India vs England: ಟೀಮ್ ಇಂಡಿಯಾ ನಾಯಕ ಕೊಹ್ಲಿಯನ್ನು ಮಾಡರ್ನ್ ವಿವ್ ರಿಚರ್ಡ್ಸ್​ ಎಂದ ರಮೀಜ್ ರಾಜಾ

ಭಾರತ ಮತ್ತು ಪಾಕಿಸ್ತಾನ ನಡುವೆ ರಾಜತಾಂತ್ರಿಕ ಸಂಬಂಧಗಳು  ಸರಿಯಿಲ್ಲ. ಆದರೆ ಕ್ರಿಕೆಟ್​ ವಿಷಯಕ್ಕೆ ಬಂದರೆ ಈ ನೆರೆ ರಾಷ್ಟ್ರಗಳ ನಡುವೆ ಸೌಹಾರ್ದಯುತ ಬಾಂಧವ್ಯ ಇರೋದು ಸುಳ್ಳಲ್ಲ. ರಾಜಕೀಯದ ಹಿನ್ನೆಲೆಯಲ್ಲಿ ಎರಡು ದೇಶಗಳ ನಡುವಿನ ಕ್ರೀಡಾ ಸಂಬಂಧಗಳು ಸಹ ಹದಗೆಟ್ಟಿರುವುದು ನಿಜ. ಆದರೆ ಪಾಕಿಸ್ತಾನದ ಮಾಜಿ ಮತ್ತು ಹಾಲಿ ಆಟಗಾರರರಿಗೆ ಭಾರತದ ಕ್ರಿಕೆಟ್​ ಆಟಗಾರರ ಮೇಲೆ ಎಲ್ಲಿಲ್ಲದ ಅಕ್ಕರೆ, ಪ್ರೀತಿ. ಪಾಕಿಸ್ತಾನದ ಈಗಿನ ಗ್ರೇಟ್ ಬ್ಯಾಟ್ಸ್​ಮನ್ ಬಾಬರ್ ಆಜಂ, ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರ ವಿಡಿಯೊಗಳನ್ನು […]

India vs England: ಟೀಮ್ ಇಂಡಿಯಾ ನಾಯಕ ಕೊಹ್ಲಿಯನ್ನು ಮಾಡರ್ನ್ ವಿವ್ ರಿಚರ್ಡ್ಸ್​ ಎಂದ ರಮೀಜ್ ರಾಜಾ
ವಿರಾಟ್​ ಕೊಹ್ಲಿ
Arun Belly

