AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England Test Series: ಅಕ್ಸರ್ ಪಟೇಲ್ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡುವುದು ಹೆಚ್ಚು ಕಡಿಮೆ ಖಚಿತವಾಗಿದೆ

ನಿರೀಕ್ಷೆಯಂತೆ ಹಿಟ್​ಮ್ಯಾನ್ ರೋಹಿತ್ ಶರ್ಮ ಅವರೊಂದಿಗೆ ಯುವ ಪ್ರತಿಭೆ ಶುಭ್​ಮನ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್​ನಲ್ಲಿ ಆಡಿದ ಕೊನೆಯ ಟೆಸ್ಟ್​ನಲ್ಲಿ ಅರ್ಧ ಶತಕಗಳನ್ನು ಬಾರಿಸಿದ ಅವರಿಬ್ಬರೂ ಉತ್ತಮ ಸ್ಪರ್ಶದಲ್ಲಿದ್ದಾರೆ.

India vs England Test Series: ಅಕ್ಸರ್ ಪಟೇಲ್ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡುವುದು ಹೆಚ್ಚು ಕಡಿಮೆ ಖಚಿತವಾಗಿದೆ
ಅಕ್ಸರ್ ಪಟೇಲ್
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 04, 2021 | 10:45 PM

Share

ನಾಳೆ ಶುರುವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮೂರು ಸ್ಪಿನ್ನರ್​ಗಳನ್ನು ಆಡಿಸುವುದು ಹೆಚ್ಚು ಕಡಿಮೆ ಖಚಿತವಾದಂತಿದೆ. ಅಫ್-ಸ್ಪಿನ್ನರ್ ಮತ್ತು ಲೋಕಲ್ ಬಾಯ್ ರವಿಚಂದ್ರನ್ ಅಶ್ವಿನ್ ಮತ್ತು ಚೈನಾಮನ್​ಗಳನ್ನು ಬೌಲ್ ಮಾಡುವ ಕುಲ್ದೀಪ್ ಯಾದವ್ ಅವರೊಂದಿಗೆ ಎಡಗೈ ಸ್ಪಿನ್ನರ್ ಅಕ್ಸರ್ ಪಟೇಲ್​ಗೆ ಪದಾರ್ಪಣೆ ಮಾಡಲು ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ.

ನಿರೀಕ್ಷೆಯಂತೆ ಹಿಟ್​ಮ್ಯಾನ್ ರೋಹಿತ್ ಶರ್ಮ ಅವರೊಂದಿಗೆ ಯುವ ಪ್ರತಿಭೆ ಶುಭ್​ಮನ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್​ನಲ್ಲಿ ಆಡಿದ ಕೊನೆಯ ಟೆಸ್ಟ್​ನಲ್ಲಿ ಅರ್ಧ ಶತಕಗಳನ್ನು ಬಾರಿಸಿದ ಅವರಿಬ್ಬರೂ ಉತ್ತಮ ಸ್ಪರ್ಶದಲ್ಲಿದ್ದಾರೆ. ರೋಹಿತ್ ಬ್ಯಾಟಿಂಗ್ ಸಾಮರ್ಥ್ಯ ಎಲ್ಲರಿಗೂ ಗೊತ್ತಿದೆ, ಆದರೆ ಜಾಸ್ತಿ ಚರ್ಚೆಯಲ್ಲಿರುವುದು ಗಿಲ್. ಅವರ ಬ್ಯಾಟಿಂಗ್ ಶೈಲಿ, ತಾಂತ್ರಿಕತೆ, ದಿಟ್ಟತನ ಮತ್ತು ಬಾರಿಸುವ ಮನಮೋಹಕ ಹೊಡೆತಗಳು ಕೇವಲ ಭಾರತೀಯರನ್ನಷ್ಟೇ ಅಲ್ಲ, ವಿದೇಶಗಳ ಮಾಜಿ ಮತ್ತು ಹಾಲಿ ಅಟಗಾರರನ್ನೂ ಪ್ರಭಾವಕ್ಕೊಳಪಡಿಸಿದೆ. ಭವಿಷ್ಯದ ಸೂಪರ್ ಸ್ಟಾರ್ ಪಟ್ಟವನ್ನು ಅವರಿಗೆ ಈಗಾಗಲೇ ಕಟ್ಟಲಾಗಿದೆ.

