Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು, ಮೈಸೂರು ಸೇರಿ 115 ಕಡೆ ಜಿಯೋ ಏರ್​ಫೈಬರ್ ಆರಂಭ: ಪ್ಲಾನ್ ಕುರಿತ ಮಾಹಿತಿ ಇಲ್ಲಿದೆ

Jio AirFiber Price and Plans: ಜಿಯೋ ಏರ್​ಫೈಬರ್ ಸೇವೆಯ ಅಡಿಯಲ್ಲಿ, ಬಳಕೆದಾರರು 16 OTT ಅಪ್ಲಿಕೇಶನ್‌ಗಳ ಚಂದಾದಾರಿಕೆ, 550 ಕ್ಕೂ ಹೆಚ್ಚು ಡಿಜಿಟಲ್ ಟಿವಿ ಚಾನೆಲ್‌ಗಳಿಗೆ ಪ್ರವೇಶವನ್ನು ಪಡೆಯುತ್ತಾರೆ. ತಮ್ಮ ಸ್ಥಳದಲ್ಲಿ ಫೈಬರ್ ಪ್ರವೇಶವನ್ನು ಹೊಂದಿರದ ಬಳಕೆದಾರರಿಗೆ, ಜಿಯೋದ ಏರ್‌ಫೈಬರ್ ಸೇವೆಗಳು ವೈ-ಫೈ ರೀತಿಯ ಸೇವೆಗಳನ್ನು ನೀಡುತ್ತವೆ.

ಮಂಗಳೂರು, ಮೈಸೂರು ಸೇರಿ 115 ಕಡೆ ಜಿಯೋ ಏರ್​ಫೈಬರ್ ಆರಂಭ: ಪ್ಲಾನ್ ಕುರಿತ ಮಾಹಿತಿ ಇಲ್ಲಿದೆ
jio airfiber
Follow us
Vinay Bhat
|

Updated on: Nov 12, 2023 | 2:31 PM

ರಿಲಾಯನ್ಸ್ ಜಿಯೋ ಸಂಸ್ಥೆ ಇತ್ತೀಚೆಗಷ್ಟೆ ಗಣೇಶ ಚತುರ್ಥಿ ದಿನದಂದು ತನ್ನ ಜಿಯೋ ಏರ್​ಫೈಬರ್ (Jio AirFiber) ಸೇವೆಯನ್ನು ದೇಶದ ಕೆಲವು ಕಡೆಗಳಲ್ಲಿ ಪ್ರಾರಂಭ ಮಾಡಿತ್ತು. ಇದೀಗ ರಿಲಯನ್ಸ್ ದೀಪಾವಳಿಯ ಸಮಯದಂದು ಅಧಿಕೃತವಾಗಿ ಜಿಯೋ ಏರ್‌ಫೈಬರ್ ಅನ್ನು ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಮುಂಬೈ ಮತ್ತು ಪುಣೆ ಜೊತೆಗೆ ಹೆಚ್ಚಿನ ನಗರಗಳಿಗೆ ವಿಸ್ತರಿಸಿದೆ. ಜಿಯೋ ಏರ್​ಫೈಬರ್​ಗಾಗಿ ಕಂಪನಿಯ ಮೀಸಲು ಪುಟವನ್ನು ತೆರೆದಿದ್ದು, ಲಭ್ಯವಿರುವ ಎಲ್ಲ ನಗರಗಳ ಸಂಪೂರ್ಣ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ.

ಜಿಯೋ ಏರ್​ಫೈಬರ್ 115 ನಗರಗಳ ಸಂಪೂರ್ಣ ಪಟ್ಟಿ

ಆಂಧ್ರಪ್ರದೇಶ – ಅನಂತಪುರ, ಕಡಪಾ, ಗುಂಟೂರು, ಕಾಕಿನಾಡ, ಕರ್ನೂಲ್, ನೆಲ್ಲೂರು, ಓಂಗೋಲ್, ರಾಜಮಂಡ್ರಿ, ತಿರುಪತಿ, ವಿಜಯವಾಡ, ವಿಶಾಖಪಟ್ಟಣಂ, ವಿಜಯನಗರಂ.

