ಮುದ್ದು ನಾದಿನಿ ಮದುವೆಗಿಂತ ಬಾಂಗ್ಲಾ ಪ್ರೀಮಿಯರ್ ಹೆಚ್ಚಾಯಿತೇ?
ಹೈದರಾಬಾದ್: ಟೆನಿಸ್ ಲೋಕದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ತಂಗಿ ಅನಂ ಮಿರ್ಜಾ ಮದ್ವೆ ಮೊನ್ನೆ ಗುರುವಾರ ಧಾಂಧೂಂ ಅಂತಾ ಗ್ರಾಂಡ್ ಆಗಿ ನಡೆದಿದೆ. ಮಾಜಿ ಕ್ಯಾಪ್ಟನ್ ಮೊಹಮದ್ ಅಜರುದ್ದೀನ್ ಕಿರಿಯ ಪುತ್ರ ಅಸಾದುದ್ದಿನ್ ಜೊತೆ ಅನಂ ನಿಖಾ ನಡೆದಿದೆ. ವಿವಾಹ ಮಹೋತ್ಸವದಲ್ಲಿ ಎರಡೂ ಕಡೆಯ ಪರಿವಾರದವರು, ಹಿತೈಷಿಗಳು, ಮಿತ್ರರು ಭಾಗವಹಿಸಿದ್ದರು. ಈ ಸಂದರ್ಭದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಮಿಂಚಿನಂತೆ ಸಂಚರಿಸಿವೆ. ಇದನ್ನು ಅನಂ ಸಹ ತನ್ನ ಫೇಸ್ ಬುಕ್ ಖಾತೆಯಲ್ಲಿ ಹರಿಯ ಬಿಟ್ಟು ತಮ್ಮ […]
ಹೈದರಾಬಾದ್: ಟೆನಿಸ್ ಲೋಕದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ತಂಗಿ ಅನಂ ಮಿರ್ಜಾ ಮದ್ವೆ ಮೊನ್ನೆ ಗುರುವಾರ ಧಾಂಧೂಂ ಅಂತಾ ಗ್ರಾಂಡ್ ಆಗಿ ನಡೆದಿದೆ. ಮಾಜಿ ಕ್ಯಾಪ್ಟನ್ ಮೊಹಮದ್ ಅಜರುದ್ದೀನ್ ಕಿರಿಯ ಪುತ್ರ ಅಸಾದುದ್ದಿನ್ ಜೊತೆ ಅನಂ ನಿಖಾ ನಡೆದಿದೆ.
ವಿವಾಹ ಮಹೋತ್ಸವದಲ್ಲಿ ಎರಡೂ ಕಡೆಯ ಪರಿವಾರದವರು, ಹಿತೈಷಿಗಳು, ಮಿತ್ರರು ಭಾಗವಹಿಸಿದ್ದರು. ಈ ಸಂದರ್ಭದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಮಿಂಚಿನಂತೆ ಸಂಚರಿಸಿವೆ. ಇದನ್ನು ಅನಂ ಸಹ ತನ್ನ ಫೇಸ್ ಬುಕ್ ಖಾತೆಯಲ್ಲಿ ಹರಿಯ ಬಿಟ್ಟು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಆದರೆ.. ಮದ್ವೆ ಮನೆಯಲ್ಲಿ ಅತನ ಸುಳಿವೇ ಇರಲಿಲ್ಲ.
ಬಾಂಗ್ಲಾ ಪ್ರೀಮಿಯರ್ ಲೀಗ್ನಲ್ಲಿ ಶೋಯೆಬ್ ಬ್ಯಾಟಿಂಗ್: ನಾದಿನಿಯ ಮದುವೆ ನಡೆಯುವಾಗ ಮನೆಯ ದೊಡ್ಡ ಅಳಿಯನಿಗೆ ವಿಶೇಷ ಪ್ರಾಶಸ್ತ್ಯ ಇರುತ್ತದೆ. ಆದರೆ ಇಲ್ಲಿ ಸಾನಿಯಾ ಮಿರ್ಜಾ ಪತಿ, ಪಾಕಿಸ್ತಾನದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಶೋಯೆಬ್ ಮಲಿಕ್ ಪತ್ತೇನೆ ಇರಲಿಲ್ಲ. ಒಂದೇ ಒಂದು ಫೋಟೋದಲ್ಲೂ ಶೋಯೆಬ್ ಕಾಣಿಸಿಕೊಂಡಿಲ್ಲ. ಸರಿ, ಇಷ್ಟಕ್ಕೇ ಸಾನಿಯಾ ಫ್ಯಾನ್ಸ್ ಚಿಂತಾಕ್ರಾಂತರಾಗಿದ್ದಾರೆ. ಏನಾಯಿತೋ ಎಂದು ಗಾಬರಿಯಾಗಿದ್ದಾರೆ! ಸಾನಿಯಾ, ಶೋಯೆಬ್ ರಿಶ್ತಾ ಭಾರತ-ಪಾಕ್ ಸಂಬಂಧದಂತೆ ಹದಗೆಟ್ಟಿತಾ ಎಂದು ಗುಮಾನಿ ಪಟ್ಟಿದ್ದಾರೆ.
ಆದರೆ ಅತ್ತ ಶೋಯೆಬ್ ಮಲಿಕ್ ಮಾತ್ರ ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ಬಾಂಗ್ಲಾ ದೇಶದಲ್ಲಿ ಆರಾಮವಾಗಿ ಬಾಂಗ್ಲಾ ಪ್ರೀಮಿಯರ್ ಲೀಗ್ನಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಮುದ್ದಿನ ನಾದಿನಿ ಅನಂ ನಿಖಾಗೆ ಆಬ್ಸೆಂಟ್ ಆಗಿದ್ದಾರೆ. ಆದರೆ ಸಾನಿಯಾ-ಶೋಯೆಬ್ ಪುತ್ರ ಪುಟಪುಟಾ ಅಂತಾ ಇಡೀ ಮದುವೆಯಲ್ಲಿ ಒಡಾಡಿಕೊಂಡು ಆಕರ್ಷಣೆಯ ಕೇಂದ್ರವಾಗಿ, ಅಪ್ಪನ ಅನುಪಸ್ಥಿತಿಯನ್ನು ದೂರ ಮಾಡಿದ್ದಾನೆ.
ಇನ್ನು ಅನಂಗೆ ಇದು ಎರಡನೆಯ ಮದುವೆ ತನ್ನ ಗೆಳೆಯ ಅಕ್ಬರ್ ರಶೀದ್ ಜೊತೆ ಈ ಹಿಂದೆ ಅವರ ವಿವಾಹ ನಡೆದಿತ್ತು. ಆದ್ರೆ ಕೆಲವೇ ತಿಂಗಳುಗಳಲ್ಲಿ ಅನಂ, ರಶೀದ್ಗೆ ತಲಾಖ್ ತಲಾಖ್ ತಲಾಖ್ ಅಂದಿದ್ದರು. ಹಾಗಾಗಿ ಆ ಸಂಬಂಧ ಬರಕತ್ತಾಗಿರಲಿಲ್ಲ.
Published On - 12:32 pm, Sat, 14 December 19