PKL 2023: ಪ್ರೊ ಕಬಡ್ಡಿ ಲೀಗ್​: ಮೊದಲ ಪಂದ್ಯದಲ್ಲೇ ಗೆದ್ದು ಬೀಗಿದ ಗುಜರಾತ್ ಜೈಂಟ್ಸ್​

Gujarat Giants vs Telugu Titans: ಗುಜರಾತ್ ಜೈಂಟ್ಸ್​ ಪರ ಅದ್ಭುತ ರೈಡಿಂಗ್ ಪ್ರದರ್ಶಿಸಿದ ಸೋನು ಜಗ್ಲಾನ್ ಬ್ಯಾಕ್ ಟು ಬ್ಯಾಕ್ ಪಾಯಿಂಟ್ಸ್​ ಕಲೆಹಾಕಿದರು. ಒಟ್ಟು 11 ಬಾರಿ ದಾಳಿ ಮಾಡಿದ ಸೋನು ಜಗ್ಲಾನ್ 11 ಅಂಕಗಳನ್ನು ತಂದುಕೊಡುವಲ್ಲಿ ಯಶಸ್ವಿಯಾದರು. ಮತ್ತೊಂದೆಡೆ ಸೋನುಗೆ ಉತ್ತಮ ಸಾಥ್ ನೀಡಿದ ರಾಕೇಶ್ ಸುಂಗ್ರೋಯಾ 5 ರೈಡ್​ಗಳ ಮೂಲಕ 5 ಅಂಕಗಳಿಸಿದರು.

PKL 2023: ಪ್ರೊ ಕಬಡ್ಡಿ ಲೀಗ್​: ಮೊದಲ ಪಂದ್ಯದಲ್ಲೇ ಗೆದ್ದು ಬೀಗಿದ ಗುಜರಾತ್ ಜೈಂಟ್ಸ್​
Gujarat Giants vs Telugu Titans
Follow us
TV9 Web
| Updated By: ಝಾಹಿರ್ ಯೂಸುಫ್

Updated on:Dec 03, 2023 | 5:20 PM

ಅಹಮದಾಬಾದ್​ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್​ನ (PKL 2023) 10ನೇ ಸೀಸನ್​ನ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಗುಜರಾತ್ ಜೈಂಟ್ಸ್​ ಭರ್ಜರಿ ಜಯ ಸಾಧಿಸಿದೆ. EKA ಅರೆನಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ತೆಲುಗು ಟೈಟಾನ್ಸ್​ ತಂಡದ ರೈಡರ್ ಪವನ್ ಸೆಹ್ರಾವತ್ ಉತ್ತಮ ಪ್ರದರ್ಶನ ನೀಡಿದ್ದರು. ಪರಿಣಾಮ ಮೊದಲಾರ್ಧದಲ್ಲಿ ತೆಲುಗು ಟೈಟಾನ್ಸ್ ತಂಡವು 16 ಅಂಕಗಳಿಸಿದರೆ, ಗುಜರಾತ್ ಜೈಂಟ್ಸ್​ ತಂಡ 13 ಪಾಯಿಂಟ್ಸ್​ ಕಲೆಹಾಕಿತು. ಆದರೆ ದ್ವಿತೀಯಾರ್ಧದಲ್ಲಿ ಗುಜರಾತ್ ಜೈಂಟ್ಸ್​ ತಂಡವು ಉತ್ತಮ ಕಂಬ್ಯಾಕ್ ಮಾಡಿತು.

