PKL LIVE Score: ಬೆಂಗಳೂರು ಬುಲ್ಸ್ ವಿರುದ್ಧ ರೋಚಕ ಜಯ ಸಾಧಿಸಿದ ಗುಜರಾತ್ ಜೈಂಟ್ಸ್

| Updated By: ಝಾಹಿರ್ ಯೂಸುಫ್

Updated on: Dec 03, 2023 | 11:15 PM

Gujarat Giants vs Bengaluru Bulls: ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ್ದ ಗುಜರಾತ್ ಜೈಂಟ್ಸ್​ ತಂಡವು ಬೆಂಗಳೂರು ಬುಲ್ಸ್ ವಿರುದ್ಧದ ಪಂದ್ಯದಲ್ಲೂ ಗೆಲುವಿನ ನಗೆ ಬೀರಿದೆ.

PKL LIVE Score: ಬೆಂಗಳೂರು ಬುಲ್ಸ್ ವಿರುದ್ಧ ರೋಚಕ ಜಯ ಸಾಧಿಸಿದ ಗುಜರಾತ್ ಜೈಂಟ್ಸ್
Gujarat Giants vs Bengaluru Bulls

ಅಹಮದಾಬಾದ್​ನ EKA ಅರೇನಾ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್​ನ 4ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಗುಜರಾತ್ ಜೈಂಟ್ಸ್​ ರೋಚಕ ಜಯ ಸಾಧಿಸಿದೆ. ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವು 34 ಅಂಕಗಳಿಸಿದರೆ, ಬೆಂಗಳೂರು ಬುಲ್ಸ್ ತಂಡ 31 ಪಾಯಿಂಟ್ಸ್​ ಕಲೆಹಾಕಲಷ್ಟೇ ಶಕ್ತರಾದರು. ಈ ಮೂಲಕ ಗುಜರಾತ್ ಜೈಂಟ್ಸ್​ ತಂಡ 3 ಅಂಕಗಳ ಅಂತರದಿಂದ ಜಯ ಸಾಧಿಸಿದೆ.

ಬೆಂಗಳೂರು ಬುಲ್ಸ್​ ತಂಡ: ನೀರಜ್ ನರ್ವಾಲ್, ಭರತ್, ಸೌರಭ್ ನಂದಲ್, ಯಶ್ ಹೂಡಾ, ವಿಶಾಲ್, ವಿಕಾಶ್ ಖಂಡೋಲಾ, ರಾನ್ ಸಿಂಗ್, ಎಂಡಿ. ಲಿಟನ್ ಅಲಿ, ಪಿಯೋಟರ್ ಪಮುಲಕ್, ಪೊನ್‌ಪರ್ತಿಬನ್ ಸುಬ್ರಮಣಿಯನ್, ಸುಂದರ್, ಸುರ್ಜೀತ್ ಸಿಂಗ್, ಅಭಿಷೇಕ್ ಸಿಂಗ್, ಬಂಟಿ, ಮೋನು, ಅಂಕಿತ್, ಸುಶೀಲ್, ರಕ್ಷಿತ್, ರೋಹಿತ್ ಕುಮಾರ್.

ಗುಜರಾತ್ ಜೈಂಟ್ಸ್ ತಂಡ: ಮನುಜ್, ಸೋನು, ರಾಕೇಶ್, ರೋಹನ್ ಸಿಂಗ್, ಪರ್ತೀಕ್ ದಹಿಯಾ, ಫಝೆಲ್ ಅತ್ರಾಚಲಿ, ರೋಹಿತ್ ಗುಲಿಯಾ, ಮೊಹಮ್ಮದ್ ಇಸ್ಮಾಯಿಲ್ ನಬಿಬಕ್ಷ್, ಅರ್ಕಮ್ ಶೇಖ್, ಸೋಂಬಿರ್, ವಿಕಾಸ್ ಜಗ್ಲಾನ್, ಸೌರವ್ ಗುಲಿಯಾ, ದೀಪಕ್ ರಾಜೇಂದರ್ ಸಿಂಗ್, ರವಿ ಕುಮಾರ್, ಮೋರ್ ಜಿಬಿ, ಜಿತೇಂದರ್ ಯಾದವ್, ನಿತೇಶ್, ನಿತೇಶ್ ಬಾಲಾಜಿ.

