Google Warning: ಗೂಗಲ್​ನಿಂದ ಎಚ್ಚರಿಕೆ: ಬರೋಬ್ಬರಿ 250 ಕೋಟಿ ಬಳಕೆದಾರರ ಜಿಮೇಲ್ ಖಾತೆಗಳನ್ನು ಎಐ ಮೂಲಕ ಹ್ಯಾಕ್ ಆಗುತ್ತೆ

ಜಿಮೇಲ್ ಖಾತೆಗಳನ್ನು ಎಐ ಮೂಲಕ ಹ್ಯಾಕ್ ಮಾಡಬಹುದು ಎಂದು ಗೂಗಲ್ ತನ್ನ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಸೈಬರ್ ಅಪರಾಧಿಗಳು ಗೂಗಲ್ ಬೆಂಬಲದ ಹೆಸರಿನಲ್ಲಿ ಕರೆ ಮಾಡುತ್ತಿದ್ದಾರೆ ಎಂದು ಗೂಗಲ್ ಲಕ್ಷಾಂತರ ಜಿಮೇಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಅವರು ಬಳಸಿದ ಕಾಲರ್ ಐಡಿ ಸಂಪೂರ್ಣವಾಗಿ ನೈಜವಾಗಿ ಕಾಣುತ್ತದೆ, ಇದರಿಂದಾಗಿ ಬಳಕೆದಾರರು ಅವರ ಬಲೆಗೆ ಸುಲಭವಾಗಿ ಬೀಳುತ್ತಾರೆ.

Google Warning: ಗೂಗಲ್​ನಿಂದ ಎಚ್ಚರಿಕೆ: ಬರೋಬ್ಬರಿ 250 ಕೋಟಿ ಬಳಕೆದಾರರ ಜಿಮೇಲ್ ಖಾತೆಗಳನ್ನು ಎಐ ಮೂಲಕ ಹ್ಯಾಕ್ ಆಗುತ್ತೆ
Gmail
Follow us
ಮಾಲಾಶ್ರೀ ಅಂಚನ್​
| Updated By: Vinay Bhat

Updated on:Feb 04, 2025 | 8:56 AM

2.5 ಬಿಲಿಯನ್ ಅಂದರೆ 250 ಕೋಟಿ ಬಳಕೆದಾರರ ಜಿಮೇಲ್ ಖಾತೆಗಳನ್ನು ಎಐ ಮೂಲಕ ಹ್ಯಾಕ್ ಮಾಡಬಹುದು ಎಂದು ಗೂಗಲ್ ತನ್ನ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಸೈಬರ್ ಅಪರಾಧಿಗಳು ಗೂಗಲ್ ಬೆಂಬಲದ ಹೆಸರಿನಲ್ಲಿ ಬಳಕೆದಾರರಿಗೆ ಕರೆ ಮಾಡುವ ಮೂಲಕ ಈ ದೊಡ್ಡ ವಂಚನೆ ಮಾಡುತ್ತಿದ್ದಾರೆ. ಇಂತಹ ಯಾವುದೇ ಫೇಕ್ ಕಾಲ್ ಅನ್ನು ನಂಬಬೇಡಿ ಮತ್ತು ಕೂಡಲೇ ತಮ್ಮ ಜಿಮೇಲ್ ಖಾತೆಯ ಪಾಸ್ ವರ್ಡ್ ರೀಸೆಟ್ ಮಾಡಿ ಎಂದು ಗೂಗಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.

ಫೋರ್ಬ್ಸ್ ವರದಿಯ ಪ್ರಕಾರ, ಸೈಬರ್ ಅಪರಾಧಿಗಳು ಗೂಗಲ್ ಬೆಂಬಲದ ಹೆಸರಿನಲ್ಲಿ ಕರೆ ಮಾಡುತ್ತಿದ್ದಾರೆ ಎಂದು ಗೂಗಲ್ ಲಕ್ಷಾಂತರ ಜಿಮೇಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಅವರು ಬಳಸಿದ ಕಾಲರ್ ಐಡಿ ಸಂಪೂರ್ಣವಾಗಿ ನೈಜವಾಗಿ ಕಾಣುತ್ತದೆ, ಇದರಿಂದಾಗಿ ಬಳಕೆದಾರರು ಅವರ ಬಲೆಗೆ ಸುಲಭವಾಗಿ ಬೀಳುತ್ತಾರೆ. ಹ್ಯಾಕರ್‌ಗಳು ಜಿಮೇಲ್ ಬಳಕೆದಾರರಿಗೆ ಗೂಗಲ್ ಬೆಂಬಲ ಏಜೆಂಟ್ ಹೆಸರಿನಲ್ಲಿ ಕರೆ ಮಾಡುತ್ತಾರೆ ಮತ್ತು ‘ನಿಮ್ಮ ಖಾತೆಹ್ಯಾಕ್ ಆಗಿದೆ, ಇಮೇಲ್‌ನಲ್ಲಿ ಸ್ವೀಕರಿಸಿದ ಕೋಡ್ ಅನ್ನು ಬಳಸಿಕೊಂಡು ಖಾತೆಯನ್ನು ಮರುಪಡೆಯಿರಿ’ ಎಂದು ಅವರು ತಿಳಿಸುತ್ತಾರೆ. ಅಷ್ಟೇ ಅಲ್ಲ, ಹ್ಯಾಕರ್‌ಗಳು ಕಳುಹಿಸಿರುವ ಇ-ಮೇಲ್ ಮತ್ತು ರಿಕವರಿ ಕೋಡ್ ಕೂಡ ಅಸಲಿ ಎನಿಸುತ್ತಿದೆ.

ಈ ಕೆಲಸವನ್ನು ತಕ್ಷಣ ಮಾಡಿ:

  • ನೀವು ಅಂತಹ ಯಾವುದೇ ಇಮೇಲ್ ಅಥವಾ ಕರೆಯನ್ನು ಸ್ವೀಕರಿಸಿದರೆ, ಅದನ್ನು ನಿರ್ಲಕ್ಷಿಸಿ.
  • ತಪ್ಪಾಗಿ ನೀವು ಹ್ಯಾಕರ್‌ಗಳು ಕಳುಹಿಸಿದ ರೀಸೆಟ್ ಕೋಡ್ ಅನ್ನು ಬಳಸಿಕೊಂಡು ನಿಮ್ಮ ಖಾತೆಯನ್ನು ಮರುಪಡೆಯಲು ಪ್ರಯತ್ನಿಸಿದ್ದರೆ, ನೀವು ತಕ್ಷಣ ನಿಮ್ಮ ಜಿಮೇಲ್ ಖಾತೆಯನ್ನು ಲಾಗೌಟ್ ಮಾಡಿ.
  • ಇದು ಮಾತ್ರವಲ್ಲದೆ, ನಿಮ್ಮ ಖಾತೆಗೆ ಇನ್ನಷ್ಟು ಭದ್ರತೆ ಮಾಡಲು ಟು ಸ್ಟೆಪ್ ವೆರಿಫಿಕೇಷನ್ ಮೂಲಕ ನಿಮ್ಮ ಜಿಮೇಲ್ ಖಾತೆಯನ್ನು ಯಾವಾಗಲೂ ರಕ್ಷಿಸಿ.
  • ಬಳಕೆದಾರರ ಇ-ಮೇಲ್ ಖಾತೆಗಳಿಗೆ ಪ್ರವೇಶ ಪಡೆಯಲು ಸೈಬರ್ ಅಪರಾಧಿಗಳು ನಿರಂತರವಾಗಿ ಇಂತಹ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಹ್ಯಾಕರ್‌ಗಳ ಈ ಟ್ರಿಕ್ ಸಹ ಪರಿಣಾಮಕಾರಿಯಾಗಿದೆ ಏಕೆಂದರೆ ಇದರಲ್ಲಿ ಅವರು ಯಾವುದೇ ಭದ್ರತಾ ನಿಯಂತ್ರಣವನ್ನು ಬೈಪಾಸ್ ಮಾಡುವ ಅಗತ್ಯವಿಲ್ಲ.

Tech Tips: ಭಾರತದಲ್ಲಿ ಮೊಬೈಲ್ ನಂಬರ್ ಮೊದಲು 91 ಎಂದು ಇರುವುದು ಏಕೆ?, ಇದರ ಹಿಂದಿನ ರಹಸ್ಯವೇನು?

ಜಿಮೇಲ್ ಪಾಸ್ವರ್ಡ್ ಅನ್ನು ಮರುಹೊಂದಿಸುವುದು ಹೇಗೆ?:

  • ನಿಮ್ಮ ಜಿಮೇಲ್ ಪಾಸ್‌ವರ್ಡ್ ಅನ್ನು ಬದಲಾವಣೆ ಮಾಡಲು, ನಿಮ್ಮ ಆಂಡ್ರಾಯ್ಡ್ ಫೋನಿನ ಸೆಟ್ಟಿಂಗ್‌ಗಳಿಗೆ ಹೋಗಿ.
  • ಇಲ್ಲಿ ಗೂಗಲ್​ಗೆ ಹೋಗಿ ನಿಮ್ಮ ಹೆಸರನ್ನು ನಮೂದಿಸಿ, ನಂತರ ನಿಮ್ಮ ಗೂಗಲ್ ಖಾತೆಯನ್ನು ನಿರ್ವಹಿಸಿ ಆಯ್ಕೆಯನ್ನು ಟ್ಯಾಪ್ ಮಾಡಿ.
  • ಮೇಲ್ಭಾಗದಲ್ಲಿ, ಭದ್ರತೆಯನ್ನು ಟ್ಯಾಪ್ ಮಾಡಿ.
  • ನಂತರ “ನಿಮ್ಮ ಗೂಗಲ್ ಖಾತೆಗೆ ಸೈನ್ ಇನ್ ಮಾಡುವುದು ಹೇಗೆ” ಆಯ್ಕೆ ಹೋಗಿ ಮತ್ತು ಪಾಸ್ವರ್ಡ್ ಅನ್ನು ಟ್ಯಾಪ್ ಮಾಡಿ.
  • ನೀವು ಇಲ್ಲಿ ಸೈನ್ ಇನ್ ಮಾಡಬೇಕು. ನಂತರ ನೀವು ನಿಮ್ಮ ಹೊಸ ಪಾಸ್‌ವರ್ಡ್ ಅನ್ನು ನಮೂದಿಸಬಹುದು, ಪಾಸ್‌ವರ್ಡ್ ಬದಲಾಯಿಸಬಹುದು.

ನಿಮ್ಮ ಜಿಮೇಲ್ ಖಾತೆಯ ಪಾಸ್‌ವರ್ಡ್ ನಿಮಗೆ ತಿಳಿದಿಲ್ಲದಿದ್ದರೆ, ಫರ್ಗೆಟ್ ಪಾಸ್​ವರ್ಡ್ ಆಯ್ಕೆಯನ್ನು ಟ್ಯಾಪ್ ಮಾಡಿ. ಇದರ ನಂತರ ಡಿಸ್​ಪ್ಲೇ ಮೇಲೆ ನೀಡಲಾದ ಸೂಚನೆಗಳನ್ನು ಅನುಸರಿಸಿ ಮತ್ತು ಭದ್ರತಾ ಪ್ರಶ್ನೆಗಳಿಗೆ ಉತ್ತರಿಸಿ. ಇದರ ನಂತರ ನೀವು ನಿಮ್ಮ ಜಿಮೇಲ್ ಖಾತೆಯ ಪಾಸ್ವರ್ಡ್ ಅನ್ನು ಬದಲಾಯಿಸಲು ಸಾಧ್ಯವಾಗುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:16 am, Tue, 4 February 25

ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ
ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ
ರಾಜ್ಯದ ಮಂತ್ರಿಗಳು ಹಣಕಾಸು ಸಚಿವೆಯನ್ನು ಭೇಟಿಯಾಗಿದ್ದಾರೆ: ಶಿವಕುಮಾರ್
ರಾಜ್ಯದ ಮಂತ್ರಿಗಳು ಹಣಕಾಸು ಸಚಿವೆಯನ್ನು ಭೇಟಿಯಾಗಿದ್ದಾರೆ: ಶಿವಕುಮಾರ್
ಹಾವೇರಿ: ದೇವಸ್ಥಾನದ ಕಳಸಾರೋಹಣದ ವೇಳೆ ಮುರಿದ ಕ್ರೇನ್​ ಬಕೆಟ್​, ಓರ್ವ ಸಾವು
ಹಾವೇರಿ: ದೇವಸ್ಥಾನದ ಕಳಸಾರೋಹಣದ ವೇಳೆ ಮುರಿದ ಕ್ರೇನ್​ ಬಕೆಟ್​, ಓರ್ವ ಸಾವು
ಕಳೆದ ವರ್ಷ ಮಾರ್ಚ್​ನಲ್ಲಿ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ದೂರು
ಕಳೆದ ವರ್ಷ ಮಾರ್ಚ್​ನಲ್ಲಿ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ದೂರು
ಮದುವೆ ಮಂಟಪಕ್ಕೆ ತಮ್ಮ ರಾಣಾನ ಕರೆತಂದ ರಕ್ಷಿತಾ
ಮದುವೆ ಮಂಟಪಕ್ಕೆ ತಮ್ಮ ರಾಣಾನ ಕರೆತಂದ ರಕ್ಷಿತಾ
ಸಿಬಿಐಗೆ ರಾಜ್ಯಸರ್ಕಾರ ಅನುಮತಿಯ ಅವಶ್ಯಕತೆ ಇರುತ್ತದೆ: ಪರಮೇಶ್ವರ್
ಸಿಬಿಐಗೆ ರಾಜ್ಯಸರ್ಕಾರ ಅನುಮತಿಯ ಅವಶ್ಯಕತೆ ಇರುತ್ತದೆ: ಪರಮೇಶ್ವರ್