PKL Season 8: ಪ್ರೊ ಕಬಡ್ಡಿ ಲೀಗ್ ಹರಾಜು ನಿಯಮಗಳೇನು?
Pro Kabaddi League 2021: ಸೀಸನ್ 8 ಹರಾಜಿಗೆ ಆಟಗಾರರನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಅದರಂತೆ ದೇಶೀಯ ಸ್ಟಾರ್ ಆಟಗಾರರು, ವಿದೇಶಿ ಮತ್ತು ಯುವ ಹಾಗೂ ಹೊಸ ಆಟಗಾರನ್ನು ಎ, ಬಿ, ಸಿ ಮತ್ತು ಡಿ ಗುಂಪುಗಳಾಗಿ ವಿಭಾಗಿಸಲಾಗುತ್ತದೆ.
ದೇಶೀಯ ಅಂಗಳದ ಮದಗಜಗಳ ಕಾಳಗ ಎಂದೇ ಬಿಂಬಿತವಾಗಿರುವ ಪ್ರೊ ಕಬಡ್ಡಿ ಲೀಗ್ ಸೀಸನ್-8 ಗಾಗಿ (Pro Kabaddi League 2021) ಸಿದ್ದತೆಗಳು ಆರಂಭವಾಗಿವೆ. ಕೊರೋನಾ ಕಾರಣದಿಂದ ಕಳೆದ ಬಾರಿ ಕಬ್ಬಡ್ಡಿ ಲೀಗ್ ನಡೆದಿರಲಿಲ್ಲ. ಇದೀಗ ಈ ಬಾರಿ ಸಕಲ ಸುರಕ್ಷತೆಗಳೊಂದಿಗೆ ಕಬಡ್ಡಿ ಕಾದಾಟ (PKL Season 8) ನಡೆಸಲು ಆಯೋಜಕರು ಮುಂದಾಗಿದ್ದಾರೆ. ಅದರ ಮೊದಲ ಹೆಜ್ಜೆ ಎಂಬಂತೆ ಆಟಗಾರರ ಹರಾಜಿಗಾಗಿ ಸಿದ್ಧತೆಗಳು ಶುರುವಾಗಿವೆ. ಈ ಬಾರಿ 12 ತಂಡಗಳು ಒಟ್ಟು 59 ಆಟಗಾರರನ್ನು ಮಾತ್ರ ಉಳಿಸಿಕೊಂಡಿವೆ. ಅಲ್ಲದೆ 161 ಆಟಗಾರರನ್ನು ಬಿಡುಗಡೆ ಮಾಡಿದೆ. ಹೀಗಾಗಿ ಈ ಬಾರಿಯ ಹರಾಜಿನ ಮೂಲಕ ಪ್ರತಿಯೊಂದು ತಂಡದಲ್ಲೂ ಬದಲಾವಣೆ ಕಂಡು ಬರುವುದು ಬಹುತೇಕ ಖಚಿತ.
ಪಿಕೆಎಲ್ ಸೀಸನ್ 8 (PKL Season 8) ಆಟಗಾರರ ಹರಾಜು ಯಾವಾಗ? ಈ ಬಾರಿ ಪ್ರೊ ಕಬಡ್ಡಿ ಲೀಗ್ನ ಹರಾಜು 3 ದಿನಗಳ ಕಾಲ ನಡೆಯಲಿದೆ. ಅದರಂತೆ ಮುಂಬೈನಲ್ಲಿ ಆಗಸ್ಟ್ 29, ಆಗಸ್ಟ್ 30 ಮತ್ತು ಆಗಸ್ಟ್ 31 ರಂದು ಹರಾಜು ಪ್ರಕ್ರಿಯೆ ಜರುಗಲಿದೆ.
ಎಷ್ಟು ಆಟಗಾರರಿಗೆ ಅವಕಾಶ? ಪಿಕೆಎಲ್ ಸೀಸನ್ 8 ಹರಾಜಿನಲ್ಲಿ, ಪಿಕೆಎಲ್ ಸೀಸನ್ 6 ಮತ್ತು 7 ರ ಎಲ್ಲಾ ತಂಡದ ಆಟಗಾರರಿಗೂ ಅವಕಾಶ ಇರಲಿದೆ. ಅಲ್ಲದೆ ಈ ಬಾರಿ 500 ಕ್ಕೂ ಅಧಿಕ ಕಬಡ್ಡಿ ಪ್ಲೇಯರ್ಗಳು ಹರಾಜಿಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ. ಜೊತೆಗೆ 2020 ಮತ್ತು 2021 ರ ಎಕೆಎಫ್‌ಐ ಹಿರಿಯ ಪುರುಷರ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್‌ನ ಭಾಗವಹಿಸಿದ ಅಗ್ರ 8 ಶ್ರೇಯಾಂಕಿತ ತಂಡಗಳ ಎಲ್ಲಾ ಆಟಗಾರರು ಹರಾಜಿನಲ್ಲಿ ಸ್ಥಾನ ಪಡೆದಿದ್ದಾರೆ.
