Updated on: Aug 03, 2021 | 3:41 PM
ಕ್ರಿಕೆಟ್ಗೂ ಅಥ್ಲೀಟ್ಗೂ ಎತ್ತಣಿಂದೆತ್ತಣ ಸಂಬಂಧವಯ್ಯಾ ಎಂದು ಕೇಳುವವರೇ ಹೆಚ್ಚು. ಅದರಲ್ಲೂ ವಿಶ್ವದ ಹಲವು ಕ್ರೀಡೆಗಳು ಒಲಿಂಪಿಕ್ನಲ್ಲಿ ಒಳಪಟ್ಟರೂ ಕ್ರಿಕೆಟ್ ಅನ್ನು ಇನ್ನೂ ಕೂಡ ಪರಿಗಣಿಸಲಾಗಿಲ್ಲ. ಅದಾಗ್ಯೂ ಕ್ರಿಕೆಟಿಗನೊಬ್ಬನ ಮಗ ಇದೀಗ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್ನಲ್ಲೂ ಕ್ರಿಕೆಟ್ ಚರ್ಚೆಯಾಗುವಂತೆ ಮಾಡಿದ್ದಾನೆ.
ಹೌದು, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪುರುಷರ 400 ಮೀ ಹರ್ಡಲ್ಸ್ ಓಟದಲ್ಲಿ ರೈ ಬೆಂಜಮಿನ್ 2ನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾನೆ. ಅಮೆರಿಕಾವನ್ನು ಪ್ರತಿನಿಧಿಸಿರುವ ರೈ ಬೆಂಜಮಿನ್ ಅವರ ತಂದೆ ವಿನ್‌ಸ್ಟನ್ ಬೆಂಜಮಿನ್.
ವಿನ್‌ಸ್ಟನ್ ಬೆಂಜಮಿನ್ ಮಾಜಿ ವೆಸ್ಟ್ ಇಂಡೀಸ್ ಕ್ರಿಕೆಟಿಗ ಎಂಬುದು ಇಲ್ಲಿ ವಿಶೇಷ. 1980-90 ರಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದ ಬೆಂಜಮಿನ್ 21 ಟೆಸ್ಟ್ ಹಾಗೂ 81 ಏಕದಿನ ಪಂದ್ಯಗಳನ್ನಾಡಿದ್ದಾರೆ. ವೇಗದ ಬೌಲರ್ ಆಗಿ ಗುರಿತಿಸಿಕೊಂಡಿದ್ದ ಬೆಂಜಮಿನ್ ಒಟ್ಟು 161 ಅಂತಾರಾಷ್ಟ್ರೀಯ ವಿಕೆಟ್ ಪಡೆದು ಮಿಂಚಿದ್ದರು.
ಇದೀಗ ಅವರ ಮಗ ರೈ ಬೆಂಜಮಿನ್ ಟೋಕಿಯೊದ ಒಲಿಂಪಿಕ್ನಲ್ಲಿ 400 ಮೀಟರ್ ಹರ್ಡಲ್ಸ್‌ನ ಫೈನಲ್ ರನ್ನಿಂಗ್ ಅನ್ನು 46.17 ಸೆಕೆಂಡುಗಳಲ್ಲಿ ಪೂರೈಸಿ ಬೆಳ್ಳಿ ಪದಕ ಗೆದ್ದಿದ್ದಾರೆ. ಬೆಂಜಮಿನ್ ಅವರ ಕುಟುಂಬ ಮೂಲತಃ ಕೆರಿಬಿಯನ್ ದ್ವೀಪವಾದ ಆಂಟಿಗುವಾ ನಿವಾಸಿ. ಆದರೆ ಬಾಲ್ಯದಲ್ಲೇ ರೈ ತಮ್ಮ ತಾಯಿಯೊಂದಿಗೆ ನ್ಯೂಯಾರ್ಕ್‌ಗೆ ತೆರಳಿ ಅಲ್ಲಿನ ಪೌರತ್ವ ಪಡೆದಿದ್ದರು. ಇದೀಗ ಒಲಿಂಪಿಕ್ಸ್‌ನಲ್ಲಿ ಅಮೆರಿಕವನ್ನು ಪ್ರತಿನಿಧಿಸಿ ಪದಕ ತಂದುಕೊಟ್ಟಿದ್ದಾರೆ.
Tokyo Olympics 2020, Tokyo Olympics 2021, Rai Benjamin, Winston Benjamin, Sanjay Manjrekar, Rai and Winston Benjamin, West indies cricketer winston benjamin