ಮೂರನೇ ಕ್ರಮಾಂಕದಲ್ಲಿ ಆಡಲಿರುವ ಚೇತೇಶ್ವರ ಪೂಜಾರಾ ಎಂದಿನಂತೆ ಎದುರಾಳಿ ಬೌಲರ್​ಗಳನ್ನು ಬಸವಳಿಯುವಂತೆ ಮಾಡಲಿದ್ದಾರೆ. ಅವರು ವೇಗವಾಗಿ ರನ್ ಗಳಿಸಲಾರರಾದರೂ ವಿಕೆಟ್ ಒದು ತುದಿಯಲ್ಲಿ ಲಂಗರು ಹಾಕಿ ನಿಂತು ಬಿಡುತ್ತಾರೆ. ಬೌಲರ್​ಗಳು ಮೇಲುಗೈ ಸಾಧಿಸದಂತೆ, ತಾನಿರುವ ತುದಿಯಲ್ಲಿ ವಿಕೆಟ್ ಬೀಳದಂತೆ ನೋಡಿಕೊಳ್ಳುವ ಜವಾಬ್ದಾರಿ ಪೂಜಾರಾ ಅವರದ್ದು.

ರೋಹಿತ್ ಶರ್ಮ ಮತ್ತು ಶುಭ್​ಮನ್ ಗಿಲ್

ಚಿಕ್ಕ ಬ್ರೇಕ್ ನಂತರ ತಂಡಕ್ಕೆ ವಾಪಸ್ಸಾಗಿರುವ ನಾಯಕ ವಿರಾಟ್ ಕೊಹ್ಲಿ ಕಳೆದ ವರ್ಷ ಒಂದು ಶತಕವನ್ನೂ ದಾಖಲಿಸದೆ ಹೋಗಿದ್ದು ಒಂದು ಸೋಜಿಗವೇ ಸರಿ. ಅಸ್ಟ್ರೇಲಿಯಾದಲ್ಲಿ ಆಡುವಾಗ ಅವರು ಉತ್ಮಮ ಸ್ಪರ್ಶ ತೋರಿದ್ದರು. ತಾನಾಡಿದ ಒಂದೇಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಕೊಹ್ಲಿ ಆಕರ್ಷಕ 74 ರನ್ ಬಾರಿಸಿದ್ದರು. ಅವರ ಬ್ಯಾಟ್​ನಿಂದ ಪುನಃ ರನ್ ಹೊಳೆ ಹರಿಯುವುದನ್ನು ನೋಡಲು ಕ್ರಿಕೆಟ್ ಪ್ರೇಮಿಗಳು ಕಾತುರರಾಗಿದ್ದಾರೆ.

ಐದನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾ ಸರಣಿಯ ಹೀರೋ ಅಜಿಂಕ್ಯಾ ರಹಾನೆ ಆಡಲಿದ್ದಾರೆ. ಈ ಸರಣಿಗೆ ವೈಸ್-ಕ್ಯಾಪ್ಟನ್ ಆಗಿರುವ ಅವರು ಸಹ ಉತ್ತಮ ಫಾರ್ಮ್​ನಲ್ಲಿದ್ದಾರೆ. ರಹಾನೆಯವರದ್ದು ಯಾವತ್ತಿಗೂ ಸೆನ್ಸಿಬಲ್ ಆಟ, ಸಮಯ ಸಂದರ್ಭಕ್ಕೆ ತಕ್ಕಂತೆ ಅವರು ಬ್ಯಾಟ್ ಮಾಡುತ್ತಾರೆ. ಬ್ರಿಸ್ಬೇನ್​ನಲ್ಲಿ ಭಾರತಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟ ರಿಷಭ್ ಪಂತ್ ಆಡುವ ಇಲೆವೆನ್​ನಲ್ಲಿ ಸ್ಥಾನ ಗಿಟ್ಟಿಸಿವುದು ನಿಶ್ವಿತ. ಹಾಗೆ ನೋಡಿದರೆ, ವೃದ್ಧಿಮಾನ್ ಸಹಾಗೆ ಕಮ್​ಬ್ಯಾಕ್ ಮಾಡುವುದು ಬಹಳ ಕಷ್ಟವಾಗಲಿದೆ. ಪಂತ್​ಗೆ ಗಾಯಗೊಂಡರೆ ಮಾತ್ರ ಅವರು ಅಡುವ ಇಲೆವೆನ್​ನಲ್ಲಿ ಬರಬಹುದು. ಯಾಕೆಂದರೆ, ಪಂತ್ ಬ್ರಿಸ್ಬೇನಲ್ಲಾಡಿದ ಇನ್ನಿಂಗ್ಸ್ ದಶಕಕ್ಕೊಮ್ಮೆ ನೋಡಸಿಗುವಂಥದ್ದು. ಅವರು ಆ ಇನ್ನಿಂಗ್ಸ್ ಮೂಲಕ ತಮ್ಮ ಸ್ಥಾನವನ್ನು ಸಿಮೆಂಟ್ ಮಾಡಿಕೊಂಡಿದ್ದಾರೆ.

ನಂತರದ ಸ್ಥಾನದಲ್ಲಿ ಉತ್ತಮ ಬ್ಯಾಟ್ಸ್​ಮನ್ ಕೂಡ ಆಗಿರುವ ಅಕ್ಸರ್ ಪಟೇಲ್ (ಒಂದು ಪಕ್ಷ ಆಡುವ ಇಲೆವೆನ್​ನಲ್ಲಿ ಸ್ಥಾನ ಪಡೆದರೆ) ಆಡಬಹುದು. ಅವರ ನಂತರ ರವಿಚಂದ್ರನ್ ಅಶ್ವಿನ್ ಆಡುತ್ತಾರೆ.

ಇಶಾಂತ್ ಶರ್ಮ 100% ಫಿಟ್ ಆಗಿದ್ದರೆ ಮಹಮ್ಮದ್ ಸಿರಾಜ್ ಬದಲಿಗೆ ಅವರೇ ಆಡುವುದು ನಿಶ್ಚಿತ. ಕೊನೆಯ ಎರಡು ಸ್ಥಾನಗಳು ಕುಲ್ದೀಪ್ ಯಾದವ್ ಮತ್ತು ಫಿಟ್ನೆಸ್ ಮರಳಿ ಪಡೆದಿರುವ ಜಸ್ಪ್ರೀತ್ ಬುಮ್ರಾ ಅವರಿಗೆ ದೊರಕಲಿವೆ.

ಚೇತೇಶ್ವರ್ ಪೂಜಾರಾ

ಭಾರತದ ಸಂಭಾವ್ಯ ಆಡುವ ಎಲೆವೆನ್: ರೋಹಿತ್ ಶರ್ಮ, ಶುಭ್​ಮನ್ ಗಿಲ್, ಚೇತೇಶ್ವರ್ ಪೂಜಾರಾ, ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ರಿಷಭ್ ಪಂತ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮ, ಕುಲ್ದೀಪ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ

India vs England Test Series | ಪರಸ್ಪರ ಗೌರವ, ವಿಶ್ವಾಸವೇ ನಮ್ಮ ಸ್ನೇಹಕ್ಕೆ ಆಧಾರ: ರಹಾನೆ ಬಗ್ಗೆ ವಿರಾಟ್ ಕೊಹ್ಲಿ

Published On - 10:42 pm, Thu, 4 February 21

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