ವಿರಾಟ್ ಕೊಹ್ಲಿ ಟೀಂ ಇಂಡಿಯಾವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಅನೇಕ ಪ್ರಮುಖ ಪಂದ್ಯಗಳನ್ನು ಗೆಲ್ಲಿಸಿದ ಖ್ಯಾತಿ ವಿರಾಟ್ ಕೊಹ್ಲಿ ಅವರಿಗಿದೆ. ಇನ್ನು, ವಿರಾಟ್ ಯಾವಾಗಲೂ ತುಂಬಾನೇ ಅತ್ಯುತ್ಸಾಹದೊಂದಿಗೆ ಮೈದಾನಕ್ಕೆ ಇಳಿಯುತ್ತಾರೆ. ಅವರು ಕೆಲವೊಮ್ಮೆ ಮೈದಾನದಲ್ಲಿ ತೋರುವ ಸಿಟ್ಟು ಅನೇಕರಿಗೆ ಇಷ್ಟವಾಗುವುದಿಲ್ಲ. ಇಂತಹ ವಿರಾಟ್ ಕೊಹ್ಲಿ ಬಗ್ಗೆ ಈಗ ಅಚ್ಚರಿಯ ವಿಚಾರ ಒಂದು ಹೊರ ಬಿದ್ದಿದೆ. ಅದೇನೆಂದರೆ, ವಿರಾಟ್ ಮನೆಯಲ್ಲಿ ಕೆಲಸ (Household Chores) ಮಾಡೋಕೆ ಯಾರೊಬ್ಬರೂ ಇಲ್ಲವಂತೆ! ವಿರಾಟ್ ಹಾಗೂ ಅನುಷ್ಕಾನೇ ಎಲ್ಲ ಕೆಲಸವನ್ನೂ ಮಾಡುತ್ತಾರಂತೆ!
ಟೀಂ ಇಂಡಿಯಾ ಮಾಜಿ ಸೆಲೆಕ್ಟರ್ ಸರಂದೀಪ್ ಸಿಂಗ್ ಅವರು ಕುತೂಹಲಕಾರಿ ವಿಚಾರವನ್ನು ಬಹಿರಂಗ ಮಾಡಿದ್ದಾರೆ. ಭಾರತಕ್ಕಾಗಿ 3 ಟೆಸ್ಟ್ ಮತ್ತು 5 ಏಕದಿನ ಪಂದ್ಯಗಳನ್ನು ಆಡಿದ ಮಾಜಿ ಬ್ಯಾಟ್ಸ್‌ಮನ್ ಮತ್ತು ಬೌಲರ್ ಸರಂದೀಪ್ ಅವರು ಕೊಹ್ಲಿ ಮನೆಗೆ ತೆರಳಿದ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.
ಮನೆಯಲ್ಲಿ ಕೆಲಸ ಮಾಡೋಕೆ ಕೊಹ್ಲಿ ಯಾರನ್ನೂ ಇಟ್ಟುಕೊಂಡಿಲ್ಲ. ಹೀಗಾಗಿ, ಬಂದ ಅತಿಥಿಗಳಿಗೆ ವಿರಾಟ್ ಹಾಗೂ ಅವರ ಪತ್ನಿಯೇ ಊಟ ಬಡಿಸಿದ್ದರು. ವಿರಾಟ್ ಬಗ್ಗೆ ಎಲ್ಲಾ ಆಟಗಾರರು ಗೌರವ ಹೊಂದಿದ್ದಾರೆ. ಕೊಹ್ಲಿ ತುಂಬಾನೇ ವಿನಮ್ರವಾಗಿ ನಡೆದುಕೊಳ್ಳುತ್ತಾರೆ ಎಂದು ಸರಂದೀಪ್ ಹೇಳಿದ್ದಾರೆ.
ವಿರಾಟ್ ಅಗ್ರೆಸ್ಸಿವ್ನೆಸ್ ಬಗ್ಗೆ ಮಾತನಾಡಿರುವ ಸರಂದೀಪ್, ವಿರಾಟ್ ಕ್ಯಾಪ್ಟನ್ ಆಗಿರುವುದರಿಂದ ಅವರು ಅಗ್ರೆಸ್ಸಿವ್ ಆಗಿ ಇರಬೇಕು. ಅವರು ಯಾವುದೇ ಒತ್ತಡ ಇದ್ದರೂ ಅದನ್ನು ನಿಭಾಯಿಸುತ್ತಾರೆ ಮತ್ತು ಆ ಕ್ಷಣದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ-ಅನುಷ್ಕಾ ದಂಪತಿ ಜನವರಿ ತಿಂಗಳಲ್ಲಿ ಕುಟುಂಬಕ್ಕೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದರು. ಈ ಕಾರಣಕ್ಕೆ ವಿರಾಟ್ ಆಸ್ಟ್ರೇಲಿಯಾದಲ್ಲಿ ಮೊದಲ ಟೆಸ್ಟ್ ಮಾತ್ರ ಆಡಿ ಭಾರತಕ್ಕೆ ವಾಪಾಸಾಗಿದ್ದರು. ಹೆಣ್ಣು ಮಗು ಜನಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದರು. ಮಗಳಿಗೆ ವಮಿಕಾ ಎಂದು ನಾಮಕರಣ ಮಾಡಲಾಗಿತ್ತು.
ಸದ್ಯ, ವಿರಾಟ್ ಇಂಗ್ಲೆಂಡ್ ವಿರುದ್ಧದದ ಟೆಸ್ಟ್ಗೆ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಮೊದಲ ಟೆಸ್ಟ್ ಇಂಗ್ಲೆಂಡ್ ಗೆದ್ದರೆ, ಎರಡನೇ ಟೆಸ್ಟ್ಅನ್ನು ಟೀಂ ಇಂಡಿಯಾ ವಶಪಡಿಸಿಕೊಂಡಿದೆ. ಮೂರನೇ ಟೆಸ್ಟ್ 24ರಿಂದ ಅಹ್ಮದಾಬಾದ್ನಲ್ಲಿ ನಡೆಯಲಿದೆ.
ಇದನ್ನೂ ಓದಿ: IPL Auction 2021: ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಜತೆ ಆಡಲು ಕಾತುರನಾಗಿದ್ದೇನೆ: ಗ್ಲೆನ್ ಮ್ಯಾಕ್ಸ್ವೆಲ್