AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಮತ್ತೊಂದು ಫೋನ್ ರಿಲೀಸ್ ಮಾಡಲು ಮುಂದಾದ ಹಾನರ್: 108MP ಕ್ಯಾಮೆರಾ

Honor X9b Set to Launch: ಮುಂಬರುವ ಹಾನರ್ X9b ಸ್ಮಾರ್ಟ್​ಫೋನ್ ರಾತ್ರಿಯ ಬಳಕೆಯ ಸಮಯದಲ್ಲಿ ಬಳಕೆದಾರರ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಸಿರ್ಕಾಡಿಯನ್ ನೈಟ್ ಡಿಸ್ಪ್ಲೇ ತಂತ್ರಜ್ಞಾನವನ್ನು ಫೋನ್ ಒಳಗೊಂಡಿದೆ.

ಭಾರತದಲ್ಲಿ ಮತ್ತೊಂದು ಫೋನ್ ರಿಲೀಸ್ ಮಾಡಲು ಮುಂದಾದ ಹಾನರ್: 108MP ಕ್ಯಾಮೆರಾ
Honor X9b
Vinay Bhat
|

Updated on: Feb 05, 2024 | 6:55 AM

Share

ಪ್ರಸಿದ್ಧ ಹಾನರ್ ಕಂಪನಿ ಹೊಸ ಸ್ಮಾರ್ಟ್​ಫೋನ್​ನಿಂದಿಗೆ ಭಾರತಕ್ಕೆ ಬರಲು ಸಜ್ಜಾಗಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಕಂಪನಿ ಇದೇ ಫೆಬ್ರವರಿ 15 ರಂದು ದೇಶದಲ್ಲಿ ಹಾನರ್ X9b ಎಂಬ ಫೋನನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಈ ಬಗ್ಗೆ ಅಮೆಜಾನ್​ನಲ್ಲಿ ಮೈಕ್ರೋಸೈಟ್ ಈಗ ಅಧಿಕೃತವಾಗಿ ಲೈವ್ ಆಗಿದೆ. ಅಮೆಜಾನ್ ಮೂಲಕ ಈ ಫೋನ್ ದೇಶದಲ್ಲಿ ಖರೀದಿಗೆ ಲಭ್ಯವಿರುತ್ತದೆ. ಮುಂಬರುವ ಸ್ಮಾರ್ಟ್‌ಫೋನ್‌ನ ಕೆಲವು ಪ್ರಮುಖ ವಿವರಗಳು ಕೂಡ ತಿಳಿದುಬಂದಿದೆ. ಇದರಲ್ಲಿ ದೊಡ್ಡ ಬ್ಯಾಟರಿ, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಚಿಪ್‌ಸೆಟ್ ಮತ್ತು 108 ಮೆಗಾ ಫಿಕ್ಸೆಲ್ ಕ್ಯಾಮೆರಾ ಇರಲಿದೆಯಂತೆ.

ಮುಂಬರುವ ಹಾನರ್ X9b ಗಾಗಿ ಸ್ಲಿಮ್ ವಿನ್ಯಾಸವನ್ನು ಹೊಂದಿದೆ. ಇದು ಅಲ್ಟ್ರಾ-ಬೌನ್ಸ್ 360-ಡಿಗ್ರಿ ಆಂಟಿ-ಡ್ರಾಪ್ ರೆಸಿಸ್ಟೆನ್ಸ್ ಅನ್ನು ಹೊಂದಿರುತ್ತದೆ ಎಂದು ಉಲ್ಲೇಖಿಸಿದೆ. ಅಲ್ಲದೆ ರಾತ್ರಿಯ ಬಳಕೆಯ ಸಮಯದಲ್ಲಿ ಬಳಕೆದಾರರ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಸಿರ್ಕಾಡಿಯನ್ ನೈಟ್ ಡಿಸ್ಪ್ಲೇ ತಂತ್ರಜ್ಞಾನವನ್ನು ಫೋನ್ ಒಳಗೊಂಡಿದೆ. ಇದು ಹಾನಿಕಾರಕ ನೀಲಿ ಬೆಳಕನ್ನು ಫಿಲ್ಟರ್ ಮಾಡುತ್ತದೆ ಮತ್ತು ಡಿಸ್​ಪ್ಲೇ ಬಣ್ಣದ ತಾಪಮಾನವನ್ನು ನೈಸರ್ಗಿಕವಾಗಿ ಪರಿವರ್ತಿಸುತ್ತದೆ.

ಬಜೆಟ್ ಪ್ರಿಯರನ್ನು ದಂದಾಗಿಸಿದ ಟೆಕ್ನೋ ಸ್ಪಾರ್ಕ್ 20 ಫೋನ್ ಮಾರಾಟ ಆರಂಭ

ಇದನ್ನೂ ಓದಿ
Image
ವಾಟ್ಸ್​ಆ್ಯಪ್ ಡಾಟಾ ಬ್ಯಾಕಪ್ ಮಾಡುವವರಿಗೆ ಶಾಕಿಂಗ್ ನ್ಯೂಸ್
Image
ಪೋಕೋ ಸಿದ್ದಪಡಿಸುತ್ತಿದೆ ಎರಡು ಹೊಸ ಬಲಿಷ್ಠ ​ಫೋನ್ಸ್: ಸದ್ಯದಲ್ಲೇ ರಿಲೀಸ್
Image
ಫೆ. 29ರ ನಂತರ ಪೇಟಿಎಂನಲ್ಲಿ ನೀವು ಬಳಸಬಹುದಾದ ಸೇವೆಗಳಿವು
Image
ಫೋನ್ ಚಾರ್ಜ್ ಮಾಡುವಾಗ ಬಿಸಿ ಆದ್ರೆ ಅಲರ್ಟ್ ಆಗಿ!

ಹಾನರ್ X9b 5G ಫೀಚರ್ಸ್ ಏನಿರಬಹುದು?:

ಡಿಸ್‌ಪ್ಲೇ: 6.78-ಇಂಚಿನ FHD+ AMOLED ಡಿಸ್‌ಪ್ಲೇ ಜೊತೆಗೆ 1200 × 2652 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್, 1920Hz PWM ಡಿಮ್ಮಿಂಗ್, 1200 nits ಪೀಕ್ ಬ್ರೈಟ್‌ನೆಸ್, 429ppi ಪಿಕ್ಸೆಲ್ ಸಾಂದ್ರತೆ ಮತ್ತು SGS ಗ್ಲಾಸ್ ರಕ್ಷಣೆ ಇದೆ.

ಪ್ರೊಸೆಸರ್: Adreno 710 GPU ಜೊತೆಗೆ ಕ್ವಾಲ್ಕಂ ಸ್ನಾಪ್​ಡ್ರಾಗನ್ 6 Gen 1 ಪ್ರೊಸೆಸರ್ ಇರಲಿದೆ.

RAM/ಸ್ಟೋರೇಜ್: 8GB/12GB RAM ಮತ್ತು 256GB UFS 3.1 ಆನ್‌ಬೋರ್ಡ್ ಸ್ಟೋರೇಜ್. 8GB ವರ್ಚುವಲ್ RAM ಬೆಂಬಲವಿದೆ.

ಸಾಫ್ಟ್‌ವೇರ್: ಆಂಡ್ರಾಯ್ಡ್ 13-ಆಧಾರಿತ MagicOS 7.2 ಕಸ್ಟಮ್ ಸ್ಕಿನ್ ಬಾಕ್ಸ್‌ನಿಂದ ರನ್ ಆಗುತ್ತದೆ.

ಕ್ಯಾಮೆರಾಗಳು: 108MP ಪ್ರಾಥಮಿಕ ಕ್ಯಾಮೆರಾ ಜೊತೆಗೆ f/1.75 ಅಪರ್ಚರ್, 5MP ಅಲ್ಟ್ರಾ-ವೈಡ್-ಆಂಗಲ್ ಸೆನ್ಸಾರ್ ಮತ್ತು 2MP ಮ್ಯಾಕ್ರೋ ಲೆನ್ಸ್. ಸೆಲ್ಫಿಗಳು ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 16MP ಶೂಟರ್ ಇದೆ.

ಬ್ಯಾಟರಿ: 5,800mAh ಜೊತೆಗೆ 35W ಫಾಸ್ಟ್ ಚಾರ್ಜಿಂಗ್.

ಸಂಪರ್ಕ: 5G, ಡ್ಯುಯಲ್-ಸಿಮ್, ವೈಫೈ 5, ಬ್ಲೂಟೂತ್ 5.1, NFC, GPS, ಮತ್ತು USB 2.0.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಹೇಗಿದೆ ನೋಡಿ ತುಕಾಲಿ ಸಂತೋಷ್ ಹೆಣ್ಣಿನ ಅವತಾರ
ಹೇಗಿದೆ ನೋಡಿ ತುಕಾಲಿ ಸಂತೋಷ್ ಹೆಣ್ಣಿನ ಅವತಾರ
ಗಡ್ಕರಿಯವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು ಸಂತೋಷ: ಶಿವಕುಮಾರ್
ಗಡ್ಕರಿಯವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು ಸಂತೋಷ: ಶಿವಕುಮಾರ್
ಗುಜರಾತ್​​ನಲ್ಲಿ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳು, 9 ಮಂದಿ ಸಾವು
ಗುಜರಾತ್​​ನಲ್ಲಿ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳು, 9 ಮಂದಿ ಸಾವು
ಗಂಭೀರ ನಡಿಗೆ, ಧೈರ್ಯಶಾಲಿ ಅನೆಗಳನ್ನು ಅಯ್ಕೆ ಮಾಡಲಾಗುತ್ತದೆ: ಅರಣ್ಯಾಧಿಕಾರಿ
ಗಂಭೀರ ನಡಿಗೆ, ಧೈರ್ಯಶಾಲಿ ಅನೆಗಳನ್ನು ಅಯ್ಕೆ ಮಾಡಲಾಗುತ್ತದೆ: ಅರಣ್ಯಾಧಿಕಾರಿ
ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಿದ ಪ್ರಧಾನಿ ಮೋದಿ
ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಿದ ಪ್ರಧಾನಿ ಮೋದಿ
ಬ್ರೆಜಿಲ್​​ನಲ್ಲಿ ಮೋದಿ: ಶಿವತಾಂಡವ ಸ್ತೋತ್ರ, ಭರತನಾಟ್ಯ, ಸಾಂಬಾ ರೆಗಿ ಗೀತೆ
ಬ್ರೆಜಿಲ್​​ನಲ್ಲಿ ಮೋದಿ: ಶಿವತಾಂಡವ ಸ್ತೋತ್ರ, ಭರತನಾಟ್ಯ, ಸಾಂಬಾ ರೆಗಿ ಗೀತೆ
ಕೋಳಿ ಸಾರಿನ  ಋಣ; ತರುಣ್ ಜೊತೆ ಸಿನಿಮಾ ಮಾಡ್ತಾರೆ ಶಿವಣ್ಣ
ಕೋಳಿ ಸಾರಿನ  ಋಣ; ತರುಣ್ ಜೊತೆ ಸಿನಿಮಾ ಮಾಡ್ತಾರೆ ಶಿವಣ್ಣ
ಮಂಡ್ಯ ರೈತರ ಆಕ್ರೋಶಕ್ಕೆ ಮಣಿದು ತಡರಾತ್ರಿ ನೀರು ಬಿಡುಗಡೆ ಮಾಡಿದ ಸರ್ಕಾರ
ಮಂಡ್ಯ ರೈತರ ಆಕ್ರೋಶಕ್ಕೆ ಮಣಿದು ತಡರಾತ್ರಿ ನೀರು ಬಿಡುಗಡೆ ಮಾಡಿದ ಸರ್ಕಾರ
ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಹೃದಯ ತಪಾಸಣೆಗೆ ಮುಗಿಬಿದ್ದ ಜನಸಾಗರ
ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಹೃದಯ ತಪಾಸಣೆಗೆ ಮುಗಿಬಿದ್ದ ಜನಸಾಗರ
ಎಂಎಲ್​ಎ ಗೆಸ್ಟ್​ಹೌಸ್​ ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ ಶಿವಸೇನಾ ಶಾಸಕ
ಎಂಎಲ್​ಎ ಗೆಸ್ಟ್​ಹೌಸ್​ ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ ಶಿವಸೇನಾ ಶಾಸಕ