AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Australia Test Series | ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೂರನೇ ಆರಂಭಿಕ ಜೋಡಿ ಪ್ರಯೋಗಿಸಲಿದೆ

ಮೂರನೇ ಟೆಸ್ಟ್​ನಲ್ಲಿ ಭಾರತ ರೋಹಿತ್ ಶರ್ಮ ಮತ್ತು ಶುಭ್​ಮನ್ ಗಿಲ್​ ರೂಪದಲ್ಲಿ ಮೂರನೆ ಓಪನಿಂಗ್ ಕಾಂಬಿನೇಷನ್ ಪ್ರಯೋಗಿಸಲಿದೆ. ಮೊದಲ ಟೆಸ್ಟ್​​ನಲ್ಲಿ ಮಾಯಾಂಕ್ ಅಗರ್​ವಾಲ್ ಮತ್ತು ಪೃಥ್ವಿ ಶಾ ಆರಂಭ ಆಟಗಾರರಾಗಿ ಆಡಿದರು. ಎರಡನೆಯದರಲ್ಲಿ ಅಗರ್​ವಾಲ್ ಮತ್ತು ಶುಭ್​ಮನ್ ಇನ್ನಿಂಗ್ಸ್ ಆರಂಭಿಸಿದ್ದರು.

India vs Australia Test Series | ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೂರನೇ ಆರಂಭಿಕ ಜೋಡಿ ಪ್ರಯೋಗಿಸಲಿದೆ
ರೋಹಿತ್ ಶರ್ಮ ಮತ್ತು ಶುಭ್​ಮನ್ ಗಿಲ್
ಅರುಣ್​ ಕುಮಾರ್​ ಬೆಳ್ಳಿ
|

Updated on:Jan 06, 2021 | 10:17 PM

Share

ಮೆಲ್ಬರ್ನ್ ಟೆಸ್ಟ್ ಗೆದ್ದು ಸರಣಿ ಸಮಮಾಡಿಕೊಂಡಿರುವ ಭಾರತದ ಕ್ರಿಕೆಟ್ ತಂಡ ಆತ್ಮವಿಶ್ವಾಸದಿಂದೇನೋ ಬೀಗುತ್ತಿದೆ. ನಾಳೆ ಸಿಡ್ನಿಯಲ್ಲಿ ಆರಂಭವಾಗುವ ಮೂರನೆ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯಾ ರಹಾನೆ ನಾಯಕತ್ವದ ಪಡೆ ಹೊಸ ಮನೋಬಲ ಮತ್ತು ಆತ್ಮಸ್ಥೈರ್ಯದೊಂದಿಗೆ ಮೈದಾನಕ್ಕಿಳಿಯುವುದು ನಿಶ್ವಿತ. ಆದರೆ ಆರಂಭ ಆಟಗಾರರ ನಿರಂತರ ವೈಫಲ್ಯ ಟೀಮ್ ಇಂಡಿಯಾ ಮ್ಯಾನೇಜ್​ಮೆಂಟ್​ ಅನ್ನು ಚಿಂತೆಗೀಡು ಮಾಡಿರುವುದು ಸುಳ್ಳಲ್ಲ.

ನಾಳಿನ ಮೂರನೇ ಟೆಸ್ಟ್​ನಲ್ಲಿ ಭಾರತ ರೋಹಿತ್ ಶರ್ಮ ಮತ್ತು ಶುಭ್​ಮನ್ ಗಿಲ್​ ರೂಪದಲ್ಲಿ ಮೂರನೆ ಓಪನಿಂಗ್ ಕಾಂಬಿನೇಷನ್ ಪ್ರಯೋಗಿಸಲಿದೆ. ಮೊದಲ ಟೆಸ್ಟ್​​ನಲ್ಲಿ ಮಾಯಾಂಕ್ ಅಗರ್​ವಾಲ್ ಮತ್ತು ಪೃಥ್ವಿ ಶಾ ಆರಂಭ ಆಟಗಾರರಾಗಿ ಆಡಿದರು. ಎರಡನೆಯದರಲ್ಲಿ ಅಗರ್​ವಾಲ್ ಮತ್ತು ಶುಭ್​ಮನ್ ಇನ್ನಿಂಗ್ಸ್ ಆರಂಭಿಸಿದರು. ಕಾಂಬಿನೇಷನ್ ಬದಲಾಗುತ್ತಿವೆಯೇ ಹೊರತು ಪರ್ಫಾರ್ಮನ್ಸ್​ಗಳಲ್ಲಿ ಏನೂ ಬದಲಾವಣೆಯಿಲ್ಲ. ನಿಜ ಹೇಳಬೇಕೆಂದರೆ, ವಿರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ ನಂತರ ಭಾರತಕ್ಕೆ ವಿಶ್ವಾಸಾರ್ಹ ಆರಂಭಿಕ ಜೋಡಿ ಸಿಕ್ಕಿಲ್ಲ.

