ಫಿಡೆ ಗ್ರ್ಯಾಂಡ್‌ ಸ್ವಿಸ್‌ ಪ್ರಶಸ್ತಿ ಗೆದ್ದ ಆರ್. ವೈಶಾಲಿ, ವಿದಿತ್ ಗುಜರಾತಿ! ಪ್ರಧಾನಿ ಮೋದಿ ಶ್ಲಾಘನೆ

FIDE Grand Swiss Open: ಐಲ್ ಆಫ್ ಮ್ಯಾನ್‌ನಲ್ಲಿರುವ ವಿಲ್ಲಾ ಮರೀನಾದ ರಾಯಲ್ ಹಾಲ್‌ನಲ್ಲಿ ನಡೆದ ಫಿಡೆ ಗ್ರ್ಯಾಂಡ್ ಸ್ವಿಸ್ ಚೆಸ್ ಈವೆಂಟ್‌ನಲ್ಲಿ ಭಾರತೀಯ ಗ್ರ್ಯಾಂಡ್‌ಮಾಸ್ಟರ್‌ಗಳಾದ ಆರ್. ವೈಶಾಲಿ ಮತ್ತು ವಿದಿತ್ ಗುಜರಾತಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಪ್ರಶಸ್ತಿಯನ್ನು ಗೆದ್ದುಬೀಗಿದ್ದಾರೆ.

ಫಿಡೆ ಗ್ರ್ಯಾಂಡ್‌ ಸ್ವಿಸ್‌ ಪ್ರಶಸ್ತಿ ಗೆದ್ದ ಆರ್. ವೈಶಾಲಿ, ವಿದಿತ್ ಗುಜರಾತಿ! ಪ್ರಧಾನಿ ಮೋದಿ ಶ್ಲಾಘನೆ
ಪ್ರಧಾನಿ ಮೋದಿ, ಆರ್. ವೈಶಾಲಿ, ವಿದಿತ್ ಗುಜರಾತಿ

Updated on: Nov 06, 2023 | 9:35 PM

ಐಲ್ ಆಫ್ ಮ್ಯಾನ್‌ನಲ್ಲಿರುವ ವಿಲ್ಲಾ ಮರೀನಾದ ರಾಯಲ್ ಹಾಲ್‌ನಲ್ಲಿ ನಡೆದ ಫಿಡೆ ಗ್ರ್ಯಾಂಡ್ ಸ್ವಿಸ್ ಚೆಸ್ (FIDE Grand Swiss Open) ಈವೆಂಟ್‌ನಲ್ಲಿ ಭಾರತೀಯ ಗ್ರ್ಯಾಂಡ್‌ಮಾಸ್ಟರ್‌ಗಳಾದ ಆರ್. ವೈಶಾಲಿ ಮತ್ತು ವಿದಿತ್ ಗುಜರಾತಿ (Vidit Gujrathi and Vaishali) ತಮ್ಮ ಅದ್ಭುತ ಪ್ರದರ್ಶನದ ಮೂಲಕ ಪ್ರಶಸ್ತಿಯನ್ನು ಗೆದ್ದುಬೀಗಿದ್ದಾರೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ವಿದಿತ್ ಗುಜರಾತಿ ಓಪನ್ ಚಾಂಪಿಯನ್ ಆದರೆ, ಮಹಿಳೆಯರ ವಿಭಾಗದಲ್ಲಿ ಆರ್.ವೈಶಾಲಿ ಪ್ರಶಸ್ತಿ ವಿಜೇತರಾದರು. ಈ ಗೆಲುವಿನೊಂದಿಗೆ ವೈಶಾಲಿ ಮುಂದಿನ ವರ್ಷ ಕೆನಡಾದಲ್ಲಿ ನಡೆಯಲಿರುವ ವುಮೆನ್ಸ್​ ಕ್ಯಾಂಡಿಡೇಟ್​ ಇವೆಂಟ್​ನಲ್ಲಿ ಭಾಗವಹಿಸುವ ಅರ್ಹತೆ ಕೂಡ ಸಂಪಾದಿಸಿದರು.

