ನೀನು ಬಂಗಾರದ ಮನುಷ್ಯ ಕಣಯ್ಯ!: ಅಭಿಮಾನಿಯ ಫೋನ್​​​ ನೋಡಿ ಕರಗಿದ ಸಂಜು ಸ್ಯಾಮ್ಸನ್ ಮನಸ್ಸು

ಸಂಜು ಸ್ಯಾಮ್ಸನ್ ತಮ್ಮ ಸೌಮ್ಯ ಸ್ವಭಾವ ಮತ್ತು ಔದಾರ್ಯದಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ. ಕೇರಳದಲ್ಲಿ ಅಭಿಮಾನಿಯೊಬ್ಬರೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವಾಗ, ಅವರ ಫೋನ್ ಡಿಸ್‌ಪ್ಲೇ ಒಡೆದಿರುವುದನ್ನು ಸಂಜು ಗಮನಿಸಿದರು. ತಕ್ಷಣ, ತಮ್ಮ ಕಾರಿನಲ್ಲಿದ್ದ ₹40,000 ಮೌಲ್ಯದ ಹೊಸ ಸ್ಮಾರ್ಟ್‌ಫೋನ್ ಅನ್ನು ಆ ಅಭಿಮಾನಿಗೆ ಉಡುಗೊರೆಯಾಗಿ ನೀಡಿದರು. ಐಪಿಎಲ್‌ನಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದರೂ, ಸಂಜು ಸ್ಯಾಮ್ಸನ್ ಅವರ ಈ ಮಾನವೀಯ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ನೀನು ಬಂಗಾರದ ಮನುಷ್ಯ ಕಣಯ್ಯ!: ಅಭಿಮಾನಿಯ ಫೋನ್​​​ ನೋಡಿ ಕರಗಿದ ಸಂಜು ಸ್ಯಾಮ್ಸನ್ ಮನಸ್ಸು
ವೈರಲ್​ ಪೋಸ್ಟ್​

Updated on: Apr 10, 2026 | 10:20 AM

ಕೇರಳ, ಏ.10: ಸಂಜು ಸ್ಯಾಮ್ಸನ್ (Sanju Samson) ಕ್ರೀಡಾ ಸಾಮ್ರಾಜ್ಯದ ಯುವ ಆಟಗಾರ, ಸೈಲೆಂಟ್​​ ಆಗಿರುವ ಇವರು, ಒಳ್ಳೆಯ ಮನಸ್ಸಿನ ವ್ಯಕ್ತಿ, ಒಂದು ದಿನವೂ ತಾಳ್ಮೆ ಕಳೆದುಕೊಂಡಿಲ್ಲ. ಎಲ್ಲವನ್ನು ಕೂಲ್​ ಆಗಿ ನಿಭಾಯಿಸಿದ್ದಾರೆ, ಇದೀಗ ಇವರ ಈ ಗುಣಕ್ಕೆ ಒಂದು ಒಳ್ಳೆಯ ಉದಾಹರಣೆ ಇಲ್ಲಿದೆ ನೋಡಿದೆ. ಐಪಿಎಲ್ 2026ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡುತ್ತಿರುವ ಸಂಜು ಸ್ಯಾಮ್ಸನ್, ಸಾಲು ಸಾಲು ಸೋಲಿನ ನಂತರವೂ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಇದೀಗ ತಮ್ಮ ಗುಣದಿಂದ ಅಭಿಮಾನಗಳಿಗೆ ಮತ್ತಷ್ಟು ಇಷ್ಟವಾಗಿದ್ದಾರೆ. ಇವರು ಇತ್ತೀಚಿಗೆ ಕೇರಳದಲ್ಲಿ ಪ್ರಯಾಣಿಸುತ್ತಿದ್ದಾಗ ತಮ್ಮ ಅಭಿಮಾನಿಯೊಬ್ಬರ ಸಂಕಷ್ಟಕ್ಕೆ ಸ್ಪಂದಿಸಿ ಸುದ್ದಿಯಾಗಿದ್ದಾರೆ.