 

LIVE NEWS & UPDATES

The liveblog has ended.
  • 03 Dec 2023 10:16 PM (IST)

    ರಣರೋಚಕ ಹೋರಾಟದಲ್ಲಿ ಗೆದ್ದ ಗುಜರಾತ್ ಜೈಂಟ್ಸ್

    30-30 ಅಂತರದಿಂದ ಸಮಬಲ ಸಾಧಿಸಿದ್ದ ಪಂದ್ಯದಲ್ಲಿ ರಣರೋಚಕ ಹೋರಾಟ ಪ್ರದರ್ಶಿಸಿದ ಗುಜರಾತ್ ಜೈಂಟ್ಸ್​.

    ಅಂತಿಮ ನಿಮಿಷಗಳಲ್ಲಿ ಭರತ್ ಹಾಗೂ ನೀರಜ್ ನರ್ವಾಲ್ ಅವರನ್ನು ಟ್ಯಾಕ್ಲ್​ ಮಾಡುವ ಮೂಲಕ 4 ಸೂಪರ್ ಟ್ಯಾಕ್ಲ್​ ಪಾಯಿಂಟ್ಸ್ ಕಲೆಹಾಕಿದ ಗುಜರಾತ್ ಜೈಂಟ್ಸ್​.

    ಈ ಟ್ಯಾಕ್ಲ್​ ಪಾಯಿಂಟ್ಸ್​ಗಳೊಂದಿಗೆ 3 ಅಂಕಗಳ ರೋಚಕ ಜಯ ಸಾಧಿಸಿದ ಗುಜರಾತ್ ಜೈಂಟ್ಸ್​.

    ಗುಜರಾತ್ ಜೈಂಟ್ಸ್-​ 34

    ಬೆಂಗಳೂರು ಬುಲ್ಸ್ -31

  • 03 Dec 2023 10:08 PM (IST)

    ಮುನ್ನಡೆ ಸಾಧಿಸಿದ ಬೆಂಗಳೂರು ಬುಲ್ಸ್

    ಬೆಂಗಳೂರು ಬುಲ್ಸ್ ತಂಡದ ಭರತ್ ಅದ್ಭುತ ರೇಡ್​ಗಳ ಮೂಲಕ ಬ್ಯಾಕ್ ಟು ಬ್ಯಾಕ್ 4 ಪಾಯಿಂಟ್ಸ್ ತಂದುಕೊಟ್ಟರು.

    ಈ ಮೂಲಕ ಬೆಂಗಳೂರು ಬುಲ್ಸ್ ತಂಡವು ಗುಜರಾತ್ ತಂಡಕ್ಕಿಂತ ಒಂದು ಅಂಕ ಮುನ್ನಡೆ ಸಾಧಿಸಿದೆ.

    ಕೊನೆಯ 3 ನಿಮಿಷಗಳಲ್ಲಿ ಫಲಿತಾಂಶ ನಿರ್ಧಾರ…ಜಿದ್ದಾಜಿದ್ದಿನ ಹೋರಾಟದ ನಿರೀಕ್ಷೆ.

    ಗುಜರಾತ್ ಜೈಂಟ್ಸ್-​ 28

    ಬೆಂಗಳೂರು ಬುಲ್ಸ್ -29

  • 03 Dec 2023 09:57 PM (IST)

    ಟೈಮ್ ಔಟ್- ಗುಜರಾತ್ ಜೈಂಟ್ಸ್ ಮುನ್ನಡೆ

    ದ್ವಿತೀಯಾರ್ಧದ ಮೊದಲ 10 ನಿಮಿಷಗಳಲ್ಲೇ 14 ಪಾಯಿಂಟ್ಸ್ ಕಲೆಹಾಕಿದ ಗುಜರಾತ್ ಜೈಂಟ್ಸ್​.

    ಟೈಮ್ ಔಟ್ ಘೋಷಣೆ ವೇಳೆಗೆ 26-23 ಅಂತರದಿಂದ ಮುನ್ನಡೆ ಸಾಧಿಸಿರುವ ಗುಜರಾತ್ ಜೈಂಟ್ಸ್.

