ಸ್ವಿಜರ್ಲ್ಯಾಂಡ್​ನಲ್ಲಿ ಹೊಸ ವರ್ಷ ಬರಮಾಡಿಕೊಂಡ ಅನುಷ್ಕಾ ವಿರಾಟ್

ಸ್ವಿಜರ್ಲ್ಯಾಂಡ್​ನಲ್ಲಿ ಹೊಸ ವರ್ಷ ಬರಮಾಡಿಕೊಂಡ ಅನುಷ್ಕಾ ವಿರಾಟ್

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಸ್ವಿಡ್ಜರ್ಲೆಂಡ್​ನಲ್ಲಿ ಹೊಸ ವರ್ಷವನ್ನ ಸ್ವಾಗತಿಸಿಕೊಂಡಿದ್ದಾರೆ. ಹಾಲಿಡೇ ಟೈಮ್ ಎಂಜಾಯ್ ಮಾಡ್ತಿರೋ ವಿರುಷ್ಕಾ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಅಪ್​ಲೋಡ್ ಮಾಡಿ, ತಾವೆಷ್ಟು ಖುಷಿಯಾಗಿದ್ದೇವೆ ಅನ್ನೋದನ್ನ ಅಭಿಮಾನಿಗಳಿಗೂ ತಿಳಿಸಿದ್ದಾರೆ.

2019ರ ವರ್ಷದ ಕೊನೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಗೆದ್ದು. ಗೆಲುವಿನ ಹರುಷದೊಂದಿಗೆ ಹೊಸ ವರ್ಷವನ್ನ ಎದುರು ನೋಡೋದಕ್ಕೆ ಟೀಮ್ ಇಂಡಿಯಾ ಕ್ರಿಕೆಟಿಗರು ಕಾದು ಕುಳಿತಿದ್ರು.

ಅಂತೆಯೇ ಟೀಮ್ ಇಂಡಿಯಾ ಕ್ರಿಕೆಟಿಗರು ಹೊಸ ವರುಷವನ್ನ ಕಲರ್​ಫುಲ್ ಆಗಿ ಬರಮಾಡಿಕೊಂಡಿದ್ದಾರೆ. ಅದ್ರಲ್ಲೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಸ್ವಿಡ್ಜರ್ಲೆಂಡ್​ನಲ್ಲಿ ಹೊಸ ವರ್ಷವನ್ನ ಸ್ವಾಗತಿಸಿಕೊಂಡಿದ್ದಾರೆ.

ವರ್ಷವಿಡೀ ಕ್ಯಾಪ್ಟನ್ ಕೊಹ್ಲಿ ಕ್ರಿಕೆಟ್​ನಲ್ಲಿ ಬ್ಯುಸಿಯಾದ್ರೆ, ನಟಿ ಅನುಷ್ಕಾ ಶರ್ಮಾ ಸಿನಿಮಾದಲ್ಲಿ ಬ್ಯುಸಿಯಾಗಿರ್ತಾಳೆ. ಆದ್ರೆ ಈ ಬಾರಿ ಹೊಸ ವರ್ಷಕ್ಕೆ ಬಿಡುವು ಮಾಡಿಕೊಂಡ ಈ ಜೋಡಿ, ಸ್ವಿಡ್ಜರ್ಲೆಂಡ್​ಗೆ ಪ್ರಯಾಣ ಬೆಳೆಸಿತ್ತು.

ಸ್ವಿಡ್ಜರ್ಲೆಂಡ್​ನಲ್ಲಿ ಹಾಲಿಡೇ ಟೈಮ್ ಎಂಜಾಯ್ ಮಾಡ್ತಿರೋ ವಿರುಷ್ಕಾ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನ ಹಾಕಿ, ತಾವೆಷ್ಟು ಖುಷಿಯಾಗಿದ್ದೇವೆ ಅನ್ನೋದನ್ನ ಅಭಿಮಾನಿಗಳಿಗೂ ತಿಳಿಸುತ್ತಿದ್ರು.

ಮೊನ್ನೆಯೇ ಈ ಜೋಡಿ ಹೊಸ ವರ್ಷವನ್ನ ಬರಮಾಡಿಕೊಳ್ಳೋಕೆ ಎದುರು ನೋಡುತ್ತಿದ್ದೇವೆ ಅಂತಾ ಫೊಟೋ ಹಾಕಿ, ಶೀರ್ಷಿಕೆ ನೀಡಿದ್ರು. ಇಂದು ಮಧ್ಯರಾತ್ರಿ 12ಕ್ಕೆ ಈ ಜೋಡಿ ಹೊಸ ವರ್ಷವನ್ನ ನ್ಯೂಜಿಲೆಂಡ್​ನಲ್ಲಿ ಸಂಭ್ರಮದಿಂದ ಬರಮಾಡಿಕೊಂಡು ಎಂಜಾಯ್ ಮಾಡಿದೆ. ಅಷ್ಟೇ ಅಲ್ಲ. ಅಡ್ವಾನ್ಸ್ ಆಗಿ ಅಭಿಮಾನಿಗಳಿಗೆ ಹೊಸ ವರ್ಷದ ಶುಭಕಾಮನೆಗಳನ್ನ ಕೋರಿದ್ದಾರೆ.

ಒಟ್ನಲ್ಲಿ ಸ್ವಿಜರ್ಲ್ಯಾಂಡ್​ನಲ್ಲೇ ಇರುವ ವಿರುಷ್ಕಾ ಜೋಡಿ ಚುಮು ಚುಮು ಚಳಿಯಲ್ಲೇ ಹಾಟ್ ಹಾಟ್ ಆಗಿ ಹೊಸ ವರ್ಷವನ್ನ ವೆಲ್ಕಮ್ ಮಾಡಿ ಖುಷಿ ಪಟ್ಟಿದ್ದಾರೆ.

Click on your DTH Provider to Add TV9 Kannada