Warning for Windows Users: ವಿಂಡೋಸ್ ಬಳಕೆದಾರರೇ ಗಮನಿಸಿ, ಅಪಾಯದ ಎಚ್ಚರಿಕೆ ನೀಡಿದ ಸರ್ಕಾರ
ಆಗಸ್ಟ್ 12 ರಂದು ಸೈಬರ್ ಸೆಕ್ಯುರಿಟಿ ಏಜೆನ್ಸಿಯು ಸಮಸ್ಯೆಯ ಕುರಿತು ಕೆಲವು ವಿವರಗಳನ್ನು ಹಂಚಿಕೊಂಡಿದೆ, “ಈ ದೋಷಗಳು ವರ್ಚುವಲೈಸೇಶನ್ ಬೇಸ್ಡ್ ಸೆಕ್ಯುರಿಟಿ (VBS) ಮತ್ತು ವಿಂಡೋಸ್ ಬ್ಯಾಕಪ್ ಅನ್ನು ಬೆಂಬಲಿಸುವ ವಿಂಡೋಸ್ ಆಧಾರಿತ ಸಿಸ್ಟಮ್‌ಗಳಲ್ಲಿ ಅಸ್ತಿತ್ವದಲ್ಲಿವೆ. ಹಾಗಾಗಿ ದಾಳಿ ಮಾಡುವವರು ಅದೇ ಸಮಸ್ಯೆಗಳನ್ನು ಸೃಷ್ಟಿಸಿ ಅಥವಾ ವಿಬಿಎಸ್ ರಕ್ಷಣೆಯನ್ನು ಭೇದಿಸಿ ದಾಳಿ ಮಾಡಬಹುದು
ದೆಹಲಿ ಆಗಸ್ಟ್ 19: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಅಡಿಯಲ್ಲಿ ಸೈಬರ್ ಸೆಕ್ಯುರಿಟಿ ವಾಚ್‌ಡಾಗ್, ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In), ಆಪರೇಟಿಂಗ್ ಸಿಸ್ಟಂನಲ್ಲಿನ ಎರಡು ದೋಷಗಳ ಬಗ್ಗೆ Windows 11 ಮತ್ತು Windows 10 ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡಿದೆ. ಈ ದುರ್ಬಲತೆಗಳನ್ನು ಬಳಸಿಕೊಳ್ಳುವ ಮೂಲಕ, ಆಕ್ರಮಣಕಾರರು ಇಂಥಾ ಸಿಸ್ಟಂ ಮೇಲೆ ದಾಳಿ ಮಾಡಬಹುದು ಎಂದು ಸೈಬರ್ ಭದ್ರತಾ ಸಂಸ್ಥೆ ಎಚ್ಚರಿಸಿದೆ.
ಆಗಸ್ಟ್ 12 ರಂದು ಸೈಬರ್ ಸೆಕ್ಯುರಿಟಿ ಏಜೆನ್ಸಿಯು ಸಮಸ್ಯೆಯ ಕುರಿತು ಕೆಲವು ವಿವರಗಳನ್ನು ಹಂಚಿಕೊಂಡಿದೆ, “ಈ ದೋಷಗಳು ವರ್ಚುವಲೈಸೇಶನ್ ಬೇಸ್ಡ್ ಸೆಕ್ಯುರಿಟಿ (VBS) ಮತ್ತು ವಿಂಡೋಸ್ ಬ್ಯಾಕಪ್ ಅನ್ನು ಬೆಂಬಲಿಸುವ ವಿಂಡೋಸ್ ಆಧಾರಿತ ಸಿಸ್ಟಮ್‌ಗಳಲ್ಲಿ ಅಸ್ತಿತ್ವದಲ್ಲಿವೆ. ಹಾಗಾಗಿ ದಾಳಿ ಮಾಡುವವರು ಅದೇ ಸಮಸ್ಯೆಗಳನ್ನು ಸೃಷ್ಟಿಸಿ ಅಥವಾ ವಿಬಿಎಸ್ ರಕ್ಷಣೆಯನ್ನು ಭೇದಿಸಿ ದಾಳಿ ಮಾಡಬಹುದು ಎಂದು ಹೇಳಿದೆ. “ಈ ದುರ್ಬಲತೆಗಳ ಲಾಭ ಪಡೆಯುವ ಮೂಲಕ ಆಕ್ರಮಣಕಾರರಿಗೆ ಉದ್ದೇಶಿತ ಸಿಸ್ಟಂಗೆ ಲಗ್ಗೆ ಇಡಲು ಅವಕಾಶ ನೀಡುತ್ತದೆ.” ಸಲಹೆ ಹೇಳಿದೆ.
ಯಾವ ವಿಂಡೋಸ್ ಆವೃತ್ತಿಗಳ ಮೇಲೆ ಪರಿಣಾಮ ಬೀರಿದೆ?
ವಿಂಡೋಸ್ 10, ವಿಂಡೋಸ್ 11 ಮತ್ತು ವಿಂಡೋಸ್ ಸರ್ವರ್ ಸೇರಿದಂತೆ ವಿಂಡೋಸ್‌ನ ವಿವಿಧ ಆವೃತ್ತಿ ಮೇಲೆ ಇದು ಪರಿಣಾಮ ಬೀರುತ್ತವೆ.
- ವಿಂಡೋಸ್ ಸರ್ವರ್ 2016 (ಸರ್ವರ್ ಕೋರ್ ಇನ್ ಸ್ಟಾಲೇಷನ್)
- ವಿಂಡೋಸ್ ಸರ್ವರ್ 2016
- ವಿಂಡೋಸ್ 10 Version 1607 for x64-based Systems
- ವಿಂಡೋಸ್ 10 Version 1607 for 32-bit Systems
- ವಿಂಡೋಸ್ 10 for x64-based Systems
- ವಿಂಡೋಸ್ 10 for 32-bit Systems
- ವಿಂಡೋಸ್ 11 Version 24H2 for x64-based Systems
- ವಿಂಡೋಸ್ 11 Version 24H2 for ARM64-based Systems
- ವಿಂಡೋಸ್ Server 2022, 23H2 Edition (Server Core installation)
- ವಿಂಡೋಸ್ 11 Version 23H2 for x64-based Systems
- ವಿಂಡೋಸ್ 11 Version 23H2 for ARM64-based Systems
- ವಿಂಡೋಸ್ 10 Version 22H2 for 32-bit Systems
- ವಿಂಡೋಸ್ 10 Version 22H2 for ARM64-based Systems
- ವಿಂಡೋಸ್ 10 Version 22H2 for x64-based Systems
- ವಿಂಡೋಸ್ 11 Version 22H2 for x64-based Systems
- ವಿಂಡೋಸ್ 11 Version 22H2 for ARM64-based Systems
- ವಿಂಡೋಸ್ 10 Version 21H2 for x64-based Systems
- ವಿಂಡೋಸ್ 10 Version 21H2 for ARM64-based Systems
- ವಿಂಡೋಸ್ 10 Version 21H2 for 32-bit Systems
- ವಿಂಡೋಸ್ 11 version 21H2 for ARM64-based Systems
- ವಿಂಡೋಸ್ 11 version 21H2 for x64-based Systems
- ವಿಂಡೋಸ್ ಸರ್ವರ್ 2022 (Server Core installation)
- ವಿಂಡೋಸ್ ಸರ್ವರ್ 2022
- ವಿಂಡೋಸ್ ಸರ್ವರ್ 2019 (Server Core installation)
- ವಿಂಡೋಸ್ ಸರ್ವರ್ 2019
- ವಿಂಡೋಸ್ 10 Version 1809 for ARM64-based Systems
- ವಿಂಡೋಸ್ 10 Version 1809 for x64-based Systems
- ವಿಂಡೋಸ್ 10 Version 1809 for 32-bit Systems
ಇದನ್ನೂ ಓದಿ: ಗೂಗಲ್ನಲ್ಲಿ ನಿಮ್ಮ ಫೋಟೋ, ವೈಯಕ್ತಿಕ ಮಾಹಿತಿ ದುರ್ಬಳಕೆಯಾಗ್ತಿದೆ ಎಚ್ಚರ, ಇದನ್ನು ತಡೆಯಲು ಹೊಸ ಕ್ರಮ
ಪರಿಹಾರ
ಇತ್ತೀಚಿನ ಭದ್ರತಾ ಪ್ಯಾಚ್‌ನಲ್ಲಿನ ಸಮಸ್ಯೆಯನ್ನು ಸರಿಪಡಿಸಲು ಮೈಕ್ರೋಸಾಫ್ಟ್ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದೆ ಎಂದು CERT-In ಹೇಳುತ್ತದೆ. ಸಮಸ್ಯೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು, ವಿಂಡೋಸ್ ಬಳಕೆದಾರರು ಮೈಕ್ರೋಸಾಫ್ಟ್ ಒದಗಿಸಿದ ನವೀಕರಣಗಳನ್ನು ಡೌನ್‌ಲೋಡ್ ಮಾಡಿ ಇನ್ಸ್ಟಾಲ್ ಮಾಡಬೇಕು.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