ದೇಶದಲ್ಲಿ ಒಂದರ ಹಿಂದೆ ಒಂದರಂತೆ ಹಬ್ಬಗಳು ಬರುತ್ತಿದ್ದು, ಪ್ರಸಿದ್ಧ ಇ ಕಾಮರ್ಸ್ ತಾಣಗಳು ಮೇಳಗಳನ್ನು ಆಯೋಜಿಸಲು ಸಜ್ಜಾಗಿ ನಿಂತಿದೆ. ಇದೀಗ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ (Flipkart Big Billion Days) ಮಾರಾಟದ ಟೀಸರ್ ಪುಟವನ್ನು ತನ್ನ ವೆಬ್‌ಸೈಟ್‌ನಲ್ಲಿ ಲೈವ್ ಆಗಿ ತಿಳಿಸಿದೆ. ಮಾರಾಟದ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಿದೆ. ಈ ಮಾರಾಟವು ಅಕ್ಟೋಬರ್ ಮೊದಲ ವಾರದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.
ಈ ಬಾರಿಯ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಹಲವಾರು ಸಾಧನಗಳು ಭಾರಿ ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ಹೇಳಲಾಗಿದೆ. ಇ-ಕಾಮರ್ಸ್ ದೈತ್ಯ ದೀಪಾವಳಿ ಹಬ್ಬಕ್ಕೆ ವಾರಗಳಿರುವಾಗ ವಿವಿಧ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್‌ಗಳ ಮೇಲೆ ದೊಡ್ಡ ರಿಯಾಯಿತಿಗಳನ್ನು ನೀಡುವ ಮೂಲಕ ವರ್ಷದ ಅತಿದೊಡ್ಡ ಮಾರಾಟಕ್ಕೆ ಚಾಲನೆ ಸಿಗಲಿದೆ.
ಭಾರತಕ್ಕೆ ಬರುತ್ತಿದೆ ಹೊಸ ಫ್ಲಿಪ್ ಫೋನ್: ಸೋರಿಕೆ ಆಯಿತು ರೋಚಕ ವಿಷಯ
ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಮಾರಾಟದ ಪುಟವು ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಗೆ ಲಭ್ಯವಿರುತ್ತದೆ ಎಂದು ಹೇಳಿದೆ. ಇದರಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ S21 FE 5G ಮತ್ತು ಐಫೋನ್‌ಗಳು ಸಹ ಸೇರಿವೆ. ಕಂಪನಿಯು ಸ್ಮಾರ್ಟ್ಫೋನ್ಗಳ ಹೆಸರನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ, ಆದರೆ ಟೀಸರ್ ಪುಟವು ಐಫೋನ್ ಡೀಲ್‌ಗಳನ್ನು ಅಕ್ಟೋಬರ್ 1 ರಂದು ಬಹಿರಂಗಪಡಿಸಲಾಗುವುದು ಎಂದು ದೃಢಪಡಿಸಿದೆ.
ಸ್ಯಾಮ್ಸಂಗ್ ಮತ್ತು ರಿಯಲ್ ಮಿ ಫೋನ್ ಡೀಲ್‌ಗಳು ಕ್ರಮವಾಗಿ ಅಕ್ಟೋಬರ್ 3 ಮತ್ತು ಅಕ್ಟೋಬರ್ 6 ರಂದು ಲೈವ್ ಆಗುತ್ತವೆ. ಅಂತೆಯೇ, ರೆಡ್ಮಿ ಫೋನ್ ಅಭಿಮಾನಿಗಳು ಅಕ್ಟೋಬರ್ 7 ರವರೆಗೆ ಕಾಯಬೇಕಾಗಿದೆ ಮತ್ತು ಒಪ್ಪೋ ಮತ್ತು ಪೋಕೋ ಡೀಲ್‌ಗಳನ್ನು ಅಕ್ಟೋಬರ್ 8 ರಂದು ನಡೆಸಲು ತೀರ್ಮಾನಿಸಿದೆ ಎನ್ನಲಾಗಿದೆ.
ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ, ಲ್ಯಾಪ್‌ಟಾಪ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳ ಮೇಲೆ 50 ರಿಂದ 80 ಪ್ರತಿಶತದಷ್ಟು ರಿಯಾಯಿತಿ ಇರಲಿದೆ. ಪಟ್ಟಿಯ ಪ್ರಕಾರ, ಇಯರ್‌ಫೋನ್‌ಗಳ ಬೆಲೆ 499 ರೂ. ಮತ್ತು ಕೀಬೋರ್ಡ್‌ಗಳು 99 ರೂ. ಯಿಂದ ಪ್ರಾರಂಭವಾಗುತ್ತವೆ. ವೈಡ್‌ಸ್ಕ್ರೀನ್ ಮಾನಿಟರ್‌ಗಳ ಮೇಲೆ 70 ಪ್ರತಿಶತದಷ್ಟು ರಿಯಾಯಿತಿ, ಪ್ರಿಂಟರ್‌ಗಳ ಮೇಳೆ 60 ಪ್ರತಿಶತದವರೆಗೆ ಡಿಸ್ಕೌಂಟ್ ಇರುತ್ತದೆ. ಟಿವಿಗಳು ಮತ್ತು ಇತರ ಉಪಕರಣಗಳನ್ನು ಖರೀದಿಸಲು ಕಾಯುತ್ತಿರುವವರಿಗೆ, ಫ್ಲಿಪ್‌ಕಾರ್ಟ್ 80 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡುತ್ತದೆ. ಕೆಲವು ಜನಪ್ರಿಯ 4K ಸ್ಮಾರ್ಟ್ ಟಿವಿಗಳು ಸೇಲ್ನಲ್ಲಿ ಶೇಕಡಾ 75 ರಷ್ಟು ರಿಯಾಯಿತಿಯನ್ನು ಪಡೆಯುತ್ತವೆ.
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ ರಶ್ ಅವರ್ಸ್ ಡೀಲ್‌ಗಳು, ಬಂಪರ್ ವ್ಯಾಲ್ಯೂ ಅವರ್‌ಗಳು, ಸೂಪರ್ ವ್ಯಾಲ್ಯೂ ಕಾಂಬೋಸ್ ಮತ್ತು ಹೆಚ್ಚಿನವುಗಳು ಸಹ ಇರುತ್ತವೆ. ಉಳಿದ ವಿವರಗಳು ಸದ್ಯಕ್ಕೆ ತಿಳಿದಿಲ್ಲ. ಆದರೆ, ಐಫೋನ್ 13 ಮತ್ತು ಐಫೋನ್ 14 ಕೆಲವು ರಿಯಾಯಿತಿಗಳನ್ನು ಪಡೆಯುವ ಸಾಧ್ಯತೆಯಿದೆ. ಪ್ರಸ್ತುತ, ಐಫೋನ್ 13 ಫ್ಲಿಪ್‌ಕಾರ್ಟ್‌ನಲ್ಲಿ 128GB ಸ್ಟೋರೇಜ್ ಮಾದರಿಗೆ 52,999 ರೂ. ಬೆಲೆಯೊಂದಿಗೆ ಪಟ್ಟಿಮಾಡಲಾಗಿದೆ. ಐಫೋನ್ 14 64,999 ರೂ. ಗೆ ಮಾರಾಟವಾಗುತ್ತಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Thu, 21 September 23