AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paris Olympics 2024: ಒಲಿಂಪಿಕ್ಸ್​ನಲ್ಲಿಂದು ಭಾರತೀಯರಿಬ್ಬರ ಮುಖಾಮುಖಿ

Paris Olympics 2024: ಜೊನಾಥನ್ ಕ್ರಿಸ್ಟಿ ವಿರುದ್ಧ 21-18, 21-12 ರಿಂದ ಅಭೂತಪೂರ್ವ ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್ ಫೈನಲ್​ಗೆ ಪ್ರವೇಶಿಸಿರುವ ಲಕ್ಷ್ಯ ಸೇನ್​ಗೆ ಎದುರಾಳಿಯಾಗಿ ಸಿಕ್ಕಿದ್ದು, ಭಾರತದ ಹೆಚ್​ಎಸ್​ ಪ್ರಣಯ್. ಪ್ಯಾರಿಸ್ ಅಂಗಳದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಭಾರತೀಯರಿಬ್ಬರು ಮುಖಾಮುಖಿಯಾಗುತ್ತಿರುವುದು ವಿಶೇಷ.

Paris Olympics 2024: ಒಲಿಂಪಿಕ್ಸ್​ನಲ್ಲಿಂದು ಭಾರತೀಯರಿಬ್ಬರ ಮುಖಾಮುಖಿ
Lakshya Sen - HS Prannoy
ಝಾಹಿರ್ ಯೂಸುಫ್
|

Updated on:Aug 01, 2024 | 12:18 PM

Share

ಪ್ಯಾರಿಸ್ ಒಲಿಂಪಿಕ್ಸ್​ನ  ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್​ನಲ್ಲಿ ಇಂದು ಭಾರತೀಯ ಷಟ್ಲರ್​ಗಳಾದ ಲಕ್ಷ್ಯ ಸೇನ್ ಹಾಗೂ ಹೆಚ್​ಎಸ್​ ಪ್ರಣಯ್ ಮುಖಾಮುಖಿಯಾಗಲಿದ್ದಾರೆ. ಅಚ್ಚರಿ ಎಂದರೆ ಈ ಪಂದ್ಯದಲ್ಲಿ ಗೆದ್ದವರು ಮುಂದಿನ ಹಂತಕ್ಕೇರಿದರೆ, ಸೋತವರು ಒಲಿಂಪಿಕ್ಸ್​​ನಿಂದ ಹೊರಬೀಳಲಿದ್ದಾರೆ. ಅಂದರೆ ಗೆದ್ದರು, ಸೋತರೂ ಭಾರತಕ್ಕೆ ಲಾಭ-ನಷ್ಟವಾಗುವುದು ಖಚಿತ. ಏಕೆಂದರೆ ಈ ಪಂದ್ಯದೊಂದಿಗೆ ಬ್ಯಾಡ್ಮಿಂಟನ್​ನಲ್ಲಿ ಭಾರತೀಯರೊಬ್ಬರ ಅಭಿಯಾನ ಅಂತ್ಯವಾಗಲಿದೆ.

ಬುಧವಾರ ನಡೆದ ಸ್ಪರ್ಧೆಯಲ್ಲಿ ಶ್ರೇಯಾಂಕ ರಹಿತ ಲಕ್ಷ್ಯ ಸೇನ್ ಮೂರನೇ ಶ್ರೇಯಾಂಕದ ಜೊನಾಟನ್ ಕ್ರಿಸ್ಟಿ ವಿರುದ್ಧ 21-18, 21-12 ರಿಂದ ಅಭೂತಪೂರ್ವ ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್ ಸುತ್ತಿಗೆ ಪ್ರವೇಶಿಸಿದ್ದಾರೆ.

