AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವ ಚೆಸ್ ಪ್ರತಿಭೆಗಳಿಗೆ ಚೆನೈಯಲ್ಲಿ ಅಕಾಡೆಮಿ ಸ್ಥಾಪಿಸಲಿರುವ ವಿಶ್ವನಾಥನ್ ಆನಂದ್

ಚೆಸ್ ದಂತಕತೆ ವಿಶ್ವನಾಥನ್ ಆನಂದ್ ಖಾಸಗಿ ಸಂಸ್ಥೆಯೊಂದರ ಸಹಭಾಗಿತ್ವದಲ್ಲಿ ಒಂದು ಚೆಸ್ ಅಕಾಡೆಮಿಯನ್ನು ಚೆನೈ ನಗರದಲ್ಲಿ ಶೀಘ್ರದಲ್ಲೇ ಸ್ಥಾಪಿಸಲಿದ್ದು ಭಾರತದ ಪ್ರತಿಭಾವಂತ ಯುವ ಆಟಗಾರರಿಗೆ ತರಬೇತಿ ನೀಡಲಿದ್ದಾರೆ. ಬೇರೆ ದೇಶದ ಗ್ರ್ಯಾಂಡ್ ಮಾಸ್ಟರ್​ಗಳು ಸಹ ಅಕಾಡೆಮಿಯಲ್ಲಿ ಯುವಕರನ್ನು ತರಬೇತುಗೊಳಿಸಲಿದ್ದಾರೆ.

ಯುವ ಚೆಸ್ ಪ್ರತಿಭೆಗಳಿಗೆ ಚೆನೈಯಲ್ಲಿ ಅಕಾಡೆಮಿ ಸ್ಥಾಪಿಸಲಿರುವ ವಿಶ್ವನಾಥನ್ ಆನಂದ್
ಆಟದಲ್ಲಿ ಮಗ್ನರಾಗಿರುವ ವಿಶ್ವನಾಥನ್ ಆನಂದ್
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Dec 11, 2020 | 1:10 PM

Share

ಹಾಕಿಗೆ ಧ್ಯಾನ್​ಚಂದ್, ಕ್ರಿಕೆಟ್​ಗೆ ಸಚಿನ್ ತೆಂಡೂಲ್ಕರ್ ಮತ್ತು ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಪಂಕಜ್ ಅಡ್ವಾಣಿ ಇದ್ದಂತೆ ಭಾರತೀಯ ಚೆಸ್​ಗೆ ವಿಶ್ವನಾಥನ್ ಆನಂದ್. ಈ ದಿಗ್ಗಜರು ಮತ್ತು ಇವರಂತೆ ಇನ್ನೂ ಹಲವಾರು ಕ್ರೀಡಾಪಟುಗಳು ತಾವು ಪ್ರತಿನಿಧಿಸುವ ಕ್ರೀಡೆಯಲ್ಲಿ ಭಾರತದ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ್ದಾರೆ. ಇವರೆಲ್ಲ ತಮಗೆ ಖ್ಯಾತಿ, ಹಣ, ಪ್ರತಿಷ್ಠೆ ಒದಗಿಸಿದ ಕ್ರೀಡೆಗಳಿಗೆ ತಮ್ಮ ಕೈಲಾದುದನ್ನು ವಾಪಸ್ಸು ನೀಡುತ್ತಿದ್ದಾರೆ.

ಆನಂದ್, ಚೆಸ್​ನಲ್ಲಿ ಮಾಡಿರುವ ಸಾಧನೆ ಅದ್ವಿತೀಯವಾದ್ದು. ಹಾಗೆ ನೋಡಿದರೆ, ಆನಂದ್ ರಂಗ ಪ್ರವೇಶಿಸುವ ಮೊದಲು ಭಾರತದಲ್ಲಿ ಚೆಸ್ ಜನಪ್ರಿಯ ಆಟವೆನಿಸರಲಿಲ್ಲ. 5 ಬಾರಿ ವಿಶ್ವ ಚಾಂಪಿಯನ್​ಶಿಪ್ ಗೆಲ್ಲುವ ಮೂಲಕ ಅವರು ಭಾರತದ ಯುವಪೀಳಿಗೆಯಲ್ಲಿ, ಕ್ರಿಕೆಟ್ ಹೊರತಾಗಿ ಬೇರೆ ಕ್ರೀಡೆಗಳಲ್ಲೂ ಹೆಸರು ಮಾಡಬಹುದೆನ್ನುವುದನ್ನು ತೋರಿಸಿದರು. ಈಗ ನೋಡಿ, ಅನೇಕ ಯುವ ಆಟಗಾರರು ಚದುರಂದಾಟವನ್ನು ಗಂಭೀರವಾಗಿ ತೆಗದುಕೊಂಡು ಅದರಲ್ಲಿ ಪ್ರಾವೀಣ್ಯತೆ ಸಾಧಿಸಿ ಆನಂದ್​ರಂತೆ ಹೆಸರುವಾಸಿಯಾಗುವ, ಚಾಂಪಿಯನ್​ಗಳಾಗುವ ಪ್ರಯತ್ನದಲ್ಲಿದ್ದಾರೆ.

ಯುವ ಪ್ರತಿಭೆಗಳೊಂದಿಗೆ ಆನಂದ್

ಅಂಥವರಲ್ಲಿ ಪ್ರತಿಭಾವಂತರನ್ನು ಆರಿಸಿಕೊಂಡು, ಅವರನ್ನು ವಿಶ್ವದರ್ಜೆಯ ಚೆಸ್ ಆಟಗಾರರನ್ನಾಗಿ ರೂಪಿಸಲು ಆನಂದ್, ವೆಸ್ಟ್​ಬ್ರಿಡ್ಜ್ ಕ್ಯಾಪಿಟಲ್ ಎಂಬ ಸಂಸ್ಥೆಯೊಂದಿಗೆ ಕೈಜೋಡಿಸಿ ಚೆನೈಯಲ್ಲಿ ವೆಸ್ಟ್​ಬ್ರಿಡ್ಜ್-ಆನಂದ್ ಚೆಸ್ ಅಕಾಡೆಮಿ ಸ್ಥಾಪಿಸಲಿದ್ದಾರೆ. ಮೊದಲ ಹಂತದಲ್ಲಿ ಆನಂದ್, ಭಾರತದ ಐವರು ಉದಯೋನ್ಮುಖ ಪ್ರತಿಭಾವಂತ ಅಟಗಾರರಿಗೆ ತರಬೇತಿ ನೀಡಲಿದ್ದಾರೆ. 15ರ ಪ್ರಾಯದ ಪ್ರಗ್ನಾನಂದಾ, 16 ವರ್ಷ ವಯಸ್ಸಿನ ನಿಹಾಲ್ ಸರೀನ್, 15 ವರ್ಷದ ರೌನಕ್ ಸಾಧ್ವಾನಿ, 14 ವರ್ಷ ವಯಸ್ಸಿನ ಡಿ ಗುಕೇಶ್ ಮತ್ತು ಪ್ರಗ್ನಾನಂದಾನ ಹಿರಿಯ ಸಹೋದರಿ 19 ವರ್ಷ ವಯಸ್ಸಿನ ಆರ್ ವೈಶಾಲಿ ಮೊದಲಾದವರು ಅನಂದ್ ಅವರಿಂದ ತರಬೇತಿ ಹೊಂದಲು ಆಯ್ಕೆಯಾಗಿದ್ದಾರೆ.

ಮುಂಬರುವ ದಿನಗಳಲ್ಲಿ ಅರ್ಹ ಮತ್ತು ಪ್ರತಿಭಾವಂತ ಎಳೆಯರನ್ನು ಗುರುತಿಸಿ ಅವರನ್ನು ಅಕಾಡೆಮಿಗೆ ಸೇರಿಸುವುದರ ಜತೆಗೆ ಫೆಲೋಶಿಪ್ ಕೂಡ ಒದಗಿಸಲಾಗುತ್ತದೆ ಎಂದು ಆನಂದ್ ಹೇಳಿದ್ದಾರೆ. ಅಕಾಡೆಮಿ ಸ್ಥಾಪಿಸುವ ಹಿಂದಿನ ಉದ್ದೇಶದ ಬಗ್ಗೆ ಮಾತಾಡಿದ ಆನಂದ್, ‘ ಕಳೆದೆರಡು ದಶಕಗಳಿಂದ ಚೆಸ್ ಭಾರತದಲ್ಲಿ ಬಹಳ ಪ್ರಗತಿ ಸಾಧಿಸಿದೆ. ವಿಶ್ವ ಚಾಂಪಿಯನ್​ಗಳಾಗಿ ಹೊರಹೊಮ್ಮಬಹುದಾದ ಪ್ರತಿಭಾವಂತ ಯುವಕರು ದೇಶದಲ್ಲಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ದೊರೆತರೆ, ವಿಶ್ವದ ಟಾಪ್-10 ಆಟಗಾರರಲ್ಲಿ ಸ್ಥಾನ ಪಡೆದುಕೊಳ್ಳುವುದರಲ್ಲಿ ಅನುಮಾನವಿಲ್ಲ,’ ಎಂದರು.

ಕೊವಿಡ್-19 ಸೃಷ್ಟಿಸಿರುವ ಸ್ಥಿತಿಯಿಂದಾಗಿ ತರಬೇತಿಯ ಆರಂಭಿಕ ಹಂತ ವರ್ಚ್ಯುಯಲ್ ಆಗಿ ನಡೆಯಲಿದೆ. ಈಗಿನ ಸ್ಥಿತಿಯನ್ನು ಯುವ ಆಟಗಾರರು ಸದುಪಯೋಗಪಡಿಸಿಕೊಳ್ಳಬಹುದೆಂದು ಆನಂದ್ ಹೇಳುತ್ತಾರೆ.

ಆನಂದ್​ರೊಂದಿಗೆ ಕೈಜೋಡಿಸಿರುವ ವೆಸ್ಟ್​ಬ್ರಿಡ್ಜ್ ಸಂಸ್ಥೆ

‘‘ದೇಶದಲ್ಲಿ ಈಗ ಜಾರಿಯಲ್ಲಿರುವ ಸ್ಥಿತಿ ಉದಯೋನ್ಮುಖ ಆಟಗಾರರಿಗೆ ತಮ್ಮ ಏಕಾಗ್ರತೆಯನ್ನು ಬಲಪಡಿಸಿಕೊಳ್ಳಲು ನೆರವಾಗುತ್ತದೆ. ಈ ಆವಧಿಯಲ್ಲಿ ಅವರು ತಮ್ಮ ದೌರ್ಬಲ್ಯಗಳನ್ನು ದೂರ ಮಾಡಿಕೊಳ್ಳಬಹುದು. ತಮ್ಮ ದೀರ್ಘಾವಧಿಯ ಗುರಿಯ ಮೇಲೆ ಫೋಕಸ್ ಮಾಡಲು ಅವರಗೀಗ ಒಳ್ಳೆಯ ಅವಕಾಶ,’’ ಎಂದು ಆನಂದ್ ಹೇಳಿದರು.

ಇದೇ ಸಂದರ್ಭದಲ್ಲಿ ಮಾತಾಡಿದ ವೆಸ್ಟ್​ಬ್ರಿಡ್ಜ್ ಕ್ಯಾಪಿಟಲ್ ಸಂಸ್ಥೆಯ ಸಹ-ಸಂಸ್ಥಾಪಕ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಘಲ್, ‘ಲೆಜೆಂಡರಿ ಆಟಗಾರ ಆನಂದ್ ಅವರ ಸಹಭಾಗಿತ್ವದಲ್ಲಿ ಅಕಾಡೆಮಿಯನ್ನು ಶುರುಮಾಡಿರುವುದು ಥ್ರಿಲ್ಲಿಂಗ್ ಅನಿಸುತ್ತಿದೆ,’ ಎಂದು ಹೇಳಿದರು.

ಆನಂದ್ ಅವರಲ್ಲದೆ, ಜರ್ಮನ್ ಗ್ರ್ಯಾಂಡ್ ಮಾಸ್ಟರ್ ಆರ್ಥರ್ ಜುಸ್ಸುಪೊ, ಪೊಲಿಶ್ ಜಿಎಮ್ ಗ್ರೆಗೊರ್ ಗಜೆವ್​ಸ್ಕಿ ಮತ್ತು ಭಾರತದ ಜಿಎಮ್ ಸಂದೀಪನ್ ಚಂದಾ ಯುವ ಅಟಗಾರರಿಗೆ ತರಬೇತಿ ನೀಡಲಿದ್ದಾರೆ.

Follow Us
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್