ಫ್ರಾಂಚೈಸಿ ಒಟ್ಟು ಹರಾಜು ಮೊತ್ತವೆಷ್ಟು? ಪ್ರೊ ಕಬಡ್ಡಿ ಲೀಗ್ ಸೀಸನ್ 8 ನಲ್ಲಿ ಪ್ರತಿ ಫ್ರಾಂಚೈಸಿ 4.4 ಕೋಟಿ ರೂ.ಗಳ ಒಳಗೆ ತಮ್ಮ ತಂಡವನ್ನು ರೂಪಿಸಿಕೊಳ್ಳಬಹುದು.
ಆಟಗಾರರ ಮೂಲ ಬೆಲೆ ಎಷ್ಟು? ಸೀಸನ್ 8 ಹರಾಜಿಗೆ ಆಟಗಾರರನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಅದರಂತೆ ದೇಶೀಯ ಸ್ಟಾರ್ ಆಟಗಾರರು, ವಿದೇಶಿ ಮತ್ತು ಯುವ ಹಾಗೂ ಹೊಸ ಆಟಗಾರನ್ನು ಎ, ಬಿ, ಸಿ ಮತ್ತು ಡಿ ಗುಂಪುಗಳಾಗಿ ವಿಭಾಗಿಸಲಾಗುತ್ತದೆ. ಎ ಗುಂಪಿನಲ್ಲಿರುವ ಆಟಗಾರರ ಮೂಲ ಬೆಲೆ 30 ಲಕ್ಷ ರೂ, ಬಿ ಗುಂಪಿನಲ್ಲಿ ಆಟಗಾರರ ಮೂಲ ಬೆಲೆ 20 ಲಕ್ಷ ರೂ, ಸಿ ಗ್ರೂಪ್ ಆಟಗಾರರಿಗೆ 10 ಲಕ್ಷ ರೂ. ಮತ್ತು ಡಿ ಗುಂಪಿನಲ್ಲಿರುವ ಆಟಗಾರರಿಗೆ 6 ಲಕ್ಷ ರೂ. ಮೂಲ ಬೆಲೆ ನಿಗದಿಪಡಿಸಲಾಗಿದೆ. ಅದರಂತೆ ಮೂಲ ಬೆಲೆಯೊಂದಿಗೆ ಆಟಗಾರರ ಹರಾಜು ನಡೆಯಲಿದೆ.
ಪಿಕೆಎಲ್ ಸೀಸನ್ 8 ಗಾಗಿ ಫ್ರಾಂಚೈಸಿಗಳು: – ಬೆಂಗಾಲ್ ವಾರಿಯರ್ಸ್ – ಬೆಂಗಳೂರು ಬುಲ್ಸ್ – ದಬಾಂಗ್ ದೆಹಲಿ – ಜೈಪುರ್ ಪಿಂಕ್ ಪ್ಯಾಂಥರ್ಸ್ – ಗುಜರಾತ್ ಫಾರ್ಚೂನ್ ಜೆಂಟ್ಸ್ – ತಮಿಳು ತಲೈವಾಸ್ – ತೆಲುಗು ಟೈಟಾನ್ಸ್ – ಯು ಮುಂಬಾ – ಹರಿಯಾಣ ಸ್ಟೀಲರ್ಸ್ – ಯುಪಿ ಯೋಧ – ಪಾಟ್ನಾ ಪೈರೇಟ್ಸ್ – ಪುನೇರಿ ಪಲ್ಟಾನ್
ಇದನ್ನೂ ಓದಿ:Mohammed Siraj: ಸಿ-ರಾಜ…ಗೆಟೌಟ್ ಅಂದವರೇ ಕಟೌಟ್ ನಿಲ್ಲಿಸಿದ್ರು
ಇದನ್ನೂ ಓದಿ: Afghanistan Crisis: ತಾಲಿಬಾನ್ ಗ್ಯಾಂಗ್ ಜೊತೆ ಕಾಣಿಸಿಕೊಂಡ ಅಫ್ಘಾನಿಸ್ತಾನ್ ಕ್ರಿಕೆಟಿಗ
ಇದನ್ನೂ ಓದಿ: ಲಕ್ಷ್ಮಣ್ ಅವರಿಂದ ಆಟೋಗ್ರಾಫ್ ಪಡೆಯುತ್ತಿರುವ ಟೀಮ್ ಇಂಡಿಯಾದ ಈ ಆಟಗಾರ ಯಾರೆಂದು ಗುರುತಿಸಬಲ್ಲಿರಾ?
(Pro Kabaddi League 2021: PKL Season 8 Auction Date, Rules)