AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ravi Kumar Dahiya: ರಿಯಲ್ ಲೈಫ್ ಬಾಹುಬಲಿ ರವಿ ದಹಿಯಾ: ಒಲಿಂಪಿಕ್ಸ್ ಪದಕ ವಿಜೇತನ ಶಿವಭಕ್ತಿಗೆ ಅಭಿಮಾನಿಗಳ ಸಲಾಂ

ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕು ಎಂದು ರವಿ ದಹಿಯಾ ಹಾಗೂ ಕುಟುಂಬಸ್ಥರು ಮನೆಯಲ್ಲಿ ಹರಕೆ ಕಟ್ಟಿದ್ದರು. ಅದರಂತೆ ತವರಿಗೆ ವಾಪಸ್​ ಆಗಿ ಶಿವಲಿಂಗಕ್ಕೆ ಜಲಾಭಿಷೇಕ ನೆರವೇರಿಸಿದ್ದಾರೆ.

Ravi Kumar Dahiya: ರಿಯಲ್ ಲೈಫ್ ಬಾಹುಬಲಿ ರವಿ ದಹಿಯಾ: ಒಲಿಂಪಿಕ್ಸ್ ಪದಕ ವಿಜೇತನ ಶಿವಭಕ್ತಿಗೆ ಅಭಿಮಾನಿಗಳ ಸಲಾಂ
Ravi Dahiya
TV9 Web
| Updated By: Vinay Bhat|

Updated on: Aug 24, 2021 | 3:18 PM

Share

ಇತ್ತೀಚೆಗಷ್ಟೆ ಮುಕ್ತಾಯಗೊಂಡ ಟೋಕಿಯೊ ಒಲಿಂಪಿಕ್ಸ್ 2020 (Tokyo Olympics 2020) ರಲ್ಲಿ ಭಾರತಕ್ಕೆ ಸ್ವರ್ಣ ಪದಕ ಗೆದ್ದುಕೊಡುವ ಭರವಸೆ ಮೂಡಿಸಿದ್ದ ಕುಸ್ತಿಪಟು ರವಿ ಕುಮಾರ್‌ ದಹಿಯಾ (Ravi Kumar Dahiya), ಪುರುಷರ 57 ಕೆಜಿ ಫ್ರೀ ಸ್ಟೈಲ್‌ ವಿಭಾಗದ ಫೈನಲ್‌ನಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು. ಈ ಮೂಲಕ ತಾವು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಮೊದಲ ಪ್ರಯತ್ನದಲ್ಲೇ ಭಾರತಕ್ಕೆ ಬೆಳ್ಳಿ ಗೆದ್ದು ಕೊಟ್ಟು ವಿಶೇಷ ಸಾಧನೆ ಮಾಡಿದರು. ಸದ್ಯ ರವಿ ದಹಿಯಾ ಟೋಕಿಯೋದಿಂದ ತವರಿಗೆ ವಾಪಸ್ ಆಗಿದ್ದು ತಮ್ಮ ಹರಕೆಯನ್ನು ಪೂರ್ಣಗೊಳಿಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕು ಎಂದು ರವಿ ದಹಿಯಾ ಹಾಗೂ ಅವರ ಕುಟುಂಬಸ್ಥರು ಮನೆಯಲ್ಲಿ ಹರಕೆ ಕಟ್ಟಿದ್ದರು. ಅದರಂತೆ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದ ರವಿ ದಹಿಯಾ, ತಮ್ಮ ತವರಿಗೆ ವಾಪಸ್​ ಆಗಿ ಶಿವಲಿಂಗಕ್ಕೆ ಜಲಾಭಿಷೇಕ ನೆರವೇರಿಸಿದ್ದಾರೆ.

ಶಿವಲಿಂಗಕ್ಕೆ ಜಲಾಭಿಷೇಕಕ್ಕೆ ಮಾಡಲು ನೀರನ್ನು ಕೊಡದಲ್ಲಿ ಹೊತ್ತು ದೇವಾಲಯ ಪ್ರವೇಶಿಸುತ್ತಿರುವ ಹಾಗೂ ಲಿಂಗಕ್ಕೆ ಅಭಿಷೇಕ ಮಾಡುತ್ತಿರುವ ರವಿ ದಹಿಯಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗುತ್ತಿದೆ. ಅಲ್ಲದೆ ನೆಟ್ಟಿಗರು ಈ ಫೋಟೋಗೆ ರಿಯಲ್​ ಬಾಹುಬಲಿ ಎಂದರೆ ಅದು ಇವರೇ ಎಂದಿದ್ದು ಸಾಕಷ್ಟು ಮೆಚ್ಚುಗೆಗಳು, ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ.

ರವಿ ಕುಮಾರ್‌ ದಹಿಯಾ ದೇವರ ಮೇಲೆ ಸಾಕಷ್ಟು ನಂಬಿಕೆ ಉಳ್ಳವರಾಗಿದ್ದಾರೆ. ಈ ಹಿಂದೆ 2020ರಲ್ಲಿ ರವಿ ಹಾಗೂ ದೀಪಕ್​​ ಪೂನಿಯಾ ವಿಶ್ವದ ಎತ್ತರ ಪ್ರದೇಶದಲ್ಲಿರುವ ಶಿವನ ದೇವಾಲಯ ಉತ್ತರಾಖಂಡ ತುಂಗನಾಥಕ್ಕೆ ಟ್ರೆಕ್ಕಿಂಗ್ ಮಾಡಿದ್ದು ಭಾರೀ ಸುದ್ದಿಯಾಗಿತ್ತು.

India vs England: ಬರೋಬ್ಬರಿ 19 ವರ್ಷಗಳ ಬಳಿಕ ಲೀಡ್ಸ್​ನಲ್ಲಿ ಕಣಕ್ಕಿಳಿಯಲಿರುವ ಕೊಹ್ಲಿ ಪಡೆ: ಅಂಕಿ ಅಂಶ ಹೇಗಿದೆ?

India vs England 3rd Test: 51 ವರ್ಷಗಳಿಂದ ಈ ಪಿಚ್​ನಲ್ಲಿ ಭಾರತ ಸೋಲಿಲ್ಲದ ಸರದಾರ

(Real-Life Bahubali Tokyo Olympic Medalist Ravi Dahiya Performs Jalabhishek At Shiva Temple Photo goes viral)