Tech Tips: ಇಷ್ಟು ಹಣ ಕೊಟ್ಟರೆ ಸಾಕು ನಿಮ್ಮಿಷ್ಟದ ಮೊಬೈಲ್ ನಂಬರ್ ಪಡೆಯಬಹುದು

BSNL ನವೆಂಬರ್ 11 ರಿಂದ ಪ್ರೀಮಿಯಂ ಸಂಖ್ಯೆಗಳ ಇ-ಹರಾಜನ್ನು ಪ್ರಾರಂಭಿಸಿದೆ. ಈ ಹರಾಜು ನವೆಂಬರ್ 20 ರವರೆಗೆ ನಡೆಯಲಿದೆ. ಈ ಪ್ರೀಮಿಯಂ ಸಂಖ್ಯೆಯನ್ನು ಪಶ್ಚಿಮ ಬಂಗಾಳ, ಗುಜರಾತ್, ಜಾರ್ಖಂಡ್, ಕೇರಳ, ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿ ಹರಾಜು ಮಾಡಲಾಗುತ್ತಿದೆ.

Tech Tips: ಇಷ್ಟು ಹಣ ಕೊಟ್ಟರೆ ಸಾಕು ನಿಮ್ಮಿಷ್ಟದ ಮೊಬೈಲ್ ನಂಬರ್ ಪಡೆಯಬಹುದು
premium phone numbers
Follow us
Vinay Bhat
|

Updated on: Nov 13, 2023 | 12:59 PM

ಹೊಸ ಫೋನ್ ನಂಬರ್ (Phone Number) ಪಡೆಯುವಾಗ ಆ ನಂಬರ್ ಹೇಗಿರುತ್ತದೆ?, ಸುಲಭದ್ದಾಗಿರುತ್ತೊ ಅಥವಾ ಆ ನಂಬರ್ ಕಷ್ಟವಾಗಿರುತ್ತೊ ಎಂಬ ಚಿಂತೆ ಅನೇಕರಿಗೆ ಇರುತ್ತದೆ. ಸುಲಭವಾಗಿ ನೆನಪಿಟ್ಟುಕೊಳ್ಳುವ ಸಂಖ್ಯೆ ಸಿಗುವುದು ತೀರ ಅಪರೂಪ. ಕೆಲವರು ಬೇಕೆಂದೇ ಕಷ್ಟವಾದ, ನೆನಪಿಟ್ಟುಕೊಳ್ಳಲು ಸಾಧ್ಯವಾಗದ ಸಂಖ್ಯೆಯನ್ನು ಪಡೆಯುತ್ತಾರೆ. ಅನೇಕರಿಗೆ ತಮ್ಮ ಫೋನ್ ನಂಬರ್ ಅನ್ನೇ ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತಿದೆ. ಆದರೆ, ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ತಮ್ಮ ಇಷ್ಟದ ನಂಬರ್ ಆಯ್ಕೆ ಮಾಡಿಕೊಳ್ಳುವ ಸೌಲಭ್ಯ ನೀಡುತ್ತವೆ ಎಂಬುದು ಹಲವರಿಗೆ ತಿಳಿದಿಲ್ಲ.

ಗ್ರಾಹಕರು ತಮಗೆ ಸುಲಭ ಎನಿಸುವ, ತಮ್ಮ ಇಷ್ಟದ ಮೊಬೈಲ್ ನಂಬರ್ ಅನ್ನು ಆಯ್ಕೆ ಮಾಡಬಹುದು. ಇವುಗಳನ್ನು ವ್ಯಾನಿಟಿ ಅಥವಾ ಪ್ರೀಮಿಯಂ ಸಂಖ್ಯೆಗಳು ಎಂದು ಕರೆಯಲಾಗುತ್ತದೆ. ಅಂತಹ ಸಂಖ್ಯೆಯನ್ನು ಪಡೆಯಲು ಗ್ರಾಹಕರು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ನೀವು ಸಹ ಅಂತಹ ಪ್ರೀಮಿಯಂ ಸಂಖ್ಯೆಗಳನ್ನು ಬಳಸಲು ಬಯಸಿದರೆ, BSNL ಉತ್ತಮ ಅವಕಾಶಗಳನ್ನು ನೀಡುತ್ತಿದೆ. ಸರ್ಕಾರಿ ಏಜೆನ್ಸಿಗಳಿಂದ ಆನ್‌ಲೈನ್ ಹರಾಜು ಅಥವಾ ಇ-ಹರಾಜುಗಳನ್ನು ಪ್ರಾರಂಭಿಸಲಾಗಿದೆ.