ಸಂಜು ಸ್ಯಾಮ್ಸನ್ ಅವರು ಕೋಝಿಕ್ಕೋಡ್‌ನಿಂದ ಕೊಯಮತ್ತೂರಿಗೆ ಪ್ರಯಾಣಿಸುತ್ತಿದ್ದರು. ಮುಂಡೂರು-ತೂತಾ ರಸ್ತೆಯ ಪುಂಚಪ್ಪಾಡಂ ಬಳಿ ಫೋನ್ ಕರೆ ಮಾಡಲು ತಮ್ಮ ಕಾರನ್ನು ನಿಲ್ಲಿಸಿದ್ದರು. ಈ ವೇಳೆ ಕೇಬಲ್ ಟೆಕ್ನಿಷಿಯನ್ ಶಬರೀಶ್ ಎಂಬುವವರು ತಮ್ಮ ಸ್ನೇಹಿತನೊಂದಿಗೆ ಕ್ರಿಕೆಟ್ ಆಡಲು ಹೋಗುತ್ತಿದ್ದರು. ಕಾರಿನಲ್ಲಿದ್ದ ವ್ಯಕ್ತಿ ಸಂಜು ಸ್ಯಾಮ್ಸನ್ ಎಂದು ತಿಳಿದ ಅಭಿಮಾನಿಗಳು ಅವರ ಬಳಿ ತೆರಳಿ ಮಾತನಾಡಿಸಿದರು. ಸಂಜು ಅತ್ಯಂತ ಪ್ರೀತಿಯಿಂದ ಅವರ ಕ್ಷೇಮ ವಿಚಾರಿಸಿ, ಸೆಲ್ಫಿ ನೀಡಲು ಒಪ್ಪಿದರು. ಶಬರೀಶ್ ಸೆಲ್ಫಿ ತೆಗೆಯುವಾಗ ಅವರ ಫೋನ್‌ನ ಡಿಸ್‌ಪ್ಲೇ ಸಂಪೂರ್ಣವಾಗಿ ಒಡೆದಿರುವುದನ್ನು ಸಂಜು ಗಮನಿಸಿದ್ದಾರೆ.

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​:

ಕಾರಿನಲ್ಲಿದ್ದ ವ್ಯಕ್ತಿ ಸಂಜು ಸ್ಯಾಮ್ಸನ್ ಎಂದು ತಿಳಿದ ಅಭಿಮಾನಿಗಳು ಅವರ ಬಳಿ ತೆರಳಿ ಮಾತನಾಡಿಸಿದರು. ಸಂಜು ಅತ್ಯಂತ ಪ್ರೀತಿಯಿಂದ ಅವರ ಕ್ಷೇಮ ವಿಚಾರಿಸಿ, ಸೆಲ್ಫಿ ನೀಡಲು ಒಪ್ಪಿದರು. ಶಬರೀಶ್ ಸೆಲ್ಫಿ ತೆಗೆಯುವಾಗ ಅವರ ಫೋನ್‌ನ ಡಿಸ್‌ಪ್ಲೇ ಸಂಪೂರ್ಣವಾಗಿ ಒಡೆದಿರುವುದನ್ನು ಸಂಜು ಗಮನಿಸಿದರು. ಅಭಿಮಾನಿಯ ಫೋನ್ ಸ್ಥಿತಿ ನೋಡಿ ಮರುಗಿದ ಸಂಜು, ತಕ್ಷಣ ತಮ್ಮ ಕಾರಿನ ಹಿಂಭಾಗದಲ್ಲಿದ್ದ ಸುಮಾರು 40,000 ರೂ. ಮೌಲ್ಯದ ಹೊಸ ಸ್ಮಾರ್ಟ್‌ಫೋನ್ ಅನ್ನು ಶಬರೀಶ್‌ಗೆ ಉಡುಗೊರೆಯಾಗಿ ನೀಡಿದರು. ಈ ಅನಿರೀಕ್ಷಿತ ಉಡುಗೊರೆಯಿಂದ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇದನ್ನೂ ಓದಿ: RCB v/s RR: ತವರಿನಿಂದ ಹೊರಗೆ ಆರ್​ಸಿಬಿಗೆ ಮೊದಲ ಪಂದ್ಯ, ಹೇಗಿದೆ ಉಭಯ ತಂಡಗಳ ಬಲಾಬಲ? ಇಲ್ಲಿದೆ ಫುಲ್ ಡಿಟೇಲ್ಸ್

ಟಿ20 ವಿಶ್ವಕಪ್ 2026ರ ಫೈನಲ್‌ನಲ್ಲಿ ಭಾರತಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಜು, ಪ್ರಸ್ತುತ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಸತತ ಮೂರು ಪಂದ್ಯಗಳಲ್ಲಿ (6, 7, 9 ರನ್) ವೈಫಲ್ಯ ಅನುಭವಿಸಿದ್ದಾರೆ. ಸಿಎಸ್‌ಕೆ ತಂಡ ಕೂಡ ಸತತ ಮೂರು ಸೋಲುಗಳಿಂದ ಕಂಗೆಟ್ಟಿದ್ದು, ಏಪ್ರಿಲ್ 11ರ ಶನಿವಾರದಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯಲಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us