ದೆಹಲಿ – ದೆಹಲಿ NCR

ಇದನ್ನೂ ಓದಿ
Image
ಹೊಸ ವರ್ಷಕ್ಕೆ ಬರುತ್ತಿದೆ ರೋಚಕತೆ ಸೃಷ್ಟಿಸಿರುವ ಒನ್​ಪ್ಲಸ್ 12 5G ಫೋನ್
Image
ಬಜೆಟ್ ಪ್ರಿಯರಿಗೆ ಬಂತು ಬಂಪರ್ ಫೋನ್: ಇನ್ಫಿನಿಕ್ಸ್ ಸ್ಮಾರ್ಟ್​ 8 ಬಿಡುಗಡೆ
Image
ರಿಲೀಸ್ ಆಯಿತು 108MP ಕ್ಯಾಮೆರಾದ ಹೊಸ ​ಫೋನ್: ಫಾಸ್ಟ್ ಚಾರ್ಜರ್ ಕೂಡ ಇದೆ
Image
ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್: ನಥಿಂಗ್ ಫೋನ್ 2 ಮೇಲೆ ದಾಖಲೆಯ ರಿಯಾಯಿತಿ

ಗುಜರಾತ್ – ಅಹಮದಾಬಾದ್, ಆನಂದ್, ಅಂಕಲೇಶ್ವರ, ಬಾರ್ಡೋಲಿ, ಭರೂಚ್, ಭಾವನಗರ, ಭುಜ್, ದಾಹೋದ್, ದೀಸಾ, ಹಿಮ್ಮತ್‌ನಗರ, ಜಾಮ್‌ನಗರ, ಜುನಾಗಢ್, ಕಡಿ, ಕಲೋಲ್, ಮೆಹ್ಸಾನಾ, ಮೊರ್ವಿ, ನಾಡಿಯಾಡ್, ನವಸಾರಿ, ಪಾಲನ್‌ಪುರ್, ರಾಜ್‌ಕೋಟ್, ಸೂರತ್, ವಡೋದರಾ, ವಲ್ಸಾದ್, ವಾಪಿ ಮತ್ತು ವಾಧ್ವಾನ್.

ಶವೋಮಿಯಿಂದ ಸದ್ದಿಲ್ಲದೆ ಹೊಸ ಫೋನ್ ಬಿಡುಗಡೆ: ಬಜೆಟ್ ಬೆಲೆಯ ರೆಡ್ಮಿ 13C ಹೇಗಿದೆ ನೋಡಿ

ಕರ್ನಾಟಕ – ಬೆಂಗಳೂರು, ಬೆಳಗಾವಿ, ಬಳ್ಳಾರಿ, ಬೀದರ್, ಬಿಜಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾಂಡೇಲಿ, ದಾವಣಗೆರೆ, ದೊಡ್ಡಬಳ್ಳಾಪುರ, ಗುಲ್ಬರ್ಗ, ಹೊಸಪೇಟೆ, ಹುಬ್ಬಳ್ಳಿ-ಧಾರವಾಡ, ಮಂಡ್ಯ, ಮಂಗಳೂರು, ಮೈಸೂರು, ರಾಯಚೂರು, ಶಿವಮೊಗ್ಗ, ತುಮಕೂರು ಮತ್ತು ಉಡುಪಿ.

ಮಹಾರಾಷ್ಟ್ರ – ಪುಣೆ, ಮುಂಬೈ, ಅಹ್ಮದ್‌ನಗರ, ಅಮರಾವತಿ, ಔರಂಗಾಬಾದ್, ಚಂದ್ರಾಪುರ, ಜಲ್ನಾ, ಕೊಲ್ಲಾಪುರ, ನಾಗ್ಪುರ, ನಾಂದೇಡ್, ನಾಸಿಕ್, ರತ್ನಗಿರಿ, ಸಾಂಗ್ಲಿ, ಮತ್ತು ಸೊಲ್ಲಾಪುರ.

ತಮಿಳುನಾಡು – ಚೆನ್ನೈ, ಅಂಬೂರ್, ಚೆಂಗಲ್ಪಟ್ಟು, ಕೊಯಮತ್ತೂರು, ಈರೋಡ್, ಹೊಸೂರು, ಕಾಂಚೀಪುರಂ, ಕರೂರ್, ಕುಂಭಕೋಣಂ, ಮಧುರೈ, ನಾಮಕ್ಕಲ್, ನೇವೇಲಿ, ಪಟ್ಟುಕೊಟ್ಟೈ, ಪೊಲ್ಲಾಚಿ, ಸೇಲಂ, ಶ್ರೀಪೆರುಂಪುದೂರ್, ಶ್ರೀರಂಗಂ, ತಿರುಚಿರಾಪಳ್ಳಿ, ತಿರುಪ್ಪೂರ್, ತಿರುವಳ್ಳೂರು, ತಿರುವಣ್ಣಾಮಲೈ, ಮತ್ತು ವೆಲ್ಲೂರು.