ಅಂಕಿಅಂಶಗಳನ್ನು ಗಮನಿಸಿದರೆ ಭಾರತದ ಆರಂಭ ಆಟಗಾರರು ಹೆಣಗುತ್ತಿರುವುದು ವೇದ್ಯವಾಗುತ್ತದೆ. ಕಳೆದ ವರ್ಷ ಭಾರತ 4 ಟೆಸ್ಟ್ ಪಂದ್ಯಗಳನ್ನಾಡಿತು. ಅವುಗಳ 8 ಇನ್ನಿಂಗ್ಸ್​ಗಲ್ಲಿ ಟೀಮ್ ಇಂಡಿಯಾದ ಆರಂಭ ಆಟಗಾರರು ಕೇವಲ 104 ರನ್ ಮಾತ್ರ ಗಳಿಸಿದ್ದಾರೆ. ಅಂದರೆ ಪ್ರತಿ ಇನ್ನಿಂಗ್ಸ್​ ಸರಾಸರಿ 13 ರನ್!

ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್

ಇತ್ತೀಚಿಗಷ್ಟೇ, ಟೆಸ್ಟ್​ ಕ್ರಿಕೆಟ್ ಆಡಲಾರಂಭಿಸಿರುವ ಜಿಂಬಾಬ್ವೆ ಮತ್ತು ಬಾಂಗ್ಲಾದೇಶ ತಂಡಗಳ ಆರಂಭ ಆಟಗಾರರು ಭಾರತೀಯ ಆಟಗಾರರಕ್ಕಿಂತ ಉತ್ತಮ ಪ್ರದರ್ಶಗಳನ್ನು ನೀಡಿದ್ದಾರೆ. ಜಿಂಬಾಬ್ವೆಯ ಓಪನರ್​ಗಳು 31ರ ಸರಾಸರಿಯಲ್ಲಿ ರನ್ ಜೋಡಿಸಿದ್ದರೆ, ಬಾಂಗ್ಲಾದ ಓಪನರ್ಸ್ 20 ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಓಪನರ್ಸ್ 53ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.

ಉಪಖಂಡದ ಪಿಚ್​ಗಳಲ್ಲಿ ನೀರು ಕುಡಿದಷ್ಟು ಸುಲಭವಾಗಿ ರನ್​ ಗಳಿಸುವ ಭಾರತೀಯ ಆಟಗಾರರು ವಿದೇಶದಲ್ಲಿ ಆಡುವಾಗ ಒದ್ದಾಡುತ್ತಾರೆ. 2018ರಿಂದ ಇಲ್ಲಿಯವರೆಗೆ 6 ಬಾರಿ ವಿದೇಶ ಪ್ರವಾಸಗಳಿಗೆ ತೆರಳಿರುವ ಭಾರತಕ್ಕೆ ಅದರ ಓಪನಿಂಗ್ ಬ್ಯಾಟ್ಸ್​ಮನ್​ಗಳು 25 ರನ್ ಸರಾಸರಿಯನ್ನು ಕಾಯ್ದುಕೊಳ್ಳಲೂ ವಿಫಲರಾಗಿದ್ದಾರೆ. ಈ ಪ್ರವಾಸಗಳಲ್ಲಿ ಕೇವಲ 4 ಬಾರಿ ಭಾರತದ ಓಪನರ್​ಗಳ ನಡುವೆ ಅರ್ಧಶತಕದ ಜೊತೆಯಾಟ ಬಂದಿವೆ. ಅದರಲ್ಲಿ ಮೂರು ಇಂಗ್ಲೆಂಡ್ ವಿರುದ್ಧ ನಡೆದ 5 ಟೆಸ್ಟ್​ಗಳ ಸರಣಿಯಲ್ಲಿ ಬಂದಿವೆ.

ಭಾರತದ ಬ್ಯಾಟ್ಸ್​ಮನ್​ಗಳು ವಿದೇಶದ ಪಿಚ್​ಗಳಲ್ಲಿ ಫೇಲಾಗುತ್ತಿರುವುದಕ್ಕೆ ಸೀಮಿತ ಓವರ್​ಗಳ ಕ್ರಿಕೆಟ್ ಪ್ರಮುಖ ಕಾರಣವಾಗುತ್ತಿದೆ ಎಂದು ಮಾಜಿ ಆಟಗಾರರು ಹೇಳುತ್ತಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ ಆಡುವುದಕ್ಕೆ ತಾಂತ್ರಿಕವಾಗಿ ಸಾಲಿಡ್​ ಆಗಿರುವುದು ಬಹಳ ಮುಖ್ಯ. ಯಾಕೆಂದರೆ ಕೆಂಪು ಚೆಂಡು ಗಾಳಿಯಲ್ಲಿ ಹೊಯ್ದಾಡುತ್ತಿರುತ್ತದೆ. ಆಟಗಾರನೊಬ್ಬನ ದೌರ್ಬಲ್ಯಗಳನ್ನು ಎದುರಾಳಿ ಬೌಲರ್​ಗಳು ಕೆಲವೇ ನಿಮಿಷಗಳಲ್ಲಿ ಕಂಡುಕೊಂಡುಬಿಡುತ್ತಾರೆ ಮತ್ತು ಅವರ ವಿಡಿಯೋಗಳನ್ನು ವೀಕ್ಷಿಸಿ ಹೋಮ್​ವರ್ಕ್ ಕೂಡ ಮಾಡಿಕೊಂಡಿರುತ್ತಾರೆ. ಹಾಗಾಗಿ, ಈ ಆವೃತ್ತಿಯಲ್ಲಿ ಯಶ ಕಾಣಲು ಶಿಸ್ತು ಮತ್ತು ಸಂಯಮ ಬೇಕು.

