Wimbledon 2022: ಒಂದೇ ದಿನದಲ್ಲಿ 2 ಪ್ರಕರಣ; ಕೊರೊನಾ ಸೋಂಕಿನಿಂದ ಕಳೆದ ವರ್ಷದ ಫೈನಲಿಸ್ಟ್ ಟೂರ್ನಿಯಿಂದ ಔಟ್!

| Updated By: ಪೃಥ್ವಿಶಂಕರ

Updated on: Jun 28, 2022 | 5:37 PM

Wimbledon 2022: ಪ್ರತಿಷ್ಠಿತ ಗ್ರ್ಯಾಂಡ್ ಸ್ಲಾಮ್ ವಿಂಬಲ್ಡನ್ 2022 ಚಾಂಪಿಯನ್‌ಶಿಪ್‌ನ ಮೊದಲ ಎರಡು ದಿನಗಳಲ್ಲಿ ಕೊರೊನಾ ಪಂದ್ಯಾವಳಿಯ ಮೇಲೆ ವಕ್ರದೃಷ್ಠಿ ಬೀರಿದೆ. ಇದರ ಫಲವಾಗಿ ಮೊದಲ ಸುತ್ತಿನಲ್ಲಿಯೇ ಇಬ್ಬರು ಪ್ರಮುಖ ಆಟಗಾರರು ಒಂದು ಪಂದ್ಯ ಆಡದೆ ಪಂದ್ಯಾವಳಿಯಿಂದ ಹೊರ ನಡೆದಿದ್ದಾರೆ.

Wimbledon 2022: ಒಂದೇ ದಿನದಲ್ಲಿ 2 ಪ್ರಕರಣ; ಕೊರೊನಾ ಸೋಂಕಿನಿಂದ ಕಳೆದ ವರ್ಷದ ಫೈನಲಿಸ್ಟ್ ಟೂರ್ನಿಯಿಂದ ಔಟ್!
ಮ್ಯಾಟಿಯೊ ಬೆರೆಟ್ಟಿನಿ
Follow us on

ಪ್ರತಿಷ್ಠಿತ ಗ್ರ್ಯಾಂಡ್ ಸ್ಲಾಮ್ ವಿಂಬಲ್ಡನ್ 2022 ಚಾಂಪಿಯನ್‌ಶಿಪ್‌ನ ಮೊದಲ ಎರಡು ದಿನಗಳಲ್ಲಿ ಕೊರೊನಾ ಪಂದ್ಯಾವಳಿಯ ಮೇಲೆ ವಕ್ರದೃಷ್ಠಿ ಬೀರಿದೆ. ಇದರ ಫಲವಾಗಿ ಮೊದಲ ಸುತ್ತಿನಲ್ಲಿಯೇ ಇಬ್ಬರು ಪ್ರಮುಖ ಆಟಗಾರರು ಒಂದು ಪಂದ್ಯ ಆಡದೆ ಪಂದ್ಯಾವಳಿಯಿಂದ ಹೊರ ನಡೆದಿದ್ದಾರೆ. ಕಳೆದ ವರ್ಷದ ರನ್ನರ್ ಅಪ್ ಇಟಲಿಯ ಮ್ಯಾಟಿಯೊ ಬೆರೆಟ್ಟಿನಿ ಕೊರೊನಾ ಸೋಂಕಿಗೆ ಒಳಗಾಗಿದ್ದರಿಂದ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಜೂನ್ 28 ಮಂಗಳವಾರದಂದು ಪಂದ್ಯಾವಳಿಯ ಎರಡನೇ ದಿನದಂದು ಬೆರೆಟ್ಟಿನಿ ಅವರು ಸೋಂಕಿನ ಕಾರಣದಿಂದಾಗಿ ಈ ಪಂದ್ಯಾವಳಿಯಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ. ಕಳೆದ ವರ್ಷ ವಿಂಬಲ್ಡನ್‌ನ ಫೈನಲ್‌ಗೆ ತಲುಪಿದ್ದ ಬೆರೆಟ್ಟಿನಿ ಮಂಗಳವಾರ ಮೊದಲ ಸುತ್ತಿನ ಪಂದ್ಯವನ್ನು ಆಡಬೇಕಿತ್ತು, ಆದರೆ ಪಂದ್ಯ ಪ್ರಾರಂಭವಾಗುವ ಗಂಟೆಗಳ ಮೊದಲು ಅವರ ನಿರ್ಗಮನದ ಸುದ್ದಿ ಬಂದಿದೆ. ಇದಕ್ಕೂ ಮುನ್ನ ಕ್ರೊವೇಷಿಯಾದ ಮರಿನ್ ಚಿಲಿಚ್ ಕೂಡ ಮೊದಲ ದಿನವೇ ಕೊರೊನಾ ಸೋಂಕಿನಿಂದಾಗಿ ಟೂರ್ನಿಯಿಂದ ಹೊರಬಿದ್ದರು.

ಬೆರೆಟ್ಟಿನಿ ಹೇಳಿಕೆ

ಮಂಗಳವಾರ ಜೂನ್ 28 ರಂದು, ಚಾಂಪಿಯನ್‌ಶಿಪ್‌ನ ಎರಡನೇ ದಿನದ ಆಟ ಪ್ರಾರಂಭವಾಗುವ ಮೊದಲು, ವಿಂಬಲ್ಡನ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಬೆರೆಟ್ಟಿನಿಯ ಸೋಂಕಿನ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಬೆರೆಟ್ಟಿನಿ ಅವರ ಹೇಳಿಕೆಯನ್ನು ವಿಂಬಲ್ಡನ್ ಪೋಸ್ಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ, ಅದರಲ್ಲಿ ಇಟಾಲಿಯನ್ ತಾರೆ, “ಕೋವಿಡ್ -19 ಪರೀಕ್ಷೆಯ ಪಾಸಿಟಿವ್ ಫಲಿತಾಂಶದಿಂದಾಗಿ ನಾನು ವಿಂಬಲ್ಡನ್‌ನಿಂದ ಹಿಂದೆ ಸರಿಯಬೇಕಾಗಿದೆ. ನಾನು ಅನುಭವಿಸುತ್ತಿರುವ ನಿರಾಶೆಯನ್ನು ವಿವರಿಸಲು ಯಾವುದೇ ಪದಗಳಿಲ್ಲ ಎಂದು ಹೇಳಿಕೊಂಡಿದ್ದಾರೆ.

ಬೆರೆಟ್ಟಿನಿಗೆ ಫೈನಲ್‌ನಲ್ಲಿ ಸೋಲು

26 ವರ್ಷದ ಬೆರೆಟ್ಟಿನಿ ಮೊದಲ ಸುತ್ತಿನಲ್ಲಿ ಚಿಲಿಯ ಆಟಗಾರ ಕ್ರಿಶ್ಚಿಯನ್ ಗ್ಯಾರಿನ್ ಅವರನ್ನು ಎದುರಿಸಬೇಕಾಯಿತು. ಬೆರೆಟ್ಟಿನಿ ಕಳೆದ ವರ್ಷ ಇದೇ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಲುಪಿದರು. ಇದು ಅವರ ಮೊದಲ ಗ್ರ್ಯಾಂಡ್ ಸ್ಲಾಮ್ ಫೈನಲ್ ಆಗಿತ್ತು. ಆದಾಗ್ಯೂ, ಪ್ರಶಸ್ತಿ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಅವರನ್ನು ಸೋಲಿಸಿದರು. ಜೊಕೊವಿಕ್ ಅವರು ಬೆರೆಟ್ಟಿನಿ ಅವರನ್ನು ಸೋಲಿಸುವ ಮೂಲಕ ತಮ್ಮ 20 ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡರು.

ಬೆರೆಟ್ಟಿನಿ ಮೊದಲು, ಮತ್ತೊಬ್ಬ ಮಾಜಿ ಫೈನಲಿಸ್ಟ್ ಮರಿನ್ ಚಿಲಿಚ್ ಕೂಡ ಕೊರೊನಾದಿಂದಾಗಿ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದರು. ಕ್ರೊಯೇಷಿಯಾದ ಅನುಭವಿ ಆಟಗಾರ ಚಿಲಿಚ್ ಅವರು ಚಾಂಪಿಯನ್‌ಶಿಪ್‌ನ ಮೊದಲ ದಿನದಂದು ಸೋಂಕಿಗೆ ಒಳಗಾದ ನಂತರ ಜೂನ್ 27 ಸೋಮವಾರ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು. ಬೆರೆಟ್ಟಿನಿಯಂತೆ ಅವನಿಗೂ ತನ್ನ ಮೊದಲ ಸುತ್ತಿನ ಪಂದ್ಯವನ್ನು ಆಡಲಾಗಲಿಲ್ಲ. ಅಂದಹಾಗೆ, ವಿಂಬಲ್ಡನ್‌ನಲ್ಲಿ ಕೊರೊನಾ ಪರಿಣಾಮ ನಿರಂತರವಾಗಿ ಕಂಡುಬರುತ್ತಿದೆ. 2020 ರಲ್ಲಿ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗ, ಎಲ್ಲಾ ನಾಲ್ಕು ಗ್ರ್ಯಾಂಡ್ ಸ್ಲಾಮ್‌ಗಳಲ್ಲಿ ವಿಂಬಲ್ಡನ್ ಮಾತ್ರ ನಡೆಯಲು ಸಾಧ್ಯವಾಗಲಿಲ್ಲ.

Published On - 4:39 pm, Tue, 28 June 22