AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VLC Media Player: ಭಾರತದಲ್ಲಿ ವಿಎಲ್​ಸಿ ಮೀಡಿಯಾ ಪ್ಲೇಯರ್ ನಿಷೇಧ ವಾಪಸ್‌ ಪಡೆದ ಸರ್ಕಾರ

ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ವಿಎಲ್‌ಸಿ ಮೀಡಿಯಾ ಪ್ಲೇಯರ್‌ನ ವೆಬ್‌ಸೈಟ್ ಮೇಲಿನ ನಿಷೇಧವನ್ನು (Ban) ತೆಗೆದುಹಾಕಿದೆ. ಒಂಬತ್ತು ತಿಂಗಳ ಹಿಂದೆ ಕೆಲವು ಕಾರಣಾಂತರಗಳಿಂದ ಭಾರತ ಸರ್ಕಾರ ಈ ಆ್ಯಪ್‌ಗೆ ನಿರ್ಬಂಧ ವಿಧಿಸಿತ್ತು.

VLC Media Player: ಭಾರತದಲ್ಲಿ ವಿಎಲ್​ಸಿ ಮೀಡಿಯಾ ಪ್ಲೇಯರ್ ನಿಷೇಧ ವಾಪಸ್‌ ಪಡೆದ ಸರ್ಕಾರ
VLC Media player
TV9 Web
| Edited By: |

Updated on:Nov 15, 2022 | 12:53 PM

Share

VideoLAN ಯೋಜನೆಯಿಂದ ಅಭಿವೃದ್ಧಿಪಡಿಸಲಾದ ವಿಶ್ವದ ಅತ್ಯಂತ ಜನಪ್ರಿಯ ಮೀಡಿಯಾ ಪ್ಲೇಯರ್ ಸಾಫ್ಟ್‌ವೇರ್ ಮತ್ತು ಸ್ಟ್ರೀಮಿಂಗ್ ಮೀಡಿಯಾ ಸರ್ವರ್ ವಿಎಲ್​ಸಿ ಪ್ಲೇಯರ್ (VLC Media Player) ನಿಷೇಧವನ್ನು ಭಾರತದ ಸರ್ಕಾರ ತೆಗದುಹಾಕಿದೆ. ಒಂಬತ್ತು ತಿಂಗಳ ಹಿಂದೆ ಕೆಲವು ಕಾರಣಾಂತರಗಳಿಂದ ಭಾರತ ಸರ್ಕಾರ ಈ ಆ್ಯಪ್‌ಗೆ ನಿರ್ಬಂಧ ವಿಧಿಸಿತ್ತು. ಆದರೀಗ ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ವಿಎಲ್‌ಸಿ ಮೀಡಿಯಾ ಪ್ಲೇಯರ್‌ನ ವೆಬ್‌ಸೈಟ್ ಮೇಲಿನ ನಿಷೇಧವನ್ನು (Ban) ತೆಗೆದುಹಾಕಿದೆ. ಈ ಮೂಲಕ ಭಾರತದಲ್ಲಿನ ಜನರು ಇನ್ಮುಂದೆ ವಿವಿಧ ಫೀಚರ್ಸ್‌ ಇರುವ ವಿಎಲ್‌ಸಿ ಆ್ಯಪ್‌ ಅನ್ನು ಇನ್​ಸ್ಟಾಲ್ ಉಪಯೋಗಿಸಬಹುದು.

ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ವಿಎಲ್​ಸಿ ಮೀಡಿಯಾ ಪ್ಲೇಯರ್ ನಿರ್ಬಂಧಿಸಲಾಗಿತ್ತು. ನಿಷೇಧದ ಬಗ್ಗೆ ಕಂಪನಿ ಅಥವಾ ಭಾರತ ಸರ್ಕಾರ ಇದುವರೆಗೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿರಲಿಲ್ಲ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಅಡಿಯಲ್ಲಿ www.videolan.org ವೆಬ್ ಸೈಟ್ ಅನ್ನು ಭಾರತ ಸರ್ಕಾರ ನಿರ್ಬಂಧಿಸಿರುವುದಾಗಿ ವಿವರಿಸಿತ್ತಷ್ಟೆ.

ಇದನ್ನೂ ಓದಿ
Image
ಆಂಡ್ರಾಯ್ಡ್​ನಲ್ಲಿ ಸುಲಭವಾಗಿ ಲಾಕ್ ಹ್ಯಾಕ್ ಮಾಡಬಹುದು: ಈ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ
Image
Lava Blaze 5G: ಭಾರತದ ಅತಿ ಅಗ್ಗದ 5ಜಿ ಸ್ಮಾರ್ಟ್​ಫೋನ್ ಲಾವಾ ಬ್ಲೇಜ್‌ ಇಂದಿನಿಂದ ಖರೀಗೆ ಲಭ್ಯ
Image
Cyber Crime: ಸೈಬರ್ ಕ್ರೈಮ್ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡರೆ ತಕ್ಷಣ ಏನು ಮಾಡಬೇಕು?: ಇಲ್ಲಿದೆ ಫುಲ್ ಡಿಟೇಲ್ಸ್
Image
Tech Tips: ಎಚ್ಚರ: ಮನೆಯೊಳಗೆ ತಪ್ಪಿಯೂ ಈ ಅಪಾಯಕಾರಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡಬೇಡಿ

ಬಳಿಕ ಕಳೆದ ಅಕ್ಟೋಬರ್‌ನಲ್ಲಿ ವಿಎಲ್‌ಸಿ ಮಾಲೀಕರು ಭಾರತ ಸರ್ಕಾರಕ್ಕೆ ಒಂದು ಮನವಿ ಸಲ್ಲಿಸಿದ್ದರು. ಅದರಂತೆ ಭಾರತದಲ್ಲಿ ನಮ್ಮ ಸೇವೆಯನ್ನು ಏಕೆ ನಿಷೇಧಿಸಲಾಗಿದೆ?, ಈ ಬಗ್ಗೆ ವರ್ಚುವಲ್ ವಿಚಾರಣೆಯ ಮೂಲಕ ತನ್ನ ಪ್ರಕರಣವನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದರು. ಸದ್ಯ ಈ ಮನವಿಗೆ ಸ್ಪಂದಿಸಿರುವ ಭಾರತ ಸುಮಾರು 73 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಿಎಲ್‌ಸಿ ಪ್ಲೇಯರ್ ಮೇಲಿನ ನಿಷೇಧವನ್ನು ತೆಗೆದು ಹಾಕಿದೆ.

ಭಾರತದಲ್ಲಿ ವಿಎಲ್​ಸಿ ಮೀಡಿಯಾ ಪ್ಲೇಯರ್ ನಿಷೇಧಕ್ಕೆ ಒಳಗಾಗುವ ಮುನ್ನ ಪ್ರತಿವರ್ಷ ಸುಮಾರು 25 ಮಿಲಿಯನ್ ಡೌನ್‌ಲೋಡ್‌ಗಳನ್ನು ನಿರಂತರವಾಗಿ ಪಡೆಯುತ್ತಿತ್ತು. ಇದರಲ್ಲಿರುವ ಸರಳ ಫೀಚರ್ಸ್ ಮತ್ತು ಅತ್ಯುತ್ತಮ ವೈಶಿಷ್ಟ್ಯಗಳು ದೇಶದ ಜನರನ್ನು ಆಕರ್ಷಿಸಿದ್ದವು. ಆದರೆ, ಪೂರ್ವ ನಿಷೇಧಿತ ಸಾಫ್ಟ್‌ವೇರ್‌ನ ಸರ್ವರ್‌ನೊಂದಿಗೆ ವಿಎಲ್​ಸಿ ಮೀಡಿಯಾ ಪ್ಲೇಯರ್ ಸಂವಹನವಿದೆ ಎಂಬ ವದಂಗತಿ ಹಬ್ಬಿತ್ತು. ಇದರಿಂದಲೇ ವಿಎಲ್​ಸಿ ಅಪ್ಲಿಕೇಷನ್ ಹಾಗೂ ವೆಬ್‌ಸೈಟ್ ನಿಷೇಧವಾಗಿದೆ ಎಂದು ಹೇಳಲಾಗಿತ್ತು.

ಅಲ್ಲದೆ ಚೀನಾ ಸರ್ಕಾರದ ರಹಸ್ಯ ಭಾಗವಾಗಿರುವ ಸಿಕಾಡಾ ಎಂಬ ಹೆಸರಿನ ಹ್ಯಾಕರ್ ಗಳ ಗುಂಪು ವಿಎಲ್​ಸಿ ಮೀಡಿಯಾ ಪ್ಲೇಯರ್ ಅನ್ನು ಬಳಸಿಕೊಂಡು ಮಾಲ್ವೇರ್ ಮೂಲಕ ಸೈಬರ್ ದಾಳಿ ನಡೆಸುತ್ತಿವೆ ಎಂದು ಈ ಹಿಂದೆ ಸೈಬರ್ ಸೆಕ್ಯುರಿಟಿ ತಜ್ಞರು ಆರೋಪಿಸಿದ್ದರು. ಆದರೆ ಈ ಕೃತ್ಯದಲ್ಲಿ ಚೀನಾ ಸರ್ಕಾರ ಶಾಮೀಲಾಗಿದೆ ಎಂಬ ಬಗ್ಗೆ ಭಾರತ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಕಾರಣದಿಂದಾಗಿಯೇ ವಿಎಲ್​ಸಿ ಮೀಡಿಯಾ ಪ್ಲೇಯರ್ ವೆಬ್ ಸೈಟ್ ಅನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಎಂದು ವರದಿ ಆಗಿತ್ತು.

Published On - 12:53 pm, Tue, 15 November 22

ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