|

Mar 19, 2021 | 6:22 PM

ಭಾರತ ಮತ್ತು ಪಾಕಿಸ್ತಾನ ನಡುವೆ ರಾಜತಾಂತ್ರಿಕ ಸಂಬಂಧಗಳು  ಸರಿಯಿಲ್ಲ. ಆದರೆ ಕ್ರಿಕೆಟ್​ ವಿಷಯಕ್ಕೆ ಬಂದರೆ ಈ ನೆರೆ ರಾಷ್ಟ್ರಗಳ ನಡುವೆ ಸೌಹಾರ್ದಯುತ ಬಾಂಧವ್ಯ ಇರೋದು ಸುಳ್ಳಲ್ಲ. ರಾಜಕೀಯದ ಹಿನ್ನೆಲೆಯಲ್ಲಿ ಎರಡು ದೇಶಗಳ ನಡುವಿನ ಕ್ರೀಡಾ ಸಂಬಂಧಗಳು ಸಹ ಹದಗೆಟ್ಟಿರುವುದು ನಿಜ. ಆದರೆ ಪಾಕಿಸ್ತಾನದ ಮಾಜಿ ಮತ್ತು ಹಾಲಿ ಆಟಗಾರರರಿಗೆ ಭಾರತದ ಕ್ರಿಕೆಟ್​ ಆಟಗಾರರ ಮೇಲೆ ಎಲ್ಲಿಲ್ಲದ ಅಕ್ಕರೆ, ಪ್ರೀತಿ. ಪಾಕಿಸ್ತಾನದ ಈಗಿನ ಗ್ರೇಟ್ ಬ್ಯಾಟ್ಸ್​ಮನ್ ಬಾಬರ್ ಆಜಂ, ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರ ವಿಡಿಯೊಗಳನ್ನು ನೋಡಿ ಬ್ಯಾಟಿಂಗ್​ನಲ್ಲಿ ಸುಧಾರಣೆ ತಂದುಕೊಂಡೆ ಅಂತ ಹಲವಾರು ಸಲ ಹೇಳಿದ್ದಾರೆ. ಪಾಕ್​ನ ಮಾಜಿ ಗ್ರೇಟ್ ಜಹೀರ್ ಅಬ್ಬಾಸ್, ಕೊಹ್ಲಿ ಬ್ಯಾಟ್​ ಮಾಡುತ್ತಿದ್ದರೆ ಊಟ, ನೀರು ಬಿಟ್ಟು ಟಿವಿ ಮುಂದೆ ಕೂರುತ್ತೇನೆ ಅಂತ ಹೇಳಿದ್ದಾರೆ. ಮಾಜಿ ಆರಂಭ ಆಟಗಾರ ರಮೀಜ್ ರಾಜಾ ಅವರು ಕೊಹ್ಲಿಯನ್ನು ಆಧುನಿಕ ರಿಚರ್ಡ್ಸ್​ ಎಂದು ಕರೆದಿದ್ದು, ಕೊಹ್ಲಿ ನಾನ್-ಸ್ಟ್ರೈಕರ್ ಎಂಡ್​ನಲ್ಲಿದ್ದಾಗ ಇಶಾನ್ ಕಿಷನ್ ಮತ್ತು ಸೂರ್ಯಕುಮಾರ್ ಯಾದವ್​ಗೆ ತಮ್ಮ ಮೊದಲ ಅಂತರರಾಷ್ಟ್ರೀಯ ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಮಾಡುವ ಅವಕಾಶ ಸಿಕ್ಕಿದ್ದು ಅವರಬ್ಬಿರ ಅದೃಷ್ಟವೆಂದು ಹೇಳಿದ್ದಾರೆ.

‘ಇಶಾನ್​ ಕಿಷನ್​ಗೆ ತನ್ನ ಮೊದಲ ಪಂದ್ಯದಲ್ಲೇ ವಿರಾಟ್ ಕೊಹ್ಲಿಯೊಂದಿಗೆ ಜೊತೆಯಾಟ ಒಂದರಲ್ಲಿ ಪಾಲ್ಗೊಳ್ಳುವಂಥ ಅವಕಾಶ ಸಿಕ್ಕಿದ್ದು ಅದೃಷ್ಟವೆಂದೇ ಹೇಳಬೇಕು. ಯಾಕೆಂದರೆ ಕೊಹ್ಲಿ ಈಗಿನ ಯುಗದ ಶ್ರೇಷ್ಠ ಬ್ಯಾಟ್ಸ್​ಮನ್​ ಆಗಿದ್ದಾರೆ ಮತ್ತು ಅವರನ್ನು ನಾನು ಆಧುನಿಕ ರಿಚರ್ಡ್ಸ್ ಎಂದು ಪರಿಗಣಿಸುತ್ತೇನೆ. ಆ ಅವಕಾಶ ಕಿಷನ್ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿರುತ್ತದೆ. ಮುಂಬರುವ ದಿನಗಳಲ್ಲಿ ನಾವು ಅವರಿಂದ ಬಹಳಷ್ಟನ್ನು ನಿರೀಕ್ಷಿಸುತ್ತಿದ್ದೇವೆ’ ಎಂದು ರಾಜಾ ತಮ್ಮ ಯೂಟ್ಯೂಬ್ ಚ್ಯಾನೆಲ್​ನಲ್ಲಿ ಹೇಳಿದ್ದಾರೆ.

