Samsung galaxy: 6000mAh ಬ್ಯಾಟರಿ, 5 ಕ್ಯಾಮೆರಾ: ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್​ ಮೇಲೆ ಭಾರೀ ಡಿಸ್ಕೌಂಟ್..!

| Updated By: ಝಾಹಿರ್ ಯೂಸುಫ್

Updated on: Jul 24, 2021 | 8:05 PM

samsung galaxy m12 specifications: ಸ್ಯಾಮ್ಸಂಗ್ ಗ್ಯಾಲಕ್ಸಿ M12 ಸ್ಮಾರ್ಟ್​ಫೋನ್​ನಲ್ಲಿ ಒಟ್ಟು 6 ಕ್ಯಾಮೆರಾಗಳನ್ನು ನೀಡಿರುವುದು ವಿಶೇಷ. ಹಿಂಬದಿಯಲ್ಲಿ 48 ಮೆಗಾ ಪಿಕ್ಸೆಲ್ ಮೊದಲ ಕ್ಯಾಮೆರಾ ನೀಡಲಾಗಿದೆ. ಇನ್ನು ಎರಡನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಅನ್ನು ಹೊಂದಿರಲಿದೆ.

Samsung galaxy: 6000mAh ಬ್ಯಾಟರಿ, 5 ಕ್ಯಾಮೆರಾ: ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್​ ಮೇಲೆ ಭಾರೀ ಡಿಸ್ಕೌಂಟ್..!
Samsung galaxy M12
Follow us on

ದಕ್ಷಿಣ ಕೊರಿಯಾದ ಜನಪ್ರಿಯ ಕಂಪನಿ ಸ್ಯಾಮ್‌ಸಂಗ್ ತನ್ನ ಬಜೆಟ್ ಸ್ಮಾರ್ಟ್‌ಫೋನ್ ಮೇಲೆ ಡಿಸ್ಕೌಂಟ್ ಘೋಷಿಸಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 12 ಸ್ಮಾರ್ಟ್‌ಫೋನ್ (samsung galaxy m12) ಆಫರ್ ನೀಡಿದ್ದು, ಕಂಪೆನಿಯ ಅಧಿಕೃತ ವೆಬ್​ಸೈಟ್ ಮೂಲಕ ಅಗ್ಗದ ದರದಲ್ಲಿ ಮೊಬೈಲ್​ನ್ನು ತಮ್ಮದಾಗಿಸಿಕೊಳ್ಳಬಹುದು. ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಈ ಫೋನ್‌ ಮೇಲೆ ಒಂದು ಸಾವಿರ ರೂಪಾಯಿಗಳ ರಿಯಾಯಿತಿ ನೀಡಲಾಗುತ್ತಿದೆ. ಫೋನ್‌ನ 4 ಜಿಬಿ ರ್ಯಾಮ್ ಮತ್ತು 64 ಜಿಬಿ ಇನ್​ಬಿಲ್ಟ್ ಸ್ಟೊರೇಜ್ ಹೊಂದಿದ್ದು, ಇದರ ಬೆಲೆ ಕೇವಲ 9,999 ರೂ. ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳೊಂದಿಗೆ ನೀವು ಈ ಫೋನ್‌ ಖರೀದಿಸಿದರೆ, ನಿಮಗೆ ರಿಯಾಯಿತಿ ಸಿಗಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 12 ನ (samsung galaxy m12) ವಿಶೇಷತೆಗಳು:
ಡಿಸ್​ಪ್ಲೇ:
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 12 ಸ್ಮಾರ್ಟ್​ಫೋನ್​ 6.5 ಇಂಚಿನ ಎಚ್‌ಡಿ + ಡಿಸ್​ಪ್ಲೇ ಹೊಂದಿದ್ದು, ಇದು 720×1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರಲಿದೆ.

ಸಿಮ್ ಸಪೋರ್ಟ್:
ಡ್ಯುಯಲ್ ಸಿಮ್ ಬೆಂಬಲವನ್ನು ಹೊಂದಿರುವ ಈ ಫೋನ್ ಆಂಡ್ರಾಯ್ಡ್ ಓಎಸ್ ಆಧಾರಿತ ಒನ್ ಯುಐ ಕೋರ್ ಅನ್ನು ಆಧರಿಸಿದೆ. ಫೋನ್‌ನಲ್ಲಿ ಟಿಎಫ್‌ಟಿ ಇನ್ಫಿನಿಟಿ-ವಿ ಡಿಸ್ಪ್ಲೇ ನೀಡಲಾಗಿದೆ.

