Paris Olympics 2024: ಆಂಗ್ಲರ ದಾಳಿಯನ್ನು ಗೋಲ್ ಕೀಪರ್ ಶ್ರೀಜೇಶ್ ಹಿಮ್ಮೆಟ್ಟಿಸಿದ್ದು ಹೇಗೆ? ವಿಡಿಯೋ ನೋಡಿ

PR Sreejesh: ಸತತ ಎರಡನೇ ಒಲಿಂಪಿಕ್ಸ್​ನಲ್ಲೂ ಭಾರತ ಹಾಕಿ ತಂಡ ಸೆಮಿಫೈನಲ್‌ಗೇರುವ ಮೂಲಕ ತನ್ನ ಪದಕದ ಭರವಸೆಯನ್ನು ಇನ್ನು ಜೀವಂತವಾಗಿರಿಸಿಕೊಂಡಿದೆ. ಕ್ವಾರ್ಟರ್‌ ಫೈನಲ್‌ನಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಮಣಿಸಿತು. ಭಾರತದ ಈ ಗೆಲುವಿನಲ್ಲಿ ಅನುಭವಿ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಅವರ ಪಾತ್ರ ಮಹತ್ವದಾಗಿತ್ತು.

Paris Olympics 2024: ಆಂಗ್ಲರ ದಾಳಿಯನ್ನು ಗೋಲ್ ಕೀಪರ್ ಶ್ರೀಜೇಶ್ ಹಿಮ್ಮೆಟ್ಟಿಸಿದ್ದು ಹೇಗೆ? ವಿಡಿಯೋ ನೋಡಿ
ಪಿಆರ್ ಶ್ರೀಜೇಶ್
Follow us
ಪೃಥ್ವಿಶಂಕರ
|

Updated on:Aug 04, 2024 | 6:23 PM

ಸರಿಯಾಗಿ ಮೂರು ವರ್ಷಗಳ ಹಿಂದೆ ಅಂದರೆ ಆಗಸ್ಟ್ 5, 2021 ರಂದು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಭಾರತ ಹಾಕಿ ತಂಡ ಜರ್ಮನಿಯನ್ನು ಸೋಲಿಸಿ ಕಂಚಿನ ಪದಕ ಗೆದ್ದು 41 ವರ್ಷಗಳ ಬರ ನೀಗಿಸಿತ್ತು. ಇದೀಗ ಸತತ ಎರಡನೇ ಒಲಿಂಪಿಕ್ಸ್​ನಲ್ಲೂ ಭಾರತ ಹಾಕಿ ತಂಡ ಸೆಮಿಫೈನಲ್‌ಗೇರುವ ಮೂಲಕ ತನ್ನ ಪದಕದ ಭರವಸೆಯನ್ನು ಇನ್ನು ಜೀವಂತವಾಗಿರಿಸಿಕೊಂಡಿದೆ. ಕ್ವಾರ್ಟರ್‌ ಫೈನಲ್‌ನಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಮಣಿಸುವ ಮೂಲಕ ಭಾರತ ಸೆಮಿಫೈನಲ್​ಗೇರಿದೆ. ಭಾರತದ ಈ ಗೆಲುವಿನಲ್ಲಿ ಅನುಭವಿ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಅವರ ಪಾತ್ರ ಮಹತ್ವದಾಗಿತ್ತು.

ವಾಸ್ತವವಾಗಿ ಕ್ವಾರ್ಟರ್-ಫೈನಲ್ ಪಂದ್ಯವು ಭಾರತ ಮತ್ತು ಗ್ರೇಟ್ ಬ್ರಿಟನ್ ನಡುವೆ ಆಗಸ್ಟ್ 4ರ ಭಾನುವಾರ ಪ್ಯಾರಿಸ್‌ನಲ್ಲಿ ನಡೆಯಿತು. ಮೂರು ವರ್ಷಗಳ ಹಿಂದೆಯೂ ಭಾರತ ಕ್ವಾರ್ಟರ್ ಫೈನಲ್‌ನಲ್ಲಿ ಬ್ರಿಟನ್‌ ತಂಡವನ್ನು ಸೋಲಿಸಿತ್ತು. ಆಗ ಭಾರತ 3-1 ಅಂತರದಲ್ಲಿ ಗೆದ್ದಿತ್ತು ಆದರೆ ಈ ಬಾರಿ ಸ್ಪರ್ಧೆ ಹೆಚ್ಚು ಕಠಿಣವಾಗಿತ್ತು. ಇದಕ್ಕೆ ಕಾರಣ ಭಾರತದ ಅಮಿತ್ ರೋಹಿದಾಸ್ ರೆಡ್ ಕಾರ್ಡ್ ಪಡೆದು ಎರಡನೇ ಕ್ವಾರ್ಟರ್‌ನಲ್ಲಿಯೇ ಪಂದ್ಯದಿಂದ ಹೊರಬಿದ್ದಿದ್ದು. ಹೀಗಾಗಿ ಟೀಂ ಇಂಡಿಯಾ ಕೇವಲ 10 ಆಟಗಾರರೊಂದಿಗೆ ಆಡಬೇಕಾಯಿತು. ಇದರ ಹೊರತಾಗಿಯೂ ಟೀಂ ಇಂಡಿಯಾ ಮೊದಲ ಗೋಲು ದಾಖಲಿಸಿ ನಂತರ 60ನೇ ನಿಮಿಷದವರೆಗೂ ಪಂದ್ಯವನ್ನು 1-1ರಲ್ಲಿ ಸಮಬಲಗೊಳಿಸಿತು.

