PKL 2023: ಪ್ರೊ ಕಬಡ್ಡಿ ಲೀಗ್​ಗೆ ಡೇಟ್ ಫಿಕ್ಸ್

Pro Kabaddi League 2023: ಈ ಬಾರಿಯ ಪ್ರೊ ಕಬಡ್ಡಿ ಲೀಗ್​ಗಾಗಿ ಸೆಪ್ಟೆಂಬರ್ 8 ಹಾಗೂ 9 ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಮುಂಬೈನಲ್ಲಿ ನಡೆಯಲಿರುವ ಈ ಬಿಡ್ಡಿಂಗ್​ನಲ್ಲಿ 500 ಕ್ಕೂ ಅಧಿಕ ಆಟಗಾರರ ಹೆಸರು ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

PKL 2023: ಪ್ರೊ ಕಬಡ್ಡಿ ಲೀಗ್​ಗೆ ಡೇಟ್ ಫಿಕ್ಸ್
PKL 2023
Follow us
TV9 Web
| Updated By: ಝಾಹಿರ್ ಯೂಸುಫ್

Updated on:Aug 17, 2023 | 3:18 PM

Pro Kabaddi League 2023: ಪ್ರೊ ಕಬಡ್ಡಿ ಲೀಗ್ (PKL 2023) ಸೀಸನ್​ 10 ಕ್ಕೆ ಡೇಟ್ ಫಿಕ್ಸ್ ಮಾಡಲಾಗಿದೆ. ಅದರಂತೆ ಈ ಬಾರಿಯ ಕಬಡ್ಡಿ ಕಾದಾಟ ಡಿಸೆಂಬರ್ 2, 2023 ರಿಂದ ಶುರುವಾಗಲಿದೆ. ಈ ಹಾಗೆಯೇ ಸೆಪ್ಟೆಂಬರ್ 8 ರಂದು  ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಿದ್ದೇವೆ ಎಂದು ಮಶಾಲ್ ಸ್ಪೋರ್ಟ್ಸ್‌ನ ಮುಖ್ಯಸ್ಥ ಮತ್ತು ಪ್ರೊ ಕಬಡ್ಡಿ ಲೀಗ್‌ನ ಲೀಗ್ ಕಮಿಷನರ್ ಅನುಪಮ್ ಗೋಸ್ವಾಮಿ ತಿಳಿಸಿದ್ದಾರೆ.

12 ನಗರಗಳಲ್ಲೂ ಪಂದ್ಯ:

ಈ ಬಾರಿಯ ಟೂರ್ನಿಯನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ಇರಲಿದೆ. ಈ ಹಿಂದೆ ಕೋವಿಡ್ ಭೀತಿ ಹಿನ್ನಲೆಯಲ್ಲಿ ನಿರ್ದಿಷ್ಟ ಸ್ಟೇಡಿಯಂಗಳಲ್ಲಿ ಟೂರ್ನಿಯನ್ನು ಆಯೋಜಿಸಲಾಗಿತ್ತು. ಆದರೆ ಈ ಬಾರಿ 12 ಫ್ರಾಂಚೈಸಿಗಳ ನಗರಗಳಲ್ಲಿ ಟೂರ್ನಿ ನಡೆಯಲಿದೆ. ಹೀಗಾಗಿ ತವರು ನಗರದಲ್ಲಿ ತಮ್ಮ ನೆಚ್ಚಿನ ತಾರೆಗಳನ್ನು ಹುರಿದುಂಬಿಸುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.

ಆಟಗಾರರ ಬಿಡ್ಡಿಂಗ್:

ಈ ಬಾರಿಯ ಪ್ರೊ ಕಬಡ್ಡಿ ಲೀಗ್​ಗಾಗಿ ಸೆಪ್ಟೆಂಬರ್ 8 ಹಾಗೂ 9 ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಮುಂಬೈನಲ್ಲಿ ನಡೆಯಲಿರುವ ಈ ಬಿಡ್ಡಿಂಗ್​ನಲ್ಲಿ 500 ಕ್ಕೂ ಅಧಿಕ ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ.

84 ಆಟಗಾರರು ರಿಟೈನ್:

ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳು ತಲಾ 7 ಆಟಗಾರರನ್ನು ಉಳಿಸಿಕೊಳ್ಳಬಹುದು. ಅಂದರೆ 84 ಆಟಗಾರರು ರಿಟೈನ್ ಆಗುವ ನಿರೀಕ್ಷಿಸಿದೆ. ಇನ್ನುಳಿದ ಆಟಗಾರರಿಗಾಗಿ ಹರಾಜು ನಡೆಯಲಿದೆ.

ಯುವ ಆಟಗಾರರಿಗೆ ಅವಕಾಶ:

ಈ ಬಾರಿಯ ಹರಾಜಿನಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2023 ಫೈನಲಿಸ್ಟ್ ತಂಡಗಳ 24 ಆಟಗಾರರಿಗೆ ಅವಕಾಶ ನೀಡಲಾಗುತ್ತಿದೆ. ಹೀಗಾಗಿ ಕೆಲ ಹೊಸ ಮುಖಗಳು ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ.

