Paris Olympics 2024: ಭಾರತಕ್ಕೆ 4ನೇ ಪದಕದ ಭರವಸೆ; 57 ಕೆಜಿ ಕುಸ್ತಿ ವಿಭಾಗದಲ್ಲಿ ಸೆಮೀಸ್ಗೇರಿದ ಅಮನ್ ಸೆಹ್ರಾವತ್
Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿದೆ. 57 ಕೆಜಿ ಕುಸ್ತಿ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಮನ್ ಸೆಹ್ರಾವತ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಅಮನ್ ಸೆಹ್ರಾವತ್ ತಮ್ಮ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಲ್ಬೇನಿಯನ್ ಕುಸ್ತಿಪಟುವನ್ನು 12-0 ಅಂತರದಿಂದ ಸೋಲಿಸಿದರು.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿದೆ. 57 ಕೆಜಿ ಕುಸ್ತಿ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಮನ್ ಸೆಹ್ರಾವತ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಅಮನ್ ಸೆಹ್ರಾವತ್ ತಮ್ಮ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಲ್ಬೇನಿಯನ್ ಕುಸ್ತಿಪಟುವನ್ನು 12-0 ಅಂತರದಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ಅಮನ್ ಈಗ ಪದಕಕ್ಕೆ ಒಂದು ಹೆಜ್ಜೆ ದೂರವಾಗಿದ್ದಾರೆ. ಇಂದು ರಾತ್ರಿ 9.45ಕ್ಕೆ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಅಮನ್ ಸೆಹ್ರಾವತ್ ಗೆದ್ದು, ಫೈನಲ್ ತಲುಪಿದರೆ ಅವರಿಗೆ ಬೆಳ್ಳಿ ಪದಕ ಖಚಿತವಾಗಲಿದೆ. ಒಂದು ವೇಳೆ ಫೈನಲ್ ಪಂದ್ಯದಲ್ಲಿ ಗೆದ್ದರೆ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದು ಸಾಧ್ಯವಾದರೆ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಭಾರತದ ಪರ ಚಿನ್ನದ ಪದಕ ಗೆದ್ದ ಮೊದಲ ಅಥ್ಲೀಟ್ ಎನಿಸಿಕೊಳ್ಳಲಿದ್ದಾರೆ.
ಅಮನ್ ಪ್ರದರ್ಶನ ಹೇಗಿದೆ?
21 ವರ್ಷದ ಅಮನ್ ಸೆಹ್ರಾವತ್ ಈಗಾಗಲೇ ಹಲವು ದೊಡ್ಡ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದಿದ್ದಾರೆ. ಕಳೆದ ವರ್ಷ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದ ಅಮನ್, ಅದೇ ವರ್ಷ ಝಾಗ್ರೆಬ್‌ನಲ್ಲಿ ಮತ್ತೊಂದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದರು. ಇದಲ್ಲದೆ ಅಮನ್, 2022ರಲ್ಲಿ ನಡೆದಿದ್ದ ಬುಡಾಪೆಸ್ಟ್‌ನಲ್ಲಿ 61 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕವನ್ನೂ ಗೆದ್ದಿದ್ದರು. ಆದರೆ, ಈ ಬಾರಿಯ ಒಲಿಂಪಿಕ್ಸ್ನಲ್ಲಿ ಅಮನ್ ಸೆಹ್ರಾವತ್ ಈಗ 57 ಕೆಜಿ ವಿಭಾಗದಲ್ಲಿ ಆಡುತ್ತಿದ್ದಾರೆ.
Bharat ka sher Sherawat 🤼♂️
Watch the Olympics LIVE NOW on #Sports18 & stream FREE on #JioCinema.#OlympicsonJioCinema #OlympicsonSports18 #JioCinemaSports #Olympics #Wrestling pic.twitter.com/FMuzOgMfcN
— JioCinema (@JioCinema) August 8, 2024
Aman Sehrawat progresses to men’s 57kg freestyle wrestling semifinal after beating Albania’s Zelimkhan Abakarov via technical superiority (12-0)#IndianWrestlers #Cheer4Bharat #Paris2024 #Olympics pic.twitter.com/3xLssbjDmG
— All India Radio News (@airnewsalerts) August 8, 2024
ಮೊದಲ ಪಂದ್ಯದಲ್ಲೇ ಏಕಪಕ್ಷೀಯ ಗೆಲುವು
ಇದಕ್ಕೂ ಮುನ್ನ ಅಮನ್ ಸೆಹ್ರಾವತ್ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಮ್ಯಾಸಿಡೋನಿಯಾದ ವ್ಲಾಡಿಮಿರ್ ಎಗೊರೊವ್ ಅವರನ್ನು ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದರು.ತಾಂತ್ರಿಕ ಶ್ರೇಷ್ಠತೆಯ ಆಧಾರದ ಮೇಲೆ 10-0 ಅಂತರದಲ್ಲಿ ವಿಶ್ವದ 38 ನೇ ಶ್ರೇಯಾಂಕದ ಕುಸ್ತಿಪಟುವನ್ನು ಸೋಲಿಸುವಲ್ಲಿ ಅಮನ್ ಯಶಸ್ವಿಯಾಗಿದ್ದರು. ಇದೀಗ ಅಮನ್ ಸೆಹ್ರಾವತ್ ಸೆಮಿ-ಫೈನಲ್ ಪಂದ್ಯದಲ್ಲಿ ಜಪಾನ್‌ನ ಅಗ್ರ ಶ್ರೇಯಾಂಕದ ರೇ ಹಿಗುಚಿ ವಿರುದ್ಧ ಸೆಣಸಾಡಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:51 pm, Thu, 8 August 24