ಇದನ್ನೂ ಓದಿ: ಒಲಿಂಪಿಕ್ಸ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಮನು ಭಾಕರ್

ಮತ್ತೊಂದೆಡೆ, ನಿನ್ನೆ ನಡೆದ ಸ್ಪರ್ಧೆಯಲ್ಲಿ ಹೆಚ್​ಎಸ್​ ಪ್ರಣಯ್ ವಿಯೆಟ್ನಾಂನ ಲೆ ಡಕ್ ಫಾಟ್ ವಿರುದ್ಧ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ವಿಯೆಟ್ನಾಂ ಷಟ್ಲರ್ ವಿರುದ್ಧ 16-21, 21-11, 21-12 ಅಂತರದಿಂದ ಗೆಲ್ಲುವಲ್ಲಿ ಪ್ರಣಯ್ ಯಶಸ್ವಿಯಾಗಿದ್ದಾರೆ. ಅದರಂತೆ ಇದೀಗ ಪ್ರಿ ಕ್ವಾರ್ಟರ್ ಫೈನಲ್​ನಲ್ಲಿ ಭಾರತೀಯ ತಾರೆಗಳು ಮುಖಾಮುಖಿಯಾಗುತ್ತಿರುವುದು ವಿಶೇಷ.

ಭಾರತೀಯರಿಬ್ಬರ ಮುಖಾಮುಖಿ ಏಕೆ?

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಪುರುಷ ಬ್ಯಾಡ್ಮಿಂಟನ್​ನಲ್ಲಿ ಭಾರತದಿಂದ ಲಕ್ಷ್ಯ ಸೇನ್ ಹಾಗೂ ಹೆಚ್​ ಎಸ್ ಪ್ರಣಯ್ ಅರ್ಹತೆ ಪಡೆದುಕೊಂಡಿದ್ದರು. ಅದರಂತೆ ಈ ಬಾರಿಯ ಕ್ರೀಡಾಕೂಟದ ಮೊದಲ ಸುತ್ತಿನಲ್ಲಿ ಪ್ರಣಯ್ K ಗ್ರೂಪ್​ನಲ್ಲಿ ಕಣಕ್ಕಿಳಿದರೆ, ಲಕ್ಷ್ಯ ಸೇನ್ L ಗ್ರೂಪ್​ನಲ್ಲಿ ಆಡಿದ್ದರು. ಇದೀಗ ಗ್ರೂಪ್ ಹಂತ ಮುಗಿದು ಪಂದ್ಯವು ರೌಂಡ್-16 ಗೆ ತಲುಪಿದೆ.

ಈ ಸುತ್ತಿನಲ್ಲಿ ಆಯಾ ಗ್ರೂಪ್​ನಿಂದ ಅರ್ಹತೆ ಪಡೆದ ಆಟಗಾರರು ಪರಸ್ಪರ ಮುಖಾಮುಖಿಯಾಗುತ್ತಾರೆ. ಅದರಂತೆ ಇದೀಗ ಪ್ರಿ ಕ್ವಾರ್ಟರ್ ಫೈನಲ್​ನಲ್ಲಿ ಭಾರತದ ಲಕ್ಷ್ಯ ಸೇನ್ ಹಾಗೂ ಹೆಚ್ ಎಸ್ ಪ್ರಣಯ್ ಎದುರು ಬದುರಾಗಿದ್ದಾರೆ. ಈ ಪಂದ್ಯದಲ್ಲಿ ಗೆಲ್ಲುವವರು ಕ್ವಾರ್ಟರ್ ಫೈನಲ್​ಗೆ ಪ್ರವೇಶಿಸಿದರೆ, ಸೋತವರ ಅಭಿಯಾನ ಅಂತ್ಯವಾಗಲಿದೆ.

ಹೆಡ್ ಡು ಹೆಡ್:

ಲಕ್ಷ್ಯ ಸೇನ್ ಹಾಗೂ ಪ್ರಣಯ್ ಈವರೆಗೆ 7 ಬಾರಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ಪ್ರಣಯ್ 3 ಬಾರಿ ಜಯ ಸಾಧಿಸಿದರೆ, ಉಳಿದ ಪಂದ್ಯಗಳಲ್ಲಿ ಲಕ್ಷ್ಯ ಸೇನ್ ಗೆಲುವಿನ ನಗೆ ಬೀರಿದ್ದಾರೆ. ಇಬ್ಬರ ನಡುವಣ ಮುಖಾಮುಖಿಯ ಫಲಿತಾಂಶ ಈ ಕೆಳಗಿನಂತಿದೆ…