    ಗುಜರಾತ್ ಜೈಂಟ್ಸ್-​ 26

    ಬೆಂಗಳೂರು ಬುಲ್ಸ್ -23

  • 03 Dec 2023 09:53 PM (IST)

    ಬೆಂಗಳೂರು ಬುಲ್ಸ್ ಆಲೌಟ್

    ಮೊದಲಾರ್ಧದಲ್ಲಿ 6 ಅಂಕಗಳಿಂದ ಹಿಂದೆ ಉಳಿದಿದ್ದ ಗುಜರಾತ್ ಜೈಂಟ್ಸ್ ದ್ವಿತೀಯಾರ್ಧದ ಆರಂಭದಲ್ಲೇ ಅದ್ಭುತ ಪ್ರದರ್ಶನ ನೀಡಿತು. ಪರಿಣಾಮ ಬೆಂಗಳೂರು ಬುಲ್ಸ್ ತಂಡವು ಆಲೌಟ್ ಆಗಿದೆ. ಈ ಮೂಲಕ ಗುಜರಾತ್ ತಂಡವು ಒಂದು ಅಂಕಗಳ ಮುನ್ನಡೆ ಸಾಧಿಸಿದೆ.

    ಗುಜರಾತ್ ಜೈಂಟ್ಸ್-​ 24

    ಬೆಂಗಳೂರು ಬುಲ್ಸ್ -23

  • 03 Dec 2023 09:50 PM (IST)

    ಸೂಪರ್ ರೇಡ್- 3 ಪಾಯಿಂಟ್ಸ್​

    ಸೌರಭ್ ನಂದಲ್ ಮತ್ತು ನೀರಜ್ ನರ್ವಾಲ್ ಸರಪಳಿಯನ್ನು ಮುರಿದು ಮುನ್ನುಗ್ಗಿದ ಸೋನು.

    ಕೊನೆಯ ಹಂತದಲ್ಲಿ ಅಮನ್​ರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದ ಗುಜರಾತ್ ಜೈಂಟ್ಸ್ ತಂಡದ ಯುವ ಆಟಗಾರ ಸೋನು.

    ಸೂಪರ್ ರೇಡ್ ಮೂಲಕ ಗುಜರಾತ್ ಜೈಂಟ್ಸ್ ತಂಡಕ್ಕೆ 3 ಪಾಯಿಂಟ್ಸ್ ತಂದುಕೊಟ್ಟ ಸೋನು.

    ಗುಜರಾತ್ ಜೈಂಟ್ಸ್-​ 17

    ಬೆಂಗಳೂರು ಬುಲ್ಸ್ -21

  • 03 Dec 2023 09:39 PM (IST)

    ಮೊದಲಾರ್ಧ ಮುಕ್ತಾಯ: ಬುಲ್ಸ್ ಮೇಲುಗೈ

    ಮೊದಲಾರ್ಧದಲ್ಲಿ ಅದ್ಭುತ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ತಂಡವು 20 ಪಾಯಿಂಟ್ಸ್ ಕಲೆಹಾಕಿದೆ.

    ಇದೇ ವೇಳೆ ಗುಜರಾತ್ ಜೈಂಟ್ಸ್ ತಂಡ ಕಲೆಹಾಕಿದ ಒಟ್ಟು ಪಾಯಿಂಟ್ಸ್​ 14 ಮಾತ್ರ.

    ಮೊದಲಾರ್ಧದ ಮುಕ್ತಾಯದ ವೇಳೆಗೆ 6 ಅಂಕಗಳ ಮುನ್ನಡೆ ಸಾಧಿಸಿರುವ ಬೆಂಗಳೂರು ಬುಲ್ಸ್.

    ಗುಜರಾತ್ ಜೈಂಟ್ಸ್-​ 14

    ಬೆಂಗಳೂರು ಬುಲ್ಸ್ -20

  • 03 Dec 2023 09:30 PM (IST)

    ಗುಜರಾತ್ ಜೈಂಟ್ಸ್ ಆಲೌಟ್

    ಟೈಮ್ ಔಟ್ ಬೆನ್ನಲ್ಲೇ ರೇಡ್ ನಡೆಸಿದ ಬೆಂಗಳೂರು ಬುಲ್ಸ್ ತಂಡದ ವಿಕಾಸ್ ಕಂಡೋಲ ಇಬ್ಬರನ್ನು ಔಟ್ ಮಾಡಿದರು.

