ಅಹಮದಾಬಾದ್ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ನ (PKL 2023) 10ನೇ ಸೀಸನ್ನ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ಭರ್ಜರಿ ಜಯ ಸಾಧಿಸಿದೆ. EKA ಅರೆನಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡದ ರೈಡರ್ ಪವನ್ ಸೆಹ್ರಾವತ್ ಉತ್ತಮ ಪ್ರದರ್ಶನ ನೀಡಿದ್ದರು. ಪರಿಣಾಮ ಮೊದಲಾರ್ಧದಲ್ಲಿ ತೆಲುಗು ಟೈಟಾನ್ಸ್ ತಂಡವು 16 ಅಂಕಗಳಿಸಿದರೆ, ಗುಜರಾತ್ ಜೈಂಟ್ಸ್ ತಂಡ 13 ಪಾಯಿಂಟ್ಸ್ ಕಲೆಹಾಕಿತು. ಆದರೆ ದ್ವಿತೀಯಾರ್ಧದಲ್ಲಿ ಗುಜರಾತ್ ಜೈಂಟ್ಸ್ ತಂಡವು ಉತ್ತಮ ಕಂಬ್ಯಾಕ್ ಮಾಡಿತು.
ಗುಜರಾತ್ ಜೈಂಟ್ಸ್ ಪರ ಅದ್ಭುತ ರೇಡಿಂಗ್ ಪ್ರದರ್ಶಿಸಿದ ಸೋನು ಜಗ್ಲಾನ್ ಬ್ಯಾಕ್ ಟು ಬ್ಯಾಕ್ ಪಾಯಿಂಟ್ಸ್ ಕಲೆಹಾಕಿದರು. ಒಟ್ಟು 11 ಬಾರಿ ದಾಳಿ ಮಾಡಿದ ಸೋನು ಜಗ್ಲಾನ್ 11 ಅಂಕಗಳನ್ನು ತಂದುಕೊಡುವಲ್ಲಿ ಯಶಸ್ವಿಯಾದರು. ಮತ್ತೊಂದೆಡೆ ಸೋನುಗೆ ಉತ್ತಮ ಸಾಥ್ ನೀಡಿದ ರಾಕೇಶ್ ಸುಂಗ್ರೋಯಾ 5 ರೈಡ್ಗಳ ಮೂಲಕ 5 ಅಂಕಗಳಿಸಿದರು.
ಪರಿಣಾಮ ದ್ವಿತೀಯಾರ್ಧದ ಆರಂಭದಲ್ಲೇ 18-16 ಅಂತರದ ಸಾಧಿಸುವಲ್ಲಿ ಗುಜರಾತ್ ಜೈಂಟ್ಸ್ ಯಶಸ್ವಿಯಾಯಿತು. ಈ ಅಂತರವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದ ಗುಜರಾತ್ ತಂಡವು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಇನ್ನು ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವು 10 ಟ್ಯಾಕ್ಲ್ ಪಾಯಿಂಟ್ಸ್ ಕಲೆಹಾಕಿದರೆ, ತೆಲುಗು ಟೈಟಾನ್ಸ್ 9 ಟ್ಯಾಕ್ಸ್ ಪಾಯಿಂಟ್ಸ್ ಕಲೆಹಾಕಿತು. ಅಲ್ಲದೆ ಅಂತಿಮವಾಗಿ 38-32 ಅಂತರದಿಂದ ತೆಲುಗು ಟೈಟಾನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ತಂಡವು ಭರ್ಜರಿ ಜಯ ಸಾಧಿಸಿತು.
ಯುಪಿ ಯೋಧಾಸ್ ಮತ್ತು ಯು ಮುಂಬಾ ನಡುವೆ ನಡೆದ 2ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಯು ಮುಂಬಾ ಪರ ಅದ್ಭುತ ಪ್ರದರ್ಶನ ನೀಡಿದ ಅಮಿರ್ ಮೊಹಮ್ಮದ್ 6 ರೇಡ್ ಪಾಯಿಂಟ್ಸ್, 5 ಬೋನಸ್ ಹಾಗೂ 1 ಟ್ಯಾಕ್ಲ್ ಪಾಯಿಂಟ್ನೊಂದಿಗೆ 12 ಅಂಕಗಳಿಸಿದರು. ಅಮಿರ್ಗೆ ಉತ್ತಮ ಸಾಥ್ ನೀಡಿದ ರಿಂಕು 6 ಪಾಯಿಂಟ್ಸ್ ಕಲೆಹಾಕಿದರು.
A tough battle but the 𝐌𝐮𝐦𝐛𝐚 𝐖𝐚𝐥𝐥 was unbreakable tonight 🤜🤛@umumba clinch their first victory of #PKLSeason10 🤩
Stay tuned for more action tomorrow at 7:30 PM onwards, LIVE on the Star Sports Network and for free on the Disney+Hotstar mobile app 📲 pic.twitter.com/76LFOOCiiY
— ProKabaddi (@ProKabaddi) December 2, 2023
ಇದೇ ವೇಳೆ ಯುಪಿ ಯೋಧಾಸ್ ಪರ ಸುರೇಂದರ್ ಗಿಲ್ 7 ಅಂಕಗಳಿಸಿದರೆ, ಅನಿಲ್ ಕುಮಾರ್ 7 ಪಾಯಿಂಟ್ಸ್ ಕಲೆಹಾಕಿದರು. ಪರಿಣಾಮ ಒಂದು ಹಂತದಲ್ಲಿ ಉಭಯ ತಂಡಗಳ ಅಂಕಗಳು 30-30 ಅಂತರದಿಂದ ಸಮಬಲ ಸಾಧಿಸಿತು. ಅಂತಿಮವಾಗಿ ಯು ಮುಂಬಾ 34 ಅಂಕಗಳನ್ನು ಕಲೆಹಾಕಿದರೆ, ಯುಪಿ ಯೋಧಾಸ್ 31 ಪಾಯಿಂಟ್ಸ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಯು ಮುಂಬಾ 3 ಅಂಕಗಳ ರೋಚಕ ಜಯ ಸಾಧಿಸಿತು.
Published On - 9:44 pm, Sat, 2 December 23