AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

7 ವರ್ಷಗಳ ನಂತರ ಕ್ರಿಕೆಟ್ ಅಂಗಳಕ್ಕೆ ಮತ್ತೆ ಎಂಟ್ರಿಕೊಡಲಿರೋ ಕೇರಳ ಎಕ್ಸ್​ಪ್ರೆಸ್

ಐಪಿಎಲ್​ನಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಿ 7 ವರ್ಷ ನಿಷೇಧಕ್ಕೊಳಗಾಗಿದ್ದ ಕೇರಳ ಎಕ್ಸ್​ಪ್ರೆಸ್ ಎಸ್.ಶ್ರೀಶಾಂತ್, ಮತ್ತೆ ಕ್ರಿಕೆಟ್ ಅಂಗಳಕ್ಕೆ ಎಂಟ್ರಿಕೊಡ್ತಿದ್ದಾರೆ. 2013ರ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನ ಪ್ರತಿನಿಧಿಸುತ್ತಿದ್ದ ಶ್ರೀಶಾಂತ್, ಅಜಿತ್ ಚಂಡೀಲಾ ಮತ್ತು ಅಂಕಿತ್ ಚೌವ್ಹಾಣ್ ಜೊತೆ ಸೇರಿ ಸ್ಪಾಟ್ ಫಿಕ್ಸಿಂಗ್ ಸುಳಿಯಲ್ಲಿ ಸಿಲುಕಿ ಬಿಸಿಸಿಐನಿಂದ ಅಜೀವ ನಿಷೇದಧ ಶಿಕ್ಷೆಗೆ ಒಳಗಾಗಿದ್ರು. 2015ರಲ್ಲಿ ದೆಹಲಿ ವಿಶೇಷ ನ್ಯಾಯಾಲಯ ಶ್ರೀಶಾಂತ್ ಮೇಲಿನ ಎಲ್ಲಾ ಆರೋಪಗಳಿಂದಲೂ ಖುಲಾಸೆ ಮಾಡಿತ್ತು. 2018ರಲ್ಲಿ ಕೇರಳ ಹೈ ಕೋರ್ಟ್, ಶ್ರೀಶಾಂತ್ ಮೇಲೆ ಬಿಸಿಸಿಐ ಹೇರಿದ್ದ […]

7 ವರ್ಷಗಳ ನಂತರ ಕ್ರಿಕೆಟ್ ಅಂಗಳಕ್ಕೆ ಮತ್ತೆ ಎಂಟ್ರಿಕೊಡಲಿರೋ ಕೇರಳ ಎಕ್ಸ್​ಪ್ರೆಸ್
ಆಯೇಷಾ ಬಾನು
|

Updated on: Jun 19, 2020 | 1:48 PM

Share

ಐಪಿಎಲ್​ನಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡಿ 7 ವರ್ಷ ನಿಷೇಧಕ್ಕೊಳಗಾಗಿದ್ದ ಕೇರಳ ಎಕ್ಸ್​ಪ್ರೆಸ್ ಎಸ್.ಶ್ರೀಶಾಂತ್, ಮತ್ತೆ ಕ್ರಿಕೆಟ್ ಅಂಗಳಕ್ಕೆ ಎಂಟ್ರಿಕೊಡ್ತಿದ್ದಾರೆ. 2013ರ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನ ಪ್ರತಿನಿಧಿಸುತ್ತಿದ್ದ ಶ್ರೀಶಾಂತ್, ಅಜಿತ್ ಚಂಡೀಲಾ ಮತ್ತು ಅಂಕಿತ್ ಚೌವ್ಹಾಣ್ ಜೊತೆ ಸೇರಿ ಸ್ಪಾಟ್ ಫಿಕ್ಸಿಂಗ್ ಸುಳಿಯಲ್ಲಿ ಸಿಲುಕಿ ಬಿಸಿಸಿಐನಿಂದ ಅಜೀವ ನಿಷೇದಧ ಶಿಕ್ಷೆಗೆ ಒಳಗಾಗಿದ್ರು.