ಪ್ರತಿ ತಂಡಗಳು ರಿಟೈನ್ ಮಾಡಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ:

  • ಬೆಂಗಾಲ್ ವಾರಿಯರ್ಸ್
  • ವೈಭವ್ ಭೌಸಾಹೇಬ್ ಗರ್ಜೆ
  • ಆರ್ ಗುಹಾನ್
  • ಸುಯೋಗ್ ಬಾಬನ್ ಗಾಯಕರ್
  • ಪರ್ಶಾಂತ್ ಕುಮಾರ್

____________________________

  • ಬೆಂಗಳೂರು ಬುಲ್ಸ್
  • ನೀರಜ್ ನರ್ವಾಲ್
  • ಭರತ್
  • ಸೌರಭ್ ನಂದಲ್
  • ಅಮನ್
  • ಯಶ್ ಹೂಡಾ

____________________________

  • ದಬಾಂಗ್ ಡೆಲ್ಲಿ
  • ನವೀನ್ ಕುಮಾರ್
  • ವಿಜಯ್
  • ಮಂಜೀತ್
  • ಆಶಿಶ್ ನರ್ವಾಲ್
  • ಸೂರಜ್ ಪನ್ವಾರ್

____________________________

  • ಗುಜರಾತ್ ಜೈಂಟ್ಸ್
  • ಮನುಜ್
  • ಸೋನು
  • ರಾಕೇಶ್
  • ರೋಹನ್ ಸಿಂಗ್
  • ಪಾರ್ತೀಕ್ ದಹಿಯಾ

____________________________

  • ಹರಿಯಾಣ ಸ್ಟೀಲರ್ಸ್
  • ಕೆ.ಪ್ರಪಂಜನ್
  • ವಿನಯ್
  • ಜೈದೀಪ್
  • ಮೋಹಿತ್
  • ನವೀನ್
  • ಮೋನು
  • ಹರ್ಷ
  • ಸನ್ನಿ

____________________________

  • ಜೈಪುರ ಪಿಂಕ್ ಪ್ಯಾಂಥರ್ಸ್
  • ಸುನಿಲ್ ಕುಮಾರ್
  • ಅಜಿತ್ ವಿ ಕುಮಾರ್
  • ರೆಜಾ ಮಿರ್ಬಗೇರಿ
  • ಭವಾನಿ ರಜಪೂತ್
  • ಅರ್ಜುನ್ ದೇಶವಾಲ್
  • ಸಾಹುಲ್ ಕುಮಾರ್

____________________________

  • ಪಾಟ್ನಾ ಪೈರೇಟ್ಸ್
  • ಸಚಿನ್
  • ನೀರಜ್ ಕುಮಾರ್
  • ಮನೀಶ್
  • ತ್ಯಾಗರಾಜನ್ ಯುವರಾಜ್
  • ನವೀನ್ ಶರ್ಮಾ
  • ರಂಜಿತ್ ವೆಂಕಟ್ರಮಣ ನಾಯಕ್
  • ಅನುಜ್ ಕುಮಾರ್

____________________________

  • ಪುಣೇರಿ ಪಲ್ಟನ್
  • ಅಭಿನೇಶ್ ನಟರಾಜನ್
  • ಗೌರವ್ ಖಾತ್ರಿ
  • ಸಂಕೇತ್ ಸಾವಂತ್
  • ಪಂಕಜ್ ಮೋಹಿತೆ
  • ಅಸ್ಲಂ ಮುಸ್ತಫಾ ಇನಾಮದಾರ್
  • ಮೋಹಿತ್ ಗೋಯತ್
  • ಆಕಾಶ್ ಸಂತೋಷ್ ಶಿಂಧೆ

____________________________

  • ತಮಿಳ್ ತಲೈವಾಸ್
  • ಅಜಿಂಕ್ಯ ಅಶೋಕ್ ಪವಾರ್
  • ಸಾಗರ್
  • ಹಿಮಾಂಶು
  • ಎಂ. ಅಭಿಷೇಕ್
  • ಸಾಹಿಲ್
  • ಮೋಹಿತ್
  • ಆಶಿಶ್

____________________________

ಇದನ್ನೂ ಓದಿ: ಜಸ್​ಪ್ರೀತ್ ಬುಮ್ರಾ ಟಿ20 ತಂಡದ 11ನೇ ನಾಯಕ: ಉಳಿದ 10 ಕ್ಯಾಪ್ಟನ್​ಗಳ ಪಟ್ಟಿ ಇಲ್ಲಿದೆ

  • ತೆಲುಗು ಟೈಟಾನ್ಸ್
  • ಪರ್ವೇಶ್ ಭೈನ್‌ವಾಲ್
  • ರಜನೀಶ್
  • ಮೋಹಿತ್
  • ನಿತಿನ್
  • ವಿನಯ್

____________________________

  • ಯು ಮುಂಬಾ
  • ಸುರೀಂದರ್ ಸಿಂಗ್
  • ಜೈ ಭಗವಾನ್
  • ರಿಂಕು
  • ಹೈದರಾಲಿ ಎಕ್ರಮಿ
  • ಶಿವಂ

____________________________

  • ಯುಪಿ ಯೋಧಾಸ್
  • ಪರದೀಪ್ ನರ್ವಾಲ್
  • ನಿತೇಶ್ ಕುಮಾರ್
  • ಸುಮಿತ್
  • ಅಶು ಸಿಂಗ್
  • ಸುರೇಂದರ್ ಗಿಲ್

____________________________

Published On - 3:16 pm, Thu, 17 August 23

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