    ಗುಜರಾತ್ ತಂಡದ ಕೊನೆಯ ಆಟಗಾರನನ್ನು ಟ್ಯಾಕ್ಲ್ ಮಾಡಿದ ಬೆಂಗಳೂರು ಬುಲ್ಸ್​.

    ಇದರೊಂದಿಗೆ ಆಲೌಟ್ ಆದ ಗುಜರಾತ್ ಜೈಂಟ್ಸ್​ ತಂಡ.

    ಪ್ರಸ್ತುತ ಪಾಯಿಂಟ್ಸ್​- ಗುಜರಾತ್ ಜೈಂಟ್ಸ್​ 10-14 ಬೆಂಗಳೂರು ಬುಲ್ಸ್.

     

  • 03 Dec 2023 09:23 PM (IST)

    ಟೈಮ್ ಔಟ್: ಜಿದ್ದಾಜಿದ್ದಿನ ಹೋರಾಟ

    ಬೆಂಗಳೂರು ಬುಲ್ಸ್ ತಂಡದ ಸ್ಟಾರ್ ರೇಡರ್ ನೀರಜ್ ನರ್ವಾಲ್ ರನ್ನು ಟ್ಯಾಕ್ಲ್​ ಮಾಡುವಲ್ಲಿ ಯಶಸ್ವಿಯಾದ ಗುಜರಾತ್ ಜೈಂಟ್ಸ್​ ತಂಡದ ಫಝೆಲ್ ಮತ್ತು ಸೋಂಬಿರ್.

    ಮೊದಲ ಟೈಮ್ ಔಟ್ ವೇಳೆ ಉಭಯ ತಂಡಗಳ ಪಾಯಿಂಟ್ಸ್​ 9-9.

    ಆರಂಭಿಕ ಹಿನ್ನಡೆಯ ಹೊರತಾಗಿಯೂ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದ ಗುಜರಾತ್ ಜೈಂಟ್ಸ್​.

     

  • 03 Dec 2023 09:19 PM (IST)

    ಗುಜರಾತ್ ಜೈಂಟ್ಸ್ ತಂಡದ ಕಂಬ್ಯಾಕ್

    ಆರಂಭದಲ್ಲೇ 5-0 ಅಂತರದಿಂದ ಹಿನ್ನಡೆ ಅನುಭವಿಸಿದ್ದ ಗುಜರಾತ್ ಜೈಂಟ್ಸ್ ತಂಡದಿಂದ ಅತ್ಯುತ್ತಮ ಕಂಬ್ಯಾಕ್.

    ಅದ್ಭುತ ಟ್ಯಾಕ್ಲ್​​ ಮೂಲಕ ಗುಜರಾತ್ ಜೈಂಟ್ಸ್ ತಂಡದ ಪಾಯಿಂಟ್ಸ್ ಖಾತೆ ತೆರೆದ ಸೋನು.

    ಸೂಪರ್ ಟ್ಯಾಕ್ಲ್​ ಮೂಲಕ ಮತ್ತೆರಡು ಪಾಯಿಂಟ್ಸ್​ ಗಳಿಸಿದ ನಬಿಭಕ್ಷ್-ಸೋನು.

    ಪಾಯಿಂಟ್ಸ್​ಗಳ ಅಂತರ- ಗುಜರಾತ್ ಜೈಂಟ್ಸ್​ 3-5 ಬೆಂಗಳೂರು ಬುಲ್ಸ್.

  • 03 Dec 2023 09:19 PM (IST)

    ಟ್ರಾವಿಸ್ ಔಟ್

    ಭಾರತ ತಂಡದ ಸ್ಟಾರ್ ಸ್ಪಿನ್ನರ್ ರವಿ ಬಿಷ್ಣೋಯ್ ಅವರು ಟ್ರಾವಿಸ್ ಹೆಡ್‌ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಹೆಡ್ 28 ರನ್ ಗಳಿಸಿದರು.

  • 03 Dec 2023 09:12 PM (IST)

    ಬೆಂಗಳೂರು ಬುಲ್ಸ್​ ಶುಭಾರಂಭ

    ಗುಜರಾತ್ ಜೈಂಟ್ಸ್ ತಂಡದ ಮೊದಲ ರೇಡರ್​ ಅನ್ನು ಟ್ಯಾಕ್ಲ್​ ಮಾಡುವಲ್ಲಿ ಯಶಸ್ವಿಯಾದ ಅಮನ್. ಬೆಂಗಳೂರು ಬುಲ್ಸ್ ತಂಡಕ್ಕೆ ಮೊದಲ ಪಾಯಿಂಟ್.

