Tokyo Olympics: ರೋಚಕ ಪಂದ್ಯದಲ್ಲಿ ಪಿವಿ ಸಿಂಧೂಗೆ ಜಯ: ರೌಂಡ್ 16ಗೆ ಲಗ್ಗೆ

| Updated By: Digi Tech Desk

Updated on: Jul 28, 2021 | 10:26 AM

PV Sindhu: ಹಾಂಕಾಂಗ್‌ನ ಆಟಗಾರ್ತಿ ಹಾಗೂ 34ನೇ ಶ್ರೇಯಾಂಕ ಹೊಂದಿರುವ ಚೆಯುಂಗ್‌ ಗಾನ್‌ ಯಿ ವಿರುದ್ಧ ಕಣಕ್ಕಿಳಿದ ಸಿಂಧೂ ಆಕ್ರಮಣಕಾರಿ ಆಟ ಪ್ರದರ್ಶಿಸಿದರು.

Tokyo Olympics: ರೋಚಕ ಪಂದ್ಯದಲ್ಲಿ ಪಿವಿ ಸಿಂಧೂಗೆ ಜಯ: ರೌಂಡ್ 16ಗೆ ಲಗ್ಗೆ
PV Sindhu
Follow us on

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧೂ ಮಹಿಳಾ ಸಿಂಗಲ್ಸ್‌ ಬ್ಯಾಡ್ಮಿಂಟನ್‌ ವಿಭಾಗದಲ್ಲಿ ಭರ್ಜರಿ ಆಟವಾಡುತ್ತಿದ್ದಾರೆ. ಮೊದಲ ಗೇಮ್‌ ಅನ್ನು ಕೇವಲ 13 ನಿಮಿಷಗಳಲ್ಲಿ ಕೈವಶ ಮಾಡಿಕೊಂಡಿದ್ದ ಸಿಂಧೂ, ಇಂದು ನಡೆದ ಎರಡನೇ ಸುತ್ತಿನ ಪಂದ್ಯದಲ್ಲೂ ರೋಚಕ ಗೆಲುವು ಸಾಧಿಸಿದ್ದಾರೆ.

ಹಾಂಕಾಂಗ್‌ನ ಆಟಗಾರ್ತಿ ಹಾಗೂ 34ನೇ ಶ್ರೇಯಾಂಕ ಹೊಂದಿರುವ ಚೆಯುಂಗ್‌ ಗಾನ್‌ ಯಿ ವಿರುದ್ಧ ಕಣಕ್ಕಿಳಿದ ಸಿಂಧೂ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಸಿಂಧೂ 21-9, 21-16 ಅಂಕಗಳ ಅಂತರದಲ್ಲಿ ಚೆಯುಂಗ್‌ ಗಾನ್‌ ಯಿಯನ್ನು ಸೋಲಿಸಿ ರೌಂಡ್ 16ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

 

ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮೊರೆ ಹೋಗಿದ್ದ ಪಿವಿ ಸಿಂಧೂ ಮೊದಲ ಸೆಟ್ ನಲ್ಲಿ 21-9ರಲ್ಲಿ ಮುನ್ನಡೆ ಸಾಧಿಸಿದರು. ಬಳಿಕ 2ನೇ ಸೆಟ್ ನಲ್ಲಿ ಚೆಯುಂಗ್‌ ಗಾನ್‌ ಕೊಂಚ ಮುನ್ನಡೆ ತೋರಿದರಾದೂ ತಕ್ಷಣವೇ ಕಮ್​ಬ್ಯಾಕ್ ಮಾಡಿದ ಸಿಂಧು 21-16 ಅಂತರದಲ್ಲಿ ತಮ್ಮದಾಗಿಸಿಕೊಂಡು ಜಯ ಸಾಧಿಸಿ ಟೂರ್ನಿಯ ಮುಂದಿನ ಹಂತಕ್ಕೆ ಮುನ್ನಡೆದಿದ್ದಾರೆ.

2016ರ ರಿಯೋ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತೆ ಸಿಂಧೂ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಇಸ್ರೇಲಿನ ಕೆಸ್ನಿಯಾ ಪೊಲಿಕರ್ಪೊವಾ ಎದುರು 21-7, 21-10 ನೇರ ಗೇಮ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಸುಲಭವಾಗಿ ಪಂದ್ಯದಲ್ಲಿ ಪ್ರಾಬಲ್ಯ ಮೆರೆದಿದ್ದರು. ಗ್ರೂಪ್ ‘ಜೆ’ನಲ್ಲಿ ಸ್ಥಾನ ಪಡೆದಿರುವ ಸಿಂಧೂ ಮೊದಲ ಗೇಮ್‌ನಲ್ಲಿ 13 ಅಂಕಗಳ ಭಾರೀ ಅಂತರದ ಗೆಲುವು ದಾಖಲಿಸಿದ್ದರು.

ಇತ್ತ ಮಹಿಳೆಯರ ಹಾಕಿ ಪಂದ್ಯದಲ್ಲಿ ಭಾರತ ಮತ್ತೆ ಮುಗ್ಗರಿಸಿದೆ. ಗ್ರೇಟ್ ಬಿಟನ್ ವಿರುದ್ಧ ನಡೆದ ಪಂದ್ಯದಲ್ಲಿ 1-4 ಅಂತರದಲ್ಲಿ ಸೋಲುಂಡಿರುವ ರಾಣಿ ಪಡೆ ಸತತವಾಗಿ ಮೂರನೇ ಸೋಲನುಭವಿಸಿದೆ.

ಹಾರ್ದಿಕ್ ಪಾಂಡ್ಯ ಜಾಗಕ್ಕೆ ಇಬ್ಬರು ಆಟಗಾರರನ್ನು ಆಯ್ಕೆ ಮಾಡಿದ ಸುನಿಲ್ ಗವಾಸ್ಕರ್

Krunal Pandya: ಲಂಕಾ ವಿರುದ್ಧದ ಸರಣಿಯಿಂದ ಕ್ರುನಾಲ್ ಪಾಂಡ್ಯ ಔಟ್: ಸಂಪರ್ಕದಲ್ಲಿದ್ದ 8 ಆಟಗಾರರು..?

(Tokyo Olympics PV Sindhu trumps Hong Kongs NY Cheung advances to knockout stage)

Published On - 8:38 am, Wed, 28 July 21