AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಯಗೊಂಡಿರುವ ಪುಕೊವ್​ಸ್ಕಿ ನಾಲ್ಕನೆ ಟೆಸ್ಟ್​ನಿಂದ ಔಟ್.. ವಾರ್ನರ್​ಗೆ ಹ್ಯಾರಿಸ್ ಜೊತೆಗಾರ

ನಾಲ್ಕನೆ ಟೆಸ್ಟ್​ಗೆ ತಂಡವನ್ನು ಪ್ರಕಟಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಸೋಮವಾರದಂದು ಸಿನಿಮೀಯವಾಗಿ ಡ್ರಾನಲ್ಲಿ ಕೊನೆಗೊಂಡ ಸಿಡ್ನಿ ಟೆಸ್ಟ್​ ಪಂದ್ಯದಲ್ಲಿ ಅಡಿದ ತನ್ನ ತಂಡದಲ್ಲಿ ಒಂದು ಬದಲಾವಣೆಯನ್ನು ಮಾಡಿ ಗಾಯಗೊಂಡಿರುವ ವಿಲ್ ಪುಕೊವ್​ಸ್ಕಿ ಸ್ಥಾನದಲ್ಲಿ ಮಾರ್ಕಸ್ ಹ್ಯಾರಿಸ್​ರನ್ನು ಆರಿಸಿದೆ.

ಗಾಯಗೊಂಡಿರುವ ಪುಕೊವ್​ಸ್ಕಿ ನಾಲ್ಕನೆ ಟೆಸ್ಟ್​ನಿಂದ ಔಟ್.. ವಾರ್ನರ್​ಗೆ ಹ್ಯಾರಿಸ್ ಜೊತೆಗಾರ
ವಿಲ್ ಪುಕೊವ್​ಸ್ಕಿ
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on:Jan 14, 2021 | 10:35 PM

Share

ತನ್ನ ಪಾದಾರ್ಪಣೆ ಟೆಸ್ಟ್​ನಲ್ಲೇ ಫೀಲ್ಡಿಂಗ್ ಮಾಡುವಾಗ ಭುಜ ನೋವಿಗೆ ತುತ್ತಾದ ಆಸ್ಟ್ರೇಲಿಯಾದ ಆರಂಭ ಆಟಗಾರ ವಿಲ್ ಪುಕೊವ್​ಸ್ಕಿ ಬ್ರಿಸ್ಬೇನ್​ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್​ಗೆ ತಂಡದಿಂದ ಹೊರಗುಳಿಯಲಿದ್ದಾರೆ. ಅವರ ಸ್ಥಾನದಲ್ಲಿ ಆಯ್ಕೆಯಾಗಿರುವ ಮಾರ್ಕಸ್ ಹ್ಯಾರಿಸ್ ಗಬ್ಬಾ ಮೈದಾನದಲ್ಲಿ ಡೇವಿಡ್ ವಾರ್ನರ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

ನಾಲ್ಕನೇ ಟೆಸ್ಟ್​ಗೆ ತಂಡವನ್ನು ಪ್ರಕಟಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಸೋಮವಾರದಂದು ಸಿನಿಮೀಯವಾಗಿ ಡ್ರಾನಲ್ಲಿ ಕೊನೆಗೊಂಡ ಸಿಡ್ನಿ ಟೆಸ್ಟ್​ ಪಂದ್ಯದಲ್ಲಿ ಆಡಿದ ತನ್ನ ತಂಡದಲ್ಲಿ ಇದೊಂದೇ ಬದಲಾವಣೆಯನ್ನು ಮಾಡಿದೆ. ಭಾರತೀಯ ಟೀಂನಲ್ಲೂ ಹಲವಾರು ಆಟಗಾರರು ಗಾಯಗೊಂಡಿರುವುದರಿಂದ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿದೆ.

ಪ್ರಸಕ್ತ 4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ, ಹ್ಯಾರಿಸ್ ಆಸ್ಟ್ರೇಲಿಯಾ ಟೀಂನ ಭಾಗವಾಗಿದ್ದರೂ 2019 ರ ಌಷಸ್ ಸರಣಿಯ ನಂತರ ಯಾವುದೇ ಟೆಸ್ಟ್ ಆಡಿಲ್ಲ. ಸರಣಿಯಲ್ಲಿ, ಪುಕೊವ್​ಸ್ಕಿ, ವಾರ್ನರ್, ಜೊ ಬರ್ನ್ಸ್ ಮತ್ತು ಮ್ಯಾಥ್ಯೂ ವೇಡ್​ ನಂತರ ಆಸ್ಟ್ರೇಲಿಯಾ ಕಣಕ್ಕಿಳಿಸಲಿರುವ 5 ನೇ ಆರಂಭ ಆಟಗಾರ ಹ್ಯಾರಿಸ್ ಆಗಲಿದ್ದಾರೆ.

ಮಾರ್ಕಸ್ ಹ್ಯಾರಿಸ್

ಸೋಮವಾರದಂದು ಭುಜಕ್ಕೆ ಗಾಯ ಮಾಡಿಕೊಂಡ ಪುಕೊವ್​ಸ್ಕಿ ಬುಧವಾರ ಮತ್ತು ಗುರುವಾರದಂದು ಗಬ್ಬಾ ಮೈದಾನದಲ್ಲಿ ಅಭ್ಯಾಸಕ್ಕಿಳಿಯಲಿಲ್ಲ.

ಹ್ಯಾರಿಸ್ ನಮ್ಮೊಂದಿಗೆ ಆಭ್ಯಾಸದಲ್ಲಿ ಪಾಲ್ಗೊಳ್ಳಲು ಪ್ರಯತ್ನಿಸಿದರಾದರೂ ನೋವು ಹೆಚ್ಚಿರುವುದರಿಂದ ಸಾಧ್ಯವಾಗಲಿಲ್ಲ ಎಂದು ಪಂದ್ಯ-ಪೂರ್ವದ ಸುದ್ದಿಗೋಷ್ಠಿಯಲ್ಲಿ ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್ ಹೇಳಿದರು.

ನಮ್ಮ ವೈದ್ಯರ ತಂಡದೊಂದಿಗೆ ಹ್ಯಾರಿಸ್ ಫಿಸಿಯೋಥೆರಪಿಗೆ ಒಳಗಾಗಬೇಕಿದೆ. ಅವರು ಎಷ್ಟರ ಮಟ್ಟಿಗೆ ಚೇತರಿಸಿಕೊಳ್ಳಲಿದ್ದಾರೆನ್ನುವುದು ಕಾದು ನೋಡಬೇಕಿದೆ. ಅವರ ಸ್ಥಾನದಲ್ಲಿ ಮಾರ್ಕಸ್ ಹ್ಯಾರಿಸ್ ಆಡಲಿದ್ದು ವಾರ್ನರ್​ರೊಂದಿಗೆ ಉತ್ತಮ ಆರಂಭ ಒದಗಿಸಕೊಡುತ್ತಾರೆಂಬ ನಿರೀಕ್ಷೆಯನ್ನು ನಾನಿಟ್ಟುಕೊಂಡಿದ್ದೇನೆ ಎಂದು ಪೇನ್​ ಹೇಳಿದರು.

ಇಂಜುರಿಯಿಂದ ಮೊದಲಿನೆರಡು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ವಾರ್ನರ್ ಅವರನ್ನು ಸಿಡ್ನಿಯಲ್ಲಿ ಟೆಸ್ಟ್​ ಶುರುವಾಗುವ ಹಿಂದಿನ ದಿನ ಒಂದು ಗಂಟೆಗಿಂತ ಜಾಸ್ತಿ ಹೊತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದ ನಂತರ ಪಂದ್ಯದಲ್ಲಿ ಆಡುವ ಬಗ್ಗೆ ಘೋಷಣೆ ಮಾಡಲಾಗಿತ್ತು.

ಭಾರತದ ಪ್ರಮುಖ ಬೌಲರ್​ಗಳಾದ ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಸಹ ಗಾಯಗೊಂಡಿರುವುದರಿಂದ ಆಡುವ ಇಲೆವೆನ್​ ಅಂತಿಮಗೊಳಿಸುವುದು ಟೀಂ ಮ್ಯಾನೇಜ್ಮೆಂಟ್​ಗೆ ತಲೆನೋವಾಗಿ ಪರಿಣಮಿಸಿದೆ.

ಅಂತಿಮ ಟೆಸ್ಟ್​ಗೆ ಅತಿಥೇಯರ ತಂಡ ಇಂತಿದೆ: ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಕೆಮೆರಾನ್ ಗ್ರೀನ್, ಟಿಮ್ ಪೇನ್ (ಕ್ಯಾಪ್ಟನ್), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನೇಥನ್ ಲಿಯಾನ್ ಮತ್ತು ಜೊಷ್ ಹೆಜೆಲ್​ವುಡ್.

Published On - 10:15 pm, Thu, 14 January 21

Follow Us
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.