ಮಾರುಕಟ್ಟೆಗೆ ಬಂತು 108MP ಕ್ಯಾಮೆರಾದ ಹಾನರ್ X50i+ ​ಫೋನ್: ಫಾಸ್ಟ್ ಚಾರ್ಜರ್ ಕೂಡ ಇದೆ

ಇದನ್ನೂ ಓದಿ
Image
ಸ್ಮಾರ್ಟ್​ಫೋನ್​ಗಳಿಗೆ ಜೀವಿತಾವಧಿ ಇದೆಯೇ?: ಫೋನನ್ನು ಎಷ್ಟು ಸಮಯ ಬಳಸಬಹುದು?
Image
ಮಂಗಳೂರು, ಮೈಸೂರು ಸೇರಿ 115 ಕಡೆ ಜಿಯೋ ಏರ್​ಫೈಬರ್ ಆರಂಭ
Image
ಹೊಸ ವರ್ಷಕ್ಕೆ ಬರುತ್ತಿದೆ ರೋಚಕತೆ ಸೃಷ್ಟಿಸಿರುವ ಒನ್​ಪ್ಲಸ್ 12 5G ಫೋನ್
Image
ಬಜೆಟ್ ಪ್ರಿಯರಿಗೆ ಬಂತು ಬಂಪರ್ ಫೋನ್: ಇನ್ಫಿನಿಕ್ಸ್ ಸ್ಮಾರ್ಟ್​ 8 ಬಿಡುಗಡೆ

BSNL ನವೆಂಬರ್ 11 ರಿಂದ ಪ್ರೀಮಿಯಂ ಸಂಖ್ಯೆಗಳ ಇ-ಹರಾಜನ್ನು ಪ್ರಾರಂಭಿಸಿದೆ. ಈ ಹರಾಜು ನವೆಂಬರ್ 20 ರವರೆಗೆ ನಡೆಯಲಿದೆ. ಈ ಪ್ರೀಮಿಯಂ ಸಂಖ್ಯೆಯನ್ನು ಪಶ್ಚಿಮ ಬಂಗಾಳ, ಗುಜರಾತ್, ಜಾರ್ಖಂಡ್, ಕೇರಳ, ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿ ಹರಾಜು ಮಾಡಲಾಗುತ್ತಿದೆ. ಪ್ರೀಮಿಯಂ ಸಂಖ್ಯೆಯ ಬೆಲೆ ಎಷ್ಟು ಎಂಬುದನ್ನು ನೋಡುವುದಾದರೆ ಇಲ್ಲಿ ವಿವಿಧ ಸಂಖ್ಯೆಗೆ ವಿವಿಧ ಬೆಲೆ ನಿಗದಿ ಪಡಿಸಲಾಗಿದೆ.

ಪ್ಯಾಟರ್ನ್-1

ಹರಾಜು ಸಂಖ್ಯೆ 8300000022 -25 ಸಾವಿರದಿಂದ ಪ್ರಾರಂಭವಾಗುತ್ತದೆ.

ಹರಾಜು ಸಂಖ್ಯೆ 8300001234 -10 ಸಾವಿರದಿಂದ ಪ್ರಾರಂಭವಾಗುತ್ತದೆ.

ಹರಾಜು ಸಂಖ್ಯೆ 8300012345 -10 ಸಾವಿರದಿಂದ ಪ್ರಾರಂಭವಾಗುತ್ತದೆ.

ಪ್ಯಾಟರ್ನ್-II ಅಡಿಯಲ್ಲಿ

ಹರಾಜು ಸಂಖ್ಯೆ 8300010001 -8 ಸಾವಿರದಿಂದ ಪ್ರಾರಂಭವಾಗುತ್ತದೆ.

ಹರಾಜು ಸಂಖ್ಯೆ 8300020002 -8 ಸಾವಿರದಿಂದ ಪ್ರಾರಂಭವಾಗುತ್ತದೆ.

ಹರಾಜು ಸಂಖ್ಯೆ 8300030003 -8 ಸಾವಿರದಿಂದ ಪ್ರಾರಂಭವಾಗುತ್ತದೆ.

ಪ್ಯಾಟರ್ನ್-3

ಹರಾಜು ಸಂಖ್ಯೆ 8300081000 -5 ಸಾವಿರದಿಂದ ಪ್ರಾರಂಭವಾಗುತ್ತದೆ.

ಹರಾಜು ಸಂಖ್ಯೆ 8300082000 -5 ಸಾವಿರದಿಂದ ಪ್ರಾರಂಭವಾಗುತ್ತದೆ.

ಹರಾಜು ಸಂಖ್ಯೆ 8300083000 -5 ಸಾವಿರದಿಂದ ಪ್ರಾರಂಭವಾಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