ ಕೂಡ ಸೋಲನ್ನು ಎದುರಿಸಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಹಿರಿಯ ಆಟಗಾರ ಎಚ್‌ಎಸ್ ಪ್ರಣಯ್ ಅವರನ್ನು ಸೋಲಿಸಿದ ಲಕ್ಷ್ಯ ಅವರು ಬ್ಯಾಡ್ಮಿಂಟನ್‌ನಲ್ಲಿ ಭಾರತದ ಕೊನೆಯ ಭರವಸೆಯಾಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:39 pm, Fri, 2 August 24