ಕಿಷನ್ ತನ್ನ ಪಾದಾರ್ಪಣೆಯ ಪಂದ್ಯದಲ್ಲಿ ಮಿಂಚಿನ 56 ರನ್​ಗಳನ್ನು ಬಾರಿಸಿದ್ದಲ್ಲದೆ, ನಾಯಕ ಕೊಹ್ಲಿಯೊಂದಿಗೆ 93 ರನ್​ಗಳ ಜೊತೆಯಾಟದಲ್ಲಿ ಪಾಲ್ಗೊಂಡರು. ತಮ್ಮ ಎಂದಿನ ಶೈಲಿಯ ಆಟವಾಡಿದ ಕೊಹ್ಲಿ ಅಧಿಕಾರಯುತ 73 ರನ್ ಬಾರಿಸಿ ಅಜೇಯರಾಗುಳಿದರು.

Suryakumar Yadav

ಸೂರ್ಯಕುಮಾರ್ ಯಾದವ್

‘ಕಿಷನ್ ಅವರಲ್ಲಿ ಅಪಾರವಾದ ಸಾಮರ್ಥ್ಯ ಮತ್ತು ಪ್ರತಿಭೆಯದೆ. ಪವರ್​-ಹಿಟ್ಟಿಂಗ್​ಗೆ ಅವರು ನೈಜ್ಯ ಉದಾಹರಣೆ. ಗಾತ್ರದಲ್ಲಿ ಕುಳ್ಳನಾದರೂ ಅದ್ಭುತವಾದ ಟೈಮಿಂಗ್​ನೊಂದಿಗೆ ಹೊಡೆತಗಳನ್ನು ಬಾರಿಸುತ್ತಾರೆ. ವಿಕೆಟ್​ನ ಎರಡೂ ಭಾಗಗಲ್ಲಿ ಶಾಟ್​ಗಳನ್ನು ಆಡುತ್ತಾರೆ ಮತ್ತು ಸಲೀಸಾಗಿ ಸಿಕ್ಸರ್​ಗಳನ್ನು ಬಾರಿಸುತ್ತಾರೆ. ಮೊದಲ ಪಂದ್ಯದಲ್ಲೇ ಅರ್ಧ ಶತಕ ಬಾರಿಸಿರುವ ಅವರು ಲಯದಲ್ಲಿದ್ದರೆ ನಿಸ್ಸಂದೇಹವಾಗಿ ಗೇಮ್-ಚೇಂಜರ್,’ ಎಂದು ರಾಜಾ ಹೇಳಿದ್ದಾರೆ.

‘ಕಿಷನ್​ಗೆ ಮುಕ್ತವಾಗಿ ಆಡುವ ಅವಕಾಶ ಸಿಕ್ಕಿತು, ಮತ್ತೊಂದು ತುದಿಯಲ್ಲಿ ಖುದ್ದು ನಾಯಕನೇ ಇದ್ದು ಅವರ ಪ್ರತಿಯೊಂದು ಹೊಡೆತವನ್ನು ಚಪ್ಪಾಳೆ ತಟ್ಟಿ ಅಭಿನಂದಿಸಿದ್ದು ಅವರಿಗೆ ಅದ್ಭುತವಾದ ವಾತಾವರಣವನ್ನು ಕಲ್ಪಿಸಿತ್ತು. ಬೌಂಡರಿ ಮತ್ತು ಸಿಕ್ಸರ್​ಗಳನ್ನು ಬಾರಿಸುವ ಮುಕ್ತ ಅವಕಾಶವನ್ನು ಕಿಷನ್​ಗೆ ಒದಗಿಸಲಾಗಿತ್ತು. ಹಾಗೆ ಆಡುವಾಗ ಔಟಾದರರೂ ಯಾವುದೇ ಸಮಸ್ಯೆಯಿಲ್ಲ,’ ಎಂದು ರಾಜಾ ಹೇಳಿದ್ದಾರೆ.

ಗುರುವಾರದಂದು ನಡೆದ 4ನೇ ಪಂದ್ಯದಲ್ಲಿ ಕೊಹ್ಲಿ ಕೇವಲ 1 ರನ್​ ಗಳಿಸಿ ಔಟಾದರು ಮತ್ತು ತೊಡೆಸಂದಿ ನೋವಿನಿಂದ ಬಳಲುತ್ತಿದ್ದ ಕಿಷನ್ ಆಡುವ ಇಲೆವೆನ್​ನಿಂದ ಹೊರಗುಳಿದರು. ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡುತ್ತಿರುವ ಆಟಗಾರರರಿಗೆ ಭಾರತ, ರಾಷ್ಟ್ರೀಯ ತಂಡದಲ್ಲಿ ಅವಕಾಶ ನೀಡುತ್ತಿರುವುದು ಶ್ಲಾಘನೀಯ ಎಂದು ರಾಜಾ ಹೇಳಿದ್ದಾರೆ.

ಎರಡನೇ ಪಂದ್ಯದಲ್ಲಿ ಕಿಷನ್ ಸ್ಟಾರ್​ ಪರ್ಫಾರ್ಮರ್ ಅಗಿ ಹೊರಹೊಮ್ಮಿದರೆ ನಾಲ್ಕನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 31 ಎಸೆತಗಳಲ್ಲಿ 27ರನ್ ಬಾರಿಸಿ ಎಲ್ಲಾ ಶ್ರೇಯಸ್ಸನ್ನು ತಮ್ಮೆಡೆ ಬಾಚಿಕೊಂಡರು. ಅವರ ಆಕ್ರಮಣಕಾರಿ ಆಟದಿಂದಾಗೇ ಭಾರತಕ್ಕೆ 185 ರನ್​ಗಳ ಮೊತ್ತ ಗಳಿಸಲು ಸಾಧ್ಯವಾಯಿತು.

Rameez Raja

ರಮೀಜ್ ರಾಜಾ

ಸೂರ್ಯ ಎರಡನೇ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರೂ, ಆ ಪಂದ್ಯದಲ್ಲಿ ಅವರಿಗೆ ಬ್ಯಾಟ್​ ಮಾಡುವ ಚಾನ್ಸ್ ಸಿಕ್ಕರಲಿಲ್ಲ. ಮೂರನೇ ಪಂದ್ಯಕ್ಕೆ ಅವರನ್ನು ಡ್ರಾಪ್ ಮಾಡಲಾಗಿತ್ತು. ಹಾಗಾಗಿ ಗುರುವಾರದಂದು ಅವರು ತಮ್ಮ ಮೊದಲ ಇಂಟರ್​ನ್ಯಾಶನಲ್ ಇನ್ನಿಂಗ್ಸ್ ಆಡಿದರು.

ಸೂರ್ಯ ಅವರ ಇನ್ನಿಂಗ್ಸ್​ನಿಂದ ಭಾರಿ ಫ್ರಭಾವಕ್ಕೊಳಗಾಗಿರುವ ಬಿಸಿಸಿಐ ಅವರನ್ನು ಇಂಗ್ಲೆಂಡ್​ ವಿರುದ್ಧ ನಡೆಯುವ 3 ಒಂದು ದಿನದ ಪಂದ್ಯಗಳ ಸರಣಿಗೂ ಆಯ್ಕೆ ಮಾಡಿದೆ.

ಇದನ್ನೂ ಓದಿIndia vs England | ಭಾರತದ ಟಾಪ್ ಕ್ರಮಾಂಕ ವಿಫಲವಾದಾಗ ಮಿಡ್ಲ್ ಆರ್ಡರ್ ಪುಟಿದೇಳಬೇಕು: ರಮೀಜ್ ರಾಜಾ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada