RCB ಅಂದ್ರೆನೇ ಥ್ರಿಲ್ಲರ್… ಪಂದ್ಯದ ಬಳಿಕ ಸ್ಮೃತಿ ಮಂಧಾನ ಹೇಳಿದ್ದೇನು?
WPL 2026, RCB vs MI: ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲಿ ಆರ್ಸಿಬಿ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 154 ರನ್ ಕಲೆಹಾಕಿದರೆ, ಆರ್ಸಿಬಿ 20 ಓವರ್ಗಳಲ್ಲಿ 157 ರನ್ ಬಾರಿಸಿ 3 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.

WPL 2026: ವುಮೆನ್ಸ್ ಪ್ರೀಮಿಯರ್ ಲೀಗ್ನ 4ನೇ ಸೀಸನ್ನ ಮೊದಲ ಪಂದ್ಯವೇ ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಈ ರೋಚಕ ಹೋರಾಟದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೋಲುಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಸಾಧಿಸಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ ಕಲೆಹಾಕಿತು. 155 ರನ್ಗಳ ಗುರಿ ಬೆನ್ನತ್ತಿದ ಆರ್ಸಿಬಿ ತಂಡಕ್ಕೆ ಗೆಲ್ಲಲು ಕೊನೆಯ ಓವರ್ನಲ್ಲಿ 18 ರನ್ಗಳ ಅವಶ್ಯಕತೆಯಿತ್ತು. ನಾಟ್ ಸ್ಕೀವರ್ ಬ್ರಂಟ್ ಎಸೆದ ಅಂತಿಮ ಓವರ್ನಲ್ಲಿ 6,4,6,4 ಬಾರಿಸುವ ಮೂಲಕ ನಡಿನ್ ಡಿ ಕ್ಲರ್ಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 3 ವಿಕೆಟ್ಗಳ ರೋಚಕ ಜಯ ತಂದುಕೊಟ್ಟರು.
ಈ ಗೆಲುವಿನ ಬಳಿಕ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನ, ವುಮೆನ್ಸ್ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯವೇ ರೋಮಾಂಚಕರಿಯಾಗಿತ್ತು. ಈ ರೋಚಕ ಪಂದ್ಯದಲ್ಲಿ ಗೆದ್ದಿರುವುದು ಖುಷಿ ನೀಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂದ್ರೆನೇ ಥ್ರಿಲ್ಲರ್. ಆರ್ಸಿಬಿ ತಂಡ ರೋಚಕ ಪಂದ್ಯಗಳಿಗೆ ಹೆಸರುವಾಸಿ. ಇದೀಗ ರೋಚಕವಾಗಿ ಪಂದ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಕ್ಕೆ ತುಂಬಾ ಸಂತೋಷವಾಯಿತು.
ಈ ಪಂದ್ಯದ ಗೆಲುವಿನ ಶ್ರೇಯಸ್ಸು ನಡಿನ್ ಡಿ ಕ್ಲರ್ಕ್ಗೆ ಸಲ್ಲಬೇಕು. ಏಕೆಂದರೆ ಅವರು ಅದ್ಭುತವಾಗಿ ಆಡಿದರು. ಹಾಗೆಯೇ ಉಳಿದ ಆಟಗಾರ್ತಿಯರೂ ಕೂಡ ಈ ಪಂದ್ಯದಲ್ಲಿ ಸಾಕಷ್ಟು ಸಕಾರಾತ್ಮಕವಾಗಿದ್ದರು. ಈ ಪಾಸಿಟಿವ್ ಗೆಲುವು – ಸೋಲುಗಳ ಮೇಲೆ ಪರಿಣಾಮ ಬೀರುವುದಿಲ್ಲ.
ಈ ಸಕರಾತ್ಮಕತೆಯ ನಡುವೆ ನಡಿನ್ ಡಿ ಕ್ಲರ್ಕ್ ಪ್ರದರ್ಶನ ಅದ್ಭುತ. ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ನಮಗಾಗಿ ಎಲ್ಲಾ ಜವಾಬ್ದಾರಿ ನಿಭಾಯಿಸಿದರು. ಇದಕ್ಕೂ ಮುನ್ನ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಅವರು ಟೀಮ್ ಇಂಡಿಯಾ ವಿರುದ್ಧ ಆಡಿದ ಇನಿಂಗ್ಸ್ ನಾವು ನೋಡಿದ್ದೇವೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕೂಡ ಅಂತಹದ್ದೇ ಇನಿಂಗ್ಸ್ ಆಡಿದ್ದಾರೆ.
ಇದನ್ನೂ ಓದಿ: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ಇತಿಹಾಸ ಬರೆದ ನಡಿನ್ ಡಿ ಕ್ಲರ್ಕ್
ಒಟ್ಟಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಪಂದ್ಯದಲ್ಲೇ ಜಯ ಸಾಧಿಸಿರುವುದು ಖುಷಿ ನೀಡಿದೆ. ಈ ಪಾಸಿಟಿವ್ ವೈಬ್ ಮುಂದಿನ ಪಂದ್ಯಗಳಲ್ಲೂ ಮುಂದುವರೆಯುವ ನಿರೀಕ್ಷೆಯಿದೆ ಎಂದು ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಹೇಳಿದ್ದಾರೆ.