    ಬೆಂಗಳೂರು ಬುಲ್ಸ್ ಪರ ಮೊದಲ ರೇಡ್ ನಡೆಸಿದ ನೀರಜ್ ನರ್ವಾಲ್ ಇಬ್ಬರನ್ನು ಔಟ್ ಮಾಡುವ ಮೂಲಕ 2 ಪಾಯಿಂಟ್ಸ್ ತಂದುಕೊಟ್ಟರು.

    ಆರಂಭದಲ್ಲೇ 3-0 ಅಂತರ ಸಾಧಿಸಿದ ಬೆಂಗಳೂರು ಬುಲ್ಸ್.

  • 03 Dec 2023 09:09 PM (IST)

    ಪ್ರೊ ಕಬಡ್ಡಿ ಲೀಗ್: ಟಾಸ್ ಗೆದ್ದ ಬೆಂಗಳೂರು ಬುಲ್ಸ್​

    ಈ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ಬುಲ್ಸ್ ತಂಡವು ಕೋರ್ಟ್​ ಆಯ್ಕೆ ಮಾಡಿಕೊಂಡಿದೆ. ಅದರಂತೆ ಗುಜರಾತ್ ಜೈಂಟ್ಸ್ ತಂಡವು ಮೊದಲ ರೇಡ್ ಮಾಡಲಿದೆ.

  • 03 Dec 2023 09:07 PM (IST)

    ಬೆಂಗಳೂರು ಬುಲ್ಸ್​ vs ಗುಜರಾತ್ ಜೈಂಟ್ಸ್​ ತಂಡಗಳು ಹೀಗಿವೆ

    ಬೆಂಗಳೂರು ಬುಲ್ಸ್​ ತಂಡ: ನೀರಜ್ ನರ್ವಾಲ್, ಭರತ್, ಸೌರಭ್ ನಂದಲ್, ಯಶ್ ಹೂಡಾ, ವಿಶಾಲ್, ವಿಕಾಶ್ ಖಂಡೋಲಾ, ರಾನ್ ಸಿಂಗ್, ಎಂಡಿ. ಲಿಟನ್ ಅಲಿ, ಪಿಯೋಟರ್ ಪಮುಲಕ್, ಪೊನ್‌ಪರ್ತಿಬನ್ ಸುಬ್ರಮಣಿಯನ್, ಸುಂದರ್, ಸುರ್ಜೀತ್ ಸಿಂಗ್, ಅಭಿಷೇಕ್ ಸಿಂಗ್, ಬಂಟಿ, ಮೋನು, ಅಂಕಿತ್, ಸುಶೀಲ್, ರಕ್ಷಿತ್, ರೋಹಿತ್ ಕುಮಾರ್.

    ಗುಜರಾತ್ ಜೈಂಟ್ಸ್ ತಂಡ: ಮನುಜ್, ಸೋನು, ರಾಕೇಶ್, ರೋಹನ್ ಸಿಂಗ್, ಪರ್ತೀಕ್ ದಹಿಯಾ, ಫಝೆಲ್ ಅತ್ರಾಚಲಿ, ರೋಹಿತ್ ಗುಲಿಯಾ, ಮೊಹಮ್ಮದ್ ಇಸ್ಮಾಯಿಲ್ ನಬಿಬಕ್ಷ್, ಅರ್ಕಮ್ ಶೇಖ್, ಸೋಂಬಿರ್, ವಿಕಾಸ್ ಜಗ್ಲಾನ್, ಸೌರವ್ ಗುಲಿಯಾ, ದೀಪಕ್ ರಾಜೇಂದರ್ ಸಿಂಗ್, ರವಿ ಕುಮಾರ್, ಮೋರ್ ಜಿಬಿ, ಜಿತೇಂದರ್ ಯಾದವ್, ನಿತೇಶ್, ನಿತೇಶ್ ಬಾಲಾಜಿ.

Published On - 9:06 pm, Sun, 3 December 23

Follow us on