ಫೋನ್‌ನಲ್ಲಿ ನಿಮ್ಮ ವೈಯುಕ್ತಿಕ ಫೋಟೋ, ವಿಡಿಯೋ ಹೈಡ್ ಮಾಡಲು ಇಲ್ಲಿದೆ ಸುಲಭ ಉಪಾಯ

ಫೋನ್‌ನಲ್ಲಿ ನಿಮ್ಮ ವೈಯುಕ್ತಿಕ ಫೋಟೋ, ವಿಡಿಯೋ ಹೈಡ್ ಮಾಡಲು ಇಲ್ಲಿದೆ ಸುಲಭ ಉಪಾಯ
ಸಾಂದರ್ಭಿಕ ಚಿತ್ರ

How Hide Photos And Videos Phone: ಗೂಗಲ್ ಪ್ಲೇಸ್ಟೋರ್​ನಲ್ಲೂ ಹಲವು ಗ್ಯಾಲರಿ ಹೈಡ್ ಅಪ್ಲಿಕೇಶನ್​ಗಳು ಲಭ್ಯವಿದ್ದು, ಅಂತಹ ಆ್ಯಪ್​ಗಳನ್ನು ಬಳಸುವ ಮುನ್ನ ಎಚ್ಚರಿಕೆವಹಿಸುವುದು ಉತ್ತಮ.

TV9kannada Web Team

| Edited By: Zahir PY

Jan 29, 2022 | 3:15 PM

How Hide Photos And Videos In Smartphone: ಸ್ಮಾರ್ಟ್​ಫೋನ್ ಕೈಗೆ ಸಿಕ್ಕರೆ ಸಾಕು, ಎಲ್ಲರ ಗಮನ ಮೊದಲು ಹೋಗುವುದು ಗ್ಯಾಲರಿ ಮೇಲೆ. ಆದರೆ ಪ್ರತಿಯೊಬ್ಬರ ಗ್ಯಾಲರಿಯಲ್ಲೂ ವೈಯಕ್ತಿಕ ಫೋಟೋಗಳಿರುತ್ತವೆ. ಅದರಲ್ಲೂ ನಾವು ಇತರರೊಂದಿಗೆ ಹಂಚಿಕೊಳ್ಳಲು ಇಷ್ಟಪಡದ ಅನೇಕ ಫೋಟೋಸ್ ಅಥವಾ ವಿಡಿಯೋಗಳಿರಬಹುದು. ಇದಾಗ್ಯೂ ನಾವು ಕೆಲವೊಮ್ಮೆ ನಮ್ಮ ಫೋನನ್ನು ಬೇರೆಯವರಿಗೆ ನೀಡಬೇಕಾದ ಪರಿಸ್ಥಿತಿ ಬರುತ್ತದೆ. ಅಂತಹ ಸಂದರ್ಭದಲ್ಲಿ, ಅವರು ಕೂಡ ನಮ್ಮ ಗ್ಯಾಲರಿಗೆ ಹೋಗಿ ಫೋಟೋ ಅಥವಾ ವೀಡಿಯೊಗಳನ್ನು ನೋಡಬಹುದು. ಹೀಗಾಗಿ ಪ್ರಸ್ತುತ ಸನ್ನಿವೇಶದಲ್ಲಿ ಸ್ಮಾರ್ಟ್​ಫೋನ್​ಗಳಲ್ಲಿ ಖಾಸಗಿತನ ಉಳಿಸಿಕೊಳ್ಳುವುದು ಅನಿವಾರ್ಯ. ಅದರಲ್ಲೂ ಗ್ಯಾಲರಿಯನ್ನು ಮರೆಮಾಚಿಡುವುದು ಉತ್ತಮ ಎಂದೇ ಹೇಳಬಹುದು. ಹಾಗಿದ್ರೆ ಸ್ಮಾರ್ಟ್‌ಫೋನ್‌ನ ಗ್ಯಾಲರಿಯಿಂದ ನೀವು ಫೋಟೋಗಳು ಅಥವಾ ವೀಡಿಯೊಗಳನ್ನು ಹೇಗೆ ಮರೆಮಾಡಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಫೋನ್‌ನಲ್ಲಿ ಫೋಟೋ ಅಥವಾ ವೀಡಿಯೊವನ್ನು ಮರೆಮಾಡುವುದು ಹೇಗೆ? ಬಹುತೇಕ ಸ್ಮಾರ್ಟ್​ಫೋನ್ ಬಳಕೆದಾರರು Google ಫೋಟೋಗಳ ಅಪ್ಲಿಕೇಶನ್ ಅನ್ನು ಗ್ಯಾಲರಿಯಾಗಿ ಬಳಸುತ್ತಾರೆ. ಈ ವೈಶಿಷ್ಟ್ಯವು Android ಮತ್ತು iOS ಎರಡರಲ್ಲೂ ಲಭ್ಯವಿದೆ. ಹೀಗಾಗಿ ಈ ಆ್ಯಪ್ ಬಳಸುವವರಿಗೆ ಅದೇ ಅಪ್ಲಿಕೇಶನ್​ ಮೂಲಕ ಫೋಟೋಗಳು ಮತ್ತು ವೀಡಿಯೊಗಳನ್ನು ಮರೆಮಾಡುವ ಆಯ್ಕೆ ಇದೆ. ಇದಕ್ಕಾಗಿ, Google ಫೋಟೋಗಳನ್ನು ತೆರೆದ ನಂತರ, ನೀವು ಮರೆಮಾಡಲು ಬಯಸುವ ಚಿತ್ರಗಳು ಅಥವಾ ವೀಡಿಯೊಗಳನ್ನು ನೀವು ಆರಿಸಬೇಕಾಗುತ್ತದೆ. ನಂತರ ಮೂರು ಡಾಟ್ ಮೆನು ಮೇಲೆ ಟ್ಯಾಪ್ ಮಾಡಿ. ಇಲ್ಲಿ ನೀವು Move to Archive ಎಂಬ ಆಯ್ಕೆಯನ್ನು ಪಡೆಯುತ್ತೀರಿ. ಇದರ ನಂತರ ಈ ಎಲ್ಲಾ ಚಿತ್ರಗಳು Archive ಫೋಲ್ಡರ್​ಗೆ ಹಾಕಿ ಮರೆಮಾಚಿಡಬಹುದು.

Xiaomi ಸ್ಮಾರ್ಟ್​ಫೋನ್ ಬಳಸುವವರು ಹೀಗೆ ಮಾಡಿ: ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ Xiaomi ಸ್ಮಾರ್ಟ್‌ಫೋನ್‌ಗಳನ್ನು ಸಹ ಹೆಚ್ಚು ಬಳಸಲಾಗುತ್ತದೆ. ಇದರಲ್ಲೂ ಕೂಡ ಹೈಡ್ ಆಯ್ಕೆ ಇದೆ. ಇದಕ್ಕಾಗಿ ನೀವು ಮಾಡಬೇಕಿರುವುದು, ಮೊದಲ ಗ್ಯಾಲರಿ ಆ್ಯಪ್ ತೆರೆಯಿರಿ ಮತ್ತು ನೀವು ಮರೆಮಾಡಲು ಬಯಸುವ ಫೋಟೋಗಳು ಅಥವಾ ವೀಡಿಯೊಗಳನ್ನು ಆಯ್ಕೆಮಾಡಿ. ನಂತರ ಮೆನುವಿನಲ್ಲಿ ನೀಡಲಾದ Hide ಬಟನ್ ಒತ್ತಿರಿ. ಈ ರೀತಿಯಾಗಿ ಗ್ಯಾಲರಿಯಲ್ಲಿರುವ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಹೈಡ್ ಮಾಡಿಟ್ಟುಕೊಳ್ಳಬಹುದು.

oneplus ಸ್ಮಾರ್ಟ್​ಫೋನ್​ನಲ್ಲೂ ಈ ಆಯ್ಕೆ ಇದೆ: OnePlus ಸ್ಮಾರ್ಟ್‌ಫೋನ್‌ನಲ್ಲಿ ಕಂಡುಬರುವ ಗ್ಯಾಲರಿ ಅಪ್ಲಿಕೇಶನ್​ನಲ್ಲೂ ಕೂಡ ನೀವು ನೇರವಾಗಿ ಫೋಟೋ ಮತ್ತು ವಿಡಿಯೋಗಳನ್ನು ಹೈಡ್ ಮಾಡಬಹುದು. ಇದಕ್ಕಾಗಿ ನೀವು ಗ್ಯಾಲರಿ ಓಪನ್ ಮಾಡಿ ನೀವು ಮರೆಮಾಡಲು ಬಯಸುವ ಫೋಟೋಗಳು ಅಥವಾ ವೀಡಿಯೊಗಳನ್ನು ಆಯ್ಕೆಮಾಡಿ. ಈಗ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೆನುವಿನಲ್ಲಿ ಟ್ಯಾಪ್ ಮಾಡಿ. ಇಲ್ಲಿ ನೀವು Hide ಆಯ್ಕೆ ಪಡೆಯುತ್ತೀರಿ, ಅದರ ಮೇಲೆ ಟ್ಯಾಪ್ ಮಾಡಿದಾಗ ಮರೆಮಾಚಿಡಬೇಕಾದ ಆಯ್ಕೆಯನ್ನು ಪಡೆಯುತ್ತೀರಿ. ಈ ರೀತಿಯಾಗಿ ಫೋಟೋ ಮತ್ತು ವಿಡಿಯೋವನ್ನು ಮರೆಮಾಡಿಟ್ಟುಕೊಳ್ಳಬಹುದು.

ಸ್ಯಾಮ್ಸಂಗ್ ಬಳಕೆದಾರರಿಗೆ ಇಲ್ಲಿದೆ ಆಯ್ಕೆ: ಸ್ಯಾಮ್‌ಸಂಗ್‌ನ ಸ್ಮಾರ್ಟ್‌ಫೋನ್‌ನಲ್ಲಿರುವ ಗ್ಯಾಲರಿ ಅಪ್ಲಿಕೇಶನ್ ಅನ್ನು ನೀವು ಬಳಸುತ್ತಿದ್ದರೆ, ನಿಮ್ಮ ವೈಯಕ್ತಿಕ ಫೋಟೋಗಳು / ವೀಡಿಯೊಗಳನ್ನು ಮರೆಮಾಡಬಹುದು. ಇದಕ್ಕಾಗಿ ಹೊಸ ಆಲ್ಬಮ್ ಅನ್ನು ರಚಿಸಿ ಮತ್ತು ಅದಕ್ಕೆ ಯಾವುದಾದರು ಒಂದು ಹೆಸರನ್ನು ನೀಡಿ. ಈ ಆಲ್ಬಮ್‌ಗೆ ನಿಮ್ಮ ವೈಯುಕ್ತಿಕ ಫೋಟೋಗಳು/ವೀಡಿಯೊಗಳನ್ನು ಸೇರಿಸಿ. ಆ ಬಳಿಕ ಕೆಳಗೆ ನೀಡಲಾದ ಆಲ್ಬಮ್‌ಗಳ ಆಯ್ಕೆಗೆ ಹೋಗಿ ಮತ್ತು ಮೂರು ಡಾಟ್ ಮೆನುವಿನಲ್ಲಿ ಟ್ಯಾಪ್ ಮಾಡಿ. ಅಲ್ಲಿ ನಿಮಗೆ ಆಲ್ಬಮ್‌ಗಳನ್ನು ಮರೆಮಾಚಲು Hide/Unhide Albums ಆಯ್ಕೆ ಸಿಗುತ್ತದೆ. ಅಲ್ಲಿ ಹೈಡ್ ಆಯ್ಕೆಯನ್ನು ಒತ್ತುವ ಮೂಲಕ ನೇರವಾಗಿ ನಿಮ್ಮ ವೈಯುಕ್ತಿಕ ಫೋಟೋ ಮತ್ತು ವಿಡಿಯೋಗಳನ್ನು ಮರೆಮಾಚಿಡಬಹುದು.

ಇದಲ್ಲದೆ ಗೂಗಲ್ ಪ್ಲೇಸ್ಟೋರ್​ನಲ್ಲೂ ಹಲವು ಗ್ಯಾಲರಿ ಹೈಡ್ ಅಪ್ಲಿಕೇಶನ್​ಗಳು ಲಭ್ಯವಿದ್ದು, ಅಂತಹ ಆ್ಯಪ್​ಗಳನ್ನು ಬಳಸುವ ಮುನ್ನ ಎಚ್ಚರಿಕೆವಹಿಸುವುದು ಉತ್ತಮ. ಏಕೆಂದರೆ ಥರ್ಡ್​ ಪಾರ್ಟಿ ಆ್ಯಪ್​ಗಳ ಮೂಲಕ ಇದೀಗ ಹ್ಯಾಕರುಗಳು ವೈಯುಕ್ತಿಕ ಡೇಟಾಗಳ ಮೇಲೆ ಕಣ್ಣಿಡುತ್ತಿದ್ದಾರೆ. ಹೀಗಾಗಿ ಪ್ಲೇಸ್ಟೋರ್​ನಿಂದ ಗ್ಯಾಲರಿ ಹೈಡ್ ಆ್ಯಪ್​ಗಳನ್ನು ಆಯ್ಕೆ ಮಾಡುವ ಮುನ್ನ ರೇಟಿಂಗ್ ಮುನ್ನ ರಿವ್ಯೂವ್ಸ್​ ಮೇಲೆ ಗಮನವಿರಲಿ.

ಇದನ್ನೂ ಓದಿ:  IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!

ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ

ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್

(How Hide Photos And Videos In Android Smartphone)

Follow us on

Related Stories

Most Read Stories

Click on your DTH Provider to Add TV9 Kannada