ದಿನಾಂಕ ಪಂದ್ಯಾವಳಿ ಆಟಗಾರ 1 ಆಟಗಾರ 2 ಸ್ಕೋರ್​ ವಿಜೇತ
 1/17/2023 ಇಂಡಿಯಾ ಓಪನ್ 2023 ಪ್ರಣಯ್ ಲಕ್ಷ್ಯ ಸೇನ್ 14-21 15-21 ಲಕ್ಷ್ಯ ಸೇನ್
1/11/2023 ಮಲೇಷ್ಯಾ ಓಪನ್ 2023 ಪ್ರಣಯ್ ಲಕ್ಷ್ಯ ಸೇನ್ 22-24 21-12 21-18 ಪ್ರಣಯ್
10/20/2022 ಡೆನ್ಮಾರ್ಕ್ ಓಪನ್ 2022 ಪ್ರಣಯ್ ಲಕ್ಷ್ಯ ಸೇನ್ 9-21 18-21 ಲಕ್ಷ್ಯ ಸೇನ್
8/25/2022 ವಿಶ್ವ ಚಾಂಪಿಯನ್‌ಶಿಪ್‌ 2022 ಪ್ರಣಯ್ ಲಕ್ಷ್ಯ ಸೇನ್ 17-21 21-16 21-17 ಪ್ರಣಯ್
6/15/2022 ಇಂಡೋನೇಷ್ಯಾ ಓಪನ್ 2022 ಪ್ರಣಯ್ ಲಕ್ಷ್ಯ ಸೇನ್ 21-10 21-9 ಪ್ರಣಯ್
3/11/2022 ಜರ್ಮನ್ ಓಪನ್ 2022 ಪ್ರಣಯ್ ಲಕ್ಷ್ಯ ಸೇನ್ 15-21 16-21 ಲಕ್ಷ್ಯ ಸೇನ್
1/14/2022 ಇಂಡಿಯಾ ಓಪನ್ ಪ್ರಣಯ್ ಲಕ್ಷ್ಯ ಸೇನ್ 21-14 9-21 14-21 ಲಕ್ಷ್ಯ ಸೇನ್

ಎಷ್ಟು ಗಂಟಗೆ ಪಂದ್ಯ ಶುರು?

ಬ್ಯಾಡ್ಮಿಂಟನ್​ನಲ್ಲಿ ಇಂದು ಭಾರತದ ನಾಲ್ವರು ಕಣಕ್ಕಿಳಿಯಲಿದ್ದಾರೆ. ಇಲ್ಲಿ ಪುರುಷರ ಡಬಲ್ಸ್​ನಲ್ಲಿ ಸಾತ್ವಿಕ್-ಚಿರಾಗ್ ಆಡಿದರೆ, ಪುರುಷರ ಸಿಂಗಲ್ಸ್​ನಲ್ಲಿ ಲಕ್ಷ್ಯ ಸೇನ್ ಹಾಗೂ ಪ್ರಣಯ್ ಮುಖಾಮುಖಿಯಾಗಲಿದ್ದಾರೆ. ಹಾಗೆಯೇ ಮಹಿಳಾ ಸಿಂಗಲ್ಸ್​ನಲ್ಲಿ ಪಿವಿ ಸಿಂಧು ಕೂಡ ಕಣಕ್ಕಿಳಿಯುತ್ತಿದ್ದಾರೆ. ಈ ಪಂದ್ಯಗಳ ಸಮಯ ಈ ಕೆಳಗಿನಂತಿದೆ…

  • 4:30 PM IST- ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌: ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ vs ಆರೋನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ (ಮಲೇಷ್ಯಾ)
  • 5:40 PM IST – ಪುರುಷರ ಸಿಂಗಲ್ಸ್​:  ಲಕ್ಷ್ಯ ಸೇನ್ vs ಹೆಚ್​ಎಸ್​ ಪ್ರಣಯ್
  • 10 PM ರಿಂದ – ಮಹಿಳೆಯರ ಸಿಂಗಲ್ಸ್​: ಪಿವಿ ಸಿಂಧು vs ಹೆ ಬಿಂಗ್ ಜಿಯಾವೊ

Published On - 9:49 am, Thu, 1 August 24