21 ಹೊಡೆತಗಳಲ್ಲಿ, 20 ವಿಫಲ

ಪಂದ್ಯ 1-1 ಗೋಲುಗಳಿಂದ ಸಮವಾಗಲು ಗೋಲ್ ಕೀಪರ್ ಶ್ರೀಜೇಶ್ ಕಾರಣ, ಏಕೆಂದರೆ ಅವರು ಬ್ರಿಟನ್​ನ ಅನೇಕ ಹೊಡೆತಗಳನ್ನು ವಿಫಲಗೊಳಿಸಿದರು. ಇದರಲ್ಲಿ ಭಾರತದ ಡಿಫೆಂಡರ್‌ಗಳ ಕೊಡುಗೆಯೂ ಇತ್ತು. ಆದಾಗ್ಯೂ ಬ್ರಿಟನ್ ಆಟಗಾರರು ಭಾರತದ ಡಿಫೆಂಡರ್‌ಗಳನ್ನು ದಾಟಿ ಗೋಲು ಪೋಸ್ಟ್​ನತ್ತ ಸಾಗಿದರಾದರೂ, ಶ್ರೀಜೇಶ್ ಮುಂದೆ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.

ಇದನ್ನು ಅಂಕಿ ಅಂಶಗಳ ಮೂಲಕ ಹೇಳುವುದಾದರೆ, ಬ್ರಿಟನ್ ಒಟ್ಟು 21 ಹೊಡೆತಗಳ ಮೂಲಕ ಗೋಲು ದಾಖಲಿಸಲು ಪ್ರಯತ್ನಿಸಿತು. ಆದರೆ ಆ 21 ಹೊಡೆತಗಳಲ್ಲಿ ಒಮ್ಮೆ ಮಾತ್ರ ಯಶಸ್ಸು ಸಾಧಿಸಿತು. ಉಳಿದಂತೆ 20 ಪ್ರಯತ್ನಗಳನ್ನು ಭಾರತದ ರಕ್ಷಣಾ ವಿಭಾಗ ಅಥವಾ ಶ್ರೀಜೇಶ್ ತಡೆಯುವಲ್ಲಿ ಯಶಸ್ವಿಯಾದರು. ಬ್ರಿಟನ್​ನ ಪ್ರಯತ್ನಗಳ ಒಂದಿಷ್ಟು ವಿಡಿಯೋ ತುಣುಕುಗಳನ್ನು ಇಲ್ಲಿ ವೀಕ್ಷಿಸಬಹುದಾಗಿದೆ.

ಶೂಟೌಟ್ ಸೂಪರ್ ಸ್ಟಾರ್ ಶ್ರೀಜೇಶ್

ಪಂದ್ಯ 1-1 ರಿಂದ ಸಮನಾದ್ದರಿಂದ್ದ ಪೆನಾಲ್ಟಿ ಶೂಟೌಟ್​ನಲ್ಲಿ ವಿಜೇತರನ್ನು ನಿರ್ಧಾರಿಸಲು ತೀರ್ಮಾನಿಸಲಾಯಿತು. ಅದರಂತೆ ಮೊದಲು ಎರಡೂ ತಂಡಗಳು ತಲಾ 2 ಗೋಲು ಗಳಿಸಿದವು. ನಂತರ ಮೂರನೇ ಹೊಡೆತದಲ್ಲಿ ಇಂಗ್ಲೆಂಡ್ ಗೋಲು ದಾಖಲಿಸುವುದನ್ನು ಶ್ರೀಜೇಶ್ ತಪ್ಪಿಸಿದರು. ಆದರೆ ಭಾರತ ಮೂರನೇ ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಇಂಗ್ಲೆಂಡ್​ನ ನಾಲ್ಕನೇ ಹೊಡೆತವನ್ನೂ ಶ್ರೀಜೇಶ್ ಗೋಲು ಗಳಿಸದಂತೆ ತಡೆದರು. ಇತ್ತ ರಾಜ್ ಕುಮಾರ್ ಪಾಲ್ ಭಾರತದ ಪರ ಕೊನೆಯ ಹೊಡೆತವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಭಾರತ 4-2 ಗೋಲುಗಳ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:22 pm, Sun, 4 August 24

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