Disney+ Hotstar: ಐಪಿಎಲ್ಗೂ ಮುನ್ನ ರಿಚಾರ್ಜ್ ದರ ಹೆಚ್ಚಿಸಿದ ಡಿಸ್ನಿ + ಹಾಟ್ಸ್ಟಾರ್
TV9 Web | Updated By: ಝಾಹಿರ್ ಯೂಸುಫ್
Updated on:
Aug 23, 2021 | 7:47 PM
IPL 2021: ಮೂರು ಹೊಸ ರಿಚಾರ್ಜ್ ಯೋಜನೆಗಳನ್ನು ಗ್ರಾಹಕರ ಮುಂದಿಟ್ಟಿದೆ. ಈ ಹೊಸ ಯೋಜನೆಗಳು ಎಲ್ಲಾ ಹೊಸ ಬಳಕೆದಾರರು ಮತ್ತು ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಅನ್ವಯವಾಗಲಿದೆ ಎಂದು ಕಂಪೆನಿ ತಿಳಿಸಿದೆ. ಡಿಸ್ನಿ + ಹಾಟ್ಸ್ಟಾರ್ ರಿಚಾರ್ಜ್ ಪ್ಲ್ಯಾನ್ಗಳು ಈ ಕೆಳಗಿನಂತಿವೆ.
1 / 5
ಜನಪ್ರಿಯ OTT ಪ್ಲಾಟ್ಫಾರ್ಮ್ ಡಿಸ್ನಿ + ಹಾಟ್ಸ್ಟಾರ್ ಹೊಸ ರಿಚಾರ್ಜ್ ಪ್ಲ್ಯಾನ್ಗಳನ್ನು ಪರಿಚಯಿಸಿದೆ. ಸೆಪ್ಟೆಂಬರ್ 1 ರಿಂದ ಈ ರಿಚಾರ್ಜ್ ಯೋಜನೆಗಳು ಚಾಲನೆಗೆ ಬರಲಿದೆ. ಸೆಪ್ಟೆಂಬರ್ 19 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ದ್ವಿತಿಯಾರ್ಧ ಆರಂಭವಾಗುತ್ತಿದ್ದು, ಇದೇ ಕಾರಣದಿಂದ ಡಿಸ್ನಿ+ಹಾಟ್ಸ್ಟಾರ್ ತನ್ನ ರಿಚಾರ್ಜ್ ಪ್ಲ್ಯಾನ್ಗಳನ್ನು ಬದಲಿಸಿಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
2 / 5
ಏಕೆಂದರೆ ಈ ಹಿಂದೆ 399 ರೂ. ರಿಚಾರ್ಜ್ ಪ್ಲ್ಯಾನ್ನಲ್ಲಿ ಐಪಿಎಲ್ ಲೈವ್ ವೀಕ್ಷಿಸಬಹುದಾಗಿತ್ತು. ಆದರೀಗ 399 ರೂ. ಪ್ಲ್ಯಾನ್ ಅನ್ನು ಡಿಸ್ನಿ + ಹಾಟ್ಸ್ಟಾರ್ ನಿಲ್ಲಿಸಿದ್ದು, ಅದರ ಬದಲಿಗೆ ಮೂರು ಹೊಸ ರಿಚಾರ್ಜ್ ಯೋಜನೆಗಳನ್ನು ಗ್ರಾಹಕರ ಮುಂದಿಟ್ಟಿದೆ. ಈ ಹೊಸ ಯೋಜನೆಗಳು ಎಲ್ಲಾ ಹೊಸ ಬಳಕೆದಾರರು ಮತ್ತು ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಅನ್ವಯವಾಗಲಿದೆ ಎಂದು ಕಂಪೆನಿ ತಿಳಿಸಿದೆ. ಡಿಸ್ನಿ + ಹಾಟ್ಸ್ಟಾರ್ ರಿಚಾರ್ಜ್ ಪ್ಲ್ಯಾನ್ಗಳು ಈ ಕೆಳಗಿನಂತಿವೆ.
3 / 5
499 ರೂ. ಯೋಜನೆ: ಪ್ರಸ್ತುತ ಡಿಸ್ನಿ + ಹಾಟ್ಸ್ಟಾರ್ನ ಅಗ್ಗದ ರಿಚಾರ್ಜ್ ಪ್ಲ್ಯಾನ್ ಅಂದರೆ 499 ರೂ. ಈ ಪ್ಲ್ಯಾನ್ ರಿಚಾರ್ಜ್ ಮಾಡಿದ್ರೆ ನೀವು HD ಸ್ಟ್ರೀಮಿಂಗ್ ಗುಣಮಟ್ಟದಲ್ಲಿ ಮಾತ್ರ ಲೈವ್ ಹಾಗೂ ಮನರಂಜನಾ ವಿಡಿಯೋಗಳನ್ನು ವೀಕ್ಷಿಸಬಹುದು. ಅಲ್ಲದೆ ಇದು ಮೊಬೈಲ್ ಫೋನ್ಗಳಲ್ಲಿ ಮಾತ್ರ ಲಭ್ಯವಿರಲಿದೆ.
4 / 5
899 ರೂ. ಯೋಜನೆ: ಈ ರಿಚಾರ್ಜ್ ಪ್ಲ್ಯಾನ್ನಲ್ಲಿ ಎರಡು ಲಾಗಿನ್ ಲಭ್ಯವಿರಲಿದೆ. ಅಂದರೆ HD ಕಂಟೆಂಟ್ ಸ್ಟ್ರೀಮಿಂಗ್ ಅನ್ನು ಎರಡು ಡಿವೈಸ್ನಲ್ಲಿ ಏಕಕಾಲಕ್ಕೆ ಲೈವ್ ಅಥವಾ ಡಿಸ್ನಿ-ಹಾಟ್ಸ್ಟಾರ್ನ ಇನ್ನಿತರ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಅದು ಟ್ಯಾಬ್ಲೆಟ್, ಟಿವಿ ಅಥವಾ ಮೊಬೈಲ್ ಆಗಿರಬಹುದು. ಉಳಿದಂತೆ ಈ ಹಿಂದಿನ ಪ್ಲ್ಯಾನ್ನಂತೆ ಯಾವುದೇ ವ್ಯತ್ಯಾಸವಿಲ್ಲ.
5 / 5
1499 ರೂ. ಯೋಜನೆ: ಈ ಯೋಜನೆಯಲ್ಲಿ ಗ್ರಾಹಕರು 4K ಗುಣಮಟ್ಟದ ವಿಡಿಯೋಗಳನ್ನು ವೀಕ್ಷಿಸಬಹುದು. ಅಂದರೆ ಈ ರಿಚಾರ್ಜ್ ಪ್ಲ್ಯಾನ್ ಹಾಕಿಸಿಕೊಂಡರೆ ವಿಡಿಯೋ ಗುಣಮಟ್ಟ ಮತ್ತಷ್ಟು ಉತ್ತಮವಾಗಿರುತ್ತದೆ. ಹಾಗೆಯೇ ಬಳಕೆದಾರರು ಏಕಕಾಲದಲ್ಲಿ ನಾಲ್ಕು ಡಿವೈಸ್ನಲ್ಲಿ ಸ್ಟ್ರೀಮ್ ಮಾಡಬಹುದು. ಬಳಕೆದಾರರ ಸಂಖ್ಯೆ ನಾಲ್ಕು ಮೀರಿದರೆ ಒಂದು ಖಾತೆ ಸ್ವಯಂಚಾಲಿತವಾಗಿ ಲಾಗ್ ಔಟ್ ಆಗುತ್ತದೆ.