AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಭರ್ಜರಿ ಸಿಕ್ಸ್ ಸಿಡಿಸಿ ತನ್ನದೇ ಕಾರಿನ ಗಾಜು ಮುರಿದ ರೋಹಿತ್ ಶರ್ಮಾ

VIDEO: ಭರ್ಜರಿ ಸಿಕ್ಸ್ ಸಿಡಿಸಿ ತನ್ನದೇ ಕಾರಿನ ಗಾಜು ಮುರಿದ ರೋಹಿತ್ ಶರ್ಮಾ

ಝಾಹಿರ್ ಯೂಸುಫ್
|

Updated on: Oct 11, 2025 | 8:53 AM

Share

Rohit sharma: ರೋಹಿತ್ ಶರ್ಮಾ ಅಕ್ಟೋಬರ್ 19 ರಿಂದ ಶುರುವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಸರಣಿಯಲ್ಲಿ ಹಿಟ್​ಮ್ಯಾನ್ ಕೇವಲ ಬ್ಯಾಟರ್ ಆಗಿ ಕಾಣಿಸಿಕೊಳ್ಳಲಿರುವುದು ವಿಶೇಷ. ಅಂದರೆ ಈ ಸರಣಿಯ ಮೂಲಕ ಶುಭ್​​ಮನ್ ಗಿಲ್ ಏಕದಿನ ತಂಡದ ನಾಯಕನಾಗಿ ಪಾದಾರ್ಪಣೆ ಮಾಡಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮುನ್ನ ರೋಹಿತ್ ಶರ್ಮಾ ಅಭ್ಯಾಸ ಆರಂಭಿಸಿದ್ದಾರೆ. ಮುಂಬೈನ ಪ್ರಸಿದ್ಧ ಶಿವಾಜಿ ಪಾರ್ಕ್‌ ಮೈದಾನದಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್​ ನಡೆಸಿದ್ದ ಹಿಟ್​ಮ್ಯಾನ್ ಭರ್ಜರಿ ಸಿಕ್ಸರ್​ಗಳನ್ನು ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಸಿಕ್ಸರ್​ಗಳ ಅಬ್ಬರೊಂದಿಗೆ ರೋಹಿತ್ ಶರ್ಮಾ ತಮ್ಮದೇ ಕಾರಿನ ವಿಂಡ್​ ಶೀಲ್ಡ್​ (ಗಾಜು) ಮುರಿದಿದ್ದಾರೆ.

ಅಭ್ಯಾಸದ ವೇಳೆ ಸಿಕ್ಸರ್​ಗಳ ಹೊಡೆತಕ್ಕೆ ಒತ್ತು ನೀಡಿದ್ದ ರೋಹಿತ್ ಶರ್ಮಾ ಬಾರಿಸಿದ ಚೆಂಡು ಡೀಪ್ ಮಿಡ್ ವಿಕೆಟ್​ನತ್ತ ಹೋಗಿತ್ತು. ಹೀಗೆ ಗಾಳಿಯಲ್ಲಿ ಹಾರಿದ ಚೆಂಡು ಹೋಗಿ ಬಿದ್ದಿರುವುದು ರೋಹಿತ್ ಶರ್ಮಾ ನಿಲ್ಲಿಸಿದ್ದ ಕಾರಿನ ಗಾಜಿನ ಮೇಲೆ. ಹಿಟ್​ಮ್ಯಾನ್ ಅವರ ಬ್ಯಾಟಿಂಗ್ ಅಭ್ಯಾಸದ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಚೆಂಡು ರೋಹಿತ್ ಶರ್ಮಾ ಅವರ ಕಾರಿನ ಗಾಜಿನ ಮೇಲೆ ಬಿದ್ದಿದೆ ಎಂದು ಹೇಳುತ್ತಿರುವುದು ಈ ವಿಡಿಯೋದಲ್ಲಿ ಕೇಳಬಹುದು.

ಅತ್ತ ರೋಹಿತ್ ಶರ್ಮಾ ಕೂಡ ತಮ್ಮ ಕಾರಿನತ್ತ ನೋಡುತ್ತಿರುವುದು ಕೂಡ ಈ ವಿಡಿಯೋದಲ್ಲಿ ಕಾಣಬಹುದು. ಇದೀಗ ಅಭ್ಯಾಸದ ವೇಳೆ ಹಿಟ್​ಮ್ಯಾನ್ ಸಿಡಿಸಿದ ಸಿಕ್ಸರ್​ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸದ್ಯ ಅಭ್ಯಾಸ ನಡೆಸುತ್ತಿರುವ ರೋಹಿತ್ ಶರ್ಮಾ ಅಕ್ಟೋಬರ್ 19 ರಿಂದ ಶುರುವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಸರಣಿಯಲ್ಲಿ ಹಿಟ್​ಮ್ಯಾನ್ ಕೇವಲ ಬ್ಯಾಟರ್ ಆಗಿ ಕಾಣಿಸಿಕೊಳ್ಳಲಿರುವುದು ವಿಶೇಷ. ಅಂದರೆ ಈ ಸರಣಿಯ ಮೂಲಕ ಶುಭ್​​ಮನ್ ಗಿಲ್ ಏಕದಿನ ತಂಡದ ನಾಯಕನಾಗಿ ಪಾದಾರ್ಪಣೆ ಮಾಡಲಿದ್ದಾರೆ.