ಕಳೆದ ವಾರ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದ್ದು ಬರೋಬ್ಬರಿ 8 ಸ್ಮಾರ್ಟ್ಫೋನ್ಸ್: ಯಾವುದು?, ಇಲ್ಲಿದೆ ಎಲ್ಲ ಮಾಹಿತಿ
ಕಳೆದ ವಾರ ಜಾಗತಿಕ ಮಾರುಕಟ್ಟೆಯಲ್ಲಿ ಬರೋಬ್ಬರಿ ಎಂಟು ಸ್ಮಾರ್ಟ್ಫೋನ್ಗಳು ಅನಾವರಣಗೊಂಡವು. ಗೂಗಲ್ (Google), ಪೋಕೋ, ರಿಯಲ್ ಮಿ, ರೆಡ್ಮಿ (Redmi) ಫೋನ್ಗಳು ರಿಲೀಸ್ ಆಗಿವೆ.
ಈ ಮೇ ತಿಂಗಳಲ್ಲಿ ಮಾರುಕಟ್ಟೆಗೆ ಅನೇಕ ಸ್ಮಾರ್ಟ್ಫೋನ್ಗಳು (Smartphones) ಲಗ್ಗೆಯಿಡುತ್ತಿದೆ. ಈಗಾಗಲೇ ಕೆಲವು ಫೋನ್ಗಳು ಬಿಡುಗಡೆ ಆಗಿ ದೂಳೆಬ್ಬಿಸುತ್ತಿದ್ದರೆ ಇನ್ನೂ ಕೆಲ ಮೊಬೈಲ್ಗಳು ಬಿಡುಗಡೆ ಆಗಲು ಸಜ್ಜಾಗಿ ನಿಂತಿದೆ. ಕಳೆದ ವಾರ ಜಾಗತಿಕ ಮಾರುಕಟ್ಟೆಯಲ್ಲಿ ಬರೋಬ್ಬರಿ ಎಂಟು ಸ್ಮಾರ್ಟ್ಫೋನ್ಗಳು ಅನಾವರಣಗೊಂಡವು. ಗೂಗಲ್ (Google), ಪೋಕೋ, ರಿಯಲ್ ಮಿ, ರೆಡ್ಮಿ (Redmi) ಫೋನ್ಗಳು ರಿಲೀಸ್ ಆಗಿವೆ. ಇವುಗಳು ಸಾಕಷ್ಟು ನಿರೀಕ್ಷೆ ಹುಟ್ಟಿಸಿವೆ. ಇದರಲ್ಲಿರುವ ಫೀಚರ್ಗಳು ಕೂಡ ಅದ್ಭುತವಾಗಿದೆ. ಹಾಗಾದರೆ ಕಳೆದ ವಾರ ರಿಲೀಸ್ ಆದ ಸ್ಮಾರ್ಟ್ಫೋನ್ಗಳು ಯಾವುವು?, ಇದರಲ್ಲಿ ಏನೆಲ್ಲ ಫೀಚರ್ಗಳಿವೆ ಎಂಬುದನ್ನು ನೋಡೋಣ.
ಗೂಗಲ್ ಪಿಕ್ಸೆಲ್ 7a:
- ಬೆಲೆ : 43,999 ರೂ.
- ಡಿಸ್ ಪ್ಲೇ : 6.1-ಇಂಚಿನ FHD+ OLED ಡಿಸ್ ಪ್ಲೇ, 90Hz ರಿಫ್ರೆಶ್ ರೇಟ್
- ಹಿಂಬದಿ ಕ್ಯಾಮೆರಾಗಳು : 64MP+13MP
- ಸೆಲ್ಫಿ ಕ್ಯಾಮೆರಾ : 13MP
- ಚಿಪ್ಸೆಟ್ : ಹೋಮ್ ಬ್ರೂಡ್ ಟೆನ್ಸರ್ G2 ಚಿಪ್‌ಸೆಟ್
- ಬ್ಯಾಟರಿ : 4300mAh ಬ್ಯಾಟರಿ, 18W ವೇಗದ ಚಾರ್ಜಿಂಗ್ ತಂತ್ರಜ್ಞಾನ
ಪೋಕೋ F5:
- ಬೆಲೆ: 8GB/128GB ರೂ. 29,999 ಮತ್ತು 12GB/256GB ಮಾದರಿಗೆ ರೂ. 33,999
- ಡಿಸ್ ಪ್ಲೇ: 6.67-ಇಂಚಿನ DHS+ AMOLED ಡಿಸ್ ಪ್ಲೇ, 120Hz ರಿಫ್ರೆಶ್ ರೇಟ್
- ಹಿಂಬದಿ ಕ್ಯಾಮೆರಾಗಳು: 64MP+8MP+2MP
- ಸೆಲ್ಫಿ ಕ್ಯಾಮೆರಾ: 16MP
- ಚಿಪ್ಸೆಟ್: ಕ್ವಾಲ್ಕಂ ಸ್ನಾಪ್ಡ್ರಾಗನ್ 7+ Gen2 ಚಿಪ್ಸೆಟ್
- ಬ್ಯಾಟರಿ: 5000mAh ಜೊತೆಗೆ 67W ಫಾಸ್ಟ್ ಚಾರ್ಜಿಂಗ್
Motorola Edge 40: ಭಾರತಕ್ಕೆ ಕಾಲಿಡಲಿದೆ ಮೋಟೋ ಎಡ್ಜ್ 40 ಸ್ಮಾರ್ಟ್‌ಫೋನ್: ಫೀಚರ್ಸ್ ಏನಿದೆ ನೋಡಿ
ಇದನ್ನೂ ಓದಿ
ಪೋಕೋ F5 ಪ್ರೊ:
- ಬೆಲೆ: 8GB/256GB ಮಾದರಿಗೆ $449 (ಸುಮಾರು 36,900ರೂ.), 12GB/256GB ಆವೃತ್ತಿಗೆ $499 (ಅಂದಾಜು 41,000ರೂ.), ಮತ್ತು 12GB/512GB ಆವೃತ್ತಿಗೆ $549 (ಸುಮಾರು 45,100 ರೂ.)
- ಡಿಸ್ ಪ್ಲೇ: 6.67-ಇಂಚಿನ WQHD+ AMOLED ಡಿಸ್ ಪ್ಲೇ, 120Hz ರಿಫ್ರೆಶ್ ರೇಟ್
- ಹಿಂಬದಿ ಕ್ಯಾಮೆರಾ: 64MP+8MP+2MP
- ಸೆಲ್ಫಿ ಕ್ಯಾಮೆರಾ: 16MP
- ಚಿಪ್ಸೆಟ್: ಕ್ವಾಲ್ಕಂ ಸ್ನಾಪ್ಡ್ರಾಗನ್ 8+ Gen 1
ರಿಯಲ್ ಮಿ 11:
- ಬೆಲೆ: 8GB/256GB ಮಾದರಿಗೆ RMB 1,599 (ಸುಮಾರು ರೂ. 19,000) ಮತ್ತು 12GB/256GB ಆವೃತ್ತಿಗೆ RMB 1,799 (ಸುಮಾರು ರೂ. 21,400)
- ಡಿಸ್ ಪ್ಲೇ 6.43-ಇಂಚಿನ FHD+ sAMOLED ಡಿಸ್ ಪ್ಲೇ, 90Hz ರಿಫ್ರೆಶ್ ರೇಟ್
- ಹಿಂಬದಿ ಕ್ಯಾಮೆರಾ: 64MP+2MP
- ಸೆಲ್ಫಿ ಕ್ಯಾಮೆರಾ: 8MP
- ಚಿಪ್ಸೆಟ್: ಮೀಡಿಯಾ ಟೆಕ್ ಡೈಮೆನ್ಸಿಟಿ 6020
- ಬ್ಯಾಟರಿ: 5000mAh ಬ್ಯಾಟರಿ ಜೊತೆಗೆ 33W ಫಾಸ್ಟ್ ಚಾರ್ಜಿಂಗ್
ರಿಯಲ್ ಮಿ 11 ಪ್ರೊ:
- ಬೆಲೆ: 8GB/256GB ಆವೃತ್ತಿಗೆ RMB 1,799 (ಸುಮಾರು ರೂ. 21,300), 12GB/256GB ಮಾದರಿಗೆ RMB 1,999 (ಅಂದಾಜು ರೂ. 23,700), ಮತ್ತು ಹೈ-ಎಂಡ್/12 GB/512GB RMB 2,299 (ಸುಮಾರು ರೂ. 27,300)
- ಡಿಸ್ ಪ್ಲೇ: 6.7-ಇಂಚಿನ FHD+ AMOLED ಡಿಸ್ ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್
- ಹಿಂಬದಿ ಕ್ಯಾಮೆರಾ: 108MP+2MP
- ಸೆಲ್ಫಿ ಕ್ಯಾಮೆರಾ: 16MP
- ಚಿಪ್ಸೆಟ್: ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಚಿಪ್ಸೆಟ್
- ಬ್ಯಾಟರಿ: 5000mAh ಬ್ಯಾಟರಿ ಜೊತೆಗೆ 67W ಫಾಸ್ಟ್ ಚಾರ್ಜಿಂಗ್
ರಿಯಲ್ ಮಿ 11 ಪ್ರೊ+:
- ಬೆಲೆ: 12GB/256GB ಆವೃತ್ತಿಗೆ RMB 2,099 (ಅಂದಾಜು ರೂ. 24,900), 12GB/512GB ಮಾದರಿಗೆ RMB 2,399 (ಸುಮಾರು ರೂ. 28,500)
- ಡಿಸ್ ಪ್ಲೇ: 120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ FHD+ ಡಿಸ್ ಪ್ಲೇ
- ಹಿಂಬದಿ ಕ್ಯಾಮೆರಾ: 200MP+8MP+2MP
- ಸೆಲ್ಫಿ ಕ್ಯಾಮೆರಾ: 32MP
- ಚಿಪ್ಸೆಟ್: ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಚಿಪ್ಸೆಟ್
- ಬ್ಯಾಟರಿ: 5000mAh ಬ್ಯಾಟರಿ ಜೊತೆಗೆ 100W ಫಾಸ್ಟ್ ಚಾರ್ಜಿಂಗ್
ಗೂಗಲ್ ಪಿಕ್ಸೆಲ್ ಫೋಲ್ಡ್:
- ಬೆಲೆ: $1,799 (ಅಂದಾಜು ರೂ 1,47,000)
- ಡಿಸ್ ಪ್ಲೇ: 120Hz ರಿಫ್ರೆಶ್ ದರದೊಂದಿಗೆ 5.8-ಇಂಚಿನ OLED ಕವರ್ ಡಿಸ್ ಪ್ಲೇ ಮತ್ತು 120Hz ರಿಫ್ರೆಶ್ ದರದೊಂದಿಗೆ 7.6-ಇಂಚಿನ ಪ್ರಾಥಮಿಕ OLED ಡಿಸ್ ಪ್ಲೇ
- ಹಿಂಬದಿ ಕ್ಯಾಮೆರಾ: 48MP+10.8MP+10.8MP
- ಸೆಲ್ಫಿ ಕ್ಯಾಮೆರಾ: ಎರಡೂ ಪರದೆಗಳಲ್ಲಿ 8.3MP ಕ್ಯಾಮೆರಾಗಳು
- ಚಿಪ್ಸೆಟ್: ಟೆನ್ಸರ್ G2 ಚಿಪ್
- ಬ್ಯಾಟರಿ: 4800mAh ಬ್ಯಾಟರಿ ಜೊತೆಗೆ 30W ಫಾಸ್ಟ್ ಚಾರ್ಜಿಂಗ್
ರೆಡ್ಮಿ ನೋಟ್ 12S:
- ಬೆಲೆ: 8GB/256GB ಸುಮಾರು 29,500 ರೂ. ಇರಬಹುದು
- ಡಿಸ್ ಪ್ಲೇ: 6.43-ಇಂಚಿನ ಪೂರ್ಣ HD+ AMOLED ಡಿಸ್ ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್
- ಹಿಂಬದಿ ಕ್ಯಾಮೆರಾ: 108MP+8MP+2MP
- ಸೆಲ್ಫಿ ಕ್ಯಾಮೆರಾ: 16MP
- ಚಿಪ್ಸೆಟ್: ಮೀಡಿಯಾಟೆಕ್ ಹಿಲಿಯೊ G96
- ಬ್ಯಾಟರಿ: 5000mAh ಬ್ಯಾಟರಿ ಜೊತೆಗೆ 33W ಫಾಸ್ಟ್ ಚಾರ್ಜಿಂಗ್
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