ಪ್ರಶಸ್ತಿ ಗೆದ್ದ ವಿದಿತ್ ಗುಜರಾತಿ

ವಿದಿತ್ ಗುಜರಾತಿ ಶ್ರೇಯಾಂಕದಲ್ಲಿ ತಮಗಿಂತ ಹೆಚ್ಚು ಮೇಲುಗೈ ಸಾಧಿಸಿರುವ ಆಟಗಾರರನ್ನು ಮಣಿಸಿ ಈ ಪ್ರಶಸ್ತಿ ಗೆದ್ದಿರುವುದು ಗಮನಾರ್ಹ ಸಾಧನೆಯಾಗಿದೆ. ಈ ಮುಕ್ತ ಟೂರ್ನಿಯಲ್ಲಿ 15ನೇ ಶ್ರೇಯಾಂಕಿತನಾಗಿ ಕಣಕ್ಕೆ ಇಳಿದಿದ್ದ ವಿದಿತ್ ಜೊತೆಗೆ ಭಾರತದ ಗ್ರ್ಯಾಂಡ್ ಮಾಸ್ಟರ್​ಗಳಾದ ಡಿ. ಗುಕೇಶ್, ಆರ್. ಪ್ರಗ್ನಾನಂದ ಅವರೊಂದಿಗೆ ಸ್ಪರ್ಧಿಸಿ ವಿಜೇತರಾಗಿದ್ದರು. ಅಂತಿಮವಾಗಿ ಮುಕ್ತ ವಿಭಾಗದ ಫೈನಲ್ ಸುತ್ತಿನಲ್ಲಿ ಸರ್ಬಿಯಾದ ಅಲೆಕ್ಸಾಂಡರ್​ ಪ್ರೆಡ್ಕೆ ಅವರನ್ನು ಮಣಿಸಿದ ವಿದಿತ್ ಗುಜರಾತಿ ಕೆನಡಾದಲ್ಲಿ ನಡೆಯಲಿರುವ ಕ್ಯಾಂಡಿಡೇಟ್​ ಇವೆಂಟ್​ ಮತ್ತು ಮುಕ್ತ ವಿಭಾಗದ ಅನೆಕ್ಸ್​ ಟೈಟಲ್​​ಗೂ ಅರ್ಹತೆ ಸಂಪಾದಿಸಿದರು.

ಇನ್ನು ಫಿಡೆ ಗ್ರ್ಯಾಂಡ್ ಸ್ವಿಸ್ ಚೆಸ್ ಈವೆಂಟ್‌ನಲ್ಲಿ ಭಾರತವನ್ನು ಚಾಂಪಿಯನ್ ಮಾಡಿದ ವೈಶಾಲಿ ಮತ್ತು ವಿದಿತ್ ಅವರ ಸಾಧನೆಯನ್ನು ಪ್ರಧಾನಿ ಮೋದಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಚಿನ್ನದ ಪದಕ ಗೆದ್ದ ವೈಶಾಲಿ

ಮತ್ತೊಂದೆಡೆ, ಮಹಿಳೆಯರ ವಿಭಾಗದಲ್ಲಿ 12ನೇ ಶ್ರೇಯಾಂಕಿತೆಯಾಗಿ ಸ್ಪರ್ಧೆಗೆ ಪ್ರವೇಶಿಸಿದ ವೈಶಾಲಿ ಅಂತಿಮ ಸುತ್ತಿನಲ್ಲಿ ಬಟ್ಕುವಾಗ್ ಮೊಂಗೋಟುಲ್ ವಿರುದ್ಧ ಅಮೋಘ ಗೆಲುವು ಸಾಧಿಸಿ ಪ್ರಶಸ್ತಿ ಗೆದ್ದರು. ಪ್ರಶಸ್ತಿ ಸುತ್ತಿನಲ್ಲಿ ಬಟ್ಖುಯಾಗ್ ಮುಂಗುತೂಲ್ ಹಾಗೂ ವೈಶಾಲಿ ಅವರ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಿತು. ಆದರೆ ಅಂತಿಮವಾಗಿ 8.5 ಅಂಕಗಳೊಂದಿಗೆ ಮುಂಗುತೂಲ್ ಅವರನ್ನು ಮಣಿಸಿದ ವೈಶಾಲಿ ಚಿನ್ನದ ಪದಕ ಮತ್ತು 25000 ಯುಎಸ್​ ಡಾಲರ್​ ಬಹುಮಾನವನ್ನು ಗೆದ್ದುಕೊಂಡರು.

ಇನ್ನು ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ವೈಶಾಲಿ ಅವರು, ಭಾರತದ ಖ್ಯಾತ ಗ್ರ್ಯಾಂಡ್‌ಮಾಸ್ಟರ್ ಎನಿಸಿಕೊಂಡಿರುವ ಆರ್. ಪ್ರಜ್ಞಾಾನಂದ ಅವರ ಅಕ್ಕ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:33 pm, Mon, 6 November 23