ತೆಲಂಗಾಣ – ಹೈದರಾಬಾದ್, ಆರ್ಮೂರ್ (ಕೋಟಾರ್ಮೂರ್), ಜಗ್ತಿಯಾಲ್, ಕರೀಂನಗರ, ಖಮ್ಮಮ್, ಕೊತಗುಡೆಂ, ಮಹೆಬೂಬ್ನಗರ, ಮಂಚೇರಿಯಲ್, ಮಿರ್ಯಾಲ್ಗುಡ, ನಿರ್ಮಲ್, ನಿಜಾಮಾಬಾದ್, ಪಾಲ್ವೋಂಚ, ಪೆದ್ದಪಲ್ಲಿ(ರಾಮಗುಂಡಂ), ರಾಮಗುಂಡಂ, ಸಂಗರೆಡ್ಡಿ, ಸಿದ್ದಿಪೇಟ್, ಸಿರ್ಸಿಲ್ಲಾ, ಸೂರ್ಯಪೇಟ್, ತಾಂಡಲೂರು.

ಪಶ್ಚಿಮ ಬಂಗಾಳ – ಕೋಲ್ಕತ್ತಾ

ಜಿಯೋ ಏರ್​ಫೈಬರ್ ಕೊಡುಗೆ, ಯೋಜನೆ:

ಜಿಯೋ ಏರ್​ಫೈಬರ್ ಸೇವೆಯ ಅಡಿಯಲ್ಲಿ, ಬಳಕೆದಾರರು 16 OTT ಅಪ್ಲಿಕೇಶನ್‌ಗಳ ಚಂದಾದಾರಿಕೆ, 550 ಕ್ಕೂ ಹೆಚ್ಚು ಡಿಜಿಟಲ್ ಟಿವಿ ಚಾನೆಲ್‌ಗಳಿಗೆ ಪ್ರವೇಶವನ್ನು ಪಡೆಯುತ್ತಾರೆ. ತಮ್ಮ ಸ್ಥಳದಲ್ಲಿ ಫೈಬರ್ ಪ್ರವೇಶವನ್ನು ಹೊಂದಿರದ ಬಳಕೆದಾರರಿಗೆ, ಜಿಯೋದ ಏರ್‌ಫೈಬರ್ ಸೇವೆಗಳು ವೈ-ಫೈ ರೀತಿಯ ಸೇವೆಗಳನ್ನು ನೀಡುತ್ತವೆ. ಜಿಯೋ ಏರ್​ಫೈಬರ್ ಜೊತೆಗೆ ಬಳಕೆದಾರರು 4K ಸ್ಮಾರ್ಟ್ ಸೆಟ್-ಟಾಪ್ ಬಾಕ್ಸ್ ಅನ್ನು ಪಡೆಯುತ್ತಾರೆ.

ಯೋಜನೆಗಳ ಬಗ್ಗೆ ನೋಡುವುದಾದರೆ, ಜಿಯೋ ಏರ್‌ಫೈಬರ್ ಪ್ಲಾನ್‌ಗಳು ಒಂದು ತಿಂಗಳವರೆಗೆ ಜಿಎಸ್‌ಟಿಯನ್ನು ಹೊರತುಪಡಿಸಿ 599 ರೂ. ಗಳಿಂದ ಪ್ರಾರಂಭವಾಗುತ್ತವೆ ಮತ್ತು 30 Mbps ವೇಗ, ಅನಿಯಮಿತ ಡೌನ್‌ಲೋಡ್‌ಗಳನ್ನು ನೀಡುತ್ತವೆ. ಈ ಯೋಜನೆಯು ಜಿಯೋ ಸಿನಿಮಾ, ಸೋನಿ ಲಿವ್, ಡಿಸ್ನಿ+ ಹಾಟ್​ಸ್ಟಾರ್, ಝೀ5, ಸನ್ ನೆಕ್ಸ್ಟ್, ಡಿಸ್ಕವರಿ+ ಸೇರಿದಂತೆ ಅನೇಕ OTT ಸೇವೆಗಳಿಗೆ ಪ್ರವೇಶವನ್ನು ನೀಡುತ್ತದೆ. ಅಂತೆಯೆ 899 ರೂ. ಮತ್ತು 1199 ರೂ. ಗಳ ಮಾಸಿಕ ಯೋಜನೆಗಳು ಸಹ ಲಭ್ಯವಿವೆ. ಬಳಕೆದಾರರು ವಾರ್ಷಿಕ ಅಥವಾ ಆರು ತಿಂಗಳ ಯೋಜನೆಗಳನ್ನು ಸಹ ಆಯ್ಕೆ ಮಾಡಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