WTC Final: ಮೊದಲ ಐಸಿಸಿ ಪ್ರಶಸ್ತಿ ಗೆದ್ದ ನ್ಯೂಜಿಲೆಂಡ್ ಪಡೆದ ಹಣವೆಷ್ಟು? ಭಾರತಕ್ಕೆ ಸಿಕ್ಕಿದೆಷ್ಟು? ಇತರ ತಂಡಗಳಿಗೂ ಸಿಗಲಿದೆ ಬಹುಮಾನ

WTC Final: ಫೈನಲ್‌ನಲ್ಲಿ ಗೆಲ್ಲುವ ತಂಡವು 1.6 ಮಿಲಿಯನ್ ಯುಎಸ್ ಡಾಲರ್‌ಗಳನ್ನು ಪಡೆಯುತ್ತದೆ. ಅಂದರೆ 11.71 ಕೋಟಿ ರೂ. ಅದೇ ಸಮಯದಲ್ಲಿ, ರನ್ನರ್ ಅಪ್ ತಂಡಕ್ಕೆ ಎಂಟು ಲಕ್ಷ ಡಾಲರ್ ಅಂದರೆ 5.85 ಕೋಟಿ ರೂ. ನೀಡಲಾಗುತ್ತದೆ.

WTC Final: ಮೊದಲ ಐಸಿಸಿ ಪ್ರಶಸ್ತಿ ಗೆದ್ದ ನ್ಯೂಜಿಲೆಂಡ್ ಪಡೆದ ಹಣವೆಷ್ಟು? ಭಾರತಕ್ಕೆ ಸಿಕ್ಕಿದೆಷ್ಟು? ಇತರ ತಂಡಗಳಿಗೂ ಸಿಗಲಿದೆ ಬಹುಮಾನ
ಮೊದಲ ಐಸಿಸಿ ಪ್ರಶಸ್ತಿ ಗೆದ್ದ ನ್ಯೂಜಿಲೆಂಡ್
Follow us
ಪೃಥ್ವಿಶಂಕರ
| Updated By: Skanda

Updated on: Jun 24, 2021 | 9:19 AM

ಇಡೀ ಕ್ರಿಕೆಟ್ ಜಗತ್ತು ಕಾಯುತ್ತಿದ್ದ ಪಂದ್ಯ ಮುಗಿದಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡವು ಮುಖಾಮುಖಿಯಾಗಿದ್ದವು. ಇಡೀ ಕ್ರಿಕೆಟ್ ಜಗತ್ತು ಈ ಪಂದ್ಯಕ್ಕಾಗಿ ಕಾಯುತ್ತಿತ್ತು. ವಿಶ್ವದ ಎರಡು ಅತ್ಯುತ್ತಮ ಟೆಸ್ಟ್ ತಂಡಗಳ ನಡುವಿನ ಈ ಮಹಾನ್ ಪಂದ್ಯವು ಬಹಳ ರೋಮಾಂಚನಕಾರಿಯಾಗಿತ್ತು. ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಮಳೆ ಈ ಪಂದ್ಯದ ವಿನೋದವನ್ನು ಹಾಳು ಮಾಡಿತು . ನಿರಂತರ ಮಳೆಯಿಂದಾಗಿ ಬಹಳಷ್ಟು ಆಟ ಹಾಳಾಯಿತು. ಈ ಕಾರಣಕ್ಕಾಗಿ, ಈ ಪಂದ್ಯಕ್ಕೆ ಮೀಸಲು ದಿನವನ್ನು ಐಸಿಸಿ ಇಟ್ಟುಕೊಂಡಿತ್ತು.

ಪಂದ್ಯದ ಮೊದಲ ದಿನ ಮಳೆಯಿಂದಾಗಿ ರದ್ದಾಯಿತು. ಅದಕ್ಕಾಗಿಯೇ ಮೀಸಲು ದಿನವನ್ನು ಸಹ ಬಳಸಲಾಯಿತು. ಆದರೆ ಮಧ್ಯದ ದಿನಗಳಲ್ಲಿ ಸಹ ಮಳೆ ನಿರಂತರವಾಗಿ ತೊಂದರೆಗೊಳಪಡಿಸಿತು. ಅದಕ್ಕಾಗಿಯೇ ಕೆಲವು ದಿನಗಳ ಆಟವು ಸಮಯಕ್ಕಿಂತ ಮುಂಚಿತವಾಗಿ ಕೊನೆಗೊಂಡಿತು. ಆದಾಗ್ಯೂ, ಮಳೆ ಅಡಚಣೆಯ ನಡುವೆ ಪಂದ್ಯವು ಕೊನೆಗೊಂಡಿದೆ ಮತ್ತು ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ಆವೃತ್ತಿಯೂ ಮುಗಿದಿದೆ.

ಬಹುಮಾನದ ಹಣ ಹೀಗಿದೆ ಈ ಟೆಸ್ಟ್ ಚಾಂಪಿಯನ್‌ಶಿಪ್ ವಿಜೇತರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬಹುಮಾನದ ಮೊತ್ತವನ್ನು ಘೋಷಿಸಿತ್ತು. ಫೈನಲ್‌ನಲ್ಲಿ ಗೆಲ್ಲುವ ತಂಡವು 1.6 ಮಿಲಿಯನ್ ಯುಎಸ್ ಡಾಲರ್‌ ಅಂದರೆ 11.71 ಕೋಟಿ ರೂಪಾಯಿಗಳನ್ನು ಪಡೆಯುತ್ತದೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆಫ್ ಅಲಾರ್ಡಿಸ್ ಹೇಳಿದ್ದಾರೆ.. ಅದೇ ಸಮಯದಲ್ಲಿ, ರನ್ನರ್ ಅಪ್ ತಂಡಕ್ಕೆ ಎಂಟು ಲಕ್ಷ ಡಾಲರ್ ಅಂದರೆ 5.85 ಕೋಟಿ ರೂ. ನೀಡಲಾಗುತ್ತದೆ.

ಜಂಟಿ ವಿಜೇತರಿಗೆ ಬಹುಮಾನ ಹಂಚಿಕೆ ಹೀಗಿತ್ತು ಡ್ರಾ ಸಂಭವಿಸಿದಲ್ಲಿ ಉಭಯ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುವುದು ಮತ್ತು ವಿಜೇತ ತಂಡಕ್ಕೆ ಬಹುಮಾನದ ಮೊತ್ತವನ್ನು ಸಮಾನವಾಗಿ ವಿಂಗಡಿಸಲಾಗುವುದು ಎಂದು ಐಸಿಸಿ ಹೇಳಿತ್ತು. ವಿಜೇತ ತಂಡಕ್ಕೆ ಟ್ರೋಫಿಯಾಗಿ ಮೇಸ್ ಆಫ್ ದಿ ಟೆಸ್ಟ್ ಚಾಂಪಿಯನ್‌ಶಿಪ್ ನೀಡಲಾಗುವುದು. ಈ ಮೇಸ್ ಅನ್ನು ಪ್ರತಿ ವರ್ಷ ಟೆಸ್ಟ್ ಶ್ರೇಯಾಂಕದಲ್ಲಿ ಪ್ರಥಮ ಶ್ರೇಯಾಂಕಿತ ತಂಡಕ್ಕೆ ಹಸ್ತಾಂತರಿಸಲಾಗುವುದು.

ಇತರ ತಂಡಗಳಿಗೂ ಬಹುಮಾನ ಸಿಗಲಿದೆ ಈ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಉಳಿದ ತಂಡಗಳಿಗೂ ಐಸಿಸಿ ಬಹುಮಾನ ನೀಡಲು ಮುಂದಾಗಿದೆ. ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾಕ್ಕೆ 4.50 ಲಕ್ಷ ಅಥವಾ ಸುಮಾರು 3.29 ಕೋಟಿ ರೂ. ನಾಲ್ಕನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ಗೆ 3.50 ಲಕ್ಷ (ರೂ. 2.56 ಕೋಟಿ) ನೀಡಲಾಗುವುದು. ಐದನೇ ಶ್ರೇಯಾಂಕದ ತಂಡಕ್ಕೆ 1.46 ಕೋಟಿ ರೂ. ನೀಡಿದರೆ, ಉಳಿದ ನಾಲ್ಕು ತಂಡಗಳಿಗೆ ತಲಾ 1 ಲಕ್ಷ (ಸುಮಾರು 73 ಲಕ್ಷ ರೂ.) ಡಾಲರ್ ನೀಡಲಾಗುವುದು.

ಇದನ್ನೂ ಓದಿ: WTC Final : ಉತ್ತಮ ಆಟವಾಡುವ ಮನಸ್ಥಿತಿಯುಳ್ಳ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು; ಸೋಲಿನ ಬೆನ್ನಲ್ಲೇ ಕೊಹ್ಲಿ ಹೀಗಂದಿದ್ದು ಯಾರಿಗೆ?

ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