ಗುಜರಾತ್ ಜೈಂಟ್ಸ್​ ಪರ ಅದ್ಭುತ ರೇಡಿಂಗ್ ಪ್ರದರ್ಶಿಸಿದ ಸೋನು ಜಗ್ಲಾನ್ ಬ್ಯಾಕ್ ಟು ಬ್ಯಾಕ್ ಪಾಯಿಂಟ್ಸ್​ ಕಲೆಹಾಕಿದರು. ಒಟ್ಟು 11 ಬಾರಿ ದಾಳಿ ಮಾಡಿದ ಸೋನು ಜಗ್ಲಾನ್ 11 ಅಂಕಗಳನ್ನು ತಂದುಕೊಡುವಲ್ಲಿ ಯಶಸ್ವಿಯಾದರು. ಮತ್ತೊಂದೆಡೆ ಸೋನುಗೆ ಉತ್ತಮ ಸಾಥ್ ನೀಡಿದ ರಾಕೇಶ್ ಸುಂಗ್ರೋಯಾ 5 ರೈಡ್​ಗಳ ಮೂಲಕ 5 ಅಂಕಗಳಿಸಿದರು.

ಪರಿಣಾಮ ದ್ವಿತೀಯಾರ್ಧದ ಆರಂಭದಲ್ಲೇ 18-16 ಅಂತರದ ಸಾಧಿಸುವಲ್ಲಿ ಗುಜರಾತ್ ಜೈಂಟ್ಸ್​ ಯಶಸ್ವಿಯಾಯಿತು. ಈ ಅಂತರವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದ ಗುಜರಾತ್ ತಂಡವು ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಇನ್ನು ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವು 10 ಟ್ಯಾಕ್ಲ್​ ಪಾಯಿಂಟ್ಸ್​ ಕಲೆಹಾಕಿದರೆ, ತೆಲುಗು ಟೈಟಾನ್ಸ್​ 9 ಟ್ಯಾಕ್ಸ್​ ಪಾಯಿಂಟ್ಸ್​ ಕಲೆಹಾಕಿತು. ಅಲ್ಲದೆ ಅಂತಿಮವಾಗಿ 38-32 ಅಂತರದಿಂದ ತೆಲುಗು ಟೈಟಾನ್ಸ್ ವಿರುದ್ಧ​ ಗುಜರಾತ್ ಜೈಂಟ್ಸ್​ ತಂಡವು ಭರ್ಜರಿ ಜಯ ಸಾಧಿಸಿತು.

ಯುಪಿ ಯೋಧಾಸ್ ವಿರುದ್ಧ ಗೆದ್ದ ಯು ಮುಂಬಾ:

ಯುಪಿ ಯೋಧಾಸ್ ಮತ್ತು ಯು ಮುಂಬಾ ನಡುವೆ ನಡೆದ 2ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಯು ಮುಂಬಾ ಪರ ಅದ್ಭುತ ಪ್ರದರ್ಶನ ನೀಡಿದ ಅಮಿರ್ ಮೊಹಮ್ಮದ್ 6 ರೇಡ್ ಪಾಯಿಂಟ್ಸ್, 5 ಬೋನಸ್ ಹಾಗೂ 1 ಟ್ಯಾಕ್ಲ್​ ಪಾಯಿಂಟ್​ನೊಂದಿಗೆ 12 ಅಂಕಗಳಿಸಿದರು. ಅಮಿರ್​ಗೆ ಉತ್ತಮ ಸಾಥ್ ನೀಡಿದ ರಿಂಕು 6 ಪಾಯಿಂಟ್ಸ್ ಕಲೆಹಾಕಿದರು.

ಇದೇ ವೇಳೆ ಯುಪಿ ಯೋಧಾಸ್ ಪರ ಸುರೇಂದರ್ ಗಿಲ್ 7 ಅಂಕಗಳಿಸಿದರೆ, ಅನಿಲ್ ಕುಮಾರ್ 7 ಪಾಯಿಂಟ್ಸ್​ ಕಲೆಹಾಕಿದರು. ಪರಿಣಾಮ ಒಂದು ಹಂತದಲ್ಲಿ ಉಭಯ ತಂಡಗಳ ಅಂಕಗಳು 30-30 ಅಂತರದಿಂದ ಸಮಬಲ ಸಾಧಿಸಿತು. ಅಂತಿಮವಾಗಿ ಯು ಮುಂಬಾ 34 ಅಂಕಗಳನ್ನು ಕಲೆಹಾಕಿದರೆ, ಯುಪಿ ಯೋಧಾಸ್ 31 ಪಾಯಿಂಟ್ಸ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಯು ಮುಂಬಾ 3 ಅಂಕಗಳ ರೋಚಕ ಜಯ ಸಾಧಿಸಿತು.

