ಭಾರತದಲ್ಲಿ ಕೇವಲ 6,499 ರೂ. ಗೆ ಬಿಡುಗಡೆ ಆಗಿದೆ ಹೊಸ ಸ್ಮಾರ್ಟ್​ಫೋನ್: ಯಾವುದು ನೋಡಿ

|

Updated on: Oct 17, 2023 | 3:21 PM

Itel A05s Launched in India: ಐಟೆಲ್ A05s ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ - ಕ್ರಿಸ್ಟಲ್ ಬ್ಲೂ, ಗ್ಲೋರಿಯಸ್ ಆರೆಂಜ್, ಮೆಡೋ ಗ್ರೀನ್ ಮತ್ತು ನೆಬ್ಯುಲಾ ಬ್ಲಾಕ್. ಈ ಸ್ಮಾರ್ಟ್‌ಫೋನ್‌ ದೇಶದಲ್ಲಿ ಏಕೈಕ ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆ ಆಗಿದೆ. ಇದರ 2GB + 32GB ರೂಪಾಂತರದ ಬೆಲೆ ಕೇವಲ 6,499 ರೂ.

ಭಾರತದಲ್ಲಿ ಕೇವಲ 6,499 ರೂ. ಗೆ ಬಿಡುಗಡೆ ಆಗಿದೆ ಹೊಸ ಸ್ಮಾರ್ಟ್​ಫೋನ್: ಯಾವುದು ನೋಡಿ
Itel A05s
Follow us on

ಬಜೆಟ್ ಸ್ಮಾರ್ಟ್​ಫೋನ್​ಗಳಿಗೆ ಹೆಸರುವಾಸಿಯಾಗಿರುವ ಪ್ರಸಿದ್ಧ ಐಟೆಲ್ ಕಂಪನಿ ಇದೀಗ ದೇಶದಲ್ಲಿ ಹೊಚ್ಚ ಹೊಸ ಐಟೆಲ್ A05s (Itel A05s) ಫೋನನ್ನು ಅನಾವರಣ ಮಾಡಿದೆ. ಇದು ಆಕ್ಟಾ-ಕೋರ್ SoC ನಿಂದ ಚಾಲಿತವಾಗಿದೆ, 4,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು USB ಟೈಪ್-C ಸಂಪರ್ಕವನ್ನು ಬೆಂಬಲಿಸುತ್ತದೆ. ಬೆಲೆಗೆ ತಕ್ಕಂತೆ ಈ ಫೋನಿನಲ್ಲಿ ಎಲ್ಲ ಫೀಚರ್​ಗಳನ್ನು ನೀಡಲಾಗಿದೆ. ಹಾಗಾದರೆ ಐಟೆಲ್ A05s ಸ್ಮಾರ್ಟ್​ಫೋನ್​ನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

ಭಾರತದಲ್ಲಿ ಐಟೆಲ್ A05s ಬೆಲೆ

ಐಟೆಲ್ A05s ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ – ಕ್ರಿಸ್ಟಲ್ ಬ್ಲೂ, ಗ್ಲೋರಿಯಸ್ ಆರೆಂಜ್, ಮೆಡೋ ಗ್ರೀನ್ ಮತ್ತು ನೆಬ್ಯುಲಾ ಬ್ಲಾಕ್. ಈ ಸ್ಮಾರ್ಟ್‌ಫೋನ್‌ ದೇಶದಲ್ಲಿ ಏಕೈಕ ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆ ಆಗಿದೆ. ಇದರ 2GB + 32GB ರೂಪಾಂತರದ ಬೆಲೆ ಕೇವಲ 6,499 ರೂ.

ತಯಾರಾಗಿ: ಧೂಳೆಬ್ಬಿಸಲು ಬರುತ್ತಿದೆ ವಿವೋ ಕಂಪನಿಯ Y200 ಸ್ಮಾರ್ಟ್​ಫೋನ್

ಇದನ್ನೂ ಓದಿ
ಕೊನೆಗೂ ಐಫೋನ್ 15 ಫೋನಿಗೆ ಬಂತು ಡಿಸ್ಕೌಂಟ್: ಆ್ಯಪಲ್​ನಿಂದ ದೀಪಾವಳಿ ಸೇಲ್
ಭಾರತದದಲ್ಲಿ ಸದ್ಯದಲ್ಲೇ ದುಬಾರಿಯಾಗಲಿದೆ ಇಂಟರ್ನೆಟ್?: ಕಾರಣ ಇಲ್ಲಿದೆ
ವಿವೋ ಪ್ರಿಯರಿಗೆ ಭರ್ಜರಿ ಸುದ್ದಿ: ಇಂದಿನಿಂದ ವಿವೋ V29 ಫೋನ್ ಮಾರಾಟ ಆರಂಭ
ತಯಾರಾಗಿ: ಧೂಳೆಬ್ಬಿಸಲು ಬರುತ್ತಿದೆ ವಿವೋ ಕಂಪನಿಯ Y200 ಸ್ಮಾರ್ಟ್​ಫೋನ್

ಐಟೆಲ್ A05s ಫೀಚರ್ಸ್

ಡ್ಯುಯಲ್ ನ್ಯಾನೊ ಸಿಮ್-ಬೆಂಬಲಿತ ಐಟೆಲ್ A05s 6.6-ಇಂಚಿನ HD+ (1,612 x 720 ಪಿಕ್ಸೆಲ್‌ಗಳು) IPS LCD ಡಿಸ್​ಪ್ಲೇ ಜೊತೆಗೆ 60Hz ರಿಫ್ರೆಶ್ ದರ ಮತ್ತು 270ppi ಪಿಕ್ಸೆಲ್ ಸಾಂದ್ರತೆಯೊಂದಿಗೆ ಬರುತ್ತದೆ. ಈ ಹ್ಯಾಂಡ್‌ಸೆಟ್ ಆಕ್ಟಾ-ಕೋರ್ ಯುನಿಸೊಕ್ SC9863A SoC ಯಿಂದ 2GB RAM ಮತ್ತು 32GB ಅಂತರ್ಗತ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಮೈಕ್ರೋ SD ಕಾರ್ಡ್ ಬಳಸಿ ಹ್ಯಾಂಡ್‌ಸೆಟ್‌ನ ಸಂಗ್ರಹಣೆಯನ್ನು 1TB ವರೆಗೆ ವಿಸ್ತರಿಸಬಹುದು. ಇದು ಆಂಡ್ರಾಯ್ಡ್ 13 Go ಆವೃತ್ತಿ ಮೂಲಕ ರನ್ ಆಗುತ್ತದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ, ಐಟೆಲ್ A05s ಸ್ಮಾರ್ಟ್​ಫೋನ್ 5 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ, ಇದು ಎಲ್ಇಡಿ ಫ್ಲ್ಯಾಷ್ ಘಟಕದೊಂದಿಗೆ ಇರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗ ಈ ಸ್ಮಾರ್ಟ್‌ಫೋನ್ 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.

ಐಟೆಲ್ A05s ಸ್ಮಾರ್ಟ್​ಫೋನ್ 4,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 4G LTE, Wi-Fi, ಬ್ಲೂಟೂತ್, 3.5mm ಆಡಿಯೋ ಜ್ಯಾಕ್ ಮತ್ತು USB ಟೈಪ್-ಸಿ ಸಂಪರ್ಕವನ್ನು ಪಡೆದುಕೊಂಡಿದೆ. ಭದ್ರತೆಗಾಗಿ, ಈ ಫೋನ್ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅಳವಡಿಸಲಾಗಿದೆ. ಇದು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಸಹ ಬೆಂಬಲಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