ವರ್ಷವಿಡೀ ಸೀಮಿತ ಓವರ್​ಗಳ ಕ್ರಿಕೆಟ್ ಆಡುವ ಆಟಗಾರರಿಗೆ ಟೆಸ್ಟ್ ಕ್ರಿಕೆಟ್​ಗೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ. ಕ್ರಿಕೆಟ್​ನ ಮೂರು ಫಾರ್ಮಾಟ್​ಗಳಲ್ಲಿ ಕಡಿಮೆ ಆಡಲ್ಪಡುವ ಆವೃತ್ತಿಯಂದರೆ ಟೆಸ್ಟ್ ಕ್ರಿಕೆಟ್. ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಟೆಕ್ನಿಕ್​ಗೆ ಹೆಚ್ಚು ಮಹತ್ವವಿಲ್ಲ. ಆದರೆ ಟೆಸ್ಟ್​ ಕ್ರಿಕೆಟ್​ಗೆ ಅದಿಲ್ಲದೆ ನಡೆಯುವುದಿಲ್ಲ. ಕೇವಲ ಕೆಲವೇ ಆಟಗಾರರು ಮೂರು ಅವೃತ್ತಿಗಳಿಗೂ ಹೊಂದುವಂಥ ಬ್ಯಾಟಿಂಗ್ ಕೌಶಲ್ಯತೆಯಲ್ಲಿ ಪರಿಣಿತಿ ಸಾಧಿಸಿರುತ್ತಾರೆ.

ರೋಹಿತ್ ಶರ್ಮ

ರೋಹಿತ್ ಶರ್ಮ ಭಾರತದಲ್ಲಿ ಆರಂಭ ಆಟಗಾರನಾಗಿ (ಟೆಸ್ಟ್​ಗಳಲ್ಲಿ) ಹೇರಳವಾಗಿ ರನ್ ಗಳಿಸಿದರು. ಅದರೆ ಆಸ್ಟ್ರೇಲಿಯಾದ ಪಿಚ್​ಗಳು ವಿಭಿನ್ನ. ಅಲ್ಲಿ ಬಾಲು ಜಾಸ್ತಿ ಪುಟಿಯುತ್ತದೆ ಮತ್ತು ಆಸ್ಸೀ ಬೌಲರ್​ಗಳು ನಿಖರವಾದ ಲೈನ್ ಅಂಡ್ ಲೆಂಗ್ತ್ ಕಾಯ್ದುಕೊಳ್ಳುತ್ತಾರೆ. ಅವರು ಇಲ್ಲೂ ಮಿಂಚುತ್ತಾರೆಯೇ ಎನ್ನುವುದು ನಾಳೆ ಗೊತ್ತಾಗುತ್ತದೆ. ಅವರ ಜೊತೆಗಾರನಾಗಿ ಆಡಲಿರುವ ಶುಭ್​ಮನ್ ಗಿಲ್ ಎರಡನೆ ಟೆಸ್ಟ್​ನಲ್ಲಿ ಈ ಆವೃತ್ತಿಗೆ ಬೇಕಾಗುವ ಟೆಕ್ನಿಕ್ ಮತ್ತು ಶಿಸ್ತು ಎರಡನ್ನೂ ಪ್ರದರ್ಶಿಸಿದರು. ಈ ಹೊಸ ಜೋಡಿ ಯಶ ಕಾಣಲಿ ಅಂತ ಭಾರತೀಯರೆಲ್ಲ ಪ್ರಾರ್ಥಿಸುತ್ತಿದ್ದಾರೆ.

India vs Australia Test Series | ಮೆಲ್ಬರ್ನ್ ಪಂದ್ಯ ವೀಕ್ಷಿಸಿದ ಪ್ರೇಕ್ಷಕನೊಬ್ಬನಿಗೆ ಕೊರೊನಾ ಪಾಸಿಟಿವ್

Published On - 8:28 pm, Wed, 6 January 21

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