Published On - 9:44 pm, Sat, 2 December 23

ಜಾಗೃತಿ ಅಭಿಯಾನದಲ್ಲಿ ರಾಜ್ಯಾಧ್ಯಕ್ಷರೂ ಭಾಗವಹಿಸುತ್ತಾರೆ: ಅರವಿಂದ ಲಿಂಬಾವಳಿ
ಜಾಗೃತಿ ಅಭಿಯಾನದಲ್ಲಿ ರಾಜ್ಯಾಧ್ಯಕ್ಷರೂ ಭಾಗವಹಿಸುತ್ತಾರೆ: ಅರವಿಂದ ಲಿಂಬಾವಳಿ
ಪ್ರಧಾನಿ ಮೋದಿಯನ್ನು ಬುಡಕಟ್ಟು ಸಂಪ್ರದಾಯದಂತೆ ವಿಶಿಷ್ಟವಾಗಿ ಬರಮಾಡಿಕೊಂಡ ಜನ
ಪ್ರಧಾನಿ ಮೋದಿಯನ್ನು ಬುಡಕಟ್ಟು ಸಂಪ್ರದಾಯದಂತೆ ವಿಶಿಷ್ಟವಾಗಿ ಬರಮಾಡಿಕೊಂಡ ಜನ
ಯೋಗೇಶ್ವರ್ ನಿರಾಶೆಗೆ ಡಿಕೆ ಸುರೇಶ್ ಸಮಂಜಸ ಪ್ರತಿಕ್ರಿಯೆ ನೀಡಲಿಲ್ಲ
ಯೋಗೇಶ್ವರ್ ನಿರಾಶೆಗೆ ಡಿಕೆ ಸುರೇಶ್ ಸಮಂಜಸ ಪ್ರತಿಕ್ರಿಯೆ ನೀಡಲಿಲ್ಲ
ಜಮೀರ್ ಅಹ್ಮದ್ ಜನಾಂಗೀಯ ನಿಂದನೆ ಮಾಡುವ ಜೊತೆ ಸುಳ್ಳನ್ನೂ ಹೇಳಿದರೇ?
ಜಮೀರ್ ಅಹ್ಮದ್ ಜನಾಂಗೀಯ ನಿಂದನೆ ಮಾಡುವ ಜೊತೆ ಸುಳ್ಳನ್ನೂ ಹೇಳಿದರೇ?
ಬಸವರಾಜ ಹೊರಟ್ಟಿನ ಹೊಡೆಯಲು ಹೋಗಿದ್ದ ಜಮೀರ್
ಬಸವರಾಜ ಹೊರಟ್ಟಿನ ಹೊಡೆಯಲು ಹೋಗಿದ್ದ ಜಮೀರ್
ಮಾಲೂರು ಹತ್ತಿರದ ಪ್ರಸನ್ನ ವೆಂಕಟರಮಣ ದೇವಸ್ಥಾನ ಪ್ರಾಚೀನ ಇತಿಹಾಸದ ಪ್ರತೀಕ
ಮಾಲೂರು ಹತ್ತಿರದ ಪ್ರಸನ್ನ ವೆಂಕಟರಮಣ ದೇವಸ್ಥಾನ ಪ್ರಾಚೀನ ಇತಿಹಾಸದ ಪ್ರತೀಕ
ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್
ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್
‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
ಮಂಡ್ಯ: ಪಾಂಡವಪುರ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ
ಮಂಡ್ಯ: ಪಾಂಡವಪುರ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್