ಪ್ರೊಸೆಸರ್:
ಈ ಫೋನ್ ಅಕ್ಟಾಕೋರ್ ((4×2.0 GHz Cortex-A55 & 4×2.0 GHz Cortex-A55)) ಪ್ರೊಸೆಸರ್ ಹೊಂದಿದ್ದು, ಅದರ ಜೊತೆಗೆ ಎಕ್ಸಿನೋಸ್ 850 ಚಿಪ್​ಸೆಟ್ ಇದರಲ್ಲಿದೆ.

ಸ್ಟೊರೇಜ್:
4GB RAM ಮತ್ತು 64GB ಸ್ಟೋರೇಜ್ ಮತ್ತು 6GB RAM ಮತ್ತು 128GB ಸ್ಟೋರೇಜ್ ಆಯ್ಕೆಯಲ್ಲಿ ಈ ಸ್ಮಾರ್ಟ್​ಫೋನ್ ಖರೀದಿಗೆ ಲಭ್ಯವಿದೆ. ಹಾಗೆಯೇ ಮೈಕ್ರೊ ಎಸ್ಡಿ ಕಾರ್ಡ್ ನೆರವಿನಿಂದ ಸ್ಟೊರೇಜ್​ನ್ನು 1 ಟಿಬಿವರೆಗೆ ಹೆಚ್ಚಿಸಬಹುದು.

ಕ್ಯಾಮೆರಾ:
ಸ್ಯಾಮ್ಸಂಗ್ ಗ್ಯಾಲಕ್ಸಿ M12 ಸ್ಮಾರ್ಟ್​ಫೋನ್​ನಲ್ಲಿ ಒಟ್ಟು 5 ಕ್ಯಾಮೆರಾಗಳನ್ನು ನೀಡಿರುವುದು ವಿಶೇಷ. ಹಿಂಬದಿಯಲ್ಲಿ 48 ಮೆಗಾ ಪಿಕ್ಸೆಲ್ ಮೊದಲ ಕ್ಯಾಮೆರಾ ನೀಡಲಾಗಿದೆ. ಇನ್ನು ಎರಡನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಅನ್ನು ಹೊಂದಿರಲಿದೆ. ಹಾಗೆಯೇ ಮೂರನೇ ಮತ್ತು ನಾಲ್ಕನೇ ಕ್ಯಾಮೆರಾಗಳು 2 ಮೆಗಾ ಪಿಕ್ಸೆಲ್​ ಅನ್ನು ಹೊಂದಿದ್ದು, ಇದರಲ್ಲಿ ಡೆಪ್ತ್ ಸೆನ್ಸಾರ್, ಮ್ಯಾಕ್ರೋ ಲೆನ್ಸ್ ಅನ್ನು ಅಳವಡಿಸಲಾಗಿದೆ. ಹಾಗೆಯೇ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾ ಪಿಕ್ಸೆಲ್​ನ ಫ್ರಂಟ್ ಕ್ಯಾಮೆರಾವನ್ನು ನೀಡಲಾಗಿದೆ.

ಬ್ಯಾಟರಿ ಮತ್ತು ಇತರ ವೈಶಿಷ್ಟ್ಯಗಳು:
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 12 ನಲ್ಲಿ 6000 ಎಮ್‌ಎಹೆಚ್ ಸಾಮರ್ಥ್ಯದ ಪವರ್​ ಬ್ಯಾಟರಿಯನ್ನು ನೀಡಲಾಗಿದೆ. ಇದು 4 ಜಿ ನೆಟ್‌ವರ್ಕ್‌ನಲ್ಲಿ 58 ಗಂಟೆಗಳ ಬ್ಯಾಕಪ್ ನೀಡುತ್ತದೆ. ಪವರ್ ಬಟನ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್, 4 ಜಿ ಎಲ್‌ಟಿಇ, ವೈ-ಫೈ, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಫೋನ್‌ನಲ್ಲಿ ನೀಡಲಾಗಿದೆ.

 

ಇದನ್ನೂ ಓದಿ: MS Dhoni: ಧೋನಿ ಕೋಚ್ ಆಗಲಿದ್ದಾರೆ: ಮಾಜಿ ಕ್ರಿಕೆಟಿಗನ ಭವಿಷ್ಯ..!

ಇದನ್ನೂ ಓದಿ: India vs Sri Lanka T20 Schedule: ಟಿ20 ಕದನಕ್ಕೆ ಟೀಮ್ ಇಂಡಿಯಾ ಸಜ್ಜು: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