2015ರಲ್ಲಿ ದೆಹಲಿ ವಿಶೇಷ ನ್ಯಾಯಾಲಯ ಶ್ರೀಶಾಂತ್ ಮೇಲಿನ ಎಲ್ಲಾ ಆರೋಪಗಳಿಂದಲೂ ಖುಲಾಸೆ ಮಾಡಿತ್ತು. 2018ರಲ್ಲಿ ಕೇರಳ ಹೈ ಕೋರ್ಟ್, ಶ್ರೀಶಾಂತ್ ಮೇಲೆ ಬಿಸಿಸಿಐ ಹೇರಿದ್ದ ನಿಷೇಧವನ್ನ ರದ್ದು ಗೊಳಿಸಿತ್ತು. ಕಳೆದ ವರ್ಷ ಅಂದ್ರೆ 2019ರಲ್ಲಿ ಸುಪ್ರೀಂ ಕೋರ್ಟ್, ಶ್ರೀಶಾಂತ್ ಮಾಡಿದ ತಪ್ಪನ್ನ ಎತ್ತಿ ಹಿಡಿದಿತ್ತು. ಆದ್ರೆ ಬಿಸಿಸಿಐಗೆ ಶಿಕ್ಷೆಯ ಪ್ರಮಾಣವನ್ನ ಕಡಿಮೆ ಮಾಡುವಂತೆ ಕೇಳಿಕೊಂಡಿತ್ತು. ಹೀಗಾಗಿ ಬಿಸಿಸಿಐ ಶ್ರೀಶಾಂತ್​ಗೆ ಹೇರಿದ್ದ ಅಜೀವ ನಿಷೇಧದ ಶಿಕ್ಷೆಯನ್ನ 7 ವರ್ಷಗಳಿಗೆ ಇಳಿಸಿತ್ತು. ಈ ಸೆಪ್ಟಂಬರ್​ನಲ್ಲಿ ಶ್ರೀಶಾಂತ್ 7 ವರ್ಷಗಳ ಶಿಕ್ಷೆ ಕೊನೆಗೊಳ್ಳಲಿದೆ.

ನಿಷೇಧದ ಅವಧಿ ಇದೆ ಸೆಪ್ಟೆಂಬರ್​ಗೆ ಮುಕ್ತಾಯವಾಗೋದ್ರಿಂದ, ಮುಂಬರುವ ರಣಜಿ ಟೂರ್ನಿಯಲ್ಲಿ ಆಡಲು ಅವಕಾಶ ನೀಡೋದಕ್ಕೆ ಕೇರಳ ಕ್ರಿಕೆಟ್ ಅಸೋಸಿಯೇಷನ್ ತೀರ್ಮಾನಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಕೇರಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸಜನ್ ಕೆ ವರ್ಗೀಸ್, ಕೆಸಿಎ ಶ್ರೀಶಾಂತ್​ಗೆ ಮರಳಿ ಸ್ವಾಗತಿಸಲು ರೆಡಿಯಾಗಿದೆ. ಆದ್ರೆ ಶ್ರೀಶಾಂತ್ ರಣಜಿ ತಂಡಕ್ಕೆ ಎಂಟ್ರಿ ಕೊಡಲು, ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ನಿಜವಾಗಿಯೂ ಅವರೊಬ್ಬ ಅದ್ಭುತ ಬೌಲರ್ ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ವೇಗಿ ಶ್ರೀಶಾಂತ್, ನನಗೆ ಅವಕಾಶ ನೀಡಿದ ಕೇರಳ ಕ್ರಿಕೆಟ್ ಸಂಸ್ಥೆಗೆ ನಾನು ಚಿರರುಣಿಯಾಗಿದ್ದೇನೆ. ನನ್ನ ಫಿಟ್ನೆಸ್ ಮತ್ತು ಹಳೆಯ ಚಾಪನ್ನ ತೋರಿಸುತ್ತೇನೆ. ಎಲ್ಲಾ ವಿವಾದಗಳು ಈಗ ವಿಶ್ರಾಂತಿ ಪಡೆಯುವ ಸಮಯ ಎಂದಿದ್ದಾರೆ.

ಕೇರಳ ಕ್ರಿಕೆಟ್ ಸಂಸ್ಥೆ ಇತ್ತೀಚಿಗೆ ಭಾರತ ತಂಡದ ಮಾಜಿ ವೇಗಿ ಟೀನು ಯೊಹಾನಾರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಿಕೊಂಡಿದೆ. ಈಗ ಶ್ರೀಶಾಂತ್ ಕೂಡ ತಂಡವನ್ನು ಕೂಡಿಕೊಳ್ಳುವುದರಿಂದ ಕೇರಳ ತಂಡದ ಸದೃಢವಾಗಲಿದೆ ಎಂದು ಕೆಸಿಎ ಕಾರ್ಯದರ್ಶಿ ಶ್ರೀತ್ ನಾಯರ್ ತಿಳಿಸಿದ್ದಾರೆ. ಒಟ್ನಲ್ಲಿ ಶ್ರೀ ಕಮ್​ಬ್ಯಾಕ್ ಅದ್ಧೂರಿಯಾಗಿರಲಿ ಅನ್ನೊದೇ ಕ್ರಿಕೆಟ್ ಪ್ರೇಮಿಗಳ ಆಶಯವಾಗಿದೆ.