ಯಾವುದೂ ಅಸಾಧ್ಯವಲ್ಲ ಅಂತಾ ಕ್ಯಾಪ್ಟನ್ ಕೊಹ್ಲಿಗೆ ತಿಳಿದಿದ್ದು ಯಾವಾಗ ಗೊತ್ತಾ?
ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ನ ಮೂರು ಶೈಲಿಯಲ್ಲೇ ರನ್ಗಳ ಮಳೆ ಸುರಿಸಿಸೋ ಸರದಾರ. ಸಚಿನ್ ದಾಖಲೆಗಳನ್ನು ಬರೆಯೋಕೆ ಹುಟ್ಟಿದ್ರೆ, ಕೊಹ್ಲಿ ದಾಖಲೆಗಳನ್ನ ಮುರಿಯೋಕೇ ಅಂತಾನೆ ಹುಟ್ಟಿದ್ದು. ಅಷ್ಟರ ಮಟ್ಟಿಗೆ ವಿರಾಟ್ ಜಾಗತಿಕ ಕ್ರಿಕೆಟ್ನಲ್ಲಿ ತಮ್ಮ ಛಾಪನ್ನು ಒತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ದಾಖಲೆ ವೀರನಾಗಿ ಗುರುತಿಸಿಕೊಂಡಿರೋ ವಿರಾಟ್ಗೆ ಅದೊಂದು ಪ್ರವಾಸ ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ ಅನ್ನೋದನ್ನ ತೋರಿಸಿಕೊಟ್ಟಿದೆ. ಅದುವೇ 2014ರಲ್ಲಿ ಟೀಮ್ ಇಂಡಿಯಾ ಕೈಗೊಂಡಿದ್ದ ಆಸ್ಟ್ರೇಲಿಯಾ ಟೂರ್. ಈ ಕಹಾನಿಯನ್ನ ವಿರಾಟ್ ಕೊಹ್ಲಿ ತಮ್ಮ ಟ್ವಿಟರ್ನಲ್ಲಿ […]
ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ನ ಮೂರು ಶೈಲಿಯಲ್ಲೇ ರನ್ಗಳ ಮಳೆ ಸುರಿಸಿಸೋ ಸರದಾರ. ಸಚಿನ್ ದಾಖಲೆಗಳನ್ನು ಬರೆಯೋಕೆ ಹುಟ್ಟಿದ್ರೆ, ಕೊಹ್ಲಿ ದಾಖಲೆಗಳನ್ನ ಮುರಿಯೋಕೇ ಅಂತಾನೆ ಹುಟ್ಟಿದ್ದು. ಅಷ್ಟರ ಮಟ್ಟಿಗೆ ವಿರಾಟ್ ಜಾಗತಿಕ ಕ್ರಿಕೆಟ್ನಲ್ಲಿ ತಮ್ಮ ಛಾಪನ್ನು ಒತ್ತಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ದಾಖಲೆ ವೀರನಾಗಿ ಗುರುತಿಸಿಕೊಂಡಿರೋ ವಿರಾಟ್ಗೆ ಅದೊಂದು ಪ್ರವಾಸ ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ ಅನ್ನೋದನ್ನ ತೋರಿಸಿಕೊಟ್ಟಿದೆ. ಅದುವೇ 2014ರಲ್ಲಿ ಟೀಮ್ ಇಂಡಿಯಾ ಕೈಗೊಂಡಿದ್ದ ಆಸ್ಟ್ರೇಲಿಯಾ ಟೂರ್.
ಈ ಕಹಾನಿಯನ್ನ ವಿರಾಟ್ ಕೊಹ್ಲಿ ತಮ್ಮ ಟ್ವಿಟರ್ನಲ್ಲಿ ಬಿಚ್ಚಿಟ್ಟಿದ್ದಾರೆ. ಌಡಿಲೇಡ್ ಟೆಸ್ಟ್ ಪಂದ್ಯದ ಕೆಲ ಫೋಟೋಗಳನ್ನ ಶೇರ್ ಮಾಡಿರೋ ವಿರಾಟ್ ಇದು ನನಗೆ ತುಂಬಾ ಪ್ರಮುಖವಾಗಿದ್ದು ಹಾಗೂ ಭಾವನಾತ್ಮಕವಾಗಿದ್ದು ಅಂತಾ ಹಂಚಿಕೊಂಡಿದ್ದಾರೆ.
