ಮಾನವ ವರ್ಸಸ್ ಯಂತ್ರ: ಇನ್ನೊಂದೇ ವರ್ಷದಲ್ಲಿ ಬುದ್ಧಿವಂತಿಕೆಯಲ್ಲಿ ಮನುಷ್ಯನನ್ನು ಮೀರಿಸುತ್ತೆ ಎಐ: ಇದು ಇಲಾನ್ ಮಸ್ಕ್ ಭವಿಷ್ಯ

|

Updated on: Apr 09, 2024 | 6:27 PM

Artificial General Intelligence vs Humans: ಅತಿಬುದ್ಧಿವಂತ ಮನುಷ್ಯನನ್ನು ಬುದ್ಧಿವಂತಿಕೆಯಲ್ಲಿ ಮೀರಿಸಬಲ್ಲ ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ ಯಾವಾಗ ಸಿದ್ಧವಾಗುತ್ತೆ ಎಂಬ ಪ್ರಶ್ನೆಗೆ ಇಲಾನ್ ಮಸ್ಕ್ ಉತ್ತರ ನೀಡಿದ್ದಾರೆ. 2025ರೊಳಗೆ ಇದು ಆಗಬಹುದು. ಅಥವಾ ಹೆಚ್ಚೆಂದರೆ 2026ರಲ್ಲಿ ಎಐ ಬುದ್ಧಿವಂತಿಕೆ ಮನುಷ್ಯನನ್ನು ಮೀರಿಸಬಹುದು ಎನ್ನುತ್ತಾರೆ. ಇದೇ ವೇಳೆ, ಎಐನ ಹೊಸ ಮಾಡಲ್​​ಗಳ ಟ್ರೈನಿಂಗ್​ಗೆ ಬಳಸಲಾಗುವ ಚಿಪ್​ಗಳಿಗೆ ಬೇಕಾದ ವಿದ್ಯುತ್ ಪೂರೈಕೆಯ ಸಮಸ್ಯೆ ಇದೆ ಎಂದೂ ಮಸ್ಕ್ ಹೇಳುತ್ತಾರೆ.

ಮಾನವ ವರ್ಸಸ್ ಯಂತ್ರ: ಇನ್ನೊಂದೇ ವರ್ಷದಲ್ಲಿ ಬುದ್ಧಿವಂತಿಕೆಯಲ್ಲಿ ಮನುಷ್ಯನನ್ನು ಮೀರಿಸುತ್ತೆ ಎಐ: ಇದು ಇಲಾನ್ ಮಸ್ಕ್ ಭವಿಷ್ಯ
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್
Follow us on

ನ್ಯೂಯಾರ್ಕ್, ಏಪ್ರಿಲ್ 9: ಎಷ್ಟೆಂದರೂ ಮನುಷ್ಯ ಮನುಷ್ಯನೇ, ಯಂತ್ರ ಯಂತ್ರವೇ. ಕೃತಕ ಬುದ್ಧಿಮತ್ತೆಯಾದರೂ ಮನುಷ್ಯನ ನಿಯಂತ್ರಣ ತಪ್ಪಲು ಹೇಗೆ ಸಾಧ್ಯ ಎಂದು ಭಾವಿಸುವ ಜನರಿಗೆ ಇದು ಶಾಕ್ ಆಗಬಹುದು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI- Artificial Intelligence) ಕ್ಷೇತ್ರದ ಬೆಳವಣಿಗೆ ಯಾವ ಪರಿ ವೇಗವಾಗಿ ಆಗುತ್ತಿದೆ ಎಂದರೆ ಅತಿ ಶೀಘ್ರದಲ್ಲೇ ಬುದ್ಧಿವಂತಿಕೆಯಲ್ಲಿ ಮನುಷ್ಯನನ್ನು ಹಿಂದಿಕ್ಕಲಿದೆಯಂತೆ. ವಿಶ್ವದ ಅತಿಶ್ರೀಮಂತ ಉದ್ಯಮಿಗಳಲ್ಲೊಬ್ಬರಾಗಿರುವ ಇಲಾನ್ ಮಸ್ಕ್ ಅವರ ಪ್ರಕಾರ 2025 ಅಥವಾ 2026ರೊಳಗೆ ಕೃತಕ ಬುದ್ಧಿಮತ್ತೆಯು ಸೂಪರ್ ಬ್ರೈನ್ ಮಾನವನ ಶಕ್ತಿಯನ್ನೂ ಮೀರಿಸಬಹುದಂತೆ.

‘ಮನುಷ್ಯನಿಗಿಂತ ಹೆಚ್ಚು ಬುದ್ಧಿಶಾಲಿ ಆದ ಆರ್ಟಿಫಿಶಿಯಲ್ ಜನರಲ್ ಇಂಟೆಜಿನ್ಸ್ ಯಾವಾ ಸಿದ್ದವಾಗಬಹುದು ಎಂದು ಕೇಳುವುದಾದರೆ, ಅದು ಬಹುಶಃ ಮುಂದಿನ ವರ್ಷದಲ್ಲಿ ಸಾಧ್ಯವಾಗಬಹುದು. ಹೆಚ್ಚೆಂದರೆ ಇನ್ನೆರಡು ವರ್ಷದಲ್ಲಾದರೂ ಅದು ಸಾಧ್ಯವಾಗಬಹುದು,’ ಎಂದು ಎಜಿಐ ಅಭಿವೃದ್ದಿ ಬಗ್ಗೆ ಮಸ್ಕ್ ತಮ್ಮ ಟೈಮ್​ಲೈನ್ ಗಡುವನ್ನು ಬಿಚ್ಚಿಟ್ಟರು.

ಎಐ ಅಭಿವೃದ್ಧಿಗೆ ವಿದ್ಯುತ್ ಮತ್ತು ಚಿಪ್​ಗಳ ಕೊರತೆ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಬೆಳವಣಿಗೆ ವೇಗಕ್ಕೆ ಪೂರಕವಾಗುವಷ್ಟು ಪ್ರಮಾಣದಲ್ಲಿ ಚಿಪ್​ಗಳು ಸಿಗುತ್ತಿಲ್ಲ ಎಂದು ಮಸ್ಕ್ ಹೇಳುತ್ತಾರೆ. ಓಪನ್​ಎಐಗೆ ಪ್ರತಿಸ್ಪರ್ಧೆಯಾಗಿ ಎಕ್ಸ್​ಎಐನಿಂದ ಗ್ರೋಕ್ ಎಂಬ ಚಾಟ್​ಬಾಟ್ ತಯಾರಿಸಲಾಗಿದೆ. ಅದರ ಮುಂದುವರಿದ ಆವೃತ್ತಿಯನ್ನು ಅಭಿವೃದ್ಧಿಪಡಿಸಲಾಗಿದೆ. ಗ್ರೋಕ್ 2 ಮಾಡಲ್​ನ ಟ್ರೈನಿಂಗ್​ಗೆ ಎನ್​ವಿಡಿಯಾ ಕಂನಿಯ 20,000 ಹೆಚ್100 ಜಿಪಿಯುಗಳು ಬೇಕಾದವು. ಗ್ರೋಕ್3 ಮಾಡಲ್ ಹಾಗೂ ಇನ್ನೂ ಉನ್ನತ ಮಾಡಲ್​ನ ಟ್ರೈನಿಂಗ್​ಗೆ ಒಂದು ಲಕ್ಷ ಹೆಚ್100 ಚಿಪ್​ಗಳು ಬೇಕಾಗಬಹುದು. ಆದರೆ, ಇಷ್ಟು ಚಿಪ್​ಗಳು ಸಿಗುವುದು ಕಷ್ಟ ಎಂದು ಇಲಾನ್ ಮಸ್ಕ್ ಹತಾಶೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಫೇಸ್​ಬುಕ್, ಇನ್ಸ್​ಟಾದ ನಿಮ್ಮ ಪೋಸ್ಟ್​ಗಳು ವಿದೇಶೀ ಸರ್ವರ್​ಗೆ ಹೋಗಲ್ಲ; ಭಾರತದಲ್ಲೇ ನಿರ್ಮಾಣವಾಗಿದೆ ಡಾಟಾ ಸೆಂಟರ್

ಕುತೂಹಲ ಎಂದರೆ ಅಡ್ವಾನ್ಸ್ಡ್ ಚಿಪ್​ಗಳ ತಯಾರಿಕೆಗೆ ವಿದ್ಯುತ್ ಅವಶ್ಯಕತೆ ಬಹಳ ಇರುತ್ತದೆ. ಸೆಮಿಕಂಡಕ್ಟರ್ ಫ್ಯಾಬ್ ಯೂನಿಟ್​ವೊಂದು ಪ್ರತೀ ಗಂಟೆಗೆ 100 ಮೆಗಾವ್ಯಾಟ್ ಗಂಟೆಗಳಷ್ಟು ವಿದ್ಯುತ್ ಅನ್ನು ವ್ಯಯಿಸುತ್ತದೆ. ಎನ್​ವಿಡಿಯಾದ ಎಚ್100 ಜಿಪಿಯುಗಳು ಸಖತ್ ವಿದ್ಯುತ್ ಬೇಡುತ್ತವೆ. ಇವುಗಳನ್ನು ಬಳಸಬೇಕಾದರೆ ಒಂದು ಚಿಪ್ ಯೂನಿಟ್ ಒಂದು ವರ್ಷದಲ್ಲಿ ಸುಮಾರು 3,740 ಕಿಲೋವ್ಯಾಟ್ ಅವರ್​ನಷ್ಟು ವಿದ್ಯುತ್ ಬೇಕಾಗುತ್ತದೆ. ಹೀಗಾಗಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಮಾಡಲ್ ಟ್ರೈನಿಂಗ್ ಮಾಡಲು ಬಳಕೆಯಾಗುವ ಸಾವಿರಾರು ಅಡ್ವಾನ್ಸ್ಡ ಚಿಪ್​ಗಳನ್ನು ಆಪರೇಟ್ ಮಾಡಬೇಕಾದರೆ ಸಖತ್ ವಿದ್ಯುತ್ ಬೇಕಾಗುತ್ತದೆ. ಇಷ್ಟು ಪ್ರಮಾಣದ ವಿದ್ಯುತ್ ಸರಬರಾಜು ಅಮೆರಿಕದಲ್ಲೂ ಇಲ್ಲ ಎಂಬುದು ಇಲಾನ್ ಮಸ್ಕ್ ಮಾತಿನಿಂದ ಸ್ಪಷ್ಟವಾಗುತ್ತದೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