ಆ್ಯಪಲ್‌ನಿಂದ ಬರುತ್ತಿದೆ ಮೊಟ್ಟ ಮೊದಲ ಫೋಲ್ಡಬಲ್ ಫೋನ್‌: ಹೇಗಿದೆ ಗೊತ್ತೇ?

Apple Foldable Phone: ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದಾಗಿನಿಂದ ಆ್ಯಪಲ್​ ಫೋನ್‌ಗಳ ಮಾರಾಟವು ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆ್ಯಪಲ್​ ಫೋಲ್ಡೆಬಲ್ ಫೋನುಗಳ ಸಾಲಿಗೆ ಕಾಲಿಟ್ಟಿದೆಯಂತೆ. ಆ್ಯಪಲ್​ನಿಂದ ಮೊದಲ ಮಡಚಬಹುದಾದ ಸ್ಮಾರ್ಟ್‌ಫೋನ್ 2026 ಅಥವಾ 2027 ರ ವೇಳೆಗೆ ಲಭ್ಯವಿರಬಹುದು.

ಆ್ಯಪಲ್‌ನಿಂದ ಬರುತ್ತಿದೆ ಮೊಟ್ಟ ಮೊದಲ ಫೋಲ್ಡಬಲ್ ಫೋನ್‌: ಹೇಗಿದೆ ಗೊತ್ತೇ?
Apple Foldable Phone
Follow us
|

Updated on: Feb 05, 2024 | 12:17 PM

ಪ್ರಸ್ತುತ, ಮಾರುಕಟ್ಟೆಯಲ್ಲಿ ಮಡಚಬಹುದಾದ ಸ್ಮಾರ್ಟ್​ಫೋನ್‌ಗಳ (Foldable Phones) ಟ್ರೆಂಡ್ ಜೋರಾಗಿದೆ. ಸ್ಯಾಮ್​ಸಂಗ್, ವಿವೋ ಮತ್ತು ಹುವೈ ಸೇರಿದಂತೆ ಹಲವು ಪ್ರಮುಖ ಕಂಪನಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಮಡಚಬಹುದಾದ ಫೋನ್‌ಗಳನ್ನು ಬಿಡುಗಡೆ ಮಾಡಿವೆ. ಇದೀಗ ಖ್ಯಾತ ಸ್ಮಾರ್ಟ್ ಫೋನ್ ದೈತ್ಯ ಆ್ಯಪಲ್ ಕೂಡ ಈ ಕ್ಷೇತ್ರಕ್ಕೆ ಕಾಲಿಡಲಿದೆಯಂತೆ. ಸದ್ಯದಲ್ಲೇ ಆ್ಯಪಲ್​ ನಿಂದ ಫೋಲ್ಡಬಲ್ ಫೋನ್ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ ಎಂಬ ವರದಿಗಳಿವೆ. ಇದಕ್ಕೆ ಸಂಬಂಧಿಸಿದ ಕೆಲವು ವಿವರಗಳು ವೈರಲ್ ಆಗುತ್ತಿವೆ.

ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದಾಗಿನಿಂದ ಆ್ಯಪಲ್​ ಫೋನ್‌ಗಳ ಮಾರಾಟವು ಕಡಿಮೆಯಾಗುತ್ತಿದೆ. ಅದರಲ್ಲೂ ಚೀನಾದ ಮಾರುಕಟ್ಟೆಯಲ್ಲಿ ಹುವಾವೆಯ ಫೋಲ್ಡಬಲ್ ಫೋನ್‌ಗಳಿಂದಾಗಿ ಆ್ಯಪಲ್​ ಫೋನುಗಳಿಗೆ ಬೇಡಿಕೆ ಕಮ್ಮಿ ಆಗಿದೆಯಂತೆ. ಇದು ಮುಂದಿನ ದಿನಗಳಲ್ಲಿ ಭಾರತದಲ್ಲೂ ಸಂಭವಿಸಬಹುದು. ಹೀಗಾಗಿ ಇತರೆ ಕಂಪನಿಗಳ ಪೈಪೋಟಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆ್ಯಪಲ್​ ಕೂಡ ಈ ಕ್ಷೇತ್ರವನ್ನು ಪ್ರವೇಶಿಸುತ್ತಿದೆ.

ಫೋನ್ ಚಾರ್ಜ್ ಮಾಡುವಾಗ ಬಿಸಿ ಆದ್ರೆ ಅಲರ್ಟ್ ಆಗಿ!

ಇದನ್ನೂ ಓದಿ
Image
ಭಾರತದಲ್ಲಿ ಮತ್ತೊಂದು ಫೋನ್ ರಿಲೀಸ್ ಮಾಡಲು ಮುಂದಾದ ಹಾನರ್: 108MP ಕ್ಯಾಮೆರಾ
Image
ವಾಟ್ಸ್​ಆ್ಯಪ್ ಡಾಟಾ ಬ್ಯಾಕಪ್ ಮಾಡುವವರಿಗೆ ಶಾಕಿಂಗ್ ನ್ಯೂಸ್
Image
ಪೋಕೋ ಸಿದ್ದಪಡಿಸುತ್ತಿದೆ ಎರಡು ಹೊಸ ಬಲಿಷ್ಠ ​ಫೋನ್ಸ್: ಸದ್ಯದಲ್ಲೇ ರಿಲೀಸ್
Image
ಫೆ. 29ರ ನಂತರ ಪೇಟಿಎಂನಲ್ಲಿ ನೀವು ಬಳಸಬಹುದಾದ ಸೇವೆಗಳಿವು

ಇತರ ಕಂಪನಿಗಳಿಂದ ಬರುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಲುವಾಗಿ ಆ್ಯಪಲ್​ ಕೂಡ ಫೋಲ್ಡಬಲ್ ಫೋನ್‌ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಆ್ಯಪಲ್​ ಫೋಲ್ಡಬಲ್ ಫೋನ್‌ಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿವೆ ಎಂಧು ಮೂಲಗಳು ಹೇಳಿವೆ. ಆದರೆ ಆ್ಯಪಲ್​ ಇದುವರೆಗೂ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ವೈರಲ್ ಆಗುತ್ತಿರುವ ಮಾಹಿತಿಯ ಪ್ರಕಾರ, ಆ್ಯಪಲ್​ 7.6 ರಿಂದ 8.4 ಇಂಚುಗಳ ನಡುವಿನ ದೊಡ್ಡ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ತಯಾರಿಸುತ್ತಿದೆಯಂತೆ. ದಿ ಎಲೆಕ್‌ನ ವರದಿಯ ಪ್ರಕಾರ, ಆ್ಯಪಲ್​ನಿಂದ ಮೊದಲ ಮಡಚಬಹುದಾದ ಸ್ಮಾರ್ಟ್‌ಫೋನ್ 2026 ಅಥವಾ 2027 ರ ವೇಳೆಗೆ ಲಭ್ಯವಿರಬಹುದು.

ಆ್ಯಪಲ್​ ಐಪಾಡ್ ಮಿನಿಯನ್ನು ಮಡಚಬಹುದಾದ ಮಾದರಿಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ ಎಂಬ ವರದಿಗಳು ಕೂಡ ಇವೆ. ಇದು 8.3-ಇಂಚಿನ ಲಿಕ್ವಿಡ್ ರೆಟಿನಾ IPS LCD ಪರದೆಯನ್ನು ಹೊಂದಿರುತ್ತದೆ. ಆ್ಯಪಲ್​ ಫೋಲ್ಡಬಲ್ ಫೋನ್‌ಗಳಿಗೆ OLED ಡಿಸ್ಪ್ಲೇ ನೀಡಲಾಗುವುದು ಎಂದು ವರದಿಯಾಗಿದೆ. ಆ್ಯಪಲ್​ ಹೆಚ್ಚು ಆದಾಯ ಗಳಿಸುವ ಚೀನಾ ಮಾರುಕಟ್ಟೆಯಲ್ಲಿ ಫೋಲ್ಡಬಲ್ ಫೋನ್​ಗಳ ಪೈಪೋಟಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಆ್ಯಪಲ್​ ಫೋಲ್ಡೆಬಲ್ ಫೋನುಗಳ ಸಾಲಿಗೆ ಕಾಲಿಟ್ಟಿದೆಯಂತೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸಿದ್ದರಾಮಯ್ಯ ಕರೆದಿರುವ ಸಭೆಗೆ ಹೋಗ್ತೀರಾ ಅಂದಾಗ ಕುಮಾರಸ್ವಾಮಿ ಉಡಾಫೆ ಉತ್ತರ
ಸಿದ್ದರಾಮಯ್ಯ ಕರೆದಿರುವ ಸಭೆಗೆ ಹೋಗ್ತೀರಾ ಅಂದಾಗ ಕುಮಾರಸ್ವಾಮಿ ಉಡಾಫೆ ಉತ್ತರ
ಕೇಂಪೇಗೌಡ 515ನೇ ಜಯಂತಿ: ನಾಡಪ್ರಭುಗೆ ಪುಷ್ಪ ನಮನ ಸಲ್ಲಿಸಿದ ಸಿದ್ದರಾಮಯ್ಯ
ಕೇಂಪೇಗೌಡ 515ನೇ ಜಯಂತಿ: ನಾಡಪ್ರಭುಗೆ ಪುಷ್ಪ ನಮನ ಸಲ್ಲಿಸಿದ ಸಿದ್ದರಾಮಯ್ಯ
ದೆಹಲಿಗೆ ತೆರಳಿ ಪ್ರಧಾನಿ ಮೋದಿ, ಹಲವಾರು ಸಚಿವರನ್ನು ಭೇಟಿಯಾಗಲಿರುವ ಸಿಎಂ
ದೆಹಲಿಗೆ ತೆರಳಿ ಪ್ರಧಾನಿ ಮೋದಿ, ಹಲವಾರು ಸಚಿವರನ್ನು ಭೇಟಿಯಾಗಲಿರುವ ಸಿಎಂ
ಉಕ್ಕಿ ಹರಿಯುತ್ತಿದೆ ನೇತ್ರಾವತಿ, ನದಿಪಾತ್ರದ ಜನ ಎಚ್ಚರವಹಿಸುವಂತೆ ಸೂಚನೆ
ಉಕ್ಕಿ ಹರಿಯುತ್ತಿದೆ ನೇತ್ರಾವತಿ, ನದಿಪಾತ್ರದ ಜನ ಎಚ್ಚರವಹಿಸುವಂತೆ ಸೂಚನೆ
ಮಳೆಯ ಅಬ್ಬರಕ್ಕೆ ಇತಿಹಾಸ ಪ್ರಸಿದ್ಧ ಮಧೂರು ದೇಗುಲ ಜಲಾವೃತ; ವಿಡಿಯೋ ನೋಡಿ
ಮಳೆಯ ಅಬ್ಬರಕ್ಕೆ ಇತಿಹಾಸ ಪ್ರಸಿದ್ಧ ಮಧೂರು ದೇಗುಲ ಜಲಾವೃತ; ವಿಡಿಯೋ ನೋಡಿ
ಉಕ್ಕಿ ಹರಿಯುತ್ತಿರುವ ಕುಮಾರಧಾರ ನದಿ, ನೀರಿಗಿಳಿಯದಂತೆ ಭಕ್ತರಿಗೆ ಎಚ್ಚರಿಕೆ
ಉಕ್ಕಿ ಹರಿಯುತ್ತಿರುವ ಕುಮಾರಧಾರ ನದಿ, ನೀರಿಗಿಳಿಯದಂತೆ ಭಕ್ತರಿಗೆ ಎಚ್ಚರಿಕೆ
ಬೆಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ 8 ವಾಹನಗಳ ಮೇಲೆ ಕಲ್ಲು ಎಸೆದ ಯುವಕ
ಬೆಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ 8 ವಾಹನಗಳ ಮೇಲೆ ಕಲ್ಲು ಎಸೆದ ಯುವಕ
‘ನಾನು ದರ್ಶನ್ ಪರ ನಿಲ್ಲುತ್ತೇನೆ, ದುಃಖದಲ್ಲೂ ಭಾಗಿ ಆಗಬೇಕು’; ಭಾವನಾ
‘ನಾನು ದರ್ಶನ್ ಪರ ನಿಲ್ಲುತ್ತೇನೆ, ದುಃಖದಲ್ಲೂ ಭಾಗಿ ಆಗಬೇಕು’; ಭಾವನಾ
ಒಪ್ಪೋ ಲೇಟೆಸ್ಟ್ ಸ್ಮಾರ್ಟ್​​​ಫೋನ್ A3 Pro ಮಾರುಕಟ್ಟೆಗೆ ಲಗ್ಗೆ
ಒಪ್ಪೋ ಲೇಟೆಸ್ಟ್ ಸ್ಮಾರ್ಟ್​​​ಫೋನ್ A3 Pro ಮಾರುಕಟ್ಟೆಗೆ ಲಗ್ಗೆ
Daily Devotional: ಮನೆ, ಆಸ್ತಿ ಖರೀದಿಸುವ ಮುನ್ನ ಈ ವಿಡಿಯೋ ನೋಡಿ
Daily Devotional: ಮನೆ, ಆಸ್ತಿ ಖರೀದಿಸುವ ಮುನ್ನ ಈ ವಿಡಿಯೋ ನೋಡಿ