ಅಭಿಮಾನಿಗಳಿಗೂ ಈ ಪಂದ್ಯ ಒಂದು ಅದ್ಭುತ ಅನುಭವ ನೀಡಿತ್ತು. ನಾವು ಪಂದ್ಯವನ್ನ ಗೆಲ್ಲೋಕೆ ಆಗ್ಲಿಲ್ಲ. ಆದ್ರೆ ಮನಸ್ಸು ಮಾಡಿದರೇ ಯಾವುದೂ ಅಸಾಧ್ಯವಲ್ಲ ಅನ್ನೋದನ್ನ ಈ ಪಂದ್ಯ ಕಲಿಸಿಕೊಟ್ಟಿತು. ನಾವು ಅತ್ಯಂತ ಕಷ್ಟವಾಗಿರೋದನ್ನ ಸಾಧಿಸಲು ಹೊರಟಿದ್ದೆವು. ಆಲ್ಮೋಸ್ಟ್ ಗುರಿಯ ಹತ್ತಿರವೂ ತಲುಪಿದ್ದೆವು. ಆದ್ರೆ ಅಂತಿಮವಾಗಿ ಗುರಿ ತಲುಪಲಾಗಲಿಲ್ಲ. ಇದು ನಮ್ಮ ಟೆಸ್ಟ್ ಪಯಣದಲ್ಲಿ ಪ್ರಮುಖ ಮೈಲಿಗಲ್ಲಾಗಿ ಉಳಿಯಲಿದೆ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.
2014 ರಲ್ಲಿ ನಡೆದ ಌಡಿಲೇಡ್ನಲ್ಲಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲ ಇನಿಂಗ್ಸ್ನಲ್ಲಿ 7 ವಿಕೆಟ್ ನಷ್ಟಕ್ಕೆ 517 ರನ್ ಕಲೆಹಾಕಿ ಡಿಕ್ಲೇರ್ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ 444 ರನ್ಗಳಿಗೆ ಆಲ್ ಔಟ್ ಆಗಿತ್ತು. ತದ ನಂತರ 2ನೇ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 290 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿತ್ತು. ಆ ಮೂಲಕ ಟೀಮ್ ಇಂಡಿಯಾಗೆ 364 ರನ್ಗಳ ಟಾರ್ಗೆಟ್ ಎದುರಾಯ್ತು. ದ್ವಿತೀಯ ಇನ್ನಿಂಗ್ಸ್ನಲ್ಲಿ ಈ ಟಾರ್ಗೆಟ್ನ ಬೆನ್ನತ್ತಿದ ಭಾರತ ಗೆಲುವಿನ ಸಮೀಪವಿರುವಾಗಲೇ 48 ರನ್ಗಳ ಅಂತರದಲ್ಲಿ ಆಲ್ ಔಟ್ ಆಗಿ ತೀವ್ರ ಮುಖಭಂಗ ಅನುಭವಿಸಿತ್ತು.
ಈ ಟೆಸ್ಟ್ ಪಂದ್ಯದ 2 ಇನ್ನಿಂಗ್ಸ್ನಲ್ಲೂ ಕೊಹ್ಲಿ ಶತಕ ಬಾರಿಸಿದ್ರು. ಎರಡನೇ ಇನ್ನಿಂಗ್ಸ್ನಲ್ಲಿ ತಂಡವನ್ನ ಗೆಲುವಿನ ದಡ ಸೇರಿಸಲು ಹೋರಾಡಿದ್ರು. ಆದ್ರೆ, ಇತರೆ ಬ್ಯಾಟ್ಸ್ಮನ್ಗಳ ಸಾಥ್ ಸಿಗಲಿಲ್ಲ. ಕೊನೆ ಹಂತದಲ್ಲಿ ತಂಡವು ಗೆಲುವಿಗೆ ಹತ್ತಿರವಿದ್ದಾಗ ಕೊಹ್ಲಿ ಔಟಾಗಿದ್ರು. ಹೀಗಾಗಿ ಟೀಮ್ ಇಂಡಿಯಾ ಆ ಮ್ಯಾಚ್ನಲ್ಲಿ ಸೋಲನ್ನು ಅನುಭವಿಸಿತ್ತು.
(1/2) Throwback to this very special and important test in our journey as the test team that we are today. Adelaide 2014 was a game filled with emotion on both sides and an amazing one for people to watch too. Although we didn't cross the line being so close, it taught us that.. pic.twitter.com/BrgHL3ffyR
— Virat Kohli (@imVkohli) June 30, 2020
(2/2)..anything is possible if we put our mind to it because we committed to doing something which seemed very difficult to begin with but almost pulled it off. All of us committed to it. This will always remain a very important milestone in our journey as a test side. ???
— Virat Kohli (@imVkohli) June 30, 2020
Published On - 3:51 pm, Thu, 